ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟನೂರು ಅಡಿ ತಲುಪಿದೆ. ಕಳೆದೊಂದು ತಿಂಗಳಲ್ಲಿ ಜಲಾಶಯಕ್ಕೆ 8 ಅಡಿಗಳಷ್ಟುನೀರು ಹರಿದುಬಂದಿದೆ. ಅಣೆಕಟ್ಟು ನೂರರ ಗಡಿ ತಲುಪಿರುವುದು ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಇದರ ಬೆನ್ನಲ್ಲೇ ಕೃಷಿ ಚಟುವಟಿಕೆಯೂ ಬಿರುಸುಗೊಂಡಿದೆ. ಮುಂಗಾರು ಹಂಗಾಮಿಗೆ ನೀರು ಸಿಗುವ ಆಶಾಭಾವನೆಯೂ ರೈತ ಸಮುದಾಯದಲ್ಲಿ ವ್ಯಕ್ತವಾಗಿದೆ. ಜೂ.7ರಂದು ಅಣೆಕಟ್ಟೆಯ ನೀರಿನ ಮಟ್ಟ92.20 ಅಡಿ ದಾಖಲಾಗಿತ್ತು. ಅಂದು ಜಲಾಶಯಕ್ಕೆ 837 ಕ್ಯುಸೆಕ್ ನೀರು ಹರಿದುಬರುತ್ತಿದ್ದು, 415 ಕ್ಯುಸೆಕ್ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿತ್ತು. …
Read More »Monthly Archives: ಜುಲೈ 2020
ರಾಜ್ಯದ ಗ್ರೀನ್ಜೋನ್ಗಳಲ್ಲಿ ಶಾಲೆ ಪುನರಾರಂಭ?; ಸರ್ಕಾರಕ್ಕೆ ತಜ್ಞರ ಸಮಿತಿ ಮಾಡಿದ ಶಿಫಾರಸಿನ ವಿವರ ಇಲ್ಲಿದೆ
ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮಿತಿಮೀರುತ್ತಿದೆ. ಇದರಿಂದಾಗಿ ಹಳ್ಳಿಹಳ್ಳಿಗಳಲ್ಲೂ ಜನರು ಮನೆಯಿಂದ ಹೊರಗೆ ಬರಲು ಆತಂಕ ಪಡುವಂತಾಗಿದೆ. ಈ ಆತಂಕದ ನಡುವೆಯೇ ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾಡಿ ಮುಗಿಸಿದೆ. ಇದೀಗ ಹಸಿರು ವಲಯಗಳಲ್ಲಿ ಮೊದಲು ಶಾಲೆ ಆರಂಭಿಸಿ, ನಂತರ ಕಂಟೋನ್ಮೆಂಟ್ ವಲಯವನ್ನು ಹೊರತುಪಡಿಸಿ, ಉಳಿದೆಡೆ ಶಾಲೆಗಳನ್ನು ತೆರೆಯಬಹುದು ಎಂದು ತಜ್ಞರ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ತಜ್ಞರ …
Read More »ಸುಮಲತಾ ಅವರು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ.ಜನಪ್ರತಿನಿಧಿಗಳು, ಬೆಂಬಲಿಗರು ಸೇರಿದಂತೆ ಸಾರ್ವಜನಿಕರಿಗೂ ಆತಂಕ
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ತಮಗೆ ಕರೊನಾ ಸೋಂಕು ತಗುಲಿರುವ ಬಗ್ಗೆ ನಿನ್ನೆಯಷ್ಟೇ ದೃಢಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದ ಅವರು, ತಾವು ಶೀಘ್ರದಲ್ಲಿ ಗುಣಮುಖರಾಗಿ ಬರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅನೇಕ ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರಿಗೆ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಇಷ್ಟೇ. ಇದೇ 4ರಂದು ಮಂಡ್ಯದ ರೈತ ಸಭಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸುಮಲತಾ ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ …
Read More »ಕೊರೊನಾ ಹಬ್ಬಿಸಿಲು ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆಯೋಜಿಸಿದ್ದಾರೆ……….?
ವಾಷಿಂಗ್ಟನ್: ಆತಂಕ ಮೂಡಿಸಿರುವ ಕೊರೊನಾ ತಡೆಗಟ್ಟಲು ರಾಷ್ಟ್ರಗಳು ಲಾಕ್‌ಡೌನ್ ಜಾರಿ ಮಾಡಿ ಸಾಮಾಜಿಕ ಅಂತ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಸೂಚನೆ ನೀಡುತ್ತಿವೆ. ಆದರೆ ಅಮೆರಿಕದಲ್ಲಿ ಕೊರೊನಾ ಹಬ್ಬಿಸಿಲು ವಿದ್ಯಾರ್ಥಿಗಳು ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ʼಯಾರಿಗೆ ಮೊದಲು ಕೊರೊನಾ ಬರುತ್ತದೆ?ʼ ಎಂಬ ಸ್ಪರ್ಧೆಯ ಪಾರ್ಟಿಯನ್ನು ಅಮೆರಿಕ ಅಲಬಾಮಾದ ಟಸ್ಕಲೂಸಾ ಎಂಬಲ್ಲಿ ಆಯೋಜಿಸಲಾಗಿತ್ತು. ಈ ಹುಚ್ಚಾಟದ ಸ್ಪರ್ಧೆಗೆ ಕೊರೊನಾ ಪಾಸಿಟಿವ್ ಬಂದವರನ್ನು ಉದ್ದೇಶಪೂರ್ವಕವಾಗಿ ಕರೆಸಲಾಗಿತ್ತು. ಕೊರೊನಾ ಬಾರದವರನ್ನು ಆಹ್ವಾನಿಸಲಾಗಿತ್ತು. ಕೊರೊನಾ ಬಾರದವರು ಪಾಸಿಟಿವ್ …
Read More »59 ಅಪ್ಲಿಕೇಶನ್ ನಿಷೇಧಿಸಿ ಡಿಜಿಟಲ್ ಸ್ಟ್ರೈಕ್ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ಮತ್ತೊಂದು ಬಲವಾದ ಹೊಡೆತ ನೀಡಲು ಮುಂದಾಗುತ್ತಿದೆ.
ನವದೆಹಲಿ: 59 ಅಪ್ಲಿಕೇಶನ್ ನಿಷೇಧಿಸಿ ಡಿಜಿಟಲ್ ಸ್ಟ್ರೈಕ್ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ಮತ್ತೊಂದು ಬಲವಾದ ಹೊಡೆತ ನೀಡಲು ಮುಂದಾಗುತ್ತಿದೆ. ಎರಡು ದೇಶಗಳ ವ್ಯಾಪಾರ ವಿಚಾರದಲ್ಲಿ ಭಾರತ ರಫ್ತು ಮಾಡುವುದಕ್ಕಿಂತ ಹೆಚ್ಚಾಗಿ ಚೀನಾದಿಂದ ಆಮದು ಜಾಸ್ತಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗ ಭಾರತ ಚೀನಾದಿಂದ ಆಮದು ಆಗುವ ವಸ್ತುಗಳ ಮೇಲೆ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಏರಿಸಲು ಸಿದ್ಧತೆ ನಡೆಸುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಭಾರತದಲ್ಲಿ ತಯಾರಾಗುವ ವಸ್ತುಗಳು ಮತ್ತು …
Read More »ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡು ನಟಿ ಶೆರಿನ್………..
ಹೈದರಾಬಾದ್: ಒಂದು ವರ್ಷದಲ್ಲಿ 10 ಕೆಜಿ ತೂಕ ಇಳಿಸಿಕೊಂಡು ನಟಿ ಶೆರಿನ್ ಶೃಂಗಾರ್ ಅವರು ತಮ್ಮನ್ನು ಟ್ರೋಲ್ ಮಾಡುತ್ತಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ. ಕನ್ನಡದಲ್ಲಿ ದರ್ಶನ್ ಅವರ ಜೊತೆ ದ್ರುವ ಮತ್ತು ಭೂಪತಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆ ಪಾತ್ರರಾಗಿದ್ದ ನಟಿ ಶೆರಿನ್, ನಂತರದ ದಿನದಲ್ಲಿ ಸ್ವಲ್ಪ ದಪ್ಪ ಆಗಿದ್ದರು. ತನ್ನ ತೆಳ್ಳಗಿನ ಮೈಮಾಟದ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಶೆರಿನ್, ನಂತರ ತನ್ನ ದಪ್ಪಗಿನ ದೇಹದ ಮೂಲಕವೇ ಬಹಳ …
Read More »ಬಯಲು ಸೀಮೆ ಕೋಲಾರದಲ್ಲಿ ನೀರಿನ ಜೊತೆಗೆ ರಕ್ತಕ್ಕೂ ಬರ..
ಕೋಲಾರ: ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ಮುನ್ನಚ್ಚರಿಕೆ ಕ್ರಮವಾಗಿ ಮಾಡಿದ ಲಾಕ್‍ಡೌನ್ ಎಫೆಕ್ಟ್ ಸಾಕಷ್ಟು ಕ್ಷೇತಗಳಿಗೆ ಹೊಡೆತ ಬಿದ್ದಿದೆ. ಬರದನಾಡು ಕೋಲಾರ ಜಿಲ್ಲೆಯಲ್ಲಿ ಲಾಕ್‍ಡೌನ್ ಎಫೆಕ್ಟ್ ನಿಂದ ರಕ್ತಕ್ಕೂ ಬರ ಬಂದಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಿದ್ದ ಪರಿಣಾಮ ರಾಜ್ಯದ ಜನರು ಆರ್ಥಿಕತೆ, ನಿರುದ್ಯೋಗ, ಆಹಾರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕಾಣಬೇಕಾಯಿತು. ಇದರೊಂದಿಗೆ ರಕ್ತದ ಕೊರತೆಯೂ ಎದುರಾಗಿದೆ. ರಾಜ್ಯ ಸರ್ಕಾರ ಮಾ.23 ರಿಂದ ಲಾಕ್‍ಡೌನ್ …
Read More »ಬೆಂಗಳೂರಿನಿಂದ ಯಾದಗಿರಿಗೆ ಕೊರೊನಾ ಕಂಟಕ-
ಯಾದಗಿರಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ನರ್ತನಕ್ಕೆ ಜನರು ಸಂಪೂರ್ಣ ನಲುಗಿ ಹೋಗಿದ್ದಾರೆ. ಆದರೆ ಇತ್ತ ಯಾದಗಿರಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಹೊತ್ತಲ್ಲಿ ಈಗ ಯಾದಗಿರಿಗೆ ಮತ್ತೊಂದು ಮಹಾ ಕಂಟಕ ಎದುರಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ದಿನೇ ದಿನೇ ಮಿತಿ ಮೀರುತ್ತಿದೆ. ಇದರಿಂದ ಭೀತಿಗೊಳಗಾಗಿರುವ ಜನರು ನಮಗೆ ಜೀವನ ಮುಖ್ಯ, ಜೀವ ಇದ್ದರೆ ಕೂಲಿ ಮಾಡಿ ಆದ್ರೂ ಬದುಕಬಹುದು ಎಂದು ತಮ್ಮ ತಮ್ಮ ಊರುಗಳತ್ತ ಮುಖ …
Read More »ಶಿವಮೊಗ್ಗ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಕೆ
ಶಿವಮೊಗ್ಗ: ಇಡೀ ರಾಜ್ಯದಲ್ಲಿಯೇ ಹಲವಾರು ಬಂಧೀಖಾನೆಗಳು ಕೊರೊನಾ ಪಾಸಿಟಿವ್ ಗಳಿಂದ ನಲುಗಿ ಹೋಗಿದ್ದರೂ, ಶಿವಮೊಗ್ಗದ ಜೈಲು ಮಾತ್ರ ಕೊರೊನಾ ಮುಕ್ತವಾಗಿದೆ. ಅಲ್ಲದೇ ಇದೀಗ ಈ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿದ್ದು, ಇದು ಕೂಡ ರಾಜ್ಯದಲ್ಲೇ ಪ್ರಪ್ರಥಮವಾಗಿದೆ. ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಅತ್ಯಂತ ವಿಶೇಷತೆ ಹೊಂದಿರುವ ಇಲ್ಲಿ ಬಂದು ನಿಂತ್ರೆ ಸಾಕು ಸ್ವಚ್ಛಂದ ಗಾಳಿ, ಉತ್ತಮ ಪರಿಸರ, ಸ್ವಚ್ಛತೆ, ಸುಂದರ ಪಾರ್ಕ್, ನಮ್ಮ ಕಣ್ಮನ ಸೆಳೆಯುತ್ತೆ. ಇಂತಹ ಸುಸಜ್ಜಿತವಾದ ಜೈಲು …
Read More »ಕಿಲ್ಲರ್ ಕೊರೋನಾ ಹಾವಳಿಗೆ ವಿಶ್ವ ಹೈರಾಣ : 1.18 ಕೋಟಿ ಸೋಂಕಿತರು, ಮೃತರ ಸಂಖ್ಯೆ 5.41 ಲಕ್ಷ..!
ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜು.7- ಮಹಾಮಾರಿ ಕಿಲ್ಲರ್ ಕೊರೊನಾ ಕಬಂಧ ಬಾಹುಗಳಲ್ಲಿ ವಿಶ್ವವೇ ಹೈರಾಣಾಗಿದ್ದು, ರೋಗಿಗಳು ಮತ್ತು ಮೃತರÀ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ. ಜಗತ್ತಿನಾದ್ಯಂತ ಒಟ್ಟು ಸಾವಿನ ಸಂಖ್ಯೆ 5.41 ಲಕ್ಷ ಹಾಗೂ ಸೋಂಕಿತರ ಸಂಖ್ಯೆ 1.18 ಕೋಟಿ ದಾಟಿದೆ. ಇದರ ನಡುವೆಯೂ ವಿಶ್ವದಲ್ಲಿ ಸುಮಾರು 67.42 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ನಿನ್ನೆ ಮಧ್ಯರಾತ್ರಿವರೆಗೆ 5,40,848 ಮಂದಿ ಸಾವಿಗೀಡಾಗಿದ್ದು, 1,17,48,938 ಸೋಂಕು ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ …
Read More »