Breaking News

ಬನಹಟ್ಟಿ- ಮುಧೋಳ ರಸ್ತೆ: ಸಂಚಾರ ದುಸ್ತರ

ರಬಕವಿ ಬನಹಟ್ಟಿ: ಬನಹಟ್ಟಿಯಿಂದ ಜಗದಾಳ, ನಾವಲಗಿ, ಕುಳಲಿ ಮಾರ್ಗವಾಗಿ ಮುಧೋಳ ನಗರಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದ ಪ್ರಯಾಣಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ತರಕಾರಿ ಮಾರಲು ಬರುವ ಜನರಿಗೆ ತೊಂದರೆಯಾಗಿದೆ. ಬಹಳಷ್ಟು ಗುಂಡಿಗಳು ನಿರ್ಮಾಣವಾದ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಕೆಂಪು ಬಟ್ಟೆಯನ್ನು ಸುತ್ತಿದ ಧ್ವಜಗಳನ್ನು ನಿಲ್ಲಿಸುತ್ತಿದ್ದಾರೆ.   ಅದರಲ್ಲೂ ಜಗದಾಳದಿಂದ ಕುಳಲಿ ಗ್ರಾಮದ ಮಧ್ಯದ ರಸ್ತೆ ಹೆಚ್ಚು ಕೆಟ್ಟಿದೆ. ರಸ್ತೆಯಲ್ಲಿ ಅಪಾರ ಪ್ರಮಾಣದ ತಗ್ಗುಗಳು ನಿರ್ಮಾಣವಾಗಿವೆ. ರಾತ್ರಿ …

Read More »

ವಾಕಿಂಗ್​ನಲ್ಲಿದ್ದ ಮುಡಾ ಅಧಿಕಾರಿ ಇಡಿ ದಾಳಿ ಸುದ್ದಿ ಕೇಳ್ತಿದ್ದಂತೆ ಅಲ್ಲಿಂದಲೇ ರನ್ನಿಂಗ್!

ಸಿಎಂ ಸಿದ್ದರಾಮಯ್ಯರ ಬುಡಕ್ಕೆ ಸುತ್ತಿಕೊಂಡಿರುವ ಮುಡಾ ಹಗರಣದ ತನಿಖೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ಮುಡಾ ಮಾಜಿ ಆಯುಕ್ತರು ಮತ್ತು ಮುಖ್ಯಮಂತ್ರಿ ಆಪ್ತರಿಗೆ ಇಡಿ ಶಾಕ್ ಕೊಟ್ಟಿದೆ. ಸೋಮವಾರ ಇಡಿ ಅಧಿಕಾರಿಗಳು ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು 9 ಕಡೆ ದಾಳಿ ನಡೆಸಿದ್ದಾರೆ. ಈ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಆ ಕುರಿತ ವಿವರ ಇಲ್ಲಿದೆ. ಬೆಂಗಳೂರು, ಅಕ್ಟೋಬರ್ 29: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು …

Read More »

ತಹಶೀಲ್ದಾರ್ ಕರ್ತವ್ಯಲೋಪದಿಂದ ಸರ್ಕಾರಕ್ಕೆ ಕೈ ತಪ್ಪಿದ ಜಮೀನು

ಬಳ್ಳಾರಿ: ನಗರದ ಪ್ರತಿಷ್ಠಿತ ಅವ್ವಂಬಾವಿಯಲ್ಲಿನ ನೂರಾರು ಕೋಟಿ ರೂಪಾಯಿ ಮೌಲ್ಯದ 11.59 ಎಕರೆ ಸರ್ಕಾರಿ ಜಮೀನನ್ನು ಬಳ್ಳಾರಿ ತಾಲ್ಲೂಕು ತಹಶೀಲ್ದಾರ್‌ ಗುರುರಾಜ್‌ ಛಲುವಾದಿ ನಿಯಮಬಾಹಿರವಾಗಿ ಬೇರೊಬ್ಬರಿಗೆ ಹಕ್ಕು ಬದಲಾವಣೆ ಮಾಡಿಕೊಟ್ಟಿದ್ದಾರೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.   ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೆಪ್ಟೆಂಬರ್ 26ರಂದೇ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ. ಜಿಲ್ಲೆಯ ಪ್ರಮುಖ ರಾಜಕಾರಣಿಗಳ ಮನೆಗಳು ಇರುವ ಅವ್ವಂಬಾವಿಯಲ್ಲಿ ಮಾರ್ಗಸೂಚಿ ದರವೇ …

Read More »

ಪುನೀತ್‌ ಸಿನಿಮಾದಲ್ಲಿ ನಟಿಸಲು ನಯಾಪೈಸೆ ಬೇಡ ಎಂದಿದ್ದ ದರ್ಶನ್‌!

ಇಂದು ನಟ ಪುನೀತ್‌ ರಾಜ್‌ಕುಮಾರ್‌ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮಾರಕದ ಬಳಿ ಇಂದು ಬೆಳಿಗ್ಗೆಯಿಂದಲೇ ಜನಸಾಗರ ಹರಿದುಬಂದಿದೆ. ಇದೇ ಸಂದರ್ಭದಲ್ಲಿ ನಟ ದರ್ಶನ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರ ಒಡನಾಟ ಮುನ್ನೆಲೆಗೆ ಬಂದಿದೆ.   ಇಬ್ಬರೂ ನಟರ ನಡುವೆ ಉತ್ತಮ ಒಡನಾಟ ಮೊದಲಿನಿಂದಲೂ ಇತ್ತು. ಆದರೆ, ಕೆಲ ಅಂದಾಭಿಮಾನಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಇಬ್ಬರ ನಡುವೆ ಕಿಡಿ ಹೊತ್ತಿಸಿ, ಬೆಂಕಿ ಕಾಯಿಸಿಕೊಂಡಿದ್ದರು. ದರ್ಶನ್‌ …

Read More »

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಮಹಿಳೆ ಆತ್ಮಹತ್ಯೆ

ಶಿವಮೊಗ್ಗ: ಪತಿ-ಪತ್ನಿ ನಡುವಿನ ಜಗಳಕ್ಕೆ ಬೇಸತ್ತ ಪತ್ನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಬಾನಗರದಲ್ಲಿ ನಡೆದಿದೆ. ಕಮಲಾ ಬಿ.ಪಿ (35) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ತಡರಾತ್ರಿ ತಾಳಗುಪ್ಪ-ಮೈಸೂರು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ವಿನೋಬಾನಗರ ರೈಲ್ವೆ ಟ್ರ್ಯಾಕ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ದೇಹ, ತಲೆ, ಕೈಗಳು ಛಿದ್ರಗೊಂಡು ಬೇರ್ಪಟ್ಟಿವೆ. ಕಮಲಾ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಪತಿ-ಪತ್ನಿ ನಡುವೆ …

Read More »

ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು ಆಸ್ತಿ ವಶಕ್ಕಾಗಿ ರೈತರಿಗೆ ನೋಟಿಸ್‌ ನೀಡಿರುವ ಸಂಬಂಧ ಅಲ್ಲಿಗೆ ಭೇಟಿ ನೀಡಿ ನೊಂದ ರೈತರ ಅಹವಾಲು ಆಲಿಸುವ ಬಿಜೆಪಿ ತಂಡದ ಬಗ್ಗೆ ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ರಚಿಸಿದ್ದ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪುನಾರಚನೆ ಮಾಡಿದ್ದಾರೆ.   ಈಗಾಗಲೇ ಇರುವ ಸದಸ್ಯರ ಜೊತೆಗೆ ಸಂಸದ ರಮೇಶ್‌ ಜಿಗಜಿಣಗಿ, ಶಾಸಕ …

Read More »

ದ್ರಾಕ್ಷಿ ಮತ್ತೆ ಹುಳಿಯಾಗುವ ಆತಂಕ- ನಷ್ಟ ಅನುಭವಿಸುವ ಭೀತಿ

ತೆಲಸಂಗ: ಬೆಳಗಾವಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ದ್ರಾಕ್ಷಿಗೆ ಈಗ ದಾವನಿ ಹಾಗೂ ಕೊಳೆರೋಗ ಆವರಿಸಿದೆ. ತೆಲಸಂಗ, ಬನ್ನೂರ, ಕನ್ನಾಳ ಸೇರಿದಂತೆ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು ಪ್ರಸಕ್ತ ವರ್ಷವೂ ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ.   ರಾಜ್ಯದಲ್ಲಿಯೇ ದ್ರಾಕ್ಷಿ ಬೆಳೆಯುವಲ್ಲಿ 2ನೇ ಸ್ಥಾನದಲ್ಲಿರುವ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರು, ದ್ರಾಕ್ಷಿ ಚಾಟ್ನಿ ಮಾಡುವ ಈ ಹಂತದಲ್ಲಿ ಹವಾಮಾನ ವೈಪರೀತ್ಯದಿಂದ ಮೊದಲು ತುತ್ತಿನಲ್ಲೇ ಕಲ್ಲು ಬಂದು ಆತಂಕ ಪಡುವಂತಾಗಿದೆ. ಅಥಣಿ ತಾಲೂಕಿನ …

Read More »

ಡಿ ಕೆ ಶಿವಕುಮಾರ್ ಪಾರ್ಟ್ ಟೈಮ್ ನೀರಾವರಿ ಸಚಿವ.

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಪುನರುಚ್ಛರಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ನಾಯಕತ್ವದಲ್ಲಿ ನಡೆಯುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾನು ಭಾಗವಹಿಸುವದಿಲ್ಲ. ಆದರೆ ನಮ್ಮ ಎನ್ ಡಿಎ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದರು. ಸಿ.ಪಿ.ಯೋಗೇಶ್ವರ ಒಳ್ಳೆಯ ಮನುಷ್ಯ. ಇಲ್ಲಿ ಅವರಿಗೆ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಗೆ ಹೋಗಿದ್ದಾರೆ. ಸೋಲುತ್ತಾರೋ ಅಥವಾ ಗೆಲ್ಲುತ್ತಾರೋ ಗೊತ್ತಿಲ್ಲ ಎಂದರು. ಮಹಾರಾಷ್ಟ್ರ …

Read More »

ಪ್ರತಿ ಹೆಣ್ಣಿನ ಹೋರಾಟದ ಹಿಂದಿದೆ ಈ ನೆಲದ ಸ್ವಾಭಿಮಾನ: ಪ್ರೊ. ತ್ಯಾಗರಾಜ

ಬೆಳಗಾವಿ: ಹೋರಾಟ ಎಂಬುದು ಬಾಹ್ಯಿಕ ಸ್ಫೂರ್ತಿಯಿಂದ ಬಂದಾಗ ಅದು ಆ ಕ್ಷಣದ ಹೋರಾಟವಾಗುತ್ತದೆ. ಅದೇ ಅಂತರಾಳದಿಂದ ಬಂದಾಗ ಸಮಸ್ತ ಪರಿಸರವನ್ನೇ ಬಡಿದೆಬ್ಬಿಸುತ್ತದೆ. ಇದಕ್ಕೆ ರಾಣಿ ಚನ್ನಮ್ಮನ ಹೋರಾಟವೇ ಸಾಕ್ಷಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಿ ಎಂ ತ್ಯಾಗರಾಜ ಅಭಿಪ್ರಾಯಪಟ್ಟರು.   ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹಯೋಗದಲ್ಲಿ ರಾಣಿ ಚನ್ನಮ್ಮನ ಐತಿಹಾಸಿಕ …

Read More »

ನವೆಂಬರ್ 1ರಿಂದ ಹೊಸ ರೂಲ್ಸ್ ; ಇನ್ಮುಂದೆ ‘ಫೋನ್ ನಂಬರ್’ಗೆ ‘OTP’ ಬರೋದಿಲ್ಲ

ನವದೆಹಲಿ : OTP (ಒನ್ ಟೈಮ್ ಪಾಸ್‌ವರ್ಡ್) ಪರಿಶೀಲನೆ ಪ್ರಕ್ರಿಯೆಯು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬಹಳ ಮಹತ್ವದ್ದಾಗಿದೆ. ಎಲ್ಲಾ ರೀತಿಯ ಸೇವೆಗಳು ಆನ್‌ಲೈನ್‌’ನಲ್ಲಿ ಲಭ್ಯವಿದ್ದರೂ, ಬಳಕೆದಾರರನ್ನು OTP ಯೊಂದಿಗೆ ಗುರುತಿಸಲಾಗುತ್ತದೆ. ಭಾರತದಲ್ಲಿ ಹೆಚ್ಚಿನ ಆನ್‌ಲೈನ್ ವಹಿವಾಟುಗಳು ಭದ್ರತೆಗಾಗಿ OTP ಪರಿಶೀಲನೆಯನ್ನ ಅವಲಂಬಿಸಿವೆ. ಆದಾಗ್ಯೂ, ಡಿಜಿಟಲ್ ಭದ್ರತೆ ಮತ್ತು ವಂಚನೆಯನ್ನ ತಡೆಯುವ ಉದ್ದೇಶದಿಂದ ಟೆಲಿಕಾಂ ಕಂಪನಿಗಳು ನವೆಂಬರ್ 1 ರಿಂದ ಹೊಸ ನಿಯಮಗಳನ್ನ ಜಾರಿಗೆ ತರಲು ಸಿದ್ಧವಾಗಿವೆ. ಈ ಕಾರಣದಿಂದಾಗಿ, OTP …

Read More »