ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರೊನಾ ಆತಂಕದ ಮಧ್ಯೆಯೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಧೈರ್ಯ ದಿಂದ ಗುರುವಾರ ಸಿಇಟಿ ಪರೀಕ್ಷೆ ಬರೆದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಚಿಕ್ಕೋಡಿ- 6, ಗೋಕಾಕ-4. ಅಥಣೀ-3, ರಾಯಬಾಗ-1,ಮತ್ತು ಹುಕ್ಕೇರಿ-1 ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಳಾಗಿತ್ತು. ಒಟ್ಟು 6247 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಅವರಲ್ಲಿ 690 ಗೈರು ಹಾಜರಾಗಿದ್ದು, 5557 ವಿದ್ಯಾರ್ಥಿಗಳು ಪರೀಕ್ಷೆ ಬರೆದರು …
Read More »Daily Archives: ಜುಲೈ 30, 2020
ಜಯಲಲಿತಾ ನಿವಾಸದಲ್ಲಿ 4 ಕೆಜಿ ಚಿನ್ನ 601 ಕೆಜಿ ಬೆಳ್ಳಿ ಪತ್ತೆ..!
ಚೆನ್ನೈ,ಜು.30- ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸದಲ್ಲಿ 4 ಕೆಜಿ ಚಿನ್ನ, 601 ಕೆಜಿ ಬೆಳ್ಳಿ ಸಿಕ್ಕಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಜಯಲಲಿತಾ ವಾಸವಿದ್ದ ವೇದ ನಿಲಯಂ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವೇದ ನಿಲಯಂನಲ್ಲಿರುವ ಸ್ಥಿರ ಮತ್ತು ಚರ ಸ್ವತ್ತನ್ನು ತಮಿಳುನಾಡು ಸರ್ಕಾರ ಪುರಚ್ಚಿ ತಲೈವಿ ಡಾ.ಜಯಲಲಿತಾ ಮೆಮೋರಿಯಲ್ ಫೌಂಡೇಷನ್‍ಗೆ ಕಳುಹಿಸಿಕೊಡುತ್ತಿದೆ. ಸರ್ಕಾರ ನಿವಾಸದಲ್ಲಿರುವ ವಸ್ತುಗಳನ್ನು ಪಟ್ಟಿಮಾಡಿದ್ದು, ಪೀಠೋಪಕರಣಗಳು, ಪುಸ್ತಕಗಳು, ಆಭರಣಗಳು …
Read More »ಕುಮಾರಸ್ವಾಮಿ ಅವರೀಗೇ ಬಿಜೆಪಿ ಮೇಲೆ ಸ್ವಲ್ಪ ಲವ್ ಆಗಿದೆ.:ಹೊರಟ್ಟಿ
ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಕುರಿತು ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ. ಈ ಕುರಿತು ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡರು ಸಭೆ ಕರೆದು ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. , ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರ ಮೇಲೆ ಸಾಫ್ಟ್ ಕಾರ್ನರ್ ಹೊಂದಿರುವುದು ಸತ್ಯ. ಆದರೆ ಅವರು …
Read More »ಕೊರೊನಾ ವೈರಸ್ 40 ರಿಂದ 70 ವರ್ಷಗಳ ಹಿಂದೆ ಬಾವಲಿಗಳಲ್ಲಿ ಕಂಡುಬಂದಿದೆ – ಪ್ರೊ. ಡೇವಿಡ್ ರಾಬರ್ಟ್ಸ್‌ನ್
ನವದೆಹಲಿ: ಇಡೀ ವಿಶ್ವವವನ್ನು ಬೆಚ್ಚಿ ಬೀಳಿಸಿದ ಕೊರೊನಾ ಸೋಂಕು ಮಾನವರಿಗೆ ತಗುಲುವ ಮುನ್ನ ದಶಕಗಳಿಂದ ಬಾವಲಿಗಳ ದೇಹದಲ್ಲಿತ್ತು. ಆದರೆ ಅದನ್ನು ಕಂಡುಹಿಡಿಯಲಾಗಲಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್‍ಗೆ 40 ರಿಂದ 70 ವರ್ಷಗಳ ಮೊದಲು ಬಾವಲಿಗಳಲ್ಲಿ ಕಂಡುಬಂದಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಬಹುಶಃ ಈ ವೈರಸ್ ಈಗ ಮನುಷ್ಯರನ್ನು ತಲುಪಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ನೇಚರ್ ಮೈಕ್ರೋ ಬಯಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯೊಂದರಲ್ಲಿ ಕೆಲಸ ಮಾಡಿದ …
Read More »ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ.
ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ. ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ …
Read More »ಆಗಸ್ಟ್ 31ರ ವರೆಗೆಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್‌ಘೋಷಿಸಿದೆ.
ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಕೊರೋನಾ ಪ್ರಕರಣಗಳು ಊಹೆಗೂ ನಿಲುಕದಷ್ಟು ಏರುತ್ತಲೇ ಇದೆ. ಎಷ್ಟೇ ಪ್ರಯತ್ನಿಸಿದರೂ ಸೋಂಕು ಹರಡದಂತೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಅಸಾಧ್ಯವಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಆಗಸ್ಟ್ 31ರ ವರೆಗೆ ರಾಜ್ಯಾದ್ಯಂತ ಲಾಕ್‌ಡೌನ್ ಅನ್ನು ವಿಸ್ತರಿಸುತ್ತಿರುವುದಾಗಿ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ 4 ಲಕ್ಷ ಸೋಂಕಿತರಿದ್ದು ಭಾರತದಲ್ಲೇ ಅತ್ಯಧಿಕ ಸೋಂಕಿತರನ್ನು ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ಒಳಗಾಗಿದೆ.ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್, …
Read More »ಮಾಸ್ಕ್ ಹಾಕಿಕೊಂಡು ಕೊರೊನಾ ವೈರಸ್‍ನಿಂದ ದೂರ ಇರಿ ಎಂದು ಕೆಜಿಎಫ್ ಚಿತ್ರದಲ್ಲಿ ಬರುವ ಖಳನಾಯಕ ಅಧೀರ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ.
ಬೆಂಗಳೂರು: ಮಾಸ್ಕ್ ಹಾಕಿಕೊಂಡು ಕೊರೊನಾ ವೈರಸ್‍ನಿಂದ ದೂರ ಇರಿ ಎಂದು ಕೆಜಿಎಫ್ ಚಿತ್ರದಲ್ಲಿ ಬರುವ ಖಳನಾಯಕ ಅಧೀರ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ. ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕನ್‌ಫ್ಯೂಸ್ ಆಗಬೇಡಿ. ಬೊಮ್ಮನಹಳ್ಳಿಯ ಬಿಬಿಎಂಪಿಯವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಆಧೀರನನ್ನು ಬಳಸಿದ್ದಾರೆ. ಕೆಜಿಎಫ್ ಚಿತ್ರದ ಅಧೀರ ರುಮಾಲಿನ ಬಟ್ಟೆಯಿಂದ ಬಾಯಿ ಮುಚ್ಚಿಕೊಂಡಿರುವ ಫೋಟೋ ಹಾಕಿ, ಮಾಸ್ಕ್ ಹಾಕಿಕೊಳ್ಳಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನೋಡಿ …
Read More »ಒಂದೇ ದಿನದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು – 10 ಲಕ್ಷ ಮಂದಿ ಕೊರೊನಾದಿಂದ ಗುಣಮುಖ
ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದ 52,123 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈವರೆಗಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ. ಇದೇ ಮೊದಲು ಬಾರಿಗೆ ಒಂದೇ ದಿನಕ್ಕೆ ಐವತ್ತು ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಿನ್ನೆ 775 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 34,968ಕ್ಕೆ ಏರಿದೆ. ಸದ್ಯ 5,28,242 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ .ದಾಖಲೆಯ ಸೋಂಕಿತರ ಏರಿಕೆಯ ನಡುವೆ ಕೊರೊನಾದಿಂದ …
Read More »ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಇಂದು ಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸಂಕೇತಿಕ ಪ್ರತಿಭಟನೆ
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಇಂದು ಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಪಿಂಚಣಿ ಯೋಜನೆ, ಜ್ಯೋತಿ ಸಂಜೀವಿನಿ ವಿಮೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದ್ದು, ಆಸ್ಪತ್ರೆ ಹೊರ ಆವರಣದಲ್ಲಿ ಪಿಪಿಇ ಕಿಟ್ ಧರಿಸಿ ಆಗಮಿಸಿದ್ದ ಖಾಯಂ ಶುಶ್ರೂಷಕರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ತಮ್ಮ ಬೇಡಿಕೆ ಆಗ್ರಹಿಸಿ ಪ್ರದರ್ಶನ ಫಲಕಗಳನ್ನು ಹಿಡಿದು ಪ್ರತಿಭಟನೆ ಮಾಡಿದರು. ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಲವು ದಿನಗಳಿಂದ ಸಿಬ್ಬಂದಿ ಮನವಿ …
Read More »ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ
ಉಡುಪಿ: ಸ್ವಾಮೀಜಿ ಅಂದರೆ ಪೂಜೆ ಪುನಸ್ಕಾರ ಮಾಡುತ್ತಾರೆ. ಪಾಠ ಪ್ರವಚನ ಮಾಡಿ ಮಠದಲ್ಲಿ ಇರುತ್ತಾರೆ. ಲೋಕ ಸಂಚಾರ ಮಾಡಿ ಧರ್ಮ ಜಾಗೃತಿ ಮೂಡಿಸುತ್ತಾರೆ. ಆದರೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇದೆಲ್ಲ ಮಾಡುವ ಜೊತೆಗೆ ಕೃಷಿ, ಹೈನುಗಾರಿಕೆಯಲ್ಲೂ ಪಾಲ್ಗೊಳ್ಳುತ್ತಾರೆ. ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಭಿನ್ನ ಅಭಿರುಚಿಯ ಸ್ವಾಮೀಜಿ. ಸನ್ಯಾಸದ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ನೀಲಾವರ …
Read More »