Breaking News

Monthly Archives: ಏಪ್ರಿಲ್ 2020

ನಿಜವಾದ ಸಂತೋಷ ಅಂದ್ರೆ ಏನೆಂದು ತೋರಿಸಿದೆ – ಭಾವಿ ಪತ್ನಿಗೆ ಕೃಷ್ಣ ವಿಶ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಿಲನಾ ನಾಗರಾಜ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ನಟ ಡಾರ್ಲಿಂಗ್ ಕೃಷ್ಣ ತಮ್ಮ ಗೆಳತಿಗೆ ಸೋಶಿಯಲ್ ಮೀಡಿಯಾದ ಮೂಲಕ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದ್ದಾರೆ. ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಮಿಲನಾ ನಾಗರಾಜ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತ ಕೃಷ್ಣ ಕೂಡ ತಮ್ಮ ಪ್ರೇಯಸಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ಕೃಷ್ಣ ವಿಶ್ ಮಾಡಿದ್ದಾರೆ. ಕೃಷ್ಣ ಇನ್‍ಸ್ಟಾಗ್ರಾಂನಲ್ಲಿ ಒಂದು …

Read More »

ಲಾಕ್‍ಡೌನ್ ಎಫೆಕ್ಟ್ – 100 ಎಕ್ರೆಯಲ್ಲಿ ಕೊಳೆಯುತ್ತಿದೆ 300 ಟನ್ ಅನಾನಸ್

ಮಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಎಲ್ಲ ವರ್ಗದ ಜನ ಆತಂಕದಲ್ಲಿದ್ದಾರೆ. ದೇಶದ ಬೆನ್ನೆಲುಬು ರೈತನು ಕೂಡ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೇ ಕಷ್ಟ ನಷ್ಟ ಅನುಭವಿಸುವಂತಾಗಿದೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಎಂಬಲ್ಲಿ ಕೇರಳದ ಎರ್ನಾಕುಲಂ ಮೂಲದ ಶೈಜು 100 ಎಕರೆ ಜಮೀನನ್ನು ಲೀಸ್‍ಗೆ ಪಡೆದು ಅನಾನಸ್ ಕೃಷಿ ಮಾಡಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಭರ್ಜರಿ ಫಸಲು ಕೂಡ ಬಂದಿತ್ತು. …

Read More »

ಕಿಮ್ ಜಾಂಗ್-ಉನ್ ಆರೋಗ್ಯ ಗಂಭೀರ – ಉ.ಕೊರಿಯಾಗೆ ಬಂದಿಳಿದ ಚೀನಾ ವೈದ್ಯರು

ಬೀಜಿಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚಿಕಿತ್ಸೆ ನೀಡಲು ಚೀನಾದ ನುರಿತ ವೈದ್ಯರ ತಂಡ ಉತ್ತರ ಕೊರಿಯಾಗೆ ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿವೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಅಂತರರಾಷ್ಟ್ರೀಯ ಸಂಪರ್ಕ ವಿಭಾಗದ ಹಿರಿಯ ಸದಸ್ಯರ ನೇತೃತ್ವದಲ್ಲಿ ವೈದ್ಯರ ನಿಯೋಗವು ಬೀಜಿಂಗ್‍ನಿಂದ ಪ್ಯೊಂಗ್ಯಾಂಗ್‍ಗೆ ಗುರುವಾರ ಹೋಗಿದೆ ಎನ್ನಲಾಗಿದೆ. ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಅವರ ದೇಹದ ತೂಕ ಜಾಸ್ತಿಯಾಗಿದೆ. …

Read More »

ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ: ಅಖ್ತರ್‌ನನ್ನ ಕುಟುಕಿದ ಕಪಿಲ್ ದೇವ್

ನವದೆಹಲಿ: ನಿಮಗೆ ಹಣ ಬೇಕಾದ್ರೆ ಗಡಿಯಲ್ಲಿ ಪುಂಡಾಟ ನಿಲ್ಲಿಸಿ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ಇಂಡೋ-ಪಾಕ್ ಕ್ರಿಕೆಟ್ ಬಗ್ಗೆ ನಿಲುವನ್ನು ಪುನರುಚ್ಚರಿಸಿದ್ದಾರೆ. ಇಂಡೋ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ಉಭಯ ದೇಶಗಳ ನಡುವಿನ ರಾಜಕೀಯ, ಗಡಿ ಸಂಬಂಧದಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಆಡುವ ಯಾವುದೇ ಅವಕಾಶವಿಲ್ಲ. ಹಾಗಿದ್ದರೂ ಅಭಿಮಾನಿಗಳು ಐಸಿಸಿ ನಡೆಸುವ ಏಕದಿನ, ಟಿ20 ಎರಡೂ ಮಾದರಿಯ ವಿಶ್ವಕಪ್ ಹಾಗೂ ಏಷ್ಯಾಕಪ್ …

Read More »

ಕಾರ್ಮಿಕರ ಓಡಾಟಕ್ಕೆ ರಸ್ತೆಗೆ ಇಳಿಯಿತು 137 KSRTC ಬಸ್ಸುಗಳು

ಬೆಂಗಳೂರು: 6 ಜಿಲ್ಲೆಗಳಲ್ಲಿ ಕಾರ್ಮಿಕರ ಓಡಾಟಕ್ಕೆ ಕೆಎಸ್ಆರ್‌ಟಿಸಿಯ 137 ಬಸ್ಸುಗಳು ರಸ್ತೆಗೆ ಇಳಿದಿದೆ. 56 ಸೀಟುಗಳ ಈ ಬಸ್ಸಿನಲ್ಲಿ 21 ಕಾರ್ಮಿಕರಿಗೆ ಮಾತ್ರ ಪ್ರಯಾಣಿಸಲು ಅನುಮತಿ ಸಿಕ್ಕಿದೆ. ಕಾರ್ಮಿಕರು ಸೀಟು ಖಾಲಿ ಬಿಟ್ಟು ಕೂರಬೇಕು ಎಂದು ಷರತ್ತು ವಿಧಿಸಲಾಗಿದೆ. ಈ ಬಸ್ಸುಗಳು ಲಾಕ್ ಡೌನ್ ನಲ್ಲಿ ಸಿಲುಕಿರುವ ವಲಸಿಗ ಕಾರ್ಮಿಕರಿಗಾಗಿ ಮಾತ್ರ ಎಂದು ಕೆಎಸ್ಆರ್‌ಟಿಸಿ ಸ್ಪಷ್ಟಪಡಿಸಿದೆ. ಈ ಬಸ್ಸುಗಳು ಜಿಲ್ಲಾ ವ್ಯಾಪ್ತಿಯ ಒಳಗಡೆ ಮಾತ್ರ ಸಂಚರಿಸುತ್ತದೆ. ಜಿಲ್ಲಾಡಳಿತದ ಮನವಿಯ ಹಿನ್ನೆಲೆಯಲ್ಲಿ …

Read More »

ಹೊರ ಜಿಲ್ಲೆಯ ಉದ್ಯೋಗದಿಂದ ಹಿಂತಿರುಗಿದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಸೂಚನೆ

ಹಾವೇರಿ: ಎ.25 (ಕರ್ನಾಟಕ ವಾರ್ತೆ): ಉದ್ಯೋಗ ನಿಮಿತ್ಯ ಹೊರ ಜಿಲ್ಲೆಗಳಲ್ಲಿ ಉಳಿದುಕೊಂಡವರು ಇದೀಗ ಮರಳಿ ತಮ್ಮ ಸ್ವಂತ ಗ್ರಾಮಕ್ಕೆ ಆಗಮಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಗೆ ಬರುವ ಜನರನ್ನು ಕಡ್ಡಾಯವಾಗಿ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯದ ಮಾದರಿ ಬರುವತನಕ ಸರ್ಕಾರಿ ಕ್ವಾರಂಟೈನ್‍ನಲ್ಲಿ ಇರಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಎಲ್ಲ ತಹಶೀಲ್ದಾರಗಳಿಗೆ ಸೂಚನೆ ನೀಡಿದರು. ಶನಿವಾರ ಜಿಲ್ಲೆಯ ತಹಶೀಲ್ದಾರಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಸರ್ಕಾರದ ಸೂಚನೆಯಂತೆ ರಾಜ್ಯದ ವಲಸೆ ಕಾರ್ಮಿಕರನ್ನು …

Read More »

ಲಾಕ್ ಡೌನ್ ಮಧ್ಯೆಯೂ ಮಾನವೀಯತೆ ಮೆರೆದ ಚಿಕ್ಕೋಡಿ ತಾಲೂಕ ರೈತ ಸಂಘದ ತಾಲೂಕು ಅಧ್ಯಕ್ಷರು. ಶ್ರೀ ಮಂಜುನಾಥ್ ಪರಗೌಡ್ರು

ಚಿಕ್ಕೋಡಿ: ಅಂಕಲಿ ಯಿಂದ ಚಿಕ್ಕೋಡಿಯ ಸಾರ್ವಜನಿಕ ತಾಲೂಕ ಆಸ್ಪತ್ರೆಗೆ ರೋಗಿಯನ್ನು     ಸಾಗಿಸುತ್ತಿದ ಆಂಬ್ಯುಲೆನ್ಸ್ ವಾಹನ ಕೇರೂರ ಕ್ರಾಸ್ ಬಳಿ ಪಂಚರ ಆಗಿ ನಿಂತಿದ್ದು ಅದನ್ನು ಗಮನಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕೋಡಿ ತಾಲೂಕ ಅಧ್ಯಕ್ಷರಾದ ಶ್ರೀ ಮಂಜುನಾಥ್ ಪರಗೌಡ್ರು ತಕ್ಷಣ ಅಲ್ಲಿಗೆ     ಹೋಗಿ ಅಂಬುಲೆನ್ಸ್ ಚಾಲಕರ ಪರಿಸ್ಥಿತಿಯನ್ನು ಗಮನಿಸಿ ಯಾಕೆಂದರೆ ಅಲ್ಲಿ ಪಕ್ಕದಲ್ಲೆಲ್ಲೋ ಪಂಚರ ತೆಗೆಯುವ ಅಂಗಡಿ ಇಲ್ಲದ ಕಾರಣ ಬೇರೆ ಅಂಬುಲೆನ್ಸ್ …

Read More »

ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ,ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ

– ಬೆಂಗ್ಳೂರಿನ 11 ಮಂದಿ, ಬೆಳಗಾವಿಯ 9 ಜನರಿಗೆ – ಬಿಹಾರ ಕಾರ್ಮಿಕನಿಂದ 9 ಜನರಿಗೆ ಕೊರೊನಾ – ಬೆಳಗಾವಿಯಲ್ಲೂ ಒಬ್ಬನಿಂದ 9 ಮಂದಿಗೆ ಸೋಂಕು ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಳೆದ 24 ಗಂಟೆಯಲ್ಲಿ ರಾಜ್ಯದ 26 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ ಕಂಡಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 11 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅದರಲ್ಲೂ ಬಿಹಾರ ಕಾರ್ಮಿಕನಿಂದಲೇ …

Read More »

ಕೊರೊನಾ ಮಹಾಮಾರಿ ಸೋಂಕಿತರನ್ನು ಬಲಿ ಪಡೆಯುತ್ತಿರುವುದರ ಜೊತೆಗೆ ಬಡವರ ಜೀವನವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.

ಮಡಿಕೇರಿ: ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾ ಮಹಾಮಾರಿ ಸೋಂಕಿತರನ್ನು ಬಲಿ ಪಡೆಯುತ್ತಿರುವುದರ ಜೊತೆಗೆ ಬಡವರ ಜೀವನವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಕರಿಯಪ್ಪ ಬಡಾವಣೆ ವೃದ್ಧ ದಂಪತಿ ಕೊರೊನಾ ಲಾಕ್‍ಡೌನ್‍ನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ವಿಲನ್ಸ್ ಮತ್ತು ಜಯಲಕ್ಷ್ಮಿ ದಂಪತಿ ಕನಿಷ್ಠ ಊಟಕ್ಕೂ ಗತಿ ಇಲ್ಲದೆ ಕಣ್ಣೀರು ಇಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಅಪಘಾತದಲ್ಲಿ ವಿಲನ್ಸ್ ಅವರ ಕಾಲು ಮುರಿದುಹೋಗಿತ್ತು. ಬಳಿಕ ಅಕ್ಕಪಕ್ಕದ ಮನೆಯವರಿಂದ 40 …

Read More »

ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ಜಾತ್ರೆ ರದ್ದು……..

ಚಿಕ್ಕೋಡಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜೃಂಭಣೆಯಿಂದ ನಡೆಯಬೇಕಿದ್ದ ಜಾತ್ರೆಯನ್ನು ರದ್ದು ಮಾಡಿ ಕೊರೊನಾ ವಾರಿಯರ್ಸ್‍ಗೆ ಅನ್ನ ದಾಸೋಹ ಮಾಡಿ ಹುಕ್ಕೇರಿ ಹಿರೇಮಠ ಮಾದರಿಯಾಗಿದೆ. ಪ್ರತಿ ವರ್ಷ ಏಪ್ರಿಲ್ 24ರಿಂದ ಹುಕ್ಕೇರಿ ಹಿರೇಮಠದಲ್ಲಿ ಗುರುಶಾಂತೇಶ್ವರ ಜಾತ್ರೆ ನಡೆಯಬೇಕಿತ್ತು. ಆದರೆ ಜಾತ್ರೆಯನ್ನು ಈ ಬಾರಿ ರದ್ದು ಮಾಡಲಾಗಿದೆ. ಜಾತ್ರೆ ರದ್ದಾದರೂ ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಪೌರ ಕಾರ್ಮಿಕರು, ಪೊಲೀಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಅನ್ನ ದಾಸೋಹವನ್ನು ಆಯೋಜಿಸಲಾಗಿತ್ತು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ …

Read More »