ರಾಯಚೂರು: ಸಾರಿಗೆ ಸಂಸ್ಥೆ ಬಸ್ ಹರಿದು ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಿಂಗಸೂಗೂರು ಪಟ್ಟಣದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ. ಸಿದ್ದರಾಮ(11) ಸ್ಥಳದಲ್ಲೇ ಮೃತಪಟ್ಟ ಬಾಲಕ. ಬಾಲಕ ಧನಂಜಯ್ನ ಎರಡು ಕೈಗಳಿಗೆ ಗಂಭೀರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಲಿಂಗಸೂಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಮೂಲತಃ ಲಿಂಗಸೂಗೂರು ಪಟ್ಟಣದ ನಿವಾಸಿಯಾದ ಬಸವರಾಜ ಎಂಬವರು ಬೇರೆ ಊರಿಗೆ ತೆರಳು ತನ್ನ ಇಬ್ಬರು ಮಕ್ಕಳಾದ ಸಿದ್ದರಾಮ ಹಾಗೂ ಧನಂಜಯ್ ಜೊತೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಇಲ್ಲಿಯೇ ನಿಲುವಂತೆ ಹೇಳಿ ತಂದೆ ಹೋಗಿದ್ದರು. ಈ ವೇಳೆ ಬಸ್ ಇಬ್ಬರ ಮಕ್ಕಳ ಮೇಲೆ ಹರಿದಿದೆ ಎಂದು ಹೇಳಲಾಗುತ್ತಿದೆ.
ನಿಲ್ದಾಣದಲ್ಲಿದ್ದ ಜನ ತಕ್ಷಣ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಊರಿಗೆ ತೆರಳ ಬಸ್ ನಿಲ್ದಾಣಕ್ಕೆ ತಂದೆ ಮಕ್ಕಳು ಬಂದಿದ್ದರು. ಇಲ್ಲೇ ನಿಲ್ಲುವಂತೆ ಹೇಳಿ ತಂದೆ ಹೋಗಿದ್ದರು. ಒಂದರ ಹಿಂದೊಂದರಂತೆ ಬಸ್ಗಳು ಬಂದಾಗ, ಚಾಲಕನಿಗೆ ಮಕ್ಕಳು ಕಾಣಿಸಿಲ್ಲ. ಸದ್ಯ ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕ ಗಾಯಗೊಂಡಿದ್ದಾನೆ. ಸಾರಿಗೆ ಬಸ್ ಚಾಲಕ ಸಹ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಘಟನೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಮಯಪ್ರಜ್ಞೆ ಮೆರೆದ ಚಾಲಕ( ಗಂಗಾವತಿ,ಕೊಪ್ಪಳ): ಹುಲಗಿಯಿಂದ ಅಂಜನಾದ್ರಿ ಮಾರ್ಗವಾಗಿ ಗಂಗಾವತಿಗೆ ಬರುತ್ತಿದ್ದ ಸಾರಿಗೆ ಇಲಾಖೆಯ ವಾಹಹನವೊಂದು ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದರೂ ಅದೃಷ್ಟವಶಾತ್ ವಾಹನದಲ್ಲಿದ್ದ 20ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾದ ಘಟನೆ ಅಂಜನಾದ್ರಿ ಬೆಟ್ಟದ ಸಮೀಪ ಶನಿವಾರ ನಡೆದಿದೆ.
ಆದರೆ, ವಾಹನದಿಂದ ಕಿಟಕಿ ಹೊರಗೆ ಕೈ ಹಾಕಿಕೊಂಡು ಕುಳಿತುಕೊಂಡಿದ್ದ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಶಿವಮ್ಮ ಮಲ್ಲಪ್ಪ ಎಂಬ ಮಹಿಳೆಯ ಬೆರಳು ತುಂಡಾಗಿದ್ದು, ಆಕೆಯನ್ನು ಆನೆಗೊಂದಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಜನಾದ್ರಿ ಬೆಟ್ಟದ ಸಮೀಪ ಇರುವ ಜಂಗ್ಲಿಗೆ ಹೋಗುವ ಮಾರ್ಗ ಮಧ್ಯೆ ರಸ್ತೆ ಇಕ್ಕಟ್ಟಾಗಿದ್ದು, ತಿರುವಿನಿಂದ ಕೂಡಿದೆ. ಸಾರಿಗೆ ವಾಹನ ಈ ಸ್ಥಳಕ್ಕೆ ಬರುತಿದ್ದಂತೆಯೇ ಎದುರಿಗೆ ಕಾರೊಂದು ವೇಗವಾಗಿ ಬಂದಿದೆ. ಕಾರಿನೊಂದಿಗೆ ಮುಖಾಮುಖಿ ತಪ್ಪಿಸಲು ಚಾಲಕ ಅಮರೇಗೌಡ ವಾಹನವನ್ನು ರಸ್ತೆಯ ಎಡಕ್ಕೆ ತಿರುಗಿದ್ದಾರೆ.
Laxmi News 24×7