ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….
ಅದ್ದೂರಿ ಗಣೇಶೋತ್ಸವಕ್ಕೆ ಕುಂದಾನಗರಿ ಸಜ್ಜಾಗುತ್ತಿದೆ. ಗಣೇಶ ಉತ್ಸವ ಹಾಗೂ ಮೆರವಣಿಗೆ ಸುಗಮವಾಗಿ ಸಾಗುವ ನಿಟ್ಟಿನಲ್ಲಿ ರಸ್ತೆಯ ಅಕ್ಕಪಕ್ಕ ಸಾರ್ವಜನಿಕರು ವಾಹನ ನಿಲುಗಡೆ ಮಾಡದಂತೆ ಮುಂಜಾಗೃತ ಕ್ರಮವಾಗಿ ಇಲಾಖೆ ಗುರ್ತಿಸಿದ ಸ್ಥಳಗಳಲ್ಲೆ ವಾಹನ ನಿಲುಗಡೆ ಮಾಡಬೇಕೆಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಆಗಸ್ಟ್ 27 ರಿಂದ ಸೇಪ್ಟೆಂಬರ್ 7 ರವರೆಗೆ ಸಾರ್ವಜನಿಕರ ವಾಹನಗಳನ್ನು ನಗರದ ಸರದಾರ ಮೈದಾನ, ಕ್ಲಬ್ ರಸ್ತೆಯಲ್ಲಿರುವ ಬೆನನ್’ಸ್ಮಿತ್ ಕಾಲೇಜ್ ಆಪ್ ಫಿಜಿಕಲ್ ಎಜುಕೇಶನ್(ಸಿಪಿಎಡ್) ಮೈದಾನ, ಹಳೆ ತರಕಾರಿ ಮಾರುಕಟ್ಟೆ ಪ್ರದೇಶ ಮತ್ತು ದೇಶಪಾಂಡೆ ಖುಟದಿಂದ ಗಾಂಧಿ ಸರ್ಕಲ್’ನ ರಸ್ತೆಯ ಬಲ ಬದಿ.
ಬೆಳಗಾವಿಯ ದಂಡು ಮಂಡಳಿ ಝೋನ್-1, ಕ್ಯಾಟಲ್ ಮಾರ್ಕೆಟ್ ಪ್ರದೇಶ(ಭರತೇಶ ಶಿಕ್ಷಣ ಸಂಸ್ಥೆ ಹತ್ತಿರ) ಮಹಾದ್ವಾರ ರಸ್ತೆಯಲ್ಲಿರುವ ಸಂಭಾಜಿ ಉದ್ಯಾನವನ, ಬಾಪಟ ಗಲ್ಲಿಯ ಪೇ ಪಾರ್ಕಿಂಗ್, ನ್ಯೂಕ್ಲಿಯರ್ ಮಾಲ್ ಬೆಸಮೆಂಟ್. ರಾಮಲಿಂಗಖಿಂಡ ಗಲ್ಲಿಯ ಲಕ್ಷ್ಮಿ ಪೇ ಪಾರ್ಕಿಂಗ್, ಶೇರಿಗಲ್ಲಿಯ ಸೋಮನಾಥ ಪೇ ಪಾರ್ಕಿಂಗ್ ಹಾಗೂ ಕ್ಯಾಂಪ್ ಪ್ರದೇಶದಲ್ಲಿರುವ ಮಹಿಳಾ ಪೊಲೀಸ್ ಠಾಣೆಯ ಹಿಂಬದಿಯ ಖಾಲಿ ಜಾಗವನ್ನು ಗುರುತು ಮಾಡಿದೆ.
ಹಾಗೆಯೆ ಗಣೇಶೋತ್ಸವದ ಕೊನೆಯ ದಿನ ನಡೆಯುವ ಮೆರವಣಿಗೆ ವೀಕ್ಷಣೆಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಕಾಲೇಜು ರಸ್ತೆಯಲ್ಲಿರುವ ಬೆನ್ ಸ್ಮಿತ್ ಸಂಯುಕ್ತ ಪದವಿ ಪೂರ್ವ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯ ಮೈದಾನ, ಪಾಟೀಲ ಗಲ್ಲಿಯ ಮರಾಠಿ ವಿದ್ಯಾ ನಿಕೇತನ ಶಾಲೆಯ ಮೈದಾನ. ಶ್ರಿಮತಿ ಉಶಾತಾಯಿ ಗೋಗಟೆ ವಿದ್ಯಾರ್ಥಿನಿಯರ ಮಾದ್ಯಮಿಕ ಶಾಲೆಯ ಆವರಣ, ಕ್ಯಾಂಪ್ ಪ್ರದೇಶದಲ್ಲಿರುವ ಮುಸ್ಲಿಮ್ ಇಸ್ಲಾಮಿಕ ಎಜುಕೇಶನ್ ಇನ್‘ಸ್ಟಿಟ್ಯೂಟ್ ಇಂಗ್ಲೀಷ್ ಮತ್ತು ಉರ್ದು ಮಾದ್ಯಮ ಶಾಲೆ, ಕಾಲೇಜು ಮೈದಾನ, ಬೆಳಗಾವಿ ಎಜುಕೇಶನ್ ಸೊಸೈಟಿಯ ಬಿ ಕೆ. ಮಾಡೆಲ್ ಹೈಸ್ಕೂಲ್ ಮತ್ತು ಮಾಡೆಲ್ ಪಿಯು ಕಾಲೇಜು ಆವರಣದ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಸೂಚಿಸಿದ್ದಾರೆ.
ಗಣೇಶ ಉತ್ಸವದ ಹಿನ್ನಲ್ಲೆಯಲ್ಲಿ ನಗರದಲ್ಲಿ ಭಾರಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿದ್ದು. ಮಿಲಟರಿ ಮಹಾದೇವ ಮಂದಿರದ ರಸ್ತೆ ಗ್ಲೋಬ್ ಸರ್ಕಲ್ (ಅಲ್ಪಾ ಹುಂಡಾ ಶೋ ರೂಂ) ಹಾಗೂ ಗಾಂಧಿ ಸರ್ಕಲ್ (ಅರಗನ ತಲಾಬ) ಈ ಸ್ಥಳಗಳಲ್ಲಿ ದಂಡು ಮಂಡಳಿ (ಕಾಂಟೋನ್ಮೆಂಟ್) ಅವರು ಅಳವಡಿಸಿದ ಹೈಟ್ ಬಾರಿಯರ್ ಗಳನ್ನು ತೆರವುಗೊಳಿಸಲಾಗಿದೆ. ಭಾರಿ ವಾಹನ ಚಾಲಕರು ಈ ಮಾರ್ಗದಲ್ಲಿ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.