Breaking News

Daily Archives: ಜುಲೈ 10, 2020

ಊಟ ಕೋಡೋದು ನನ್ನ ಕೆಲಸ ಅಲ್ಲ: ಕ್ವಾರಂಟೈನ್ ಕೇಂದ್ರದಲ್ಲಿ ಅಧಿಕಾರಿಯ ಉದ್ಧಟತನ

ತುಮಕೂರು: ಕ್ವಾರಂಟೈನ್‍ನಲ್ಲಿ ಇದ್ದವರಿಗೆ ಸರಿಯಾದ ಊಟ, ತಿಂಡಿ ವ್ಯವಸ್ಥೆ ಮಾಡದ್ದನ್ನು ಪ್ರಶ್ನಿಸಿದಕ್ಕೆ ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿಯೋರ್ವ ಬೀದಿ ರಂಪಾಟ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕನಾಯಹಳ್ಳಿ ತಾಲೂಕಿನ ಹುಳಿಯಾರಿನ ಬಿಸಿಎಂ ಹಾಸ್ಟೆಲ್‍ನಲ್ಲಿ ಯುವಕ ಮತ್ತು ಆತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ರಾತ್ರಿ ಊಟ ವ್ಯವಸ್ಥೆ ಇಲ್ಲದೆ ಬಗ್ಗೆ ಕ್ವಾರಂಟೈನ್‍ನಲ್ಲಿದ್ದ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ, ಇದನ್ನು ಗಮನಿಸಿದ ಸ್ಥಳೀಯರು ಅವರಿಗೆ ಊಟದ ವ್ಯವಸ್ಥೆ ಮಾಡಿದ್ದರು. …

Read More »

ಖಾಸಗಿ ಹೋಟೆಲ್ ನಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಸುತ್ತೋಲೆ

ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಲು ಆರೋಗ್ಯ ಇಲಾಖೆ ಸುತ್ತೋಲೆ ಪ್ರಕಟಿಸಿದೆ. ಈ ಮೂಲಕ ರೋಗ ಲಕ್ಷಣ ಇಲ್ಲದ ರೋಗಿಗಳು ಮನೆಯಲ್ಲೇ ಐಸೊಲೇಶನ್ ಆಗಬಹುದು. ಇದರ ಜೊತೆ ಸರ್ಕಾರಿ ಕೇಂದ್ರ ಅಲ್ಲದೇ ಖಾಸಗಿ ಹೋಟೆಲ್ ನಲ್ಲೂ ಐಸೊಲೇಶನ್ ಆಗಬಹುದು. ಹೋಟೆಲ್ ಐಸೋಲೇಷನ್ ಮೂರು ವಿಭಾಗ ಮಾಡಿರುವ ಸರ್ಕಾರ ದರವನ್ನು ನಿಗದಿ ಮಾಡಿದೆ. ಬಜೆಟ್‌ ಹೋಟೆಲಿಗೆ 8 ಸಾವಿರ ರೂ., 3 ಸ್ಟಾರ್‌ ಹೋಟೆಲಿಗೆ 10 ಸಾವಿರ …

Read More »

ಗದ್ದೆ ಹದ ಮಾಡುತ್ತಿದ್ದ ರೈತನ ಮೇಲೆ ಬಿದ್ದ ವಿದ್ಯುತ್ ತಂತಿ………..

ಉಡುಪಿ: ಗದ್ದೆಯಲ್ಲಿ ಬೇಸಾಯ ಕೆಲಸ ಮಾಡುತ್ತಿದ್ದ ರೈತ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಬ್ರಹ್ಮಾವರ ತಾಲೂಕಿನ ರೈತ ಸಾಧು (70) ಬೇಸಾಯ ಚಟುವಟಿಕೆ ಮಾಡುತ್ತಿದ್ದಾಗ ಮೃತಪಟ್ಟಿದ್ದಾರೆ. ಚೇರ್ಕಾಡಿ ಗ್ರಾಮದ ಜಾರ್ ಜೆಡ್ಡು ಎಂಬಲ್ಲಿ ಈ ಘಟನೆ ನಡೆದಿದ್ದು, ಸಾಧು ಅವರು ಗದ್ದೆಯ ಬದು ಕಟ್ಟುತ್ತಿದ್ದರು. ನಾಳೆ ಬಿತ್ತನೆ ಮತ್ತು ನಾಟಿ ಕೆಲಸ ಮಾಡಬೇಕಿತ್ತು. ಹೀಗಾಗಿ ಇಂದು ದಿನ ಪೂರ್ತಿ ಬೇಸಾಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ತಂತಿ …

Read More »