ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಸದಲಗಾ ಬೋರ್ ಗಾಂವ ರಸ್ತೆಯ ಮೇಲೆ ನೀರಿನ ಸೆಳೆತಕ್ಕೆ ಬೈಕ್ ಸಮೇತವಾಗಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಯುವಕರು ಗುರುವಾರ ರಕ್ಷಣೆ ಮಾಡಿದ್ದಾರೆ. ರಸ್ತೆಯ ಮೇಲೆ ನೀರಿನ ಹರಿವು ಹೆಚ್ಚಳವಿತ್ತು, ಆದ್ರು ವ್ಯಕ್ತಿ ದ್ವಿಚಕ್ರ ವಾಹನದೊಂದಿಗೆ ಹೊರಟ್ಟಿದ್ದನು. ಸಾಗುತ್ತಿರುವ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಬೈಕ್ ಸಮೇತವಾಗಿ ವ್ಯಕ್ತಿ ಕೊಚ್ಚಿ ಹೋಗುತ್ತಿದ್ದನು. ತಕ್ಷಣ ಗಮನಿಸಿದ ಸ್ಥಳೀಯ ಯುವಕರು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಬಿರುಸಿನ ಮಳೆ ಆರಂಭವಾಗಿರುವುದರಿಂದ …
Read More »Daily Archives: ಆಗಷ್ಟ್ 6, 2020
ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ? ಸಿದ್ಧರಾಮಯ್ಯ
ಬೆಂಗಳೂರು: ಕಳೆದರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ? ಎಂದು ಆಸ್ಪತ್ರೆಯಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಾಜಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿಯೂ ಮಳೆಯಿಂದಾಗಿ ಜನ ಪ್ರವಾಹದ ಭೀತಿಯಲ್ಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅವರಿಗೆ …
Read More »ನದಿಗೆ ಈಜುಲು ಹೋಗಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿ
ಕಲಬುರಗಿ : ನದಿಗೆ ಈಜುಲು ಹೋಗಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾದ ಘಟನೆ ಕಲಬುರಗಿ ಜಿಲ್ಲೆಯ ಕಾಗಿಣಾ ನದಿಯಲ್ಲಿ ನಡೆದಿದೆ. ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ಸಂಪತ್ ಸಂಕ(18) ಮೃತ ಯುವಕ. ಶಾಲೆ, ಕಾಲೇಜ್ ರಜೆ ಇರುವ ಹಿನ್ನೆಲೆಯಲ್ಲಿ ಪ್ರತಿದಿನ ಸ್ನೇಹಿತರೊಂದಿಗೆ ಕಾಗಿಣಾ ನದಿಗೆ ಈಜುಲು ಹೋಗುತ್ತಿದ್ದರು. ಅದೇ ರೀತಿ ಗುರುವಾರವೂ ಸಹ ಹೋಗಿದ್ದಾರೆ. ಈಜು ಬರುತ್ತಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನೀರಿಗೆ ಧುಮುಕ್ಕಿದ್ದ ಯುವಕ, ದುರದೃಷ್ಟವಶಾತ್ …
Read More »ಭಾರೀ ಮಳೆಶರಾವತಿ ನದಿ ನಡುವೆ ಸಿಕ್ಕಿ ಬಿದ್ದಲಾಂಚ್……………..
ಶಿವಮೊಗ್ಗ:ಭಾರೀ ಮಳೆಯ ನಡುವೆ ಹಸಿರುಮಕ್ಕಿ ಲಾಂಚ್ ಶರಾವತಿ ನದಿ ನಡುವೆ ಸಿಕ್ಕಿ ಬಿದ್ದಿದ್ದು ಲಾಂಚ್ ನಲ್ಲಿರುವ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸಮೀಪದ ಶರಾವತಿ ನದಿಯಲ್ಲಿ ಈ ಘಟನೆ ನಡೆದಿದೆ. ಲಾಂಚ್ ನಲ್ಲಿರುವ ಪ್ರಯಾಣಿಕರು ಅತಂತ್ರಗೊಂಡಿದ್ದು, ಮೊಬೈಲ್ ಸಂಪರ್ಕಕ್ಕೆ ಸಿಗದೇ ಲಾಂಚ್ ನಲ್ಲಿರುವ ಪ್ರಯಾಣಿಕರು ಪರದಾಡುವಂತಾಗಿದೆ. ಕ್ರೈನ್ ಮೂಲಕ ಲಾಂಚ್ ದಡಕ್ಕೆ ತರುವ ಪ್ರಯತ್ನಗಳು ನಡೆದಿವೆ.
Read More »ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ.
ಬೆಳಗಾವಿ: ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ. ಧಾರಾಕಾರ ಮಳೆಯಿಂದ, ಟಿಳಕವಾಡಿಯ ಕರಿಯಪ್ಪಾ ಕಾಲೋನಿ, ಯಳ್ಳೂರ ರಸ್ತೆ, ಆನಂದ ನಗರ, ವಡಗಾಂವ್ನಲ್ಲಿ ಮಳೆ ನೀರು ನಿಲ್ಲುತ್ತಿದೆ. ಹೀಗಾಗಿ, ಏರಿಯಾದ ಅರ್ಧದಷ್ಟು ಮನೆಗಳು ಮುಳುಗಡೆಯಾಗುತ್ತಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗುತ್ತಿದ್ದು ಮೂರು ಕಾಲೋನಿಗಳು ಭಾಗಶಃ ಆವೃತವಾಗಿವೆ. ಬೃಹತ್ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ರಸ್ತೆಯಲ್ಲಿ ತುಂಬಿರೋ ನೀರಲ್ಲಿ ಮಹಿಳೆಯರು, ವೃದ್ಧರು ಓಡಾಡುವ ಸ್ಥಿತಿ …
Read More »ಹೀರೋಗಳ ಜೊತೆ ಮಲಗಿ ನಾನು ಅವಕಾಶ ಪಡೆದಿಲ್ಲ – ‘ಕೆಜಿಎಫ್’ನ ಪ್ರಧಾನಿ
ಮುಂಬೈ: ಹೀರೋಗಳ ಜೊತೆ ಮಲಗಿ ನಾನು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿಲ್ಲ ಎಂದು 90ರ ದಶಕದ ಬಾಲಿವುಡ್‍ನ ನಟಿ ರವೀನಾ ಟಂಡನ್ ಅಚ್ಚರಿ ಹೇಳಿಕೆಯನ್ನು ನೋಡಿದ್ದಾರೆ.ಇತ್ತೀಚೆಗೆ ನಟಿ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ತನ್ನ ಸಿನಿಮಾ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಪಡೆಯಲು ತಾವು ಅನುಭವಿಸಿದ ಕಷ್ಟಗಳು ಮತ್ತು ಕೆಲವು ಕಹಿ ಘಟನೆಯ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ಯಾವುದೇ ಗಾಡ್‍ಫಾದರ್‍ಗಳನ್ನು ಹೊಂದಿರಲಿಲ್ಲ. ಅಲ್ಲದೇ ನನ್ನನ್ನು ಯಾವುದೇ ನಾಯಕ ಕೂಡ ಪ್ರಮೋಟ್ …
Read More »ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪುತ್ರಿ ಬ್ರಹ್ಮಣಿ ಮಗುವಿಗೆ ಕಲಘಟಗಿ ತೊಟ್ಟಿಲು ಸಿದ್ಧವಾಗುತ್ತಿದೆ.
ಹುಬ್ಬಳ್ಳಿ: ದೇಶಾದ್ಯಂತ ಹೆಸರುವಾಸಿಯಾಗಿರುವ ಧಾರವಾಡ ಜಿಲ್ಲೆಯ ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ. ಇದೀಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪುತ್ರಿ ಬ್ರಹ್ಮಣಿ ಮಗುವಿಗೆ ಕಲಘಟಗಿ ತೊಟ್ಟಿಲು ಸಿದ್ಧವಾಗುತ್ತಿದೆ. ಕಲಘಟಗಿ ಕಲಾವಿದ ಮಾರುತಿ ಬಳಿಯೇ ಸುಮಾರು ಮೂರು ತಿಂಗಳಿನಿಂದ ತೊಟ್ಟಿಲು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತೊಟ್ಟಿಲಿನಲ್ಲಿ ಕೃಷ್ಣನ ಬಾಲ ಲೀಲೆ ಮೂಡಿಬಂದಿರುವುದು ತೊಟ್ಟಿಲಿನ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಕಲಘಟಗಿ ತೊಟ್ಟಿಲು ಕಲಾವಿದನ ಕೈ ಚಳಕದಿಂದ ನೋಡುಗರ …
Read More »ಮಳೆ ಅನಾಹುತ – ತುರ್ತಾಗಿ 50 ಕೋಟಿ ರೂ. ಬಿಡುಗಡೆಗೆ :B.S.Y.
ಬೆಂಗಳೂರು: ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.ಕರ್ನಾಟಕದಲ್ಲಿ ಭಾರೀ ಮಳೆ ಆಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಆದ್ದರಿಂದ ಆಸ್ಪತ್ರೆಯಲ್ಲಿದ್ದರೂ ಸಿಎಂ ಯಡಿಯೂರಪ್ಪ ಎಲ್ಲಾ ಡಿಸಿಗಳಿಂದ ಮಾಹಿತಿ ಪಡೆದು, ಅವಾಂತರ ತಡೆಗೆ ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ಮಳೆ ಅನಾಹುತ ತಡೆಯಲು ತುರ್ತಾಗಿ 50 ಕೋಟಿ ರೂಪಾಯಿ ಬಿಡುಗಡೆ ಮಾಡಲು ಮುಖ್ಯಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ …
Read More »ಭಾರೀ ಮಳೆಗೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ. ಹುಬ್ಬಳ್ಳಿ – ಧಾರವಾಡ ಭಾಗದಲ್ಲಿ ಹೆಚ್ಚಿನ ಮಳೆ ಹಿನ್ನಲೆಯಲ್ಲಿ ಯಲ್ಲಾಪುರ ಭಾಗದ ಹಲವು ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಮಂಚಿಕೇರಿಯ ಹಲವು ಭಾಗದ ಕೃಷಿ ಭೂಮಿಗೂ ನೀರು ನುಗ್ಗಿದೆ. ಯಲ್ಲಾಪುರ -ಮಂಚಿಕೇರಿ ಸೇತುವೆ ಕೊಚ್ಚಿಹೋದ್ದರಿಂದ ನಗರ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ ಮಳೆಯ ಅಬ್ಬರ …
Read More »ರಾಮಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ : ಮದ್ಯ ಸಿಗದೇ ಚಡಪಡಿಸಿದ ಪಾನಪ್ರಿಯರು..!
ಮೈಸೂರು, – ನಗರದಾದ್ಯಂತ ಇಂದು ರಾಮಮಂದಿರಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಯೋಧ್ಯೆಯಲ್ಲಿ ಇಂದು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬೆಳಗ್ಗೆ 9 ರಿಂದಲೇ ದೇವಾಲಯಗಳಲ್ಲಿ ಶ್ರೀರಾಮಮಂದಿರ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು. ನಗರದ ಬಹುತೇಕ ನಾಗರಿಕರು ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದ್ದಾರೆ. ವಿಶೇಷವಾಗಿ ಇಂದು ನಗರದಲ್ಲಿರುವ ಸೀತಾ ವಿಲಾಸ ರಸ್ತೆಯಲ್ಲಿರುವ ರಾಮಮಂದಿರ ಸರಸ್ವತಿಪುರ, ಜಯನಗರದ ರಾಮಮಂದಿರಗಳು …
Read More »