Breaking News

Daily Archives: ಜುಲೈ 16, 2020

ಬೆಂಗಳೂರಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾದ ಸರ್ಕಾರ

ಬೆಂಗಳೂರು,ಜು.16- ಕೊರೋನಾ ಮಟ್ಟಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಂಡು ದಿಟ್ಟ ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರ ಇದೀಗ ನಗರದಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕೋವಿಡ್-19 ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದು, ಸಭೆಯಲ್ಲಿ ಬೆಂಗಳೂರು ನಗರದಲ್ಲಿ 2 ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ನಗರದಲ್ಲಿ 8 ಕೋವಿಡ್ ಕೇರ್ ಕೇಂದ್ರಗಳು ಅಸ್ತಿತ್ವದಲ್ಲಿದ್ದು, …

Read More »

ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ರೈತ ಸಮುದಾಯ ನಾಶ ಮಾಡುವ ಹುನ್ನಾರ ಇದರಲ್ಲಿದೆ

ಬೆಂಗಳೂರು: ಕೊರೊನಾ ಪರಿಸ್ಥಿತಿಯ ಲಾಭ ಪಡೆದು  ಕಳ್ಳದಾರಿಯಲ್ಲಿ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರುವ ಮೂಲಕ  ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸಿದೆ. ಇದು ಅತ್ಯಂತ ಕರಾಳ ಶಾಸನವಾಗಿದ್ದು, ಬಿಜೆಪಿಯ ಹಿಡನ್ ಅಜೆಂಡಾ ವಿರುದ್ಧ ಕಾಂಗ್ರೆಸ್ ಉಗ್ರ ಹೋರಾಟ ಮಾಡಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಸಾಮಾನ್ಯ ರೈತರಿಗೆ ವಿರೋಧಿಯಾದ ಕಾಯಿದೆ ಆಗಿದೆ. ಕೊರೊನಾ ಪರಿಸ್ಥಿತಿ …

Read More »

ಜಿಲ್ಲಾಸ್ಪತ್ರೆಯಲ್ಲಿ 14 ಮಂದಿಗೆ ಕೊರೊನಾ ಪಾಸಿಟಿವ್- ಆಸ್ಪತ್ರೆ ಸೀಲ್ ಡೌನ್…..

ಉಡುಪಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಗೂ ಕೋವಿಡ್ 19 ಆವರಿಸಿದ್ದು, ಜಿಲ್ಲಾಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಆಸ್ಪತ್ರೆಯ ವೈದ್ಯರು, ರೋಗಿಗಳು, ಸಿಬ್ಬಂದಿ ಸೇರಿ ಒಟ್ಟು 14 ಮಂದಿಗೆ ಸೋಂಕಾಗಿದೆ ಎಂಬ ಮಾಹಿತಿಯಿದೆ. ಗ್ಯಾಂಗ್ರಿನ್ ಸಮಸ್ಯೆಗೆ ದಾಖಲಾಗಿದ್ದ ರೋಗಿಗೆ ಕೊರೊನಾ ಆವರಿಸಿದ್ದು, ಶಸ್ತ್ರಚಿಕಿತ್ಸೆಯ ನಂತರ ಜ್ವರಕ್ಕೆ ತುತ್ತಾಗಿದ್ದರು. ಈತನ ವಾರ್ಡ್‍ನಲ್ಲಿದ್ದ ಒಟ್ಟು 9 ರೋಗಿಗಳಿಗೂ ಸೋಂಕು ತಗುಲಿದೆ. ಚಿಕಿತ್ಸೆ ನೀಡಿದ ಇಬ್ಬರು ವೈದ್ಯರು, ಓರ್ವ ನರ್ಸ್ ಗೆ ಕೊರೊನಾ ಅಂಟಿದೆ. ಫ್ಲೋರ್ ಸ್ವಚ್ಛತಾ ಕೆಲಸ …

Read More »

ನಟ ಧ್ರುವ ಸರ್ಜಾ, ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್…………

ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ನಿನ್ನೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿತ್ತು. ಕೊರೊನಾ ಸೋಂಕು ದೃಢ ಪಟ್ಟಿರುವ ಬಗ್ಗೆ ಟ್ವೀಟ್ ಮಾಡಿ ಧ್ರುವ ಸರ್ಜಾ ಮಾಹಿತಿ ನೀಡಿದ್ದರು. ಆದರೆ ಕೊರೊನಾ ಸೋಂಕಿನ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿದ್ದ ಅವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿ ಆಸ್ಪತ್ರೆಯಿಂದ …

Read More »

ಹೈದರಾಬಾದ್‍ನಲ್ಲಿ ಶೂಟಿಂಗ್ ಆರಂಭಿಸಿದ ‘ಫ್ಯಾಂಟಮ್’ ಚಿತ್ರತಂಡ- ಸೆಟ್‍ನಲ್ಲಿ ಕನ್ನಡಿಗರಿಗೆ ಅವಕಾಶ

ಬೆಂಗಳೂರು: ಕೊರೊನಾ ಕಾರಣದಿಂದ ಸ್ಥಗಿತದೊಂಡಿದ್ದ ಸಿನಿರಂಗದ ಚಿತ್ರೀಕರಣಕ್ಕೆ ಸದ್ಯ ಮರುಚಾಲನೆ ಲಭಿಸುತ್ತಿದೆ. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಹೈದರಾಬಾದ್‍ನಲ್ಲಿ ಆರಂಭವಾಗಿದೆ. ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರತಂಡ ಗಣಪನಿಗೆ ಪೂಜೆ ಸಲ್ಲಿಸುವ ಮೂಲಕ ಚಿತ್ರೀಕರಣದ ಕೆಲಸಕ್ಕೆ ಚಾಲನೆ ನೀಡಿದೆ. ಕೊರೊನಾ ಲಾಕ್‍ಡೌನ್ ಮುನ್ನವೇ ಚಿತ್ರತಂಡ ಹೈದರಾಬಾದ್‍ನಲ್ಲಿ ಚಿತ್ರೀಕರಣ ಆರಂಭಿಸಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿರಬೇಕಿತ್ತು. ಆದರೆ ಕೊರೊನಾ …

Read More »

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಮೂರು ತಾಲೂಕುಗಳಲ್ಲಿ ಲಾಕ್‍ಡೌನ್…….

ಚಿಕ್ಕೋಡಿ(ಬೆಳಗಾವಿ): ಮಂಗಳವಾರ ರಾತ್ರಿಯಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳಲ್ಲಿ ಲಾಕ್‍ಡೌನ್ ಜಾರಿಯಾಗಿದೆ. ಮುಂದಿನ ಒಂದು ವಾರಗಳ ಲಾಕ್‍ಡೌನ್ ಜಾರಿಯಲ್ಲಿದ್ದು, ಅಗತ್ಯ ಸೇವೆ ಹೊರತುಪಡಿಸಿ ವ್ಯಾಪಾರ ವಹಿವಾಟು, ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ಧವಾಗಿದೆ. ಅನಗತ್ಯವಾಗಿ ಹೊರಗಡೆ ಓಡಾಡದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲೇ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಹೊಂದಿರುವ ಅಥಣಿ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತಿದ್ದವರಿಗೆ ಪೊಲೀಸರು ಲಾಠಿ ಏಟು ನೀಡದ್ದಾರೆ. ಅಥಣಿ …

Read More »

ಎಸ್‍ಎಸ್‍ಎಲ್‍ಸಿಯಲ್ಲಿ 97.8% ,12ನೇ ತರಗತಿಯಲ್ಲಿ 95.2% – ಅಂಗವೈಫಲ್ಯವನ್ನು ಮೆಟ್ಟಿನಿಂತ ಅನುಷ್ಕಾ ಪಂಡಾ

ಗುರುಗ್ರಾಮ್: ಎಸ್‍ಎಸ್‍ಎಲ್‍ಸಿಯಲ್ಲಿ 97.8%, 12ನೇ ತರಗತಿಯಲ್ಲಿ 95.2% ಅಂಕ ಗಳಿಸುವ ಮೂಲಕ ಗುರುಗ್ರಾಮ್‍ನ ದಿವ್ಯಾಂಗಿ ಬಾಲಕಿ ಅನುಷ್ಕಾ ಪಂಡಾ ತನ್ನ ಅಂಗವೈಫಲ್ಯವನ್ನು ಮೆಟ್ಟಿನಿಂತಿದ್ದಾಳೆ. ಅನುಷ್ಕಾಗೆ ಬೆನ್ನುಮೂಳೆ ಸ್ನಾಯುವಿನ ಸಮಸ್ಯೆಯಿದ್ದು, ಆಕೆ ವೀಲ್‍ಚೇರ್ ಇಲ್ಲದೇ ನಿಲ್ಲಲು ಮತ್ತು ಕೂರಲು ಆಗುವುದಿಲ್ಲ. ಆದರೆ ಇದನ್ನು ಲೆಕ್ಕಿಸದ ಅನುಷ್ಕಾ ವೀಲ್‍ಚೇರ್ ಮೇಲೆ ಕುಳಿತೇ ದಿನಕ್ಕೆ ಎರಡು ಗಂಟೆ ಓದಿ ಸಿಬಿಎಸ್‍ಇ 12 ನೇ ತರಗತಿ ಪರೀಕ್ಷೆಯಲ್ಲಿ 95.2% ಅಂಕ ಪಡೆದಿದ್ದಾಳೆ. ಅಂಗವೈಫಲ್ಯ ಇರುವ ಮಕ್ಕಳ …

Read More »

ಬೆಂಗಳೂರು ಬಿಟ್ಟು ಬಂದ ಜನರೆಲ್ಲಾ ಈಗ ಕೃಷಿಯಲ್ಲಿ ತೊಡಗಿಕೊಂಡಿರುವರು

ತುಮಕೂರು: ಇಷ್ಟು ದಿನ ಕೃಷಿ ಜಮೀನುಗಳೆಲ್ಲಾ ಬೀಳುಬಿಡುತಿದ್ದರು. ಕಾರಣ ನಗರದತ್ತ ಯುವಕರು ಮುಖ ಮಾಡುತಿದ್ದರು. ಆದರೆ ಈಗ ಬೀಳು ಬಿಟ್ಟ ಜಮೀನೆಲ್ಲಾ ಹಸನಾಗುತ್ತಿದೆ. ಅದರಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಇದೆಲ್ಲಾ ಕೊರೋನಾ ಎಫೆಕ್ಟ್. ಬೆಂಗಳೂರು ಬಿಟ್ಟು ಬಂದ ಜನರೆಲ್ಲಾ ಈಗ ಕೃಷಿಯಲ್ಲಿ ತೊಡಗಿಕೊಂಡಿರಿವುದೇ ಇದಕ್ಕೆ ಕಾರಣ. ತುಮಕೂರು ಜಿಲ್ಲೆಯಲ್ಲಿ ಈಗ ಕೃಷಿ ಚಟುವಟಿಕೆಗಳು ಜೋರಾಗಿದೆ. ಇಷ್ಟು ದಿನ ಬೀಳು ಬಿಡುತಿದ್ದ ಜಮೀನುಗಳಲ್ಲಿ ವಿವಿಧ ರೀತಿಯ ಕೃಷಿ ಮಾಡಲಾಗುತ್ತಿದೆ. ಕೊರೋನಾದಿಂದ ಬೆಂಗಳೂರು ಬಿಟ್ಟು …

Read More »

ಕಾಮುಕನೊಬ್ಬ ತನ್ನ 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಮುಕನೊಬ್ಬ ತನ್ನ 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಗೋವರ್ಧನ ವಿಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ಫಲಾ ಕಾಯ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. 36 ವರ್ಷದ ಟೆಂಪೋ ಚಾಲಕನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಾಯಿ ದೂರು ನೀಡಿದ್ದು ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯಿದೆಯಡಿ …

Read More »

ಶಿವಯೋಗಿ ಮಠದ ಪರಮ ಪೂಜ್ಯ ಹಾಲಸ್ವಾಮಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಶಿವಮೊಗ್ಗ : ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ರಾಂಪುರದ ಶಿವಯೋಗಿ ಮಠದ ಪರಮ ಪೂಜ್ಯ ಹಾಲಸ್ವಾಮಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹಲವು ದಿನಗಳಿಂದ ತೀವ್ರ ತರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರು. ಭಕ್ತರು ಎಷ್ಟೇ ವಿನಂತಿಸಿದರೂ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು. ಕೊನೆಗೆ ಎರಡು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್‌ ಕೇಂದ್ರಕ್ಕೆ ಕರೆತರಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆ ಸಾಸ್ವೆಹಳ್ಳಿ ಸಮೀಪದ ರಾಂಪುರ ಮಹಾಸಂಸ್ಥಾನದ ಹಾಲಸ್ವಾಮಿ ಅವರಿಗೆ …

Read More »