Breaking News

Monthly Archives: ಜೂನ್ 2020

ನಾಳೆಯಿಂದಲೇ ನೈಟ್ ಕರ್ಫ್ಯೂ, ಸಂಡೇ ಕಂಪ್ಲೀಟ್ ಲಾಕ್ ಡೌನ್, ವಾರದಲ್ಲಿ 5 ದಿನ ಕೆಲಸ :ಸರ್ಕಾರದಿಂದ ಕಠಿಣ ನಿರ್ಧಾರ

ಬೆಂಗಳೂರು: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ರಾಜ್ಯವ್ಯಾಪಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಜಾರಿ ಮಾಡಲಾಗುವುದು. ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ಇರುತ್ತದೆ. ನಾಳೆಯಿಂದ ರಾತ್ರಿ 8ರಿಂದ ಬೆಳಗ್ಗೆ 8 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜುಲೈ 5 ರ ಮುಂದಿನ ಭಾನುವಾರದಿಂದ ಸಂಡೇ …

Read More »

ಬೆಳಗಾವಿ ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ.ಸತೀಶ್ ಜಾರಕಿಹೊಳಿ

ಬೆಳಗಾವಿ:ರಾಜ್ಯದಲ್ಲಿ ಕೆಲವು ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಅವಧಿ ಮುಗಿದಿದೆ.ಪ್ರತಿಜ್ಞಾವಿಧಿ ಕಾರ್ಯಕ್ರಮ ಮುಗಿದ ಬಳಿಕ,ಅವಧಿ ಮುಗಿದ ಬಳಿಕ ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಪುನರ್ರಚನೆ ಮಾಡುತ್ತೇವೆ,ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲೂ ಕ್ರೆಡಿಟ್ ವಾರ್ ಇದ್ದೇ ಇರುತ್ತೆ, ಇದು ಸಾಮಾನ್ಯ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಪಿಸಿಸಿ ನೂತನ ಕಚೇರಿ ಪೂಜಾ ಕಾರ್ಯಕ್ರಮಕ್ಕೆ ಹೋಗದ …

Read More »

ದಾವಣಗೆರೆ:ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ ಖತರ್ನಾಕ್

ದಾವಣಗೆರೆ:ಕಟ್ಟಿಕೊಂಡ ಹೆಂಡತಿ ಮತ್ತು ಮುದ್ದಾದ ಎರಡು ಮಕ್ಕಳನ್ನು ಬೀದಿಗೆ ತಳ್ಳಿ ಮತ್ತೊಂದು ಹುಡ್ಗಿಯನ್ನು ಮದುವೆಯಾಗಿ ಚಕ್ಕಂದವಾಡುತ್ತಿದ್ದ. ಖತರ್ನಾಕ್ ಚಾಲಕಿ‌ ಹೆಸರು ನಿಂಗರಾಜ್ ಅಂತ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದವನು. ಅಂಬ್ಯುಲೆನ್ಸ್ ಚಾಲಕನಾಗಿದ್ದ ಈತ ಕಳೆದ 2014 ರಲ್ಲಿ ಹೊನ್ನಾಳಿಯ ಬೀರಗೊಂಡನಹಳ್ಳಿ ಗ್ರಾಮದ ನೀಲಮ್ಮ ಎನ್ನುವ ಯುವತಿಯನ್ನು ಮದುವೆಯಾಗಿದ್ದ. ಬಳಿಕ ಇಬ್ಬರ ದಾಂಪತ್ಯದಿಂದ ಮುದ್ದಾದ ಇಬ್ಬರು ಗಂಡು ಮಕ್ಕಳಿದ್ದಾರೆ.. ಆದರೆ ಈತನ ತಾಯಿ ಹಾಸ್ಟೆಲ್ ಒಂದರಲ್ಲಿ‌ ಕೆಲಸ ಮಾಡುತ್ತಿದ್ದು, …

Read More »

ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆ: ಹಾವೇರಿ

ಸವಣೂರ: ಇಂದಿನ ಯುವ ಜನಾಂಗ ಮಾಧಕ ವ್ಯಸನಗಳಿಗೆ ದಾಸರಾಗುವ ಮೂಲಕ ಆರೋಗ್ಯದ ಜೊತೆ ಉತ್ತಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಯೋಗಿಶ್ವರ ಎಸ್. ಕಳವಳ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲಾ ಪೊಲೀಸ್ ಶಿಗ್ಗಾಂವ ಉಪ ವಿಭಾಗದ ಹಾಗೂ ಸವಣೂರ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾದಕ ದ್ರವ್ಯಗಳ ಸೇವನೆ ಹಾಗು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜನ ಜಾಗೃತಿ ಪದಾಯತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾದಕ ದ್ರವ್ಯಗಳ ಸೇವನೆಯಿಂದ ಆರೋಗ್ಯದ …

Read More »

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.

ಜೇವರ್ಗಿ: ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕಾಲೇಜ್ ರೋವರ್ಸ್ ಅಂಡ್ ರಂಜರ್ಸ್ ವಿದ್ಯಾರ್ಥಿಗಳ ಘಟಕ ಸದಸ್ಯರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ರೋವರ್ಸ್ ಅಂಡ್ ರಂಜರ್ಸ್ ವಿದ್ಯಾರ್ಥಿಗಳ ಘಟಕವೂ ಮಾಸ್ಕ್ , ಸ್ಯಾನಿಟೈಸರ್ ನೀಡಲಾಗುತ್ತಿದೆ ಎಂದು ಡಾ. ಈಶ್ವರ್ ಕರಿಘೋಳೇಶ್ವರ ಹೇಳಿದರು. ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಗಟ್ಟವಾಗಿದೆ. ಆದ ಕಾರಣ ಮಕ್ಕಳು ಧೈರ್ಯದಿಂದ ಪರೀಕ್ಷೆಯನ್ನು ಬರೆಯಬೇಕು ಎಂದು ಆತ್ಮಸ್ಥೈಯ ತುಂಬಿದರು. ಈ …

Read More »

ಕಾಪಿ ಚೀಟಿ ಕೊಡುವ ವೇಳೆ ಪೊಲೀಸರಿಂದ ಲಾಠಿ ಚಾರ್ಜ್ : ಅನುಮಾನಾಸ್ಪ ರೀತಿಯಲ್ಲಿ ಮೃತಪಟ್ಟ ಯುವಕ

ವಿಜಯಪುರ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬಸವನಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಸಾಗರ ಚಲವಾದಿ (19) ಅನುಮಾನಾಸ್ಪ ರೀತಿಯಲ್ಲಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಹೂವಿನಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ನುಗ್ಗಿ ನಕಲು ಮಾಡಲು ಕಾಪಿ ಚೀಟಿ ಕೊಡುವ ವೇಳೆ ಪೊಲೀಸರು ಯುವಕನನ್ನು ಹಿಡಿದು, ಲಾಠಿ ರುಚಿ ತೋರಿಸಿದ್ದಾರೆ. ಈ ವೇಳೆ ಯುವಕ ಮೃತಪಟ್ಟಿದ್ದಾನೆ …

Read More »

ಶಿರಸಿಯ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್‌ ಬಿಟ್ಟ ಸಾರಿಗೆ ಇಲಾಖೆ

ಕಾರವಾರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಾಮುಖ್ಯತೆಯನ್ನು ಅರಿತ ಸರ್ಕಾರ ಕೊರೊನಾ ವೈರಸ್‌ ಸೋಂಕಿನ ನಡುವೆ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆ ತಪ್ಪಿಸಬಾರದು ಎನ್ನುವ ಕಾರಣಕ್ಕೆ ಸಾರಿಗೆ ಇಲಾಖೆ ಶಿರಸಿಯ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್‌ ಬಿಟ್ಟದೆ. ಶಿರಸಿಯ ಲಯನ್ಸ್ ಪರೀಕ್ಷಾ ಕೇಂದ್ರಕ್ಕೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಲು, ವಿದ್ಯಾರ್ಥಿ ಶ್ರೀಧರ ಗೌಡ ಹೋಗಬೇಕಿತ್ತು. ಆ ವಿದ್ಯಾರ್ಥಿಯ ಪರೀಕ್ಷೆ ಬರೆಯಲು ಕೆಎಸ್‌ಆರ್‌ಟಿಸಿ ಸಹಾಯ ಮಾಡಿದೆ. ಆದ್ದರಿಂದ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ವ್ಯವಸ್ಥೆ ಮಾಡಿ ಪರೀಕ್ಷೆ …

Read More »

ಬೆಳಗಾವಿ ಮಹಾನಗರ ಪಾಲಿಕೆ ತಾನು ಮಾಡಿದ ನಿಯಮವನ್ನು ತಾನೇ ಗಾಳಿಗೆ ತೂರುತ್ತಿದೆ.

ಬೆಳಗಾವಿ- ಬೆಳಗಾವಿಯ ಹೃದಯಭಾಗದಲ್ಲಿರುವ ಸರ್ದಾರ್ ಮೈದಾನ ಕೇವಲ ಕ್ರೀಡಾ ಚಟುವಟಿಕೆಗೆ ಮಾತ್ರ ಬಳಕೆ ಆಗಬೇಕು ಎಂದು ನಿಯಮ ಮಾಡಿದ ಬೆಳಗಾವಿ ಮಹಾನಗರ ಪಾಲಿಕೆ ತಾನು ಮಾಡಿದ ನಿಯಮವನ್ನು ತಾನೇ ಗಾಳಿಗೆ ತೂರುತ್ತಿದೆ. ಬೆಳಗಾವಿಯ ಸರ್ದಾರ್ ಮೈದಾನ,ಶಿಕ್ಷಣ ಇಲಾಖೆಯ ಆಸ್ತಿ,ಈ ಮೈದಾನವವನ್ನು ಪಾಲಿಕೆಯ ವಿಶೇಷ ಅನುದಾನದಲ್ಲಿ ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿ,ಅಭಿವೃದ್ಧಿ ಪಡಿಸಿದೆ. ಮೈದಾನದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಿದೆ,ಈ ಸಂಕೀರ್ಣ ಈಗ ಕ್ರೀಡಾ ಚಟುವಟಿಕೆಗೆ ಬಳಕೆಯಾಗದೇ,ರಾಜಕೀಯ ಚಟುವಟಿಕೆಗಳ ಪಾಲಾಗಲಿದೆ. ಸರ್ದಾರ್ …

Read More »

ಬೇಬಿ ಬೆಟ್ಟದ ಅಮೃತ ಮಹಲ್ ಕಾವಲು ಪ್ರದೇಶದ ಸುಮಾರು 30ಕ್ಕೂ ಹೆಚ್ಚು ಅಕ್ರಮ ಕಲ್ಲುಗಣಿಗಾರಿಕೆ ಸ್ಥಳಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಟಿ.ವಿ.ಪುಷ್ಪ ಹಾಗೂ ಮತ್ತವರ ತಂಡ ಶುಕ್ರವಾರ ದಿಢೀರ್‌ ಭೇಟಿ ನೀಡಿ ಅಕ್ರಮವಾಗಿ ನಡೆಸುತ್ತಿದ್ದ ಗಣಿಗಾರಿಕೆಗೆ ಬ್ರೇಕ್‌ ಹಾಕಿದರು.

ಮಂಡ್ಯ(ಜೂ.27): ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಅಮೃತ ಮಹಲ್ ಕಾವಲು ಪ್ರದೇಶದ ಸುಮಾರು 30ಕ್ಕೂ ಹೆಚ್ಚು ಅಕ್ರಮ ಕಲ್ಲುಗಣಿಗಾರಿಕೆ ಸ್ಥಳಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಟಿ.ವಿ.ಪುಷ್ಪ ಹಾಗೂ ಮತ್ತವರ ತಂಡ ಶುಕ್ರವಾರ ದಿಢೀರ್‌ ಭೇಟಿ ನೀಡಿ ಅಕ್ರಮವಾಗಿ ನಡೆಸುತ್ತಿದ್ದ ಗಣಿಗಾರಿಕೆಗೆ ಬ್ರೇಕ್‌ ಹಾಕಿದರು. ಕಲ್ಲು ಗಣಿಗೆ ಸಂಪೂರ್ಣ ನಿಷೇಧ ಹೇರಿದ್ದರೂ ಸಹ ಬೇಬಿ ಬೆಟ್ಟದಲ್ಲಿ ಕದ್ದುಮುಚ್ಚಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಾಹಿತಿ …

Read More »

ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೇ ನಾವೇ ಜಿಂದಾಲ್ ಮುಂದೇ ಧರಣಿ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 610 ತಲುಪಿದೆ. ಇದರಲ್ಲಿ ಮುಕ್ಕಾಲು ಭಾಗ ಜಿಂದಾಲ್ ಕಾರ್ಖಾನೆಯದ್ದೆ. ಹೀಗಾಗಿ ಜಿಂದಾಲ್ ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಲು ಒತ್ತಾಯ ಹೆಚ್ಚಾಗಿ ಕೇಳಿ ಬರುತ್ತಿದೆ. ಕಳೆದ ಮೈತ್ರಿ ಸರ್ಕಾರದಲ್ಲಿ ಜಿಂದಾಲ್‍ಗೆ 3,600 ಎಕರೆ ಜಮೀನು ಪರಭಾರೆ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಈಗಿನ ಜಿಲ್ಲಾ ಉಸ್ತುವಾರಿ ಸಚಿವ …

Read More »