ಗೋವಿನ ಜೋಳದ ನುಚ್ಚಿನಲ್ಲಿ ಮೂಡಿ ಬಂದ ಗಣೇಶ…
ಬೆಳಗಾವಿ ನಗರದಲ್ಲಿ ಈ ವರ್ಷ ಗಣೇಶನ ಆಗಮನಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ವಿಧ ವಿಧದ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಆದರೆ ಇಲ್ಲೋಬ್ಬ ಮೂರ್ತಿಕಾರ ಗೋವಿನ ಜೋಳದ ನುಚ್ಚು ಬಳಸಿ ಪರಿಸರ ಸ್ನೇಹಿ ಮೂರ್ತಿ ತಯಾರಿಸುವ ಮೂಲಕ ಎಲ್ಲರ ಗಮನ ಸೇಳೆದಿದ್ದಾರೆ.
ಹೌದು.. ಬೆಳಗಾವಿ ಎಂದರೆ ನೆನಪಾಗುವುದು ವಿಜೃಂಭಣೆಯ ಗಣೇಶನ ಹಬ್ಬ. ಈಗಾಗಲೇ ಹಬ್ಬಕ್ಕೆ ಎಲ್ಲಾ ರೀತಿಯ ಮೂರ್ತಿಗಳು ತಯಾರಿಗಿವೆ. ಮೂರ್ತಿಕಾರರು ಅಂತಿಮ ಟಚ್ ನೀಡುತ್ತಿದ್ದಾರೆ.
ಕಳೆದ ವರ್ಷ ಹುಣಸೆ ಬೀಜ, ಅದರ ಮೊದಲು ರುದ್ರಾಕ್ಷಿಗಳಿಂದ ಗಣೇಶನ ಮೂರ್ತಿ ತಯಾರಿಸಿ ಎಲ್ಲರ ಗಮನ ಸೆಳೆದಿದ್ದ ಮೂರ್ತಿಕಾರ ಸುನೀಲ ಆನಂದಾಚೆ ಈ ವರ್ಷವು ಗೋವಿನ ಜೋಳ ನುಚ್ಚು ಬಳಸಿ ಗಣಪತಿ ಮೂರ್ತಿ ತಯಾರಿಸಿದ್ದಾನೆ.
ಮುಂಬೈಯ ಟಿಟವಾಳ ಗಣಪತಿ ಮಾದರಿ ಇಟ್ಟುಕೊಂಡು 35 ಕೆಜಿ ಗೋವಿನ ಜೋಳದ ನುಚ್ಚು ಬಳಸಿ 11.6 ಅಡಿ ಎತ್ತರದ ಈ ಗಣೇಶನ ಮೂರ್ತಿ ತಯಾರಾಗಿದೆ. ಇದಕ್ಕೆ ಸತತ ಒಂದು ತಿಂಗಳ ಪರಿಶ್ರಮದ ಬೇಕಾಗಿದೆ. ಮೂರ್ತಿ ಒಳಗಡೆ ಹುಲ್ಲು, ಪೆಪರ್ ಬಳಸಿದ್ದಾರೆ. ನುಜ್ಜು ಹಚ್ಚಲು ಹಿಟ್ಟಿನಿಂದ ಮಾಡಿದ ಅಂಟು ಬಳಸಿದ್ದಾರೆ.
ಈ ಪರಿಸರಸ್ನೇಹಿ ಗಣಪತಿ ತಯಾರಿಸಲು 40-45 ಸಾವಿರ ಖರ್ಚಾಗಿದೆ. ಆದರೆ ಮೂರ್ತಿಕಾರ ಸುನಿಲ್ ಅವರು ತಮಗೆ ಆದಾಯ ಬಯಸದೆ ಹವ್ಯಾಸಕ್ಕಾಗಿ ವರ್ಷಕ್ಕೆ ಒಂದೇ ಪರಿಸರ ಸ್ನೇಹಿ ಗಣಪನ ಮೂರ್ತಿ ತಯಾರಿಸುತ್ತಾರೆ.
ಬೈಟ್- ಸುನೀಲ್ ಆನಂದಾಚೆ, ಮೂರ್ತಿ ತಯಾರಕರು
ಈ ಹಿಂದೆ ರುದ್ರಾಕ್ಷಿ, ಹುಣಸೆ ಬಿಜ, ಮಣ್ಣು, ಅಲಂಕಾರಿಕ ಹುಗಳು, ಡ್ರೈ ಫುಡ್ ದಿಂದ ಪರಿಸರ ಸ್ನೇಹಿ ಗಣಪತಿ ತಾಯಾರು ಮಾಡಿದ್ರು. ಆದರೆ ಈ ವರ್ಷ ಮಾಳಿಗಲ್ಲಿ ಗಣೇಶ ಉತ್ಸವ ಮಂಡಳಿಗೆ ಗೋವಿನ ಜೋಳದ ನುಚ್ಚಿನಿಂದ ತಯಾರಾಗಿರುವ ಗಣೇಶನ ಮೂರ್ತಿ ಹೋಗಲಿದೆ.
ಮೂರ್ತಿಕಾರ ಸುನೀಲ್ ಆನಂದಾಚೆ ಅವರು, 25 ವರ್ಷದಿಂದ ಮೂರ್ತಿ ತಯಾರಿಕೆಯಲ್ಲಿ ನಿರತಾಗಿದ್ದು, ಇವರ ತಂದೆಯಿಂದ ಗಣೇಶನ ಮೂರ್ತಿಗಳು ತಯಾರಿಸುವುದು ಕಲೆತಿದ್ದಾರೆ. ಪ್ರತಿ ವರ್ಷ ಈ ರೀತಿ ಸುನೀಲ್ ಅವರು ತಯಾರಿಸವ ಪರಿಸರ ಸ್ನೇಹಿ ಮೂರ್ತಿಗಳಿಗೆ ಎಲ್ಲಡೆ ಮೆಚ್ಚುಗೆ ಆಗುತ್ತಿದೆ.