Breaking News

Daily Archives: ಜುಲೈ 25, 2020

ಬೆಂಗಳೂರು ನಗರದಲ್ಲಿ ಕೋವಿಡ್‍ಗೆ ಪ್ರತಿದಿನ 50 ಜನ ಬಲಿಯಾಗುತ್ತಿದ್ದಾರೆ……!

ಬೆಂಗಳೂರು,ಜು.25- ಕೊರೋನಾದಿಂದ ಮೃತಪಟ್ಟಿರುವ ಅತಿ ಹೆಚ್ಚು ಸೋಂಕಿತರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದು ಅದನ್ನು ಪತ್ತೆಹಚ್ಚಲು ಬಿಬಿಎಂಪಿ ಮುಂದಾಗಿದೆ. ನಗರದಲ್ಲಿ ಕೋವಿಡ್‍ಗೆ ಪ್ರತಿದಿನ 50 ಜನ ಬಲಿಯಾಗುತ್ತಿದ್ದಾರೆ. ಮರಣ ಹೊಂದಿದ ಅತಿ ಹೆಚ್ಚು ಸೋಂಕಿತರು ತೀವ್ರ ಉಸಿರಾಟ ತೊಂದರೆ, ಕ್ಯಾನ್ಸರ್, ಕಿಮೋಥೆರಪಿ ಪಡೆಯುತ್ತಿದ್ದವರಾಗಿದ್ದಾರೆ. ನಾನಾ ಖಾಯಿಲೆಗಳಿಂದ ಬಳಲುತ್ತಿರುವ ಸೋಂಕಿತರನ್ನು ಪತ್ತೆ ಹಚ್ಚಲು ಬಿಬಿಎಂಪಿ ಮುಂದಾಗಿದೆ. ವಿವಿಧ ಕಂಟೈನ್ಮೆಂಟ್ ಝೋನ್‍ನಲ್ಲಿರುವ ಕ್ಯಾನ್ಸರ್ ಕಿಮೋಥೆರಪಿ, ಎಚ್‍ಐವಿ, ಉಸಿರಾಟದ ತೊಂದರೆ ಇರುವ ರೋಗಿಗಳನ್ನು ಗುರುತಿಸಿ ಆಂಟಿಜೆನ್ …

Read More »

ಹೇಳಿದ್ದು 10,100 ಬೆಡ್ ಅಂತ,ಸಿದ್ಧವಾಗಿರುವುದು ಕೇವಲ ಒಂದು ಸಾವಿರ ಬೆಡ್‍ಗಳು ಮಾತ್ರ.

ಬೆಂಗಳೂರು,ಜು25- ಕೊರೋನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರು ಹೊರ ವಲಯದ ಮಾದಾವರದ ಬಿಐಇಸಿಯಲ್ಲಿ ಸಿದ್ಧವಾಗಿರುವುದು ಕೇವಲ ಒಂದು ಸಾವಿರ ಬೆಡ್‍ಗಳು ಮಾತ್ರ. ಇಲ್ಲಿ 10,100 ಬೆಡ್‍ಗಳ ಬೃಹತ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ ಈವರೆಗೆ ಕೇವಲ 5 ಸಾವಿರ ಬೆಡ್‍ಗಳನ್ನು ಮಾತ್ರ ಕಲ್ಪಿಸಲಾಗಿದೆ. ಆದರೆ ಚಿಕಿತ್ಸೆಗೆ ಲಭ್ಯವಿರುವುದು 1 ಸಾವಿರ ಬೆಡ್‍ಗಳು ಮಾತ್ರ ಎಂದು ಸ್ವತಃ ಬಿಬಿಎಂಪಿ ಆಯುಕ್ತರೇ …

Read More »

ರಾಮಮಂದಿರ ಭೂಮಿ ಪೂಜೆಗೆ ತಡೆಯಾಜ್ಞೆ…………

ಪ್ರಯಾಗ್‍ರಾಜ್, -ಉತ್ತರಪ್ರದೇಶದ ಆಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗೆ ಈಗ ಮತ್ತೊಂದು ವಿಘ್ನ ಎದುರಾಗಿದೆ. ಕೊರೊನಾ ವೈರಸ್ ಸೋಂಕು ಹಾವಳಿ ಹಿನ್ನೆಲೆಯಲ್ಲಿ ಆಗಸ್ಟ್ 5ರಂದು ನಡೆಸಲು ಉದ್ದೇಶಿಸಲಾಗಿರುವ ರಾಮಮಂದಿರ ಭೂಮಿ ಪೂಜೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‍ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಅನ್‍ಲಾಕ್ 2.0 ಉಲ್ಲಂಘನೆ ಕಾರಣವನ್ನು ಮುಂದೊಡ್ಡಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ದೆಹಲಿ ಮೂಲದ ಹಿರಿಯ ವಕೀಲ ಸಾಕೇಶ್ ಗೋಖಲೆ ಕೋರ್ಟ್‍ಗೆ ಮನವಿ …

Read More »

12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ………….

ಶಿವಮೊಗ್ಗ: 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗ ಹೊಸನಗರ ಪಟ್ಟಣದಲ್ಲಿ ನಡೆದಿದೆ. ಹೊಸನಗರದ ಸಾಗರ ರಸ್ತೆಯ ರಮಾನಂದ್ ಎಂಬವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಹಾವು ಪ್ರತ್ಯಕ್ಷವಾಗಿದ್ದು, ಮನೆಯ ಹೊರಗಡೆ ಇದ್ದ ನಾಯಿ ಹಾವನ್ನು ಕಂಡು ಬೊಗಳಲು ಆರಂಭಿಸಿದೆ. ಅಲ್ಲದೇ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಸಹ ಹಾವನ್ನು ಕಂಡು ಹಾವು ಹಾವು ಎಂದು ಕೂಗಿದ್ದಾರೆ. ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ವಿಷಯ …

Read More »

ಸರ್ಕಾರಕ್ಕೆ ಸಿದ್ದು ಪಂಚಪ್ರಶ್ನೆ………

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ 2 ಸಾವಿರ ಕೋಟಿ ರೂ. ಹಗರಣದ ಆರೋಪ ಮಾಡಿದ ಬೆನ್ನಲ್ಲೇ ತಾನು ಹೆಣೆದ ಬಲೆಯಲ್ಲಿ ಬಿಜೆಪಿ ಸರ್ಕಾರ ಸಿಲುಕಿಕೊಳ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಏಳಲು ಕಾರಣ ಸರ್ಕಾರದ ಅನುಮಾನದ ನಡೆ. ಯಾಕಂದ್ರೆ, ಕೊರೊನಾ ವೈದ್ಯಕೀಯ ಸಲಕರಣೆಗಳ ಖರೀದಿ ಆರೋಪ ಕೇಳಿ ಬಂದ ದಿನದಿಂದಲೂ ಸರ್ಕಾರದ ಪ್ರತಿಯೊಂದು ನಡೆಯೂ ಅನುಮಾನ ಮೂಡಿಸುವಂತೆ ಇದೆ. ಆರಂಭದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ತನಿಖೆಯನ್ನು ಸರ್ಕಾರ ತಡೆದಿತ್ತು. …

Read More »

ಗುಣಮುಖರಾದವರಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಸೋಂಕು……….

ಕೋಲಾರ: ಕೊರೊನಾ ಸೋಂಕಿಗೆ ತುತ್ತಾಗಿ ಸದ್ಯ ಗುಣಮುಖವಾಗಿರುವ ಜನರು ದೇವರೇ ಬದುಕಿತು ಬಡಜೀವ ಎಂದು ಕೊಳ್ಳುತ್ತಿದ್ದಾರೆ. ಆದರೆ ಹೋದೆ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎಂಬಂತೆ ಮತ್ತೆ ಸೋಂಕು ವಕ್ಕರಿಸಲಾರಂಭಿಸಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದುವರೆಗೂ ಸುಮಾರು 284 ಮಂದಿ ಜನರು ಕೊರೊನಾವನ್ನು ಗೆದ್ದು ಬಂದಿದ್ದಾರೆ. ಆದ್ರೆ ಈಗ ಕೊರೊನಾ ಗೆದ್ದು ಬಂದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ 46 ವರ್ಷದ ಮಹಿಳೆಯಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. …

Read More »

ನಾಗರಪಂಚಮಿ ದಿನವೇ ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್

ಮಂಗಳೂರು: ನಾಡಿನೆಲ್ಲೆಡೆ ನಾಗರಪಂಚಮಿ. ಆದರೆ ಈ ಕೊರೊನಾ ನಾಗರಪಂಚಮಿ ಆಚರಣೆಗೂ ಅಡ್ಡಿಯಾಗಿದೆ. ನಾಗರಪಂಚಮಿ ದಿನವೇ ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್ ಆಗಿದೆ. ಇಂದು ನಡೆಯುತ್ತಿರುವ ನಾಗರಪಂಚಮಿ ಪೂಜೆಗೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ. ಸಾಮಾಜಿಕ ಅಂತರ ಕಾಪಾಡಲು ಕಷ್ಟಕರವಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ವರ್ಷ ನಾಗರಪಂಚಮಿಗೆ ಲಕ್ಷಾಂತರ ಭಕ್ತರಿಂದ ಪೂಜೆ ಸಲ್ಲಿಕೆಯಾಗುತ್ತಿತ್ತು. ಆದರೆ ಈ ಬಾರಿ ಅರ್ಚಕರಿಂದ ಮಾತ್ರ …

Read More »