Breaking News

ಸಿಗರೇಟ್ ಜೊತೆ ಮೊಬೈಲ್ ಎಗರಿಸಿದ ಕಳ್ಳ……………

ಚಿಕ್ಕಮಗಳೂರು: 10 ರೂ.ಯ ಸಿಗರೇಟ್ ಜೊತೆ ಅಂಗಡಿಯಲ್ಲಿದ್ದ ಮೊಬೈಲ್ ಕದ್ದು ಕಳ್ಳನೊಬ್ಬ ಎಸ್ಪೇಕ್ ಅಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಬಣಕಲ್ ಸಮೀಪದ ಸಬ್ಬೇನಹಳ್ಳಿಯಲ್ಲಿ ನಡೆದಿದೆ. ಅಂಗಡಿಗೆ ಬಂದ ವ್ಯಕ್ತಿ 20 ರೂಪಾಯಿ ನೀಡಿ ಸಿಗರೇಟ್ ಕೇಳಿದ್ದಾನೆ. ಅಂಗಡಿಯಲ್ಲಿದ್ದ ವ್ಯಕ್ತಿ ಸಿಗರೇಟ್ ನೀಡಿ ಚಿಲ್ಲರೆ 10 ರೂಪಾಯಿ ವಾಪಸ್ ನೀಡಿ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಸಿಗರೇಟ್ ಪಡೆದ ವ್ಯಕ್ತಿ ಅಲ್ಲಿಯೇ ಅದಕ್ಕೆ ಬೆಂಕಿ ಹಚ್ಚಿ ಒಂದು ಧಮ್ ಎಳೆದಿದ್ದಾನೆ. ಅಂಗಡಿಯಾತ …

Read More »

ವೀಕ್ ಎಂಡ್ ನಲ್ಲೂ ಮಂಜಿನನಗರಿಯಲ್ಲಿ ಎಲ್ಲವೂ ಖಾಲಿ ಖಾಲಿ……..

ಮಡಿಕೇರಿ: ಜೂನ್, ಜುಲೈ ತಿಂಗಳು ಅಂದರೆ ಕರ್ನಾಟಕದ ಕಾಶ್ಮೀರ ತುಂಬಿ ತುಳುಕುತಿತ್ತು. ಆದರೆ ಕೊರೊನಾ ಮಹಾಮಾರಿಯ ಭಯ ವೀಕ್ ಎಂಡ್ ನಲ್ಲೂ ಮಂಜಿನನಗರಿಯಲ್ಲಿ ಎಲ್ಲವೂ ಖಾಲಿ ಖಾಲಿ ಎನ್ನುವಂತೆ ಮಾಡಿದೆ. ಲಾಕ್‍ಡೌನ್ ಸಡಿಲಿಕೆ ಮಾಡಿದ್ರೆ ಸಾಕು ಎನ್ನುತ್ತಿದ್ದ ವ್ಯಾಪಾರಿಗಳು ಗ್ರಾಹಕರಿಲ್ಲದೆ ಪರದಾಡುತ್ತಿದ್ದಾರೆ. ಅಪಾರ ಸಂಪತ್ತಿನಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಕೊಡಗು ಪ್ರವಾಸಿ ತಾಣಗಳ ಜಿಲ್ಲೆಯೆಂದೇ ಖ್ಯಾತಿ. ಇಲ್ಲಿನ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿರುವುದೇ ಪ್ರವಾಸೋದ್ಯಮ. ಇದನ್ನು ನಂಬಿಕೊಂಡೇ ಸಾವಿರಾರು …

Read More »

ಮಹಾರಾಷ್ಟ್ರ ಕಂಟಕದ ಬಳಿಕ ಇದೀಗ ರಾಜ್ಯಕ್ಕೆ ಆಂಧ್ರದ ಕಂಟಕ ಪ್ರಾರಂಭ……….

ಅಮರಾವತಿ: ಮಹಾರಾಷ್ಟ್ರ ಕಂಟಕದ ಬಳಿಕ ಇದೀಗ ರಾಜ್ಯಕ್ಕೆ ಆಂಧ್ರದ ಕಂಟಕ ಪ್ರಾರಂಭವಾಗುವ ಭಯ ಎದುರಾಗಿದ್ದು, ಆಂಧ್ರ ಪ್ರದೇಶ ಅಂತರ್ ರಾಜ್ಯ ಬಸ್ ಸಂಚಾರವನ್ನು ಪ್ರಾರಂಬಿಸಲು ನಿರ್ಧರಿಸಿದೆ. ಹಂತ ಹಂತವಾಗಿ ರಾಜ್ಯಕ್ಕೆ 500 ಬಸ್‍ಗಳನ್ನು ಬಿಡಲು ಕ್ರಮ ಕೈಗೊಂಡಿದೆ. ಆಂಧ್ರ ಪ್ರದೇಶದಿಂದ ರಾಜ್ಯಕ್ಕೆ ಬಸ್ ಬಿಡಲು ಆಂಧ್ರ ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 168 ಬಸ್‍ಗಳು ರಾಜ್ಯಕ್ಕೆ ಸಂಚರಿಸಲಿವೆ. ಜೂನ್ 17 ರಿಂದ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಧ್ಯೆ 168 …

Read More »

ಚಿಕ್ಕಮಗಳೂರಿಗೆ ಬರುತ್ತಿದೆ ಪ್ರವಾಸಿಗರ ದಂಡು- ಜಿಲ್ಲೆಯ ಜನರಲ್ಲಿ ಆತಂಕ………..

ಚಿಕ್ಕಮಗಳೂರು: ಕೊರೊನಾ ಲೆಕ್ಕಿಸದೆ ಜನ ಮೋಜು ಮಸ್ತಿ ಮಾಡಲು ಮುಂದಾಗಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಆತಂಕ ಎದುರಾಗಿದೆ. ನೂರಾರು ಕೊರೊನಾ ಪ್ರಕರಣಗಳಿರುವ ಜಿಲ್ಲೆಗಳಿಂದ ಎಗ್ಗಿಲ್ಲದೆ ಪ್ರವಾಸಿಗರು ಕಾಫಿನಾಡಿನತ್ತ ಧಾವಿಸುತ್ತಿದ್ದು, ಜಿಲ್ಲೆಯ ಜನರಲ್ಲಿ ಭಯ ಶುರುವಾಗಿದೆ. ಉಡುಪಿ, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಜೊತೆ, ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, …

Read More »

ಶಾಲೆ ಆರಂಭ ಮುನ್ನವೇ ಆಘಾತಕಾರಿ ಸುದ್ದಿ8 ಮಂದಿ ಶಾಲಾ ಶಿಕ್ಷಕರಿಗೆ ಸೋಂಕು ಪತ್ತೆ…

ಧಾರವಾಡ: ಶಾಲೆ ಆರಂಭ ಮುನ್ನವೇ ಆಘಾತಕಾರಿ ಸುದ್ದಿಯೊಂದು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. 8 ಮಂದಿ ಶಾಲಾ ಶಿಕ್ಷಕರಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗಿದೆ. ಧಾರವಾಡದ ಪ್ರತಿಷ್ಠಿತ ಶಾಲೆಯ ಶಿಕ್ಷಕರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಭಾನುವಾರ ಬಂದ 10 ಜನರಲ್ಲಿ 7 ಮಂದಿ ಶಿಕ್ಷಕರಿಗೆ ಸೋಂಕು ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶಿಕ್ಷಕಿಗೆ ಸೋಂಕು …

Read More »

Cinema ರಾಸಾಯನಿಕವಿಲ್ಲದೆ ನೈಸರ್ಗಿಕ ಕೃಷಿ ಮಾಡಿ ತೋರಿಸಿದ ಉಪೇಂದ್ರ……….

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಪ್ರಜಾಕೀಯ, ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದು, ಎರಡನ್ನೂ ನಿಭಾಯಿಸುತ್ತಿದ್ದಾರೆ. ರಾಜಕೀಯಕ್ಕೆ ಹೊಸ ಭಾಷ್ಯ ಬರೆಯಲು ಯತ್ನಿಸುತ್ತಿರುವ ಉಪೇಂದ್ರ ತಮ್ಮ ಐಡಿಯಾಗಳ ಮೂಲಕ ಜನರ ಮುಂದೆ ಹೋಗುತ್ತಿದ್ದಾರೆ. ಆದರೆ ಇದೀಗ ಸಿನಿಮಾ, ಪ್ರಜಾಕೀಯ ಹೊರತುಪಡಿಸಿ ಹೊಲದಲ್ಲಿ ಕೆಲಸ ಮಾಡಲು ಪ್ರಾರಂಬಿಸಿದ್ದಾರೆ. ತಾವೇ ಕೆಲಸ ಮಾಡಿ ಫಸಲನ್ನೂ ತೆಗೆದಿದ್ದಾರೆ. ಸಿನಿಮಾ ರಂಗದಲ್ಲಿ ವಿಭಿನ್ನ ಕ್ರಿಯೇಟಿವಿಟಿ ಮೂಲಕ ಫ್ಯಾನ್ ಫಾಲೋವರ್ಸ್ ಹೊಂದಿರುವ ಉಪೇಂದ್ರ, ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. …

Read More »

ಕೊರೊನಾ ಸಂಕಷ್ಟ- ಜನಸಾಮಾನ್ಯರ ಸಲಹೆ ಕೇಳಿದ ಪ್ರಧಾನಿ ಮೋದಿ………..

ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ ಮೂರು ಲಕ್ಷ ದಾಟಿದ್ದು, ಈ ಹಿನ್ನೆಲೆ ಕೊರೊನಾ ನಿಯಂತ್ರಣ ಸಂಬಂಧ ಸಾರ್ವಜನಿಕರು ಸಲಹೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮೂಲಕ ಮನವಿ ಮಾಡಿರುವ ಅವರು, ಜನರ ಉತ್ತಮ ಸಲಹೆಗಳನ್ನು ಜೂನ್ 28ರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಚರ್ಚಿಸಲು ಸಾಕಷ್ಟು ವಿಚಾರಗಳು ನಿಮ್ಮ ಬಳಿ ಇದೆ. ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ, …

Read More »

ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 176 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು.

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನದಲ್ಲಿ 176 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿದೆ. ಕರುನಾಡಿಗೆ ರವಿವಾರ ಕಂಟಕವಾಗಿದೆ. ಇಪ್ಪತ್ತಾಲ್ಕು ಗಂಟೆಯಲ್ಲಿ 176 ಜನರಿಗೆ ಸೋಂಕು ತಗುಲಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಂದ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ. ಸಧ್ಯ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆಯಾಗಿದೆ. ಇಂದು 312 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿ3955 …

Read More »

ಅರಭಾವಿ ಶಾಸಕರ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹಕ್ಕೆ ಭೇಟಿ ನೀಡಿ ಸತ್ಕಾರ ಸ್ವೀಕರಿಸಿದ ನೂತನ ರಾಜ್ಯಸಭಾ ಸದಸ್ಯ

  ಗೋಕಾಕ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಂಡಿಯಾಗಿ ರಾಜ್ಯದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ನೂತನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ರವಿವಾರದಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಗೃಹ ಕಛೇರಿ ಎನ್‍ಎಸ್‍ಎಫ್ ಅತಿಥಿ ಗೃಹಕ್ಕೆ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು. ಮೂರು ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ …

Read More »

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ

ಮುಂಬೈ: ಬಾಲಿವುಡ್ ನ ಖ್ಯಾತ ನಟ ಎಂ.ಎಸ್.ಧೋನಿ ಸಿನಿಮಾ ನಾಯಕ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈ ಬಾಂದ್ರಾ ತಮ್ಮ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ತದನಂತರ ಬಿಡುಗಡೆಯಾಗಿದ್ದ ‘ಶುದ್ಧ್ …

Read More »