Breaking News

ಅಧಿಕಾರ ಸ್ವೀಕಾರ5.ಉಗರಗೋಳ-1. ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಬೆಳಗಾವಿಯ ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಅಧಿಕಾರ ಸ್ವೀಕರಿಸಿದರು.

Spread the love

ಅಧಿಕಾರ ಸ್ವೀಕಾರ5.ಉಗರಗೋಳ-1. ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಬೆಳಗಾವಿಯ ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಡಾ.ಸಿದ್ದು ಹುಲ್ಲೋಳಿ ಅಧಿಕಾರ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯಲ್ಲಮ್ಮನಗುಡ್ಡದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಇಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ, ಸ್ಥಳೀಯ ಶಾಸಕರ ಸಹಕಾರದೊಂದಿಗೆ ಪ್ರಾಧಿಕಾರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತೇನೆ ಎಂದರು.
ದಕ್ಷಿಣ ಭಾರತದಲ್ಲೇ ಹೆಚ್ಚಿನ ಭಕ್ತರು ಭೇಟಿ ನೀಡುವ ಧಾರ್ಮಿಕ ಕ್ಷೇತ್ರ ಇದಾಗಿದೆ. ಇಲ್ಲಿ ತನು, ಮನ, ಧನದಿಂದ ದೇವಿಗೆ ಭಕ್ತಿ ಸಮರ್ಪಿಸುವ ಭಕ್ತರಿದ್ದಾರೆ. ಅವರನ್ನು ಒಳಗೊಂಡು ಗುಡ್ಡದಲ್ಲಿ ಅಭಿವೃದ್ಧಿ ಕೆಲಸಗಳನ್ನೂ ಮಾಡಲಾಗುವುದು.
ಭಕ್ತರಿಗೂ ‘ಭಾರ’ವಾಗದಂತೆ ನಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಗುಡ್ಡಕ್ಕೆ ಬರುವ ಭಕ್ತರ ಹಿತ ಕಾಯುವುದೇ ನಮ್ಮ ಮುಖ್ಯ ಗುರಿ. ಅವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ನಾಗರತ್ನಾ ಚೋಳಿನ, ಅಧೀಕ್ಷಕ ಶೀತಲ್ ಕಡಟ್ಟಿ, ಡಿ.ಆರ್.ಚವ್ಹಾಣ, ಭರಮು ಹುಲ್ಲೋಳಿ ಇತರರಿದ್ದರು.

 


Spread the love

About Laxminews 24x7

Check Also

ಕಾರ ಅಪಘಾತದಲ್ಲಿ ಪೊಲೀಸ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ದಾರುಣ ಸಾವು.

Spread the love ಕಾರ ಅಪಘಾತದಲ್ಲಿ ಪೊಲೀಸ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ದಾರುಣ ಸಾವು. ಮೂರಗೋಡ ಮೂಲದ ಪಿ.ವಿ.ಸಾಲಿಮಠ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ