Breaking News

Daily Archives: ಆಗಷ್ಟ್ 16, 2020

ರೌಡಿಶೀಟರ್ ಇರ್ಫಾನ್ ಹತ್ಯೆ- ಐವರು ಆರೋಪಿಗಳು ಅರೆಸ್ಟ್‌

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿಬೀಳಿಸಿದ ಶೂಟೌಟ್ ಪ್ರಕರಣವನ್ನು ಬೆನ್ನಟ್ಟಿದ ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸರು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಧಾರವಾಡ ಫ್ರೂಟ್ ಇರ್ಫಾನ್ ಎಂಬುವ ರೌಡಿಶೀಟರ್ ಅನ್ನು ಹಳೇ ಹುಬ್ಬಳ್ಳಿ ಅಲ್ತಾಜ್ ಸಭಾ ಭವನ ಬಳಿ ಆಗಸ್ಟ್ 6ರಂದು ಗುಂಡಿನ ಮಳೆಗೆರೆದು ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಎಸ್ಕೇಪ್ ಆಗಲು ನೆರವಾಗಿದ್ದ ಮತ್ತು ಕೃತ್ಯದಲ್ಲಿ ಭಾಗಿಯಾಗಿದ್ದ ಐವರನ್ನು …

Read More »

ಆಸ್ಪತ್ರೆಯಲ್ಲಿದ್ದ ಸೋಂಕಿತ ಪತಿಗೆ ಕದ್ದು ಮುಚ್ಚಿ ಎಣ್ಣೆ ತಂದುಕೊಟ್ಟ ಪತ್ನಿ

ಚೆನ್ನೈ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಪತಿಗೆ 38 ವರ್ಷದ ಮಹಿಳೆಯೊಬ್ಬರು ಮದ್ಯ ತಂದುಕೊಟ್ಟು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.ತಮಿಳುನಾಡಿನ ಕುದ್ದಲೂರಿನ ಚಿದಂಬರಂನ ರಾಜಾ ಮುತ್ತಯ್ಯ ವೈದ್ಯಕೀಯ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪತಿಗೆ ಮದ್ಯ ತಂದುಕೊಟ್ಟಿದ್ದಕ್ಕೆ ಮಹಿಳೆಯನ್ನು ಬಂಧಿಸಲಾಗಿದೆ. ಕುಡಿದ ಮತ್ತಿನಲ್ಲಿ ಮಹಿಳೆಯ ಪತಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಟಿ.ಮುತ್ತುಕುಮಾರ್(48) ಅವರಿಗೆ ವಾರದ ಹಿಂದೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತು. …

Read More »

ಡ್ರಗ್ಸ್‌ ಮತ್ತಲ್ಲಿ ಹಾಡಹಗಲೇ ಬೆಂಗಳೂರಲ್ಲಿ ಯುವತಿಗೆ 8 ಮಂದಿಯಿಂದ ಕಿರುಕುಳ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹಾಡಹಗಲೇ ಯುವತಿಯೊಬ್ಬಳಿಗೆ ನಡುರಸ್ತೆಯಲ್ಲಿ ಯುವಕರು ಕಿರುಕುಳ ನೀಡಿದ್ದಾರೆ. ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಡ್ರಗ್ಸ್ ಮತ್ತಿನಲ್ಲಿ ೮ ಮಂದಿ ಹುಡುಗರು ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.   ಕಿರುಕುಳ ಕೊಟ್ಟ ಡ್ರಗ್ಸ್ ಗ್ಯಾಂಗ್ ವಿರುದ್ಧ ಯುವತಿ ನಿಂತು ಪ್ರಶ್ನಿಸಿದ್ದಾಳೆ. ಈ ವೇಳೆ ಯುವಕರು ಯುವತಿಯ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿದ್ದು …

Read More »

ಮಲೆನಾಡಲ್ಲಿ ಮುಂದುವರಿದ ಮಳೆ-ಗಾಳಿ, ಕುಸಿದು ಬಿದ್ದ ಮನೆಗಳು

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಭಾರೀ ಗಾಳಿ ಜೊತೆ ಧಾರಾಕಾರ ಮಳೆ ಸುರಿಯುತ್ತಿದೆ.ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಅಲ್ಲಲ್ಲಿ ಮನೆಗಳು ಧರೆಗುರುಳಿವೆ. ಮೂಡಿಗೆರೆ ತಾಲೂಕಿನ ಹೊರಟ್ಟಿ ಹಾಗೂ ಕಲ್ಮನೆ ಗ್ರಾಮದಲ್ಲಿ ಎರಡು ಮನೆಗಳು ಸಂಪೂರ್ಣ ಜಖಂಗೊಂಡಿವೆ. ಹೊರಟ್ಟಿ ಗ್ರಾಮದ ವಸಂತ ಪೂಜಾರಿ ಎಂಬುವರ ಮನೆಗೆ ತೇವ ಹೆಚ್ಚಾಗಿದ್ದು, ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಅರ್ಧ ಭಾಗ ಕುಸಿದು ಬಿದ್ದಿದೆ. …

Read More »

2024ರ ಚುನಾವಣೆಗೆ ಧೋನಿ ಸ್ಪರ್ಧಿಸಬೇಕು: ಸುಬ್ರಮಣಿಯನ್‌ ಸ್ವಾಮಿ

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಸ್ಪರ್ಧಿಸಬೇಕೆಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.ಧೋನಿ ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿಯ ನಂತರ ಧೋನಿ ಏನು ಮಾಡುತ್ತಾರೆ ಎಂಬ ಕುತೂಹಲ ಎದ್ದಿದೆ. .ಈ ಕುತೂಹಲದ ಬೆನ್ನಲ್ಲೇ ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿ, ಎಂ.ಎಸ್. ಧೋನಿ ಕ್ರಿಕೆಟ್‌ನಿಂದ ನಿವೃತ್ತರಾಗುತ್ತಿದ್ದಾರೆ ಹೊರತು ಬೇರೆ ಯಾವುದರಿಂದಲೂ ಅಲ್ಲ. ಅವರ ಪ್ರತಿಭೆ ಸಮಸ್ಯೆಗಳ ವಿರುದ್ಧ ಹೋರಾಡಲು ನೆರವಾಗಬೇಕು. …

Read More »

ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖ, ಡಿಸ್ಚಾರ್ಜ್‌

ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾದಿಂದ ಗುಣಮುಖರಾಗಿದ್ದಾರೆ.ಆಗಸ್ಟ್ -9 ರಂದು ಆಸ್ಪತ್ರೆ ಗೆ ದಾಖಲಾಗಿದ್ದ ಸಚಿವ ಶ್ರೀರಾಮುಲು ಕೊರೋನಾದಿಂದ ಚೇತರಿಸಿಕೊಂಡಿದ್ದು ಇಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಯಿಂದ ಡಿಸ್ಚಾರ್ಜ್‌ ಆಗಿದ್ದಾರೆ‌.ಸರ್ಕಾರಿ ಆಸ್ಪತ್ರೆ ಯಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದ ಶ್ರೀರಾಮುಲು ರಿಪೋರ್ಟ್ ನೆಗೆಟಿವ್ ಬಂದಿದ್ದು, ಎಂಟು ದಿನಗಳಲ್ಲಿ ಚೇತರಿಕೆ ಕಂಡಿದ್ದಾರೆ. ಟ್ವೀಟ್‌ ಮಾಡಿರುವ ಶ್ರೀರಾಮುಲು, ನಿಮ್ಮೆಲ್ಲರ ಶುಭ ಹಾರೈಕೆಯಿಂದ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ. ಕೋವಿಡ್ ಸೋಂಕು ದೃಢಪಟ್ಟಾಗ ನಮ್ಮ …

Read More »

ಕೊರೊನಾ ಸೋಂಕು ತಡೆ, ಲೋಕ ಕಲ್ಯಾಣಕ್ಕಾಗಿ ಹೋಮ

ಬೆಂಗಳೂರು: ವಿಶ್ವದಾದ್ಯಂತ ಹರಡಿರುವ ಕೊರೊನಾ ಸೋಂಕು ನಿವಾರಣೆಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಗ್ರಾಮಸ್ಥರು, ನಾಗರಿಕರು ಹೋಮ ಹವನ ನಡೆಸಿದ್ದಾರೆ.ನಗರದ ಹೊರವಲಯದ ನೆಲಮಂಗಲ ತಾಲೂಕಿನ ಹಂಚಿಪುರ ಗ್ರಾಮದಲ್ಲಿ ಪೂಜೆ ಕೈಗೊಂಡು, ರುದ್ರ ಮಂತ್ರ ಎಲ್ಲ ಔಷಧೀಯ, ಲಸಿಕೆಯ ಒಡೆಯನಿಗೆ ಶಾಂತಿ ಕೈಗೊಂಡಿದ್ದಾರೆ. ಉಷ್ಣಾಂಶದಿಂದ ಕ್ರಿಮಿಗಳ ನಾಶ 25 ಜನರ ಋತ್ವಿಕರಿಂದ ಹೋಮ ಹವನ ನಡೆಸಲಾಯಿತು. ವೇದ ಬ್ರಹ್ಮ ಶ್ರೀ ಸಂಪಿಗೆ ಶ್ರೀನಿವಾಸಮೂರ್ತಿ ಅರ್ಚಕರ ತಂಡದಿಂದ ಹೋಮದ ಪೂಜಾ ಕೈಂಕರ್ಯ ನಡೆದಿದೆ. ಗ್ರಾಮದ …

Read More »

ತುಂಗಭದ್ರಾ ಜಲಾಶಯದ ಮೂರು ಗೇಟ್ ಓಪನ್: 4,539 ಕ್ಯೂಸೆಕ್ ನೀರು ಹೊರಕ್ಕೆ

ಬಳ್ಳಾರಿ: ಗಣಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗ ಭದ್ರಾ ಜಲಾಶಯದ ಮೂರು ಕ್ರಸ್ಟ್ ಗೇಟ್ ನಿಂದ   ಅಂದಾಜು 4,539 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.ಸದ್ಯ ತುಂಗಭದ್ರಾ ಜಲಾಶಯದಲ್ಲಿ 1,632.20 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಅರ್ಧ ಅಡಿ ಅಷ್ಟೇ ಬಾಕಿಯಿದೆ. 33,737 ಕ್ಯೂಸೆಕ್ ನಷ್ಟು ನೀರು ಈ ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಸಂಜೆ ಜಲಾಶಯದಿಂದ ಮೂರು ಕ್ರಸ್ಟ್ ಗೇಟ್ ಮೂಲಕ ಸುಮಾರು 1,513 ಕ್ಯೂಸೆಕ್ ನೀರನ್ನು ಹರಿ …

Read More »

ಕೆಜಿ ಹಳ್ಳಿಯಿಂದ ಸಾವಿರಾರು ಫೋನ್‌ ಕಾಲ್‌ 370ಕ್ಕೂ ಹೆಚ್ಚು ಆರೋಪಿಗಳು ಅಂದರ್

ಬೆಂಗಳೂರು: ಗಲಭೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಆರೋಪಿಗಳ ಫೋನ್ ಕಾಲ್ ಲೆಕ್ಕ ನೋಡಿ ಶಾಕ್ ಆಗಿದ್ದಾರೆ.ಘಟನೆ ನಡೆದ ರಾತ್ರಿ ಸುಮಾರು 30 ಆರೋಪಿಗಳ ಮೊಬೈಲ್‍ಗಳಿಂದ ಹೊರ ಜಿಲ್ಲೆಗಳಿಗೆ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಿಂದಲೇ ಸಾವಿರಾರು ಕಾಲ್ ಹೋಗಿದೆ. ಎಲ್ಲವನ್ನು ಡಿ-ಕೋಡಿಂಗ್ ಮಾಡುವ ಕೆಲಸ ಆರಂಭಗೊಂಡಿದೆ. ಇನ್ನಷ್ಟು ಆರೋಪಿಗಳ ಪತ್ತೆಗಾಗಿ ಪೊಲೀಸರು 800ಕ್ಕೂ ಸಿಸಿಟಿವಿಗಳನ್ನು ವಶಕ್ಕೆ ಪಡೆದಿದ್ದಾರೆ. ದೊಂಬಿ ನಡೆಯುವ ಹಿಂದಿನ ದಿನ ಪುಂಡರನ್ನು ಸೇರಿಸಲು 10 ಫೇಸ್‍ಬುಕ್ …

Read More »

ಬೈಂದೂರು ಸಮುದ್ರದಲ್ಲಿ ನಾಲ್ವರು ಮೀನುಗಾರರು ಕಣ್ಮರೆ- ಕ್ರೇನ್ ಬಳಸಿ ಶೋಧಕಾರ್ಯ

ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾಗಿದ್ದು, ಕ್ರೇನ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಬೈಂದೂರು ತಾಲೂಕು ಕಿರಿಮಂಜೇಶ್ವರದ ಕೊಡೇರಿಯಲ್ಲಿ ದುರ್ಘಟನೆ ನಡೆದಿದ್ದು, ಕೊಡೇರಿ ಅಳಿವೆಬಾಗಿಲಿನಲ್ಲಿ ಕಣ್ಮರೆಯಾದ ನಾಲ್ವರಿಗೆ ಶೋಧ ಕಾರ್ಯ ನಡೆಯುತ್ತಿದೆ. 11 ಮಂದಿ ಮೀನುಗಾರರಿದ್ದ ಬೋಟ್ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ 7 ಜನ ಈಜಿ ದಡ ಸೇರಿದ್ದಾರೆ. ನಾಲ್ವರು ಕಾಣೆಯಾಗಿದ್ದಾರೆ.

Read More »