Breaking News

Daily Archives: ಜೂನ್ 9, 2020

ಕೊರೊನಾ ಆರ್ಭಟಕ್ಕೆ ರಾಷ್ಟ್ರ ರಾಜಧಾನಿ ತತ್ತರ……….

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ರಣ ಕೇಕೆ ಹಾಕಿ ಆರ್ಭಟಿಸುತ್ತಿದೆ. ದಿನದಿಂದ ದಿನಕ್ಕೆ ಸರ್ಕಾರದ ಕೈ ಮೀರಿ ಸೋಂಕು ಹಬ್ಬುತ್ತಿದೆ. ಒಂದು ಕಡೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಮತ್ತೊಂದು ಕಡೆ ಮಣ್ಣಲ್ಲಿ ಶವಗಳನ್ನು ಹೂಳಲು ಜಾಗ ಸಿಗುತ್ತಿಲ್ಲ. ಈ ನಡುವೆ ದೆಹಲಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರುವ ಭೀತಿ ಸೃಷ್ಟಿಯಾಗಿದೆ. ದೆಹಲಿ ರಾಜಕೀಯ ವ್ಯವಸ್ಥೆಯ ಶಕ್ತಿ ಕೇಂದ್ರ. ಕೇಂದ್ರಾಡಳಿತ ಪ್ರದೇಶವಾಗಿರುವ ಈ ರಾಜ್ಯ ಈಗ ಕೊರೊನಾ ವಿಚಾರದಲ್ಲಿ ದೊಡ್ಡ ಸದ್ದು …

Read More »

ಧಾರವಾಡದಲ್ಲಿ ಎರಡೂವರೆ ವರ್ಷದ ಮಗು ಡಿಸ್ಚಾರ್ಜ್- ನಾಲ್ಕು ವರ್ಷದ ಮಗು ಸೇರಿ ನಾಲ್ವರಿಗೆ ಕೊರೊನಾ

ಧಾರವಾಡ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದು, 46 ವರ್ಷದ ಪುರುಷ ರೋಗಿ ನಂ.5,482, 42 ವರ್ಷದ ಮಹಿಳೆ ರೋಗಿ ನಂ.5483 ಹಾಗೂ 14 ವರ್ಷದ ಬಾಲಕ ರೋಗಿ ನಂ.5,484 ಈ ಮೂವರು ರಾಜಸ್ಥಾನದಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ. ಇವರು ಹುಬ್ಬಳ್ಳಿ ಮಂಗಳವಾರಪೇಟೆಯ ನಿವಾಸಿಗಳಾಗಿದ್ದು, ಹೋಮ್ …

Read More »

ಪ್ರವಾಸಿಗರೇ ಗಮನಿಸಿ- ಹೊಗೆನಕಲ್ ಜಲಪಾತಕ್ಕಿಲ್ಲ ಪ್ರವೇಶ

ಚಾಮರಾಜನಗರ: ಹೊಗೆನಕಲ್ ಜಲಪಾತವನ್ನ ಪ್ರವಾಸಿಗರಿಗೆ ಮುಕ್ತ ಮಾಡಲು ಯಾವುದೇ ಆದೇಶ ಇದುವರೆಗೂ ಬಂದಿಲ್ಲ. ಆದ್ದರಿಂದ ಜಲಪಾತ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರಿಸಲಾಗಿದೆ. ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ನಿರ್ಬಂಧ ಮುಂದುವರಿಸಲಾಗಿದೆ. ಈ ಬಗ್ಗೆ ಕಾವೇರಿ ವನ್ಯಜೀವಿ ಧಾಮದ ಡಿಎಫ್‍ಒ ಡಾ.ರಮೇಶ್ ಮಾತನಾಡಿ, ಹೊಗೆನಕಲ್ ಜಲಪಾತವನ್ನ ಪ್ರವಾಸಿಗರಿಗೆ ಮುಕ್ತ ಮಾಡಲು ಯಾವುದೇ ಆದೇಶ ಇದುವರೆಗೂ ಬಂದಿಲ್ಲ. ಹೀಗಾಗಿ ಸದ್ಯಕ್ಕೆ ಜಲಪಾತ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರಿಸಲಾಗಿದೆ ಎಂದು …

Read More »

ಶೇ.99ರಷ್ಟು ಅನ್‍ಲಾಕ್ ಇಂಡಿಯಾ- ಧರ್ಮಸ್ಥಳ, ಕುಕ್ಕೆಯಲ್ಲಿ ದೇವರ ದರ್ಶನ

ಮಂಗಳೂರು: ಲಾಕ್‍ಡೌನ್ ಅಂತ್ಯಗೊಂಡು ಇಡೀ ರಾಜ್ಯದಲ್ಲಿ ದೇಗುಲಗಳು ಓಪನ್ ಆಗಿದೆ. ದೇಗುಲಗಳಲ್ಲಿ ಒಂದಷ್ಟು ರೂಲ್ಸ್‍ಗಳನ್ನು ಪಾಲಿಸಿಕೊಂಡು ಭಗವಂತ ದರ್ಶನ ನೀಡ್ತಿದ್ದಾನೆ. 77 ದಿನಗಳಿಂದ ಲಾಕ್‍ಡೌನ್ ಆಗಿದ್ದ ದೇಶ ಸೋಮವಾರ ಮೊದಲ ಹಂತವಾಗಿ ತೆರೆದುಕೊಂಡಿತು. ಸೋಮವಾರ ದೇವಾಲಯ, ಹೋಟೆಲ್, ಮಾಲ್, ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಬಹುತೇಕ ದೇವಾಲಯಗಳು ಬಾಗಿಲು ತೆರೆದಿದ್ದವು. ಆದರೆ ಭಕ್ತರ ಸಂಖ್ಯೆಯೇ ಕಡಿಮೆಯಿತ್ತು. ಇನ್ನು ಕೆಲವು ಕಡೆ ಜುಲೈ ಬಳಿಕ ದೇಗುಲ ತೆರೆಯಲು ನಿರ್ಧರಿಸಲಾಗಿದೆ. ನಿನ್ನೆಯಿಂದ ರಾಜ್ಯಾದ್ಯಂತ …

Read More »