Breaking News

ಜಮಾತ್‍ಗೆ ಹೋದವರಿಂದಲೇ ದೇಶಾದ್ಯಂತ ಕೊರೊನಾ ಹಬ್ಬಿಸುವ ದುಷ್ಕೃತ್ಯ: ಕರಂದ್ಲಾಜೆ

ಚಿಕ್ಕಮಗಳೂರು: ದೆಹಲಿಯ ನಿಜಾಮುದ್ದೀನ್ ತಬ್ಲಿಘಿ  ಸಭೆಯಲ್ಲಿ ಭಾಗವಹಿಸಿದ್ದವರಿಂದ ದೇಶಾದ್ಯಂತ ಕೊರೊನಾ ವೈರಸ್ ಹಬ್ಬಿಸುವ ದುಷ್ಕೃತ್ಯ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರಿನ ನಗರಸಭೆಯಲ್ಲಿ ಮಾತನಾಡಿದ ಅವರು, ಜಮಾತ್ ಸಭೆಗೆ ಹೋದ ಹಲವರು ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಕೊರೊನಾ ಜಿಹಾದಿಯ ವಾಸನೆ ಕೂಡ ಬಡಿಯುತ್ತಿದೆ. ದೇಶವನ್ನು ಕೊರೊನಾ ಮುಕ್ತ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಡುತ್ತಿವೆ. ಯಾರು ದೆಹಲಿಗೆ ಹೋಗಿದ್ದರೋ ಅವರನ್ನ ಪತ್ತೆ ಹಚ್ಚುವ …

Read More »

ಗ್ರಾಹಕನ ಸೋಗಿನಲ್ಲಿ ಹೋಗಿ ಬಂಧಿಸಿದ ಪೊಲೀಸರು – 100 ರೂ. ಮೌಲ್ಯದ ಮದ್ಯ 400 ರೂ. ಗೆ ಮಾರಾಟ

ಚೆನ್ನೈ: ಲಾಕ್‍ಡೌನ್ ಮಧ್ಯೆಯೂ ವಾಟ್ಸಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚೆನ್ನೈನ ಹಮ್ಸಾ ಪಾರ್ಕ್ ನಿವಾಸಿ ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಈತ ಲಾಕ್‍ಡೌನ್ ಆಗಿರುವುದನ್ನೇ ಬಂಡವಾಳ ಮಾಡಿಕೊಂಡು ಮದ್ಯವನ್ನು ಸಂಗ್ರಹಿಸಿ ಅದನ್ನು ವಾಟ್ಸಪ್ ಮೂಲಕ ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ. ಕೊರೊನಾ ಭಯದಿಂದ ಇಡೀ …

Read More »

ಸ್ಯಾನಿಟೈಜರ್ ವಿತರಿಸಿದ ಕೆಪಿಸಿಸಿ ಕಾರ್ಯಾಅಧ್ಯಕ್ಷ ಸತೀಶ ಜಾರಕಿಹೊಳಿ

ಗೋಕಾಕ: ಕೆಪಿಸಿಸಿ‌ ಕಾರ್ಯಾಧ್ಯಕ್ಷ‌ ಮತ್ತು         ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಮಾಲೀಕತ್ವದ ಸತೀಶ ಶುಗರ್ಸ್ ವತಿಯಿಂದ ಸ್ಯಾನಿಟೈಜರ್ ಬಾಟಲಗಳನ್ನು ವಿತರಿಸಲಾಯಿತು. ಗೋಕಾಕ ಮತ್ತು ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಈ ಬಾಟಲಗಳ‌ನ್ನು ವಿತರಿಸಲಾಗುವುದು. ಶಾಸಕ‌ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು , ಪೌರ ಕಾರ್ಮಿಕರು‌ ಮತ್ತು ಪೊಲಿಸ್ ಸಿಬ್ಬಂದಿಗಳ …

Read More »

ಲಾಕ್‌ಡೌನ್ ಅನ್ನೇ ದುರ್ಬಳಕೆ ಮಾಡಿಕೊಂಡ ಪೊಲೀಸ್,ಪೊಲೀಸ್ ವಾಹನದ ದುರ್ಬಳಕೆ

ಲಾಕ್‌ಡೌನ್ ಅನ್ನೇ ದುರ್ಬಳಕೆ ಮಾಡಿಕೊಂಡ ಪೊಲೀಸ್ ಪೊಲೀಸ್ ವಾಹನದ ದುರ್ಬಳಕೆ ಸರ್ಕಾರ ಇವರಿಗೆ ವಾಹನ ಕೊಟ್ಟಿದ್ದು ಸಂತೆ ಮಾಡೋಕಾ…? ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ಸಿಪಿಐ ವಾಹನ ದುರ್ಬಳಕೆ ತರಕಾರಿ, ದಿನಬಳಕೆ ವಸ್ತು ಖರೀದಿಗೆ ಸರ್ಕಾರಿ ವಾಹನ ಬಳಕೆ ಬೆಂಡಿಗೇರಿ ಠಾಣೆ ಸಿಪಿಐ ಅರುಣಕುಮಾರ ಸಾಳಂಖೆ ವಾಹನ ದುರ್ಬಳಕೆ ಅಧಿಕಾರಿಗಳಿಲ್ಲದಿದ್ರೂ ಮಕ್ಕಳನ್ನ ಕರೆತಂದು ಎಣ್ಣೆ ಖರೀದಿಗೆ ಮುಂದಾದ ಪೊಲೀಸರು‌ ಕಣ್ಮಚ್ಚಿ‌ ಕುಳಿತ ಹು-ಧಾ ಮಹಾನಗರ ಪೊಲೀಸ್ ಆಯುಕ್ತರು ಈ ರೀತಿ …

Read More »

ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ ಕೊರೊನಾ ಪಾಸಿಟಿವ್ ಗರ್ಭಿಣಿ……..

ನವದೆಹಲಿ: ಏಮ್ಸ್ ವೈದ್ಯನ ಪತ್ನಿ ತುಂಬು ಗರ್ಭಿಣಿಯಲ್ಲೂ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಅವರನ್ನು ಪ್ರತ್ಯೇಕ ವಾರ್ಡಿನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ವೈದ್ಯನ ಪತ್ನಿ ಆರೋಗ್ಯಯುತವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಸೋಂಕು ಬಂದಿರುವುದು ಧೃಡಪಟ್ಟಿತ್ತು. ನಂತರ ಅವರ ಮನೆಯವರನ್ನು ತಪಾಸಣೆ ಮಾಡಲಾಗಿತ್ತು. ಆಗ 39 ವಾರಗಳ ತುಂಬು ಗರ್ಭಿಣಿ ವೈದ್ಯನ ಪತ್ನಿಯಲ್ಲೂ ಕೊರೊನಾ ಪಾಸಿಟಿವ್ …

Read More »

ಬಳ್ಳಾರಿಯಲ್ಲಿ ಮತ್ತೊಬ್ಬರಿಗೆ ಕೊರೊನಾ – ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

ಬಳ್ಳಾರಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಮೊದಲು ಹೊಸಪೇಟೆ ಮೂಲದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಧೃಡವಾಗಿತ್ತು. ಇದೇ ಕುಟುಂಬದ ಸದಸ್ಯರಲ್ಲಿ ಒಬ್ಬರು 7 ಜನರ ಜೊತೆ ನೇರ ಸಂಪರ್ಕ ಹೊಂದಿದ್ದರು. ಹೀಗಾಗಿ ಆ ಏಳು ಜನರನ್ನು ಈಗಾಗಲೇ ಐಸೋಲೇಷನ್ ಮಾಡಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಏಳು ಜನರ ರಕ್ತ ಪರೀಕ್ಷೆ ವರದಿ …

Read More »

ದಯಾಸಾಗರ ಪಾಟೀಲ್ ಪೌಂಡೇಶನ್:ಬಡವರಿಗೆ ದಿನಸಿ ವಸ್ತುಗಳ ವಿತರಣೆ”

ದಯಾಸಾಗರ ಪಾಟೀಲ್ ಪೌಂಡೇಶನ್:ಬಡವರಿಗೆ ದಿನಸಿ ವಸ್ತುಗಳ ವಿತರಣೆ” ಇಂಡಿ: ಪಟ್ಟಣದ ದಯಾಸಾಗರ ಪಾಟೀಲ್ ಪೌಂಡೇಶನ್ ವತಿಯಿಂದ ತಾಲೂಕಿನ ಎಲ್ಲ ಗ್ರಾಮಗಳ ಬಡವರ ಮನೆಗಳಿಗೆ ತೆರಳಿ ಉಚಿತ ದಿನಸಿ ವಸ್ತುಗಳ ಕೀಟನ್ನು ವಿತರಿಸಲಾಯಿತು… ಕೊರೋನಾ ಕೋವಿಡ್-19 ವೈರಸ್ ನಿಂದ ಭಾರತ ಲಾಕ್ ಡೌನ್ ಆದಕಾರಣ ಬಡವರಿಗೆ ಕೆಲಸವಿಲ್ಲದೆ ತಿನ್ನಲು ಆಹಾರಕ್ಕಾಗಿ ಪರದಾಟ ನಡೆಸುವಂತಾಗಿದೆ. ಈ ಹಿನ್ನಲೆಯಲ್ಲಿ ಪಟ್ಟಣದ ಸಮಾಜ ಸೇವಕರಾದ ಹಾಗೂ ಬಿಜೆಪಿ ಮುಖಂಡರಾದ ದಯಾಸಾಗರ ಪಾಟೀಲ’ರವರ ದಯಾಸಾಗರ ಪಾಟೀಲ್ ಪೌಂಡೇಶನ್ …

Read More »

ಮೈಸೂರಿನ ಉದ್ಯಮಿ ಎಂ.ರಾಜೇಂದ್ರ, ಸ್ವಯಂ ಪ್ರೇರಿತರಾಗಿ ತಮ್ಮ ಥ್ರೀ ಸ್ಟಾರ್ ಹೋಟೆಲ್ ಅನ್ನು ಸರ್ಕಾರಿ ಕ್ವಾರಂಟೈನ್‍ಗೆ ಬಿಟ್ಟುಕೊಟ್ಟಿದ್ದಾರೆ

ಮೈಸೂರು: ಕೊರೊನಾ ವೈರಸ್ ಹರಡುವಿಕೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಕೆಲವರನ್ನು ಹೋಂ ಕ್ವಾರಂಟೈನ್ ಮಾಡುವುದಕ್ಕಿಂತ ಸರ್ಕಾರಿ ಕ್ವಾರಂಟೈನ್ ಮಾಡಲು ಮುಂದಾಗಿದೆ. ಇದಕ್ಕೆ ರೂಂಗಳ ಕೊರತೆಯಿದ್ದು, ಲಾಡ್ಜ್ ಗಳ ಬಿಟ್ಟು ಕೊಡಲು ಮಾಲೀಕರು ಮುಂದೆ ಬರುತ್ತಿಲ್ಲ. ಆದರೆ ಮೈಸೂರಿನ ಉದ್ಯಮಿ ಎಂ.ರಾಜೇಂದ್ರ, ಸ್ವಯಂ ಪ್ರೇರಿತರಾಗಿ ತಮ್ಮ ಥ್ರೀ ಸ್ಟಾರ್ ಹೋಟೆಲ್ ಅನ್ನು ಸರ್ಕಾರಿ ಕ್ವಾರಂಟೈನ್‍ಗೆ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಸರ್ಕಾರದ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಇದರ ಜೊತೆಗೆ ತಮ್ಮದೇ ಮಾಲೀಕತ್ವದ …

Read More »

ಪುಣೆಯಿಂದ ಆಗಮಿಸಿದ್ದ ವ್ಯಕ್ತಿ ಸಾವಿಗೆ ಕೋವಿಡ್ 19 ಕಾರಣವಲ್ಲ: ಕಿಮ್ಸ್ ಸ್ಪಷ್ಟನೆ

ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಎಂಜಿನಿಯರ್ ಸಾವಿಗೆ ಕೋವಿಡ್ 19 ವೈರಸ್ ಕಾರಣವಲ್ಲ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಸ್ಪಷ್ಟನೆ ನೀಡಿದ್ದಾರೆ. ಅತಿಯಾದ ಜಾಂಡಿಸ್ ಹಾಗೂ ಶಂಕಿತ ಬ್ಲಡ್ ಕ್ಯಾನ್ಸರ್ ಇತ್ತು. ಹೀಗಾಗಿ ಆತ ನಿನ್ನೆ ಮಧ್ಯಾಹ್ನ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಆತನ ವರದಿ ನೆಗೆಟಿವ್ ಬಂದಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ತಿಳಿಸಿದ್ದಾರೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯ ನಿವಾಸಿ ರಾಜು ನಾಯಕ್ ಎಂಬವರು ಜ್ವರ ನೆಗಡಿ ಕೆಮ್ಮು …

Read More »

ನಿಷೇಧಿತ ಪ್ರದೇಶದ ಹೊರಗಿನ 2 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್: ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ

ಬೆಳಗಾವಿ -: ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ, ಬೆಳಗುಂದ ಗ್ರಾಮದಲ್ಲಿ ಮತ್ತು ಬೆಳಗಾವಿ ನಗರದ ಕ್ಯಾಂಪ್ ನ ಕಸಾಯಿಗಲ್ಲಿಯಲ್ಲಿ ಕರೊನಾ ವೈರಸ್ ಸೋಂಕು ದೃಢಪಟ್ಟಿರುವುದರಿಂದ(ಪಾಸಿಟಿವ್) ಸದರಿ ಗ್ರಾಮ ಮತ್ತು ಕಸಾಯಿಗಲ್ಲಿಯ ಭೌಗೋಳಿಕ ಪ್ರದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶವಾಗುವವರೆಗೆ ನಿಷೇಧಿತ (ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಈ ಮೂರೂ ಪ್ರದೇಶಗಳ ನಿವಾಸಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಸಂಬಂಧಿಸಿದ ಗ್ರಾಮ ಮತ್ತು ಪ್ರದೇಶದ …

Read More »