ಬೆಂಗಳೂರು: ಕಾರ್ಯಕರ್ತರಿಗೆ ರಾಜ್ಯಸಭಾ ಟಿಕೇಟ್ ಕೊಟ್ಟಿದ್ದು ಪ್ರಭಾಕರ ಕೋರೆ, ರಮೇಶ ಕತ್ತಿ ಅವರಿಗೂ ಖುಷಿಯಾಗಿದೆ ಬೇಸರಗೊಂಡಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಬಿಜೆಪಿಯಿಂದ ರಾಜ್ಯಸಭಾ ಟಿಕೇಟ್ ಪ್ರಬಲ ಆಕಾಂಕ್ಷಿಗಳಾಗಿದ್ದ ರಮೇಶ್ ಕತ್ತಿ, ಉಮೇಶ್ ಕತ್ತಿ, ಪ್ರಭಾಕರ್ ಕೋರೆಗೆ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೂ ಅಸಮಾಧಾನ ಆಗಿಲ್ಲ, ಉಮೇಶ್ ಕತ್ತಿಗೆ ನಾಮಪತ್ರ ಬಳಿಕ ಭೇಟಿ ಮಾಡುತ್ತೇನೆ ಎಂದರು. ಸದ್ಯ ರಮೇಶ್ ಕತ್ತಿ, …
Read More »Daily Archives: ಜೂನ್ 9, 2020
ಜೂ. 29 ರಂದು ವಿಧಾನ ಪರಿಷತ್ 7 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಬೆಂಗಳೂರು: ಜೂ. 29 ರಂದು ವಿಧಾನ ಪರಿಷತ್ 7 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ನಸೀರ್ ಅಹ್ಮದ್, ಜಯಮ್ಮ, ಎಚ್.ಎಂ. ರೇವಣ್ಣ, ಶರವಣ, ವೇಣುಗೋಪಾಲ, ಡಿ.ಯು. ಮಲ್ಲಿಕಾರ್ಜುನ್, ಎನ್.ಎಸ್. ಬೋಸರಾಜು ಅವರಿಂದ ತೆರವಾಗುವ ಏಳು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜೂ. 11 ರಂದು ಅಧಿಸೂಸಚನೆ ಹೊರಡಿಸಲಿದ್ದು ಅಂದಿನಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಜೂ.22 ರಂದು ನಾಮಪತ್ರ ಹಿಂಪಡೆಯಲು ಅವಕಾಶಕ್ಕೆ ದಿನಾಂಕ ನಿಗದಿಯಾಗಿದೆ. ಈ ಏಳು ಸ್ಥಾನಗಳ ಪೈಕಿ ಸದ್ಯದ ವಿಧಾನಸಭೆ ಬಲಾಬಲದ …
Read More »ವೈದ್ಯರ ನಿರ್ಲಕ್ಷ ಕೊರಾನ್ ಸೋಂಕಿತ ಗರ್ಭಿಣಿಗೆ ಗರ್ಭ ಪಾತ..
ರಾಯಚೂರು: ಕೊರೊನಾ ಸೋಂಕಿತ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮಗು ಹೊಟ್ಟೆಯಲ್ಲೇ ಮೃತಪಟ್ಟ ಘಟನೆ ರಾಯಚೂರಿನ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಮೂರು ತಿಂಗಳ ಗರ್ಭಿಣಿ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದರು. ಸೋಮವಾರ ರಾತ್ರಿ ತೀವ್ರ ತಕ್ತಸ್ರಾವವಾಗಿ ಗರ್ಭಿಣಿ ನರಳಾಡಿದ್ದರು. ಭಾನುವಾರ ರಾತ್ರಿಯಿಂದಲೇ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಗರ್ಭಿಣಿಗೆ ಚಿಕಿತ್ಸೆ ನೀಡುವಂತೆ ಕೋವಿಡ್ ವಾರ್ಡ್ ನಲ್ಲಿದ್ದ ಇತರ ರೋಗಿಗಳು ನಿನ್ನೆ ಮಧ್ಯಾಹ್ನದಿಂದ …
Read More »10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗಳಿಗೆ ತೇರ್ಗಡೆ
ಹೈದರಾಬಾದ್: ದೇಶಾದ್ಯಂತ ಕೊರೊನಾ ವೈರಸ್ ಅಬ್ಬರ ಜೋರಾಗಿದ್ದು, ಇದರ ಮಧ್ಯೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ. ರಾಜ್ಯದಲ್ಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲು ನಿರ್ಧರಿಸಿದ್ದಾಗಿ ಇಲ್ಲಿನ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಸದ್ಯದ ಸ್ಥಿತಿಯಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಇನ್ನು ರಾಜ್ಯದಲ್ಲಿ ಸಿನಿಮಾ, …
Read More »ಮತ್ತೆ ಪೆಟ್ರೋಲ್ ಬೆಲೆ ಹೆಚ್ಚಳ…..
ನವದೆಹಲಿ: ಭಾನುವಾರ, ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 60 ಪೈಸೆ ಹೆಚ್ಚಿಸಿದ್ದ ತೈಲ ಕಂಪನಿಗಳು ಇಂದೂ ಕೂಡ ಗ್ರಾಹಕರಿಗೆ ಶಾಕ್ ನೀಡಿದೆ. ಇಂದು ಲೀಟರ್ ಪೆಟ್ರೋಲ್ಗೆ 54 ಪೈಸೆ ಹಾಗೂ ಡೀಸೆಲ್ಗೆ 58 ಪೈಸೆ ಹೆಚ್ಚಳವಾಗಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಪರಿಣಾಮ, 82 ದಿನಗಳ ಲಾಕ್ಡೌನ್ ವಿರಾಮದ ಬಳಿಕ ಭಾನುವಾರದಿಂದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಏರಿಕೆ ಮಾಡುತ್ತಾ ಬಂದಿವೆ. ರಾಷ್ಟ್ರ …
Read More »ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ
ರಾಜ್ಯದ ಹಿರಿಯ ನಾಯಕರಾದ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀಯವರು ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಶ್ರೀ ಮಲ್ಲಿಕಾರ್ಜುನ ಖರ್ಗೆಜೀಯರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ ಉತ್ತುಂಗಕ್ಕೆ ಬೆಳಯಲಿ ಹಾಗೂ ಅವರ ಮಾರ್ಗದರ್ಶನವೂ ನಮ್ಮೆಲ್ಲ ಕಾಂಗ್ರೆಸ್ ಪಕ್ಷದವರಿಗೆ ದಾರಿದೀಪವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ ಜೀ, ವಿರೋಧ ಪಕ್ಷದ ನಾಯಕರಾದ …
Read More »ಇದೀಗ ಹಸಿರು ವಲಯದಲ್ಲಿರುವ ಗಡಿ ಜಿಲ್ಲೆಗೂ ಮಹಾಮಾರಿ ಕೊರೊನಾ ಬರುವ ಆತಂಕ……..
ಚಾಮರಾಜನಗರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದೀಗ ಹಸಿರು ವಲಯದಲ್ಲಿರುವ ಗಡಿ ಜಿಲ್ಲೆಗೂ ಮಹಾಮಾರಿ ಕೊರೊನಾ ಬರುವ ಆತಂಕ ಈಗ ಹೆಚ್ಚಾಗಿದೆ. ಮಹಾರಾಷ್ಟ್ರದ ಪುಣೆಯಿಂದ ಬಂದ ಕುಟುಂಬದಲ್ಲಿನ ಯುವಕನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಶನಿವಾರ ಮಹಾರಾಷ್ಟ್ರದಿಂದ ಬಂದಿದ್ದ 22 ವರ್ಷದ ಮೆಡಿಕಲ್ ವಿದ್ಯಾರ್ಥಿ ಒಬ್ಬನಿಗೆ ಬೇಧಿ, ಹೊಟ್ಟೆನೋವು, ವಿಪರೀತ ಕೆಮ್ಮು ಕಾಣಿಸಿಕೊಂಡಿದೆ. ಈ ಮೂಲಕ ಚಾಮರಾಜನಗರಕ್ಕೂ ಕೊರೊನಾ ಬರುತ್ತಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ …
Read More »ಬೆಳಗಾವಿ:…ಜವಳಿ ಸಚಿವ ಪಾಟೀಲ್ ತವರಿನಲ್ಲೇ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ
ಬೆಳಗಾವಿ: ಜವಳಿ ಸಚಿವ ಶ್ರೀಮಂತ ಪಾಟೀಲ್ ತವರು ಜಿಲ್ಲೆಯಲ್ಲೇ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಬಾಧೆ ತಡೆಯಲಾರದೆ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಬೆಳಗಾವಿ ನಗರದ ವಡಗಾಂವ ನಿವಾಸಿ ಸುಜಿತ್ ಉಪರಿ (38), ಹುಕ್ಕೇರಿ ತಾಲೂಕಿನ ಆನಂದಪುರ ನಿವಾಸಿ ಶಂಕರ (60), ವಡಗಾಂವ ನಿವಾಸಿ ಸುವರ್ಣ ಕಾಮ್ಕರ್ (47) ಆತ್ಮಹತ್ಯೆಗೆ ಶರಣಾದ ನೇಕಾರರು. ಕೊರೊನಾ ನಡುವೆ ಕೆಲಸವಿಲ್ಲದೇ ಕುಟುಂಬ ಸಾಗಿಸಲಾಗದೆ, ಸಾಲದ ಕಿರುಕುಳಕ್ಕೆ ಬೇಸತ್ತು ನೇಕಾರರು ಆತ್ಮಹತ್ಯೆಯತ್ತ ಮುಖ …
Read More »ಬಹುಭಾಷಾ ನಟ ಮುರಳಿ ಶರ್ಮಾಗೆ ಮಾತೃ ವಿಯೋಗ………….
ಮುಂಬೈ: ತೆಲುಗು, ತಮಿಳು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ಮುರಳಿ ಶರ್ಮಾ ಅವರ ತಾಯಿ ಸೋಮವಾರ ನಿಧನರಾಗಿದ್ದಾರೆ. ಪದ್ಮಾ ಶರ್ಮಾ (76) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮುರಳಿ ಶರ್ಮಾ ತಾಯಿ ಮುಂಬೈನಲ್ಲಿ ನೆಲೆಸಿದ್ದು, ಅವರ ಸ್ವ-ಗೃಹದಲ್ಲೇ ಕೊನೆಯುಸಿರೆಳೆದರು. ಕಳೆದ ವರ್ಷ ಮುರಳಿ ಅವರ ತಂದೆ ವೃಜ್‍ಭೂಷಣ್ ಶರ್ಮಾ ನಿಧನರಾಗಿದ್ದರು. ಈಗ ತಾಯಿಯೂ ಕೂಡ ವಿಧಿವಶರಾಗಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್‍ನಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕವೇ ಚಿತ್ರರಂಗದಲ್ಲಿ …
Read More »ಪತ್ತೆಯಾಗದ ಕೊರೊನಾ ಸೋಂಕಿತ- ಶೋಧದಲ್ಲಿ 2 ರಾಜ್ಯದ ಅಧಿಕಾರಿಗಳು…………
ಕೋಲಾರ: ಕೊರೊನಾ ಸೋಂಕಿತ ತನಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಅಗಿರುವ ಘಟನೆ ಕೋಲಾರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋಲಾರದಲ್ಲಿ ಈ ಸೋಂಕಿತನಿಂದ ಸೋಂಕು ಹಬ್ಬುತ್ತಾ ಅನ್ನೋ ಆತಂಕ ಮನೆ ಮಾಡಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವ್ಯಕ್ತಿಯಿಂದ ಸದ್ಯ ಇಂಥಾದೊಂದು ಆತಂಕ ಎದುರಾಗಿದ್ದು, ಕೊರೊನಾ ಸೋಂಕಿತ (ರೋಗಿ-4863) ಜೂನ್ 3 ರಂದು ಆಂಧ್ರದ ತಿರುಪತಿ ತಿರುಮಲದಿಂದ ಕೋಲಾರಕ್ಕೆ ಬಂದಿದ್ದಾನೆ. ತಿರುಮಲದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ …
Read More »