Breaking News

Daily Archives: ಜುಲೈ 25, 2020

ಹಿಡಕಲ್ ಡ್ಯಾಂನಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಿದರು.

ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂನಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಮಕ್ಕಳಿಗೆ ಹಾಲು ನೀಡುವ  ಮೂಲಕ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಿದರು. ಜನರು ವೈಜ್ಞಾನಿಕವಾಗಿ ಯೋಚಿಸುವ ಮಟ್ಟದಲ್ಲಿದ್ದಾರೆ. ಮೂಲತಃ ಮಾಂಸಾಹಾರಿಯಾದ ಹಾವಿನ ಆಹಾರ ಹಾಲಲ್ಲ ಎಂಬ ಜಾಗೃತಿ ಮೂಡುತ್ತಿದೆ. ಹುತ್ತಕ್ಕೆ ಹಾಲೆರೆಯುವ ಬದಲು ಅದೇ ಹಾಲನ್ನು ಅಪೌಷ್ಟಿಕತೆಯಿಂದ ನರಳುವ ಮಕ್ಕಳು, ಅನಾಥರು ಹಾಗೂ ಬಡ ಜನರಿಗೆ ಹಂಚಿದರೆ ಪಂಚಮಿಗೆ ಅರ್ಥ ಬರುತ್ತದೆ ಮಾನವ ಬಂಧುತ್ವ ವೇದಿಕೆಯ ಸಂಚಾಲಕ …

Read More »

ನಜ್ಜುಗುಜ್ಜಾದ ಕಾರಿನಲ್ಲಿ ಆಟವಾಡುತ್ತಿದ್ದ ಬಾಲಕಿಯರಿಬ್ಬರು ಉಸಿರುಗಟ್ಟಿ ಸಾವು

ಚೆನ್ನೈ: ಮಕ್ಕಳನ್ನು ಕಾರಿನೊಳಗೆ ಬಿಟ್ಟು ತಂದೆ-ತಾಯಿ ಶಾಪಿಂಗ್ ಹೋಗಿ ಬರುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ಮಕ್ಕಳೇ ನಜ್ಜುಗುಜ್ಜಾದ ಕಾರಿನ ಒಳಗಡೆ ಹೋಗಿ ಆಟವಾಡುತ್ತಿರುವಾಗ ಉಸಿರುಗಟ್ಟಿ ಮೃತಪಟ್ಟ ದುರಂತ ಘಟನೆಯೊಂದು ನಡೆದಿದೆ. ಹೌದು. ಈ ಘಟನೆ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ದುರ್ದೈವಿ ಮಕ್ಕಳನ್ನು ರಾಜೇಶ್ವರಿ(4) ಹಾಗೂ ವನಿತಾ (7) ಎಂದು ಗುರುತಿಸಲಾಗಿದ್ದು, ಇಬ್ಬರೂ ಕಲದೀಪಮಂಗಲಂ ನಿವಾಸಿಗಳಾಗಿದ್ದಾರೆ. ಮೃತ ಮಕ್ಕಳಿಬ್ಬರು ಸ್ನೇಹಿತರಾಗಿದ್ದು, ಇವರ ತಂದೆ …

Read More »

ಮಗಳ ಪ್ರಿಯಕರನನ್ನ 17 ಬಾರಿ ಇರಿದು ಕೊಲೆ ಮಾಡಿದ್ದ ತಂದೆ.

ಚಿಕ್ಕಬಳ್ಳಾಪುರ: ಮಗಳ ಪ್ರಿಯಕರನನ್ನ 17 ಬಾರಿ ಇರಿದು ಕೊಲೆ ಮಾಡಿದ್ದ ತಂದೆ. ರೊಚ್ಚಿಗೆದ್ದ ಮೃತ ಯುವಕನ ಸಂಬಂಧಿಕರು ಆರೋಪಿಯ ಮನೆಯನ್ನ ಧ್ವಂಸ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವಮದ್ದಲಖಾನೆ ಗ್ರಾಮದಲ್ಲಿ ನಡೆದಿದೆ. ಹರೀಶ್ (25) ಕೊಲೆಯಾದ ಯುವಕ. ಈತನ ಪ್ರೇಯಸಿಯ ತಂದೆ ವೆಂಕಟೇಶ್ ಹಾಗೂ ಚಿಕ್ಕಪ್ಪ ಸೇರಿಕೊಂಡು ಶುಕ್ರವಾರ ತಡರಾತ್ರಿ 17 ಬಾರಿ ಇರಿದು ಕೊಲೆ ಮಾಡಿದ್ದರು. ಈಗಾಗಲೇ ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು …

Read More »

ರಾಮಮಂದಿರ ಶಿಲಾನ್ಯಾಸಕ್ಕೆ ಭರ್ಜರಿ ಸಿದ್ಧತೆ………

ಲಕ್ನೋ: ಅಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ನಿಗದಿಯಾಗಿದ್ದು, ಭರ್ಜರಿ ಸಿದ್ಧತೆಗಳು ಆರಂಭವಾಗಿದೆ. ಲಾಕ್‍ಡೌನ್ ನಡುವೆ ಐತಿಹಾಸಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂದು ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಸಲಹೆಗಳನ್ನು ನೀಡಿದರು. ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದ ಸಿದ್ಧತೆಯ ನೇತೃತ್ವ ವಹಿಸಿಕೊಂಡಿದೆ. ಅಗಸ್ಟ್ ಐದರಂದು ಬೆಳಗ್ಗೆ 10:30 ರಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ, ಗೃಹ …

Read More »

ಸಂಡೆ ಲಾಕ್‍ಡೌನ್ ಹಿನ್ನೆಲೆ ಗ್ರಾಮಗಳತ್ತ ಹೊರಟ ಬೆಂಗ್ಳೂರಿಗರು……..

ಬೆಂಗಳೂರು: ಸಂಡೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದಿನಿಂದಲೇ ಜನರು ತಮ್ಮ ತಮ್ಮ ಸ್ವ ಗ್ರಾಮಗಳತ್ತ ಹೋಗುತ್ತಿದ್ದಾರೆ. ಇಂದು ರಾತ್ರಿ 9 ಗಂಟೆಯಿಂದ ಸಂಡೆ ಲಾಕ್‍ಡೌನ್ ಜಾರಿಯಾಗಲಿದೆ. ಹೀಗಾಗಿ ಬೆಂಗಳೂರಿಗರು ತುಮಕೂರು ರಸ್ತೆ ನವಯುಗ ಟೋಲ್ ಮುಖಾಂತರ ಜನರು ತಮ್ಮ ತಮ್ಮ ಗ್ರಾಮಗಳತ್ತ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ.ಕಳೆದ ಲಾಕ್‍ಡೌನ್ ವೇಳೆಯಲ್ಲೂ ಬೆಂಗಳೂರು ಬಿಟ್ಟು ಸಾವಿರಾರು ಜನರು ಹೋಗುತ್ತಿದ್ದರು. ಇಂದು ಕೂಡ ಕಾರು, ಬೈಕ್‍ಗಳ ಮೂಲಕ …

Read More »

ಜಗಜ್ಯೋತಿ ಬಸವಣ್ಣನವರು ಐಕ್ಯರಾದ ದಿನವನ್ನು ನಾಗರಪಂಚಮಿ ಆಚರಿಸುವ ಬದಲು ಬಸವ ಪಂಚಮಿ ಯನ್ನಾಗಿ ಆಚರಿಸಬೇಕು ಎಂದು ಕರೆಕೊಟ್ಟರು ಸತೀಶ್ ಶುಗರ್ಸ್ ಫೌಂಡೇಶನ್

  ಗೋಕಾಕ ನಗರದಲ್ಲಿ   ಪ್ರತಿವರ್ಷದಂತೆ ಈ ವರ್ಷವೂ ಸಹ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಗೋಕಾಕ್ ಶಾಖೆ ಹಾಗೂ ಸತೀಶ್ ಶುಗರ್ಸ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 25.07. 2020 ರಂದು ನಾಗರ ಪಂಚಮಿ ಹಬ್ಬದ ನಿಮಿತ್ಯ ಪೌಷ್ಟಿಕ ಆಹಾರ ಹಾಲನ್ನು ಹಾವಿನ ಹುತ್ತಗಳಿಗೆ ಎರೆಯುವ ಬದಲು ಗೋಕಾಕ ನಗರದ ಶಿವಾ ಫೌಂಡೇಶನಲ್ಲಿರುವ ಅನಾಥ ಮಕ್ಕಳಿಗೆ ಹಾಲನ್ನು ಕೊಟ್ಟು ಮಾನವೀಯತೆಯ ಮೆರೆದಿರುವ ಮಾನವ ಬಂಧುತ್ವ ವೇದಿಕೆ ಗೋಕಾಕ್ …

Read More »

ಗೋಕಾಕ ಜೇ ಏಮ್ ಯೆಫ್ ಸಿ ಕೋರ್ಟ್ ನಲ್ಲಿ ಮುಖ್ಯಮಂತ್ರಿ ವಿರುದ್ಧ ಕೋರ್ಟ್ ಸಮನ್ಸ್

ಬೆಳಗಾವಿ- ಗೋಕಾಕ ಉಪ ಚುನಾವಣೆಯಲ್ಲಿ ದಾಖಲಾದ ಚುನಾವಣಾ ನೀತಿ ಸಂಹಿತೆ ಪ್ರಕರಣವೊಂದಕ್ಕೆ ಸಮಂಧಿಸಿದಂತೆ ಸೆಪ್ಟೆಂಬರ್ 1 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಗೋಕಾಕ ಸಿವ್ಹಿಲ್ ಜಡ್ಜ್ JMFC ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಗೋಕಾಕ ಉಪ ಚುನಾವಣೆಯಲ್ಲಿ ವೀರಶೈವ ಲಿಂಗಾಯತರು ಬಿಜೆಪಿಗೆ ಮತ ಹಾಕಬೇಕೆಂದು,ಚುನಾವಣಾ ಪ್ರಚಾರದ ಸಭೆಯಲ್ಲಿ ಮತಯಾಚಿಸಿದ್ದರು,ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಗೋಕಾಕ್ ಪೋಲೀಸ್ ಠಾಣೆಯಲ್ಲಿ …

Read More »

ತಡರಾತ್ರಿ ರೌಡಿಶೀಟರ್‌ನ ಬರ್ಬರ ಕೊಲೆ…….

ವಿಜಯಪುರ: ತಡರಾತ್ರಿ ದುಷ್ಕರ್ಮಿಗಳು ರೌಡಿಶೀಟರ್‌ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿರುವ ರಿಂಗ್ ರೋಡ್ ಬಳಿ ಈ ಘಟನೆ ನಡೆದಿದೆ. ವಿಜಯಪುರ ನಿವಾಸಿ ಸತೀಶ್ ರೆಡ್ಡಿ (28) ಕೊಲೆಯಾದ ರೌಡಿಶೀಟರ್. ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಸತೀಶ್ ರೆಡ್ಡಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯ ಹಾಗೂ ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಆದರ್ಶನಗರ …

Read More »

ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಳ್ಳ ದಾಟಿಸಿದ ಘಟನೆ ತೆಲಂಗಾಣದ ಭದ್ರದ್ರಿ ಕೊತಗೊಡೆಂನಲ್ಲಿ ನಡೆದಿದೆ.

ಹೈದರಾಬಾದ್: ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಳ್ಳ ದಾಟಿಸಿದ ಘಟನೆ ತೆಲಂಗಾಣದ ಭದ್ರದ್ರಿ ಕೊತಗೊಡೆಂನಲ್ಲಿ ನಡೆದಿದೆ. ಭದ್ರದ್ರಿ ಕೊತಗೊಡೆಂ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗುಂಡ್ವಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ತಾತ್ಕಾಲಿಕ ಸೇತುವೆ ಸಹ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಸೇತುವೆ ಕೊಚ್ಚಿ ಹೋಗಿದ್ದರಿಂದ ಗ್ರಾಮದ ಗರ್ಭಿಣಿಯನ್ನು ಕೆಲ ಯುವಕರು ಹೆಗಲ ಮೇಲೆ ಹೊತ್ತು ಹಳ್ಳವನ್ನು ದಾಟಿಸಿದ್ದಾರೆ. ಗರ್ಭಿಣಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ …

Read More »

ಬಿಬಿಎಂಪಿ ಆರೋಗ್ಯಾಧಿಕಾರಿಯ ಒಂದೇ ಕುಟುಂಬದ ಮೂವರು ಕೊರೋನಾಗೆ ಬಲಿ..!

ಬೆಂಗಳೂರು, ಜು.24- ಬಿಬಿಎಂಪಿ ಆರೋಗ್ಯಾಧಿಕಾರಿ ಕುಟುಂಬದ ಮೂವರು ಕೊರೊನಾಗೆ ಬಲಿಯಾಗಿರುವ ಘಟನೆ ಬೆಂಗಳೂರನ್ನು ಬೆಚ್ಚಿಬೀಳಿಸಿದೆ. ಕೇವಲ ನಾಲ್ಕು ದಿನಗಳಲ್ಲಿ ಈ ಕುಟುಂಬ ಮೂವರನ್ನು ಕಳೆದುಕೊಂಡಿದೆ. ಬಿಬಿಎಂಪಿ ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಕುಟುಂಬದಲ್ಲಿ ಮೂವರು ಕೊರೊನಾಗೆ ತುತ್ತಾಗಿದ್ದಾರೆ. ಕಳೆದ ಸೋಮವಾರ ತಂದೆಯ ಸಾವಿನಿಂದ ಮನನೊಂದಿದ್ದ ಅಧಿಕಾರಿ ಬುಧವಾರ ತನ್ನ ಭಾವನನ್ನು ಕಳೆದುಕೊಂಡಿದ್ದಾರೆ. ಗುರುವಾರ ಅವರ ತಾಯಿ ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ಈ ಅಧಿಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಈ ಕುಟುಂಬದಲ್ಲಿ ಮೂವರು …

Read More »