Breaking News

Daily Archives: ಆಗಷ್ಟ್ 15, 2020

ಬ್ರೇಕ್​​ ಜಾಮ್​ ಆಗಿ ಉರುಳಿಬಿದ್ದ KSRTC ಬಸ್, ಮುಂದೇನಾಯ್ತು?

ಬಾಗಲಕೋಟೆ:ಬ್ರೇಕ್ ಲೈನರ್ ಜಾಮ್ ಆಗಿ, ಚಲಿಸುತ್ತಿದ್ದ KSRTC ಬಸ್ ಉರುಳಿ ಬಿದ್ದಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದ ಅಂಗಡಿ ಲೇಔಟ್ ಬಳಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬಸ್ಸಿನಲ್ಲಿ ಒಟ್ಟು 20 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ ಕಂಡಕ್ಟರ್ ಹಾಗೂ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿ …

Read More »

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಮಹೇಂದ್ರ ಸಿಂಗ್‌ ಧೋನಿ ನೀವೃತ್ತಿ

ಭಾರತದ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನೀವೃತ್ತಿಯಾಗಿದ್ದಾರೆ. 90 ಟೆಸ್ಟ್‌, 350 ಏಕದಿನ ಪಂದ್ಯಗಳು ಮತ್ತು 98 ಟಿ20 ಪಂದ್ಯಗಳನ್ನಾಡಿರುವ ಮಾಹೀ, ತಮ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದಾರೆ. ಟೆಸ್ಟ್‌ನಲ್ಲೂ ಭಾರತ ನಂಬರ್‌ ಒನ್‌ ಱಂಕ್‌ ಆದಾಗ ಧೋನಿಯೇ ನಾಯಕರಾಗಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿ ಮೂರು ಬಾರಿ ಐಪಿಎಲ್‌ ಟ್ರೋಫಿ …

Read More »

‘ಲಾಕ್‌ಡೌನ್‌ನಿಂದ ಜನರ ಪ್ರಾಣ ರಕ್ಷಣೆ’

ಸವದತ್ತಿ: ‘ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಾಕ್‌ಡೌನ್ ಘೋಷಿಸಿದ್ದರಿಂದಾಗಿ ಜನರ ಜೀವ ರಕ್ಷಿಸಲು ಸಾಧ್ಯವಾಯಿತು’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು. ತಾಲ್ಲೂಕು ಆಡಳಿತದಿಂದ ಇಲ್ಲಿನ ಎಸ್‌ಕೆ ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಲಾಕ್‌ಡೌನ್‌ದಿಂದ ಜನಸಾಮಾನ್ಯರು ಸೇರಿದಂತೆ ಸರ್ಕಾರದ ರಾಜಸ್ವ ಸಂಗ್ರಹಕ್ಕೂ ತೊಂದರೆಯಾಗಿದೆ. ಆದರೂ ಸರ್ಕಾರಗಳು ಎದೆಗುಂದಿಲ್ಲ. ನಿರಂತರ ಸಭೆ ನಡೆಸಿ ಕೋವಿಡ್ ಹತೋಟಿಯಲ್ಲಿಡಲಾಗಿತ್ತು. ದುರ್ದೈವದಿಂದ ಸಮುದಾಯಕ್ಕೆ ಹರಡಿದ್ದು …

Read More »

ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಲಕ್ಕ್ಷ್ಮಣ ನಿಂಬರಗಿ ಕೋವೀಡ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ

ಬೆಳಗಾವಿ- ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಕೋವೀಡ್ ಟೆಸ್ಟ್ ಮಾಡಿಸಿಕೊಂಡಿದ್ದು ಅವರ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಸ್ವತಹ ಅವರೇ ಮಾಹಿತಿ ಹಂಚಿಕಡಿದ್ದಾರೆ. ಬೆಳಗಾವಿ ಪೋಲೀಸ್ ಆ್ಯಂಡ್ ಮೀಡಿಯಾ ವ್ಯಾಟ್ಸಪ್ ಗ್ರೂಪ್ ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ನನ್ನ ರಿಪೋರ್ಟ್ ಪಾಸಿಟಿವ್ ಬಂದಿದೆ ನನ್ನ ಸಂಪರ್ಕಕ್ಕೆ ಬಂದವರು ಕೇರ್ ತೆಗೆದುಕೊಳ್ಳಿ ಎಂದು ಎಸ್ ಪಿ ನಿಂಬರಗಿ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದಾರೆ. Superintendent …

Read More »

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು…………

ಹಾಸನ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ 45 ವರ್ಷದ ರೈತ ಚಂದ್ರೇಗೌಡ ಮೃತ ದುರ್ದೈವಿ. ತಮ್ಮ ಹೊಲದಲ್ಲಿ ಬೆಳೆಯಲಾಗಿದ್ದ ಶುಂಠಿ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಹೋಗಿದ್ದಾಗ, ಹೊಲದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ವ್ಯಕ್ತಿಯನ್ನು …

Read More »

ಮುಗ್ಧರು, ಅಮಾಯಕರು ಮಧ್ಯರಾತ್ರಿ ದೊಂಬಿ ಮಾಡುವುದಿಲ್ಲ: ಡಿಸಿಎಂ ತಿರುಗೇಟು

ರಾಯಚೂರು: ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದವರು ಮುಗ್ಧ ಹಾಗೂ ಅಮಾಯಕರು ಎಂಬ ಶಾಸಕ ಜಮೀರ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಒಳ್ಳೆಯವರು ಮಧ್ಯರಾತ್ರಿ ಬಂದು ದೊಂಬಿ ಮಾಡುವುದಿಲ್ಲ. ನವೀನ್ ಎಂಬಾತ ಡಿಕೆಶಿ ನಮ್ಮ ಬಾಸ್, ರಾಹುಲ್, ಪ್ರಿಯಾಂಕ ನಮ್ಮ ನಾಯಕರು ಎಂದು ಪೋಸ್ಟ್ ಹಾಕುತ್ತಿದ್ದ. ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿಯವನು ಎಂದು ಬಿಂಬಿಸುತ್ತಿದೆ. ಚುನಾವಣೆ …

Read More »

4 ಸಾವಿರ ಕೆಜಿ ಉಪ್ಪು, 250 ಕೆಜಿ ಬಣ್ಣ, 400 ಕೆಜಿ ಹೂವಿನಲ್ಲಿ ಅರಳಿತು ಧ್ವಜ

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ತಾಂತ್ರಿಕ ಮಹಾವಿದ್ಯಾಲಯ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ “ತ್ರಿವರ್ಣೋತ್ಸವ” ವನ್ನು ಹಮ್ಮಿಕೊಂಡಿತ್ತು. ಸುಮಾರು 4,000 ಕೆ.ಜಿ. ಉಪ್ಪು, 250 ಕೆ.ಜಿ. ಬಣ್ಣ ಹಾಗೂ 400 ಕೆ.ಜಿ ಹೂಗಳನ್ನು ಬಳಸಿ ಮನೋಹರವಾದ ತ್ರಿವರ್ಣ ಧ್ವಜವನ್ನು ನಿರ್ಮಿಸಿದ್ದರು. ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ, ವೈದ್ಯರಾದ ಡಾ.ಉದಯಶಂಕರ್, ಡಾ.ಕಾರ್ತಿಕ್, ಡಾ.ಅನೂಷ, ಸ್ಟಾಫ್ ನರ್ಸ್ ನಾಗರಾಜ್, ಪೊಲೀಸರಾದ ಅರುಣ್ ಕುಮಾರ್ ಮತ್ತು ಲಕ್ಷಣ್ ಆಶಾ ಕಾರ್ಯಕರ್ತೆ …

Read More »

ಕೊಯ್ನಾ ಜಲಾನಯನ ಪ್ರದೇಶದಲ್ಲಿ ಭೂಕಂಪನ- ಕೃಷ್ಣಾ ನದಿ ತೀರದಲ್ಲಿ ಆತಂಕ

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯ್ನಾ ಜಲಾಶಯದ ಪರಿಸರದಲ್ಲಿ ಇಂದು ಮುಂಜಾನೆ 10.22 ಕ್ಕೆ ಭೂ ಕಂಪನವಾಗಿದ್ದು, ರಿಕ್ಟರ್ ಮಾಪನದಲ್ಲಿ ಕಂಪನದ ತೀವ್ರತೆಯು 2.9 ರಷ್ಟು ದಾಖಲಾಗಿದೆ.ಭೂ ಕಂಪನದ ಹಿನ್ನೆಲೆಯಲ್ಲಿ ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರ ಬಿಡುವ ಬಿಡುವ ಸಾಧ್ಯತೆ ಇದೆ.     ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಮಳೆಯ ಪ್ರಮಾಣವು ಕೊಯ್ನಾ-136 ಮಿ.ಮೀ , ನವಜಾ-82 ಮಿ.ಮೀ, ಮಹಾಬಳೇಶ್ವರ-156ಮಿ.ಮೀ, …

Read More »

ಐದು ಭಾಷೆ, 65 ಸಿಂಗರ್ಸ್, ಒಂದು ಹಾಡು – ಲಹರಿ ಸಂಸ್ಥೆಯಿಂದ ವಿಷೇಶ ಗೀತೆ ಬಿಡುಗಡೆ

ಬೆಂಗಳೂರು: ಲಹರಿ ಸಂಸ್ಥೆಯಿಂದ ಸ್ವಾತಂತ್ರ ದಿನಾಚರಣೆಗೆ ವಿಶೇಷವಾದ ‘ಒಟ್ಟಿಗೆ ಒಂದಾಗಿ..’ ಎಂಬ ಹಾಡೊಂದನ್ನು ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಸುಮಾರು 65 ಸಿಂಗರ್‍ಗಳು ಹಾಡಿದ್ದು, 5 ಭಾಷೆಯಲ್ಲಿ ಈ ಹಾಡು ಮೂಡಿ ಬಂದಿದೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಡಲಾಗಿದೆ. ಈ ಹಾಡು ಲಹರಿ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಹಾಡು ಭಾರತದವರಾದ ನಾವು ಎಲ್ಲರೂ …

Read More »

ಡಾ. ಅಂಬೇಡ್ಕರ್ ಹೆಸರು‌ ಸ್ಮರಿಸದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ದಲಿತ ಮುಖಂಡ ಅಡಿವೆಪ್ಪ ಸಾಲಗಲ್ ತರಾಟೆಗೆ ತೆ

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹೆಸರು‌ ಸ್ಮರಿಸದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ದಲಿತ ಮುಖಂಡ ಅಡಿವೆಪ್ಪ ಸಾಲಗಲ್ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ಶನಿವಾರ ನಡೆಯಿತು. ಅಕ್ಕನ ವಿವಿಯಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಚಿವೆ ನೀಡಿದ ಸಂದೇಶದಲ್ಲಿ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸಲಿಲ್ಲ. ಇದರಿಂದಾಗಿ ಕುಪಿತಗೊಂಡ ಅಡಿವೆಪ್ಪ ಸಾಲಗಲ್ ಸಚಿವೆ ಭಾಷಣ ಮುಗಿಸಿ ಸ್ಥಳಕ್ಕೆ ಬಂದು ಕುಳಿತುಕೊಳ್ಳುತ್ತಿದ್ದಂತೆಯೇ ತೀವ್ರ ತರಾಟೆಗೆ ತೆಗೆದುಕೊಂಡರು. …

Read More »