Breaking News

Daily Archives: ಜುಲೈ 16, 2020

ಯಾವ ರೈತ ಫೋಟೋಶೂಟ್ ಮಾಡಿಸುತ್ತಾನೆ?’- ಸಲ್ಲು ಪೋಸ್ಟ್‌ಗೆ ನೆಟ್ಟಿಗರು ಟಾಂಗ್

ಮುಂಬೈ: ರೈತ ಪರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಾಕಿದ್ದ ಸಲ್ಮಾನ್‌ ಖಾನ್‌ ಈಗ ಅದೇ ಫೋಟೋದಿಂದ ಈಗ ಟ್ರೋಲ್‍ಗೆ ಒಳಗಾಗಿದ್ದಾರೆ. ಕೊರೊನಾ ಭೀತಿಯಿಂದ ಚಿತ್ರರಂಗದ ಎಲ್ಲ ಚಟುವಟಿಕೆಗಳು ನಿಂತಿದ್ದು, ಸರ್ಕಾರ ಆದೇಶದಂತೆ ಮತ್ತೆ ಆರಂಭಗೊಳ್ಳುತ್ತಿವೆ. ಲಾಕ್‍ಡೌನ್ ವೇಳೆಯಿಂದಲೂ ತಮ್ಮ ತೋಟದ ಮನೆಯಲ್ಲೇ ಕಾಲಕಳೆಯುತ್ತಿರುವ ಸಲ್ಲು ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ರೈತರ ಪರವಾಗಿ ಫೋಟೋವೊಂದನ್ನು ಹಾಕಿದ್ದರು. ಈಗ ಇದೇ ಫೋಟೋವನ್ನು ಇಟ್ಟುಕೊಂಡು ನೆಟ್ಟೆಗರು ಸಲ್ಲು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.ಮಂಗಳವಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ …

Read More »

ಕೊರೊನಾ ನಡುವೆ ಚಿಕಿತ್ಸೆ ಸಿಗದೇ ತಿಂಗಳ ಹಸುಗೂಸೊಂದು ಜೀವ ಬಿಟ್ಟಿದೆ.

ಬೆಂಗಳೂರು: ಕೊರೊನಾ ನಡುವೆ ಚಿಕಿತ್ಸೆ ಸಿಗದೇ ತಿಂಗಳ ಹಸುಗೂಸೊಂದು ಜೀವ ಬಿಟ್ಟಿದೆ. ಜುಲೈ 11ರಂದು ಹೃದಯದ ಸಮಸ್ಯೆಗೆ ತುತ್ತಾದ ಒಂದು ತಿಂಗಳ ಮಗುವನ್ನು ಉಳಿಸಿಕೊಳ್ಳಲು ಬೆಂಗಳೂರಿನ ಮಂಜುನಾಥನಗರದ ಪೋಷಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಬರೋಬ್ಬರಿ 36 ಗಂಟೆಗಳ ಕಾಲ 200 ಕಿಲೋಮೀಟರ್ ಸುತ್ತಿದ್ರೂ, ಹತ್ತಾರು ಆಸ್ಪತ್ರೆಗಳ ಮೆಟ್ಟಿಲನ್ನು ಹತ್ತಿಳಿದ್ರೂ, ನಿರ್ದಯಿ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ಅಡ್ಮಿಟ್ ಮಾಡಿಕೊಂಡಿಲ್ಲ.ಬೆಡ್ ಮತ್ತು ಕೊರೊನಾ ನೆಪ ಹೇಳಿದ ಆಸ್ಪತ್ರೆಗಳು ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು …

Read More »

ಪೊಲೀಸರಿಗೆ ಸಂಬಂಧಿಸಿದಂತೆ ಪೋಸ್ಟ್ ಹಾಕಿ ಕಿಡಿ ಕಾರಿದ್ದಾರೆ.ಟಗರು ಪುಟ್ಟಿ

ಬೆಂಗಳೂರು: ಟಗರು ಹಾಗೂ ಕೆಂಡಸಂಪಿಗೆ ಸಿನಿಮಾ ಖ್ಯಾತಿಯ ಮನ್ವಿತಾ ಕಾಮತ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ಆಗಾಗ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ಪೋಸ್ಟ್ ಹಾಕುತ್ತಿರುತ್ತಾರೆ. ಅದೇ ರೀತಿ ಸಾಮಾಜಿಕ ಆಗುಹೋಗುಗಳ ಕುರಿತು ಸಹ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪೊಲೀಸರಿಗೆ ಸಂಬಂಧಿಸಿದಂತೆ ಪೋಸ್ಟ್ ಹಾಕಿ ಕಿಡಿ ಕಾರಿದ್ದಾರೆ. ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗಿದೆ. ಹಲವರು ನಿರುದ್ಯೋಗಿಗಳಾಗಿದ್ದಾರೆ. ಲಾಕ್‍ಡೌನ್ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದೆ. ಭಾರತದಾದ್ಯಂತ ಚಿತ್ರೀಕರಣವೇ ಸ್ಥಗಿತವಾಗಿದೆ. ಇತ್ತೀಚೆಗೆ …

Read More »

ಚಂದನವನದ ಪದ್ಮಾವತಿಯ ಹೊಸ ಲುಕ್……….

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಅಜ್ಞಾತದಲ್ಲಿರುವ ಚಂದನವನದ ಪದ್ಮಾವತಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ರಮ್ಯಾ ಅಜ್ಞಾತದಲ್ಲಿದ್ದರೂ ಅಭಿಮಾನಿಗಳು ಮಾತ್ರ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದ್ರೆ ಸ್ಯಾಂಡಲ್‍ವುಡ್ ಕ್ವೀನ್ ದರ್ಶನಕ್ಕಾಗಿ ಎಷ್ಟೋ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಇನ್‍ಸ್ಟಾಗ್ರಾಂ ಸ್ಟೇಟಸ್ ಡಿಫೆರೆಂಟ್ ಆಗಿ ಪೌಟ್ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ರಮ್ಯಾ ಪೋಸ್ಟ್ ಮಾಡಿಕೊಂಡಿದ್ದಾರೆ ಒಟ್ಟು 10 ವಿಭಿನ್ನವಾಗಿ ಪೋಸ್ ನೀಡಿರುವ ರಮ್ಯಾ ಫೋಟೋಗಳು ಸೋಶಿಯಲ್ …

Read More »

ಬೈಕ್ ಕಳ್ಳತನ‌ ಮಾಡುತ್ತಿದ್ದ ಮೂವರು ಖದೀಮರನ್ನುಬಂಧಿಸಿದ್ದು, ಸುಮಾರು 18 ಬೈಕ್ ಜಪ್ತಿ ಮಾಡಿದ್ದಾರೆ. ‌

ಬೆಳಗಾವಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬೈಕ್ ಕಳ್ಳತನ‌ ಮಾಡುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದು, ಸುಮಾರು 18 ಬೈಕ್ ಜಪ್ತಿ ಮಾಡಿದ್ದಾರೆ. ‌ ಮಚ್ಚೆ ಮಾರುತಿ ಗಲ್ಲಿ ನಿವಾಸಿ ಅಕ್ಷಯ ಶಂಕರ ಚೌಗಲೆ, ಬಸವನಕುಡಚಿ ನಿವಾಸಿಗಳಾದ ಮಹೇಶ ಭಾವುಕನ್ನಾ ಅನಗೋಳಕರ, ಆಕಾಶ ಭಾವುಕನ್ನಾ ಅನಗೋಳಕರ ಬಂಧಿತರು. ವಾಘವಾಡೆ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಠಾಣೆಗೆ ಕರೆದಂತು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 6,50,000 ಮೌಲ್ಯದ 18 ದ್ವಿಚಕ್ರ …

Read More »

ತಾಯಿ ತೀರಿದ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

ಚಿಕ್ಕಮಗಳೂರು: ಕೊರೊನಾ ಸೋಂಕಿತೆ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಖುಷಿ ವಿಚಾರವಾದರೆ, ಬೇಸರದ ಸಂಗತಿ ಎಂಬಂತೆ ಮಹಿಳೆಯ ತಾಯಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ದುರಾದೃಷ್ಟವಶಾತ್ ಕೊರೊನಾ ಸೋಂಕಿತೆ ಗರ್ಭಿಣಿಯ ತಾಯಿ ಕೊರೊನಾದಿಂದಾಗಿಯೇ ಸಾವನ್ನಪ್ಪಿದ್ದು, ಅಮ್ಮ ತೀರಿಕೊಂಡ ನೋವಿನಲ್ಲೂ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮನೇ ಮತ್ತೆ ನನ್ನ ಹೊಟ್ಟೆಯಲ್ಲೇ ಹುಟ್ಟಿದ್ದಾಳೆ ಎಂದು ಗರ್ಭಿಣಿ ಭಾವಿಸಿದ್ದಾಳೆ. ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ 23 …

Read More »

ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ನೀಡಿ: ಅಮಿತ್ ಶಾಗೆ ರಿಯಾ ಮನವಿ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ನಟಿ ರಿಯಾ ಚಕ್ರವರ್ತಿ ಕೇಂದ್ರ ಗೃಹಸಚಿವ ಅಮಿತ್ ಶಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ರಿಯಾ ಟ್ವೀಟ್: ಮಾನ್ಯ ಅಮಿತ್ ಶಾ ಅವರೇ, ನಾನು ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ. ಸುಶಾಂತ್ ನಿಧನವಾಗಿ ಒಂದು ತಿಂಗಳಕ್ಕೂ ಅಧಿಕ ಸಮಯ ಕಳೆದಿದೆ. ನನಗೆ ಸರ್ಕಾರದ …

Read More »

8 ವರ್ಷ, 264 ಕೋಟಿ ವೆಚ್ಚ- ಉದ್ಘಾಟನೆಗೊಂಡ 29 ದಿನಕ್ಕೆ ಕೊಚ್ಚಿ ಹೋದ ಬ್ರಿಡ್ಜ್

ಪಾಟ್ನಾ: ಬಿಹಾರದ ಗೋಪಾಲ್‍ಗಂಜ್ ನಲ್ಲಿ ಸೇತುವೆ ಉದ್ಘಾಟನೆಯಾದ 29 ದಿನದಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಸೇತುವೆ ಕೊಚ್ಚಿಕೊಂಡ ಹೋದ ಪರಿಣಾಮ ಚಂಪಾರಣ ತಿರಹುತ್ ಮತ್ತು ಸಾರಣ್ ಜಿಲ್ಲೆಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಜೂನ್ 16ರಂದು ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಈ ಸೇತುವೆಯನ್ನು ಉದ್ಘಾಟಿಸಿದ್ದರು. 263.47 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಎಂಟು ವರ್ಷ ಸಮಯ ತೆಗೆದುಕೊಂಡಿತ್ತು. ಗಂಢಕ್ ನದಿಗೆ ಅಡ್ಡಲಾಗಿ ಗೋಪಾಲಗಂಜ್ ಜಿಲ್ಲೆಯ …

Read More »

ಬರೆಯಲು ಜಾಗವಿಲ್ಲವೆಂದು ಬೇರೆ ಚೀಟಿ ಕೇಳಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ?

ಚಿಕ್ಕಮಗಳೂರು: ಈ ಚೀಟಿಯಲ್ಲಿ ಬರೆಯಲು ಜಾಗ ಇಲ್ಲ ಬೇರೆ ಚೀಟಿ ಬರೆಸಿಕೊಂಡು ಬನ್ನಿ ಎಂದಿದ್ದಕ್ಕೆ ರೋಗಿಯ ಜೊತೆ ಬಂದಿದ್ದ ಯುವಕ, ವೈದ್ಯರ ಮೇಲೆ ಹಲ್ಲೆ ಮಾಡಿರುವ ಆರೋಪವೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೇಳಿಬಂದಿದೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಹಮದ್ ಎಂಬ ಹುಡುಗ ವಯಸ್ಸಾದ ವೃದ್ಧರೊಬ್ಬರನ್ನು ಸಂತೋಷ್ ಎಂಬ ವೈದ್ಯರ ಕೊಠಡಿ ಮುಂಭಾಗ ಕೂರಿಸಿ ವೈದ್ಯರ ಬಳಿ ಚೀಟಿ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ವೈದ್ಯ …

Read More »

ಬೆಳಗಾವಿಯಲ್ಲೂ ಲಾಕ್ ಡೌನ್ :ಭ್ರಷ್ಟಾಚಾರ ನಿರ್ಮೂಲನೆ ಪರಿವಾರ ಆಗ್ರಹ…..

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತಲಿದ್ದು, ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಕನಿಷ್ಠ ಒಂದು ತಿಂಗಳು ಲಾಕ್ ಡೌನ್ ಜಾರಿ ಮಾಡುವಂತೆ   ಭ್ರಷ್ಟಾಚಾರ ನಿರ್ಮೂಲನೆ ಪರಿವಾರ ಆಗ್ರಹಿಸಿದೆ. ಈ ವಿಚಾರವಾಗಿ ಗುರುವಾರ ಜಿಲ್ಲಾಧಿಕಾರಿ ಎಂ.ಜಿ. ಹೀರೇಮಠ ಅವರನ್ನು ಭೇಟಿ ಮಾಡಿ ಭ್ರಷ್ಟಾಚಾರ ನಿರ್ಮೂಲನೆ ಪರಿವಾರ ಮನವಿ ಸಲ್ಲಿಸಿದೆ. ಬೆಳಗಾವಿ ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತಲಿದೆ. ಹೀಗಾಗಿ ಬೆಳಗಾವಿಯಲ್ಲಿಯೂ ಲಾಕ್ ಡೌನ್ …

Read More »