Breaking News

ಸುರೇಶ ಯಾದವ ಪೌoಡೇಶನ್ ಹಾಗೂ KLE ಬ್ಲಡ್ ಬ್ಯಾಂಕ್ ಮತ್ತು ರೋಹನ್ ಸ್ಪೆಷಲಿಟಿ ಕ್ಲಿನಿಕ್ ಇವರ ಸಂಯುಕ್ತ ಆಶ್ರಯ ದಲ್ಲಿ ಸುರೇಶ ಯಾದವ ಅವರ 25 ನೇ ಮದುವೆಯ ವಾರ್ಷಿಕೋತ್ಸವದ ನಿಮಿತ್ಯ ರಾಮತೀರ್ಥ ನಗರದ ಸಭಾಭವನದಲ್ಲಿ ರಕ್ತದಾನ

Spread the love

ಸುರೇಶ ಯಾದವ ಪೌoಡೇಶನ್ ಹಾಗೂ KLE ಬ್ಲಡ್ ಬ್ಯಾಂಕ್ ಮತ್ತು ರೋಹನ್ ಸ್ಪೆಷಲಿಟಿ ಕ್ಲಿನಿಕ್ ಇವರ ಸಂಯುಕ್ತ ಆಶ್ರಯ ದಲ್ಲಿ
ಸುರೇಶ ಯಾದವ ಅವರ 25 ನೇ ಮದುವೆಯ ವಾರ್ಷಿಕೋತ್ಸವದ ನಿಮಿತ್ಯ ರಾಮತೀರ್ಥ ನಗರದ ಸಭಾಭವನದಲ್ಲಿ ರಕ್ತದಾನ ಮತ್ತು ಅರೋಗ್ಯ ಶಿಬಿರದ ದಿವ್ಯ ಸಾನಿದ್ಯ ವನ್ನುವಹಿಸಿ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ನಾಗನೂರಿನ ಶ್ರೀ ಮ ನಿ ಪ್ರ ಡಾ: ಅಲ್ಲಮಪ್ರಭು ಮಹಾಸ್ವಾಮಿಗಳು
ರಕ್ತದಾನವು ಜೀವಗಳನ್ನು ಉಳಿಸುವುದಲ್ಲದೆ, ದಾನಿಗಳ ಅರೋಗ್ಯಕ್ಕೂ ಪ್ರಯೋಜನಕಾರಿ, ದಾನಿಗಳಿಗೆ ರಕ್ತದೋತ್ತಡ, ಹಿಮೋಗ್ಲೋಬಿನ್ ಮಟ್ಟದ ತಪಾಸನೆ ದೊರೆಯುತ್ತದೆ ಕ್ಯಾಲಿರಿಗಳನ್ನು ಬರ್ನ್ ಮಾಡಬಹುದು ಮತ್ತು ಹೃದಯದ ಅರೋಗ್ಯ ಸುಧಾರಿಸಬಹುದು. ಇಡು ರಕ್ತದ ದಪ್ಪವನ್ನು ಕಡಿಮೆ ಮಾಡಿ, ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮಾಣಿಸಿಕ ತೃಪ್ತಿಯನ್ನು ನೀಡುತ್ತದೆ.ಎಂದು ಹೇಳಿದರು.
ಅಧ್ಯಕ್ಷಸ್ಥಾನ ವಹಿಸಿ ಮಾತನಾಡಿದ ಸುರೇಶ ಯಾದವ ಪೌoಡೇಶನ ಅಧ್ಯಕ್ಷರು ಶ್ರೀ ಸುರೇಶ ಯಾದವ ಅವರು
ರಕ್ತದಾನ ಮಾಡುವದರಿಂದ ಕ್ಯಾಲೋರಿಗಳ್ ದಹನ, ಹೃದಯದ ಅರೋಗ್ಯ, ಕಬ್ಬಿಣದ ನಿಯಂತ್ರಣ, ಮಾಣಿಸಿಕ್ ತೃಪ್ತಿ ದೊರೆಯುತ್ತದೆ.
ರಕ್ತದಾನ ಮಾಡುವುದರಿಂದ ಪ್ರತಿ ಪಿಂಟ್ ರಕ್ತವು ಅಪಘಾತಗಳು, ಶಸ್ತ್ರಚಿಕಿತ್ಸೇಗಳು ಮತ್ತು ಇತರ ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯ ವಿರುವ ಸಹಾಯ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು.
ಅದಲ್ಲದೆ ಕ್ಯಾನ್ಸರ್, ತೀವ್ರಗಾಯಗಳು ಮತ್ತು ಇತರ ಕಾಯಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ
ಸಹಾಯವಾಗುತ್ತದೆ.ಎಂದರು.
ಮಾಜಿ KMDC ಅಧ್ಯಕ್ಷರಾದ ಮುಕ್ತಾರ ಪಠಣ ಅವರು ಮಾತನಾಡಿ ರಕ್ತದಾನವು ಸಮುದಾಯದ ಸದಸ್ಯರ ನಡುವೆ ಒಗ್ಗಟ್ಟು ಮತ್ತು ಪರಸ್ಪರ ಸಹಕಾರದ ಸಂಕೇತವಾಗಿದೆ.
ರಕ್ತದಾನ ಮಾಡುವುದು ಬೆದರಿಸುವಂತೆ ಕಾನಿಸಬಹುದು. ಆದರೆ ಇದು ಯಾರೊಬ್ಬರ ಜೀವವನ್ನು ಉಳಿಸಲು ಸಹಾಯ ಮಾಡುವ ಸುಲಭ ಪ್ರಕ್ರಿಯೆ.
ರಕ್ತದಾನ ಮಾಡುವುದರಿಂದ ಅಗತ್ಯವಿರುವವರಿಗೆ ಸಿಗುವ ಪ್ರಯೋಜನೆಗಳಿಗೆ ಅಂತ್ಯವಿಲ್ಲ. ಅಮೇರಿಕನ್ ರೆಡ್ ಕ್ರಾಸ್ ಪ್ರಕಾರ. ಒಂದು ರಕ್ತದಾನದಿಂದ್ ಮೂರು ಜೀವಗಳನ್ನು ಉಳಿಸಬಹುದು. ಮತ್ತು ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರತಿ ಎರಡು ಸೆಕೆಂಡಿಗೆ ಯಾರಾಗಾದರೂ ರಕ್ತದ ಅಗತ್ಯ ವಿರುತ್ತದೆ.
ರಕ್ತದಾನ ಮಾಡುವುದರಿಂದ ಕೇವಲ ಸ್ವೀಕರಿಸುವವರಿಗೆ ಮಾತ್ರ ಪ್ರಯೋಜನವಾಗುವುದಿಲ್ಲ ಎಂಬುದು ಸ್ಪಷ್ಟ ವಾಗಿದೆ ಸಿಗುವ ಪ್ರಯೋಜನೆಗಳ ಜೊತೆಗೆ ದಾನಿಗಳ ಅರೋಗ್ಯ ಪ್ರಯೋಜನೆಗಳು ಇವೆ.
ಸುಮಾರು 200 ಜನ ಅರೋಗ್ಯ ತಪಾಸನೆ ಮಾಡಿಸಿಕೊಂಡರು. ಸುಮಾರು 50 ಜನ ರಕ್ತದಾನ ಮಾಡಿದರು.
ಡಾ:ರೋಹನ್ ಕಮತಗಿ ಹಾಗೂ KLE ಬ್ಲಡ್ ಬ್ಯಾಂಕಿನ ಡಾ: S ವ ಜಿರಗಿ ಮತ್ತು ಡಾ: ವಿಠಲ್ ಮಾನೆ, ಪೂರ್ಣಿಮಾ ಯಾದವ,
ಸಂತೋಷ ಮೆರೆಕಾರ್ ಕಾರ್ಯಕ್ರಮ ನಡೆಸಿಕೊಟ್ಟರು. ಮುಕ್ತರ್ ಪಟಾನ್ ಅವರು ಪ್ರಾ ಸ್ತವಿಕ ಮಾಡಿದರು.
ಈ ಕಾರ್ಯಕ್ರಮ ದಲ್ಲಿ ಬಿರಾದಾರ್, ಡಿಕ್ಸಿತ, ಪಾಟೀಲ್, ತೋರಗಲ್, ಕೊಲ್ಕರ್ ಮುಂತಾದವರು ಭಾಗವಹಿಸಿದರು. ಅಲ್ಪೊಪಾಹಾರ್ ವ್ಯವಸ್ಥೆ ಮಾಡಿದ್ದರು.

Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ