ದಾವಣಗೆರೆ: ಪ್ರೀತಿಸಿ ಮದುವೆಯಾಗಿದ್ದ ದಂಪತಿಗೆ ಬೆದರಿಕೆ ಹಿನ್ನೆಲೆಯಲ್ಲಿ ದಂಪತಿ ದಾವಣಗೆರೆ ಮಹಿಳಾ ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ. ರಶ್ಮಿ ಮತ್ತು ಸುನಿಲ್ ಎಂಬುವವರು ಪ್ರೀತಿಸಿ ಮದುವೆಯಾಗಿದ್ದು, ಸಂಬಂಧಿಕರು ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯ ದಂಪತಿ ಸಂಬಂಧಿಕರಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆಗೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇವರ ಮನವಿ ಆಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
Read More »Monthly Archives: ಜೂನ್ 2020
ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮಂಡ್ಯ: ಕೆರೆಗಳ ಹರಿಕಾರ ಕನ್ನಡಿಗ ಕಾಮೇಗೌಡರ ಬಗ್ಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಾಮೇಗೌಡ ಅವರು ಇದುವರೆಗೂ 16 ಕೆರೆ ನಿರ್ಮಿಸಿದ್ದಾರೆ. ಈ ಹಿಂದೆ ಅವರ ಸಾಧನೆಯನ್ನ ಗುರುತಿಸಿದ್ದ ಟಿವಿ9 ಕಾಮೇಗೌಡರಿಗೆ ಟಿವಿ9 ಕರುನಾಡ ನಕ್ಷತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಾಣ ಇರೋವರೆಗೂ ಕಾಯಕ ಮುಂದುವರಿಸುತ್ತೇನೆ ಮೋದಿ ಸಾಹೇಬರು ನನ್ನಂಥ ಬಡವನ ಬಗ್ಗೆ ಮಾತನಾಡಿರುವುದು ಸಂತಸ ತಂದಿದೆ. ನಾನು ಭಾರತದಲ್ಲಿ ಹುಟ್ಟಿರುವುದಕ್ಕೂ ಸಾರ್ಥಕವಾಯಿತು. …
Read More »ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ-ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು.. ಪದಗ್ರಹಣ ಕಾರ್ಯಕ್ರಮವನ್ನು ಎಲ್ಇಡಿ ಸ್ಕ್ರೀನ್ ಮೂಲಕ ವೀಕ್ಷಣೆ ನಡೆಯಲಿದೆ. ಡಿಜಿಟಲ್ ಮೀಡಿಯಾದ ಮೂಲಕ ನಡೆಯುತ್ತಿರುವ ದೊಡ್ಡ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ 10 ಲಕ್ಷ ಜನ ಎದ್ದು ನಿಂತು ರಾಷ್ಟ್ರಗೀತೆ ಗಾಯನ ಮಾಡಲ್ಲಿದ್ದಾರೆ. ಕೇಡರ್ ಮಟ್ಟದಿಂದ ಪಕ್ಷ ಬೆಳೆಸುವ ಉದ್ದೇಶ ಹೊಂದಲಾಗಿದೆ. ಕಾರ್ಯಕ್ರಮದಲ್ಲಿ …
Read More »ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ, ಖಾಸಗಿ ಆಸ್ಪತ್ರೆಗಳಿಗೆ CS ಖಡಕ್ ವಾರ್ನಿಂಗ್
ಬೆಂಗಳೂರು: ಕೊವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿರುವ ವಿಜಯ್ ಭಾಸ್ಕರ್, ಕೊವಿಡ್ ರೀತಿಯ ಲಕ್ಷಣ ಇರುವವರಿಗೂ ಪರೀಕ್ಷೆ ಹಾಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಚಿಕಿತ್ಸೆ ಮತ್ತು ಪರೀಕ್ಷೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅನ್ವಯ ಕೇಸ್ ದಾಖಲಿಸಲು ನಿರ್ಧರಿಸಿದ್ದಾರೆ. ಇದಲ್ಲದೆ …
Read More »ವಧುವಿನ ಸಹೋದರಿಗೆ ಸೋಂಕು :ವಧು ಸೇರಿ 19 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ
ಹಾವೇರಿ: ಇನ್ನೇನು ಕೆಲವೇ ಗಂಟೆಗಳಲ್ಲಿ ಯುವತಿಯೊಬ್ಬಳ ಮದುವೆ ನಡೆಯಬೇಕಿದ್ದು, ಆದ್ರೆ ವಧುವಿನ ಸಹೋದರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮದುವೆ ಮುಂದೂಡಿ ವಧು ಸೇರಿ 19 ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ಭಾನುವಾರ ನಡೆದಿದೆ. ವಧುವಿನ ಸಹೋದರಿಗೆ ಸೋಂಕು ಇರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ದೃಢಪಡಿಸಿದೆ. ಇಲಾಖೆ ಸಂಜೆ ಬಿಡುಗಡೆ ಮಾಡುವ ಆರೋಗ್ಯ ಬುಲೆಟಿನ್ ಮೂಲಕ ಅಧಿಕೃತ ಮಾಹಿತಿ ನೀಡಬೇಕಿದೆ. ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಜಿಲ್ಲಾಡಳಿತ ಸೋಂಕಿತೆ ವಾಸವಿದ್ದ …
Read More »ಕುಟುಂಬ ವಿಷಯದಲ್ಲಿ ಜಾರಕಿಹೊಳಿ ಸಹೋದರರು ಎಲ್ಲರು ಒಂದೇ, ರಾಜಕೀಯವಾಗಿ ಮಾತ್ರ ನಾವು ಬೇರೆ ಬೇರೆ ಅಂತಾ ಹೇಳಿದ್ದಾರೆ
ಗೋಕಾಕ: ಕುಟುಂಬ ವಿಷಯದಲ್ಲಿ ಜಾರಕಿಹೊಳಿ ಸಹೋದರರು ಎಲ್ಲರು ಒಂದೇ, ರಾಜಕೀಯವಾಗಿ ಮಾತ್ರ ನಾವು ಬೇರೆ ಬೇರೆ ಅಂತಾಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಭಾನುವಾರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಇನ್ಮುಂದೆ ಲಾಕ್ ಡೌನ್ ಮಾಡುವುದು ಬಿಡುವುದನ್ನು ಸಿಎಂ ನಿರ್ಧರಿಸುತ್ತಾರೆ, ಜನರು ಕೊರೊನಾ ಹೆದರುವ ಅವಶ್ಯಕತೆ ಇಲ್ಲ. ಜಾಗೃತರಾಗಬೇಕಷ್ಟೇ, ಜನರು ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಿದ್ರೆ ಆದಷ್ಟು ಬೇಗ ಸಂಕಷ್ಟದಿಂದ …
Read More »ಕೊರೊನಾ ಸಂಕಷ್ಟ ಬಾರದಿದ್ರೆ ಜೀವನದ ಬೆಲೆ ಅರಿವಾಗ್ತಿರಲಿಲ್ಲ: ಪ್ರಧಾನಿ ಮೋದಿ
ಅನ್‍ಲಾಕ್‍ನಲ್ಲಿ ಎರಡು ಮಹತ್ವದ ಜವಾಬ್ದಾರಿಗಳಿವೆ – ಕರ್ನಾಟಕ ಅಳಿಗುಳಿ ಬಗ್ಗೆ ಮೋದಿ ಮಾತು – ರಾಜ್ಯದ ಕಾಮೇಗೌಡರ ಬಗ್ಗೆ ಮೆಚ್ಚುಗೆ ನವದೆಹಲಿ: ಅನ್‍ಲಾಕ್‍ನಲ್ಲಿ ಎರಡು ಮಹತ್ವದ ಜವಾಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಎಂದು ಪ್ರಧಾನಿ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು. ‘ಮನ್ ಕೀ ಬಾತ್’ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ …
Read More »ಪಕ್ಕದ ಮನೆಯವರೆಗೆ ಕೊರೊನಾ ಸೋಂಕುಶಾಸಕ ಪ್ರಿಯಾಂಕ್ ಖರ್ಗೆ ಸ್ವತಃ ತಾವೇ ಐಸೊಲೇಷನ್‍ಗೆ
ಬೆಂಗಳೂರು: ಪಕ್ಕದ ಮನೆಯವರೆಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಶಾಸಕ ಪ್ರಿಯಾಂಕ್ ಖರ್ಗೆ ಸ್ವತಃ ತಾವೇ ಐಸೊಲೇಷನ್‍ಗೆ ಒಳಗಾಗಿದ್ದಾರೆ. ಈ ವಿಚಾರವಾಗಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನ ನನ್ನ ನಿವಾಸದ ಪಕ್ಕದ ಮನೆಯವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ನಾನು ಕೂಡ ಐಸೊಲೇಷನ್‍ಗೆ ಒಳಪಡುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದ್ದಾರೆ.ಈ ಸಮಯದಲ್ಲಿ ನಾನು ಯಾರನ್ನೂ ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮ ಸುರಕ್ಷತೆಯ ದೃಷ್ಟಿಯಿಂದ ನನ್ನನ್ನು …
Read More »ನಾನು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ
ಬೆಂಗಳೂರು: ಕೆಲವು ದಿನಗಳಿಂದ ಹಾಸ್ಯನಟ ಚಿಕ್ಕಣ್ಣ ಮತ್ತು ‘ಟಗರು’ ಸಿನಿಮಾ ಖ್ಯಾತಿಯ ತ್ರಿವೇಣಿ ರಾವ್ ಅವರಿಗೆ ವಿವಾಹವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ನಟಿ ತ್ರಿವೇಣಿ ರಾವ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಟಿ ತ್ರಿವೇಣಿ ರಾವ್ ‘ಟಗರು’ ಸಿನಿಮಾದಲ್ಲಿ ಸರೋಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಅಂದಿನಿಂದ ಟಗರು ಸರೋಜ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಚಿಕ್ಕಣ್ಣ ಮತ್ತು ಟಗರು ಸರೋಜ ವಧು-ವರರ ಉಡುಪಿನಲ್ಲಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ …
Read More »15 ಫುಟ್ಬಾಲ್ ಸ್ಟೇಡಿಯಂಗೆ ಸಮ- ದೆಹಲಿಯಲ್ಲಿದೆ ಚೀನಾಗಿಂತ 10 ಪಟ್ಟು ದೊಡ್ಡ ಆಸ್ಪತ್ರೆ
ನವದೆಹಲಿ: ಮಹಾರಾಷ್ಟ್ರದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ಸೋಂಕಿನಿಂದ ತತ್ತರಿಸಿದೆ. ದೆಹಲಿಯಲ್ಲಿ ಜುಲೈ ಆರಂಭದಿಂದ ಸೋಂಕಿನ ಪ್ರಮಾಣ ತೀವ್ರ ಏರಿಕೆ ಕಂಡು ಬರುತ್ತಿದ್ದು ಸದ್ಯ 80 ಸಾವಿರ ಗಡಿ ದಾಟಿರುವ ದೆಹಲಿಯಲ್ಲಿ 2,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿಬಿಪಿ(ಇಂಡೋ ಟಿಬೆಟಿಯನ್-ಬಾರ್ಡರ್ ಪೊಲೀಸ್) ಪಡೆ 10 ದಿನದಲ್ಲೇ 10 ಸಾವಿರ ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಿದೆ. ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ ಸುಮಾರು 5.5 ಲಕ್ಷ ಮಂದಿಯಲ್ಲಿ ಸೋಂಕು …
Read More »