ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ.. ಚಿಕ್ಕ ನದಿಯೇ ಭೋರ್ಗರೆಯುತ್ತಿದೆ.. ರಸ್ತೆಗಳಿಗೂ ನೀರು ನುಗ್ಗಿದೆ, ಮನೆ ಮುಂದೆಯೇ ನೀರು ಬಂದು ನಿಂತಿದೆ.. ವರುಣನ ಅಬ್ಬರಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ಬೆಳಗಾವಿಗೆ ಮತ್ತೆ ಎದುರಾಯ್ತು ಜಲಕಂಟಕ! ಭಯ.. ಮತ್ತದೇ ಭಯ.. ನೆರೆ ನರಕದಿಂದ ಪಾರಾಗಿ ತಿಂಗಳ ತುಂಬೋ ಮೊದಲೇ, ಬೆಳಗಾವಿ ಜನರಲ್ಲಿ ಮತ್ತೆ ಪ್ರವಾಹ ಆತಂಕ ಕಾಡ್ತಿದೆ. ಯಾಕಂದ್ರೆ, ಕಳೆದೆರಡು ದಿನದಿಂದ ಸುರೀತಿರೋ ಮಳೆಯಿಂದಾಗಿ, ಮಲಪ್ರಭಾ ನದಿ ಅಪಾಯದ ಮಟ್ಟಕ್ಕೇರಿದೆ. ಕಿತ್ತೂರಿನ …
Read More »ನಟಿ ಸಂಜನಾ ಆಪ್ತ ಶೇಖ್ ಫೈಜಲ್ ಮನೆ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾದ ಆರೋಪದಡಿ ಬಂಧಿಸಲಾಗಿರುವ ನಟಿ ಸಂಜನಾ ಗಲ್ರಾನಿ ಆಪ್ತ ಎನ್ನಲಾದ ಶೇಖ್ ಫೈಜಲ್ ಎಂಬಾತನ ಮನೆ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ಮಾಡಿದರು. ಜಯನಗರದಲ್ಲಿರುವ ಮನೆಗೆ ಹೋಗಿದ್ದ ಪೊಲೀಸರು, ಗಂಟೆಗಟ್ಟಲೇ ಪರಿಶೀಲನೆ ನಡೆಸಿದರು. ಫೈಜಲ್ ಮನೆಯಲ್ಲಿ ಇರಲಿಲ್ಲ. ಸಹೋದರ ಹಾಗೂ ಪತ್ನಿ-ಮಕ್ಕಳು ಮಾತ್ರ ಇದ್ದರು. ಶೋಧ ಮುಗಿಸಿದ ಪೊಲೀಸರು, ಫೈಜಲ್ ಸಹೋದರನನ್ನು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆತಂದಿದ್ದರು. ಫೈಜಲ್ ಬಗ್ಗೆ ಮಾಹಿತಿ ಸಂಗ್ರಹಿಸಿ …
Read More »ಪ್ಲಾಸ್ಮಾ ಥೆರಪಿಯಿಂದ ಪ್ರಯೋಜನವಿಲ್ಲ: ಅಧ್ಯಯನದಲ್ಲಿ ಬಯಲು!
ನವದೆಹಲಿ : ಕೊರೋನಾ ಸೋಂಕಿನಿಂದ ಉಂಟಾಗುವ ಸಾವು ತಡೆಯುವಲ್ಲಿ ಅಥವಾ ಸಾಮಾನ್ಯ ಸೋಂಕು ತೀವ್ರ ಪ್ರಮಾಣಕ್ಕೆ ಹೋಗುವುದನ್ನು ನಿಲ್ಲಿಸುವಲ್ಲಿ ಪ್ಲಾಸ್ಮಾ ಥೆರಪಿಯಿಂದ ವಿಶೇಷ ಪ್ರಯೋಜನವೇನೂ ಆಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ದೇಶದ 39 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಪ್ರಯೋಜನದ ಬಗ್ಗೆ ಏ.22ರಿಂದ ಜು.12ರವರೆಗೆ ಐಸಿಎಂಆರ್ ತಂಡ ಅಧ್ಯಯನ ನಡೆಸಿತ್ತು. ಆಸ್ಪತ್ರೆಗೆ ದಾಖಲಾದ 464 ಮಂದಿ ಸಾಮಾನ್ಯ ಪ್ರಮಾಣದ …
Read More »ನಿಯಮ ಮೀರಿ ಹೆಚ್ಚು ನೆರವಿಗೆ ಕೇಂದ್ರಕ್ಕೆ ರಾಜ್ಯ ಮನವಿ
ಬೆಂಗಳೂರು : ರಾಜ್ಯದಲ್ಲಿ ನೆರೆಯಿಂದ 8,071 ಕೋಟಿ ರು. ಅಂದಾಜು ಹಾನಿಯಾಗಿದ್ದು, ಎಸ್ಡಿಆರ್ಎಫ್ ನಿಯಮಗಳ ಅನ್ವಯ 628.7 ಕೋಟಿ ರು. ಅನುದಾನ ಮಾತ್ರ ಬರುತ್ತದೆ. ಇದು ಸಾಕಾಗುವುದಿಲ್ಲ. ಈ ಬಾರಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಅಲ್ಲದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ನೆರೆ ಹಾನಿ ನಿಯಂತ್ರಿಸಲು ಪ್ರವಾಹ ಮುನ್ಸೂಚನೆ ಹಾಗೂ ಪ್ರತಿಕ್ರಿಯೆಗಾಗಿ …
Read More »ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ
ಭೂತರಾಮನಹಟ್ಟಿ, ಹಿರೇಬಾಗೇವಾಡಿ ಎರಡು ಕಡೆ ವಿವಿ ಕಾರ್ಯಚಟುವಟಿಕೆ ಹೆಚ್ಚುವರಿ ಕಟ್ಟಡಕ್ಕಾಗಿ ಹಿರೇಬಾಗೇವಾಡಿಗೆ ಸ್ಥಳಾಂತರ ಅಭಿವೃದ್ದಿ ದೃಷ್ಠಿಯಿಂದ ಈ ನಿರ್ಧಾರ ಬೆಳಗಾವಿ: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಗೆ ಸ್ಥಳಾಂತರ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಸದ್ಯ ಭೂತರಾಮನಹಟ್ಟಿಯಲ್ಲಿರುವ ವಿಶ್ವ ವಿದ್ಯಾಲಯ ಅರಣ್ಯ ಪ್ರದೇಶದ ಜಾಗದ ಅಧೀನದಲ್ಲಿರುವುದಿಂದ ಹೆಚ್ಚುವರಿ ಕಟ್ಟಡ, ಮತ್ತೀತರ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ. …
Read More »ಪ್ರಶಾಂತ್ ಸಂಬರಗಿ ವಿರುದ್ಧ ಜಮೀರ್ ದೂರು………….
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಪ್ರಶಾಂತ್ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು ದಾಖಲಿಸಿದ್ದಾರೆ. ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಜಮೀರ್ ದೂರು ದಾಖಲಿಸಿದ್ದು, ಪೊಲೀಸರು ದೂರಿನ ಆಧಾರದ ಅನ್ವಯ ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಮಾಧ್ಯಮಗಳಲ್ಲಿ ಬಂದ ಸಂಬರಗಿ ಅವರ ಮಾತಿನ ವಿಡಿಯೋಗಳನ್ನು ತಮ್ಮ ದೂರಿನೊಂದಿಗೆ ಜಮೀರ್ ಸಾಕ್ಷಿಯಾಗಿ ನೀಡಿದ್ದಾರೆ. ಸಂಬರಗಿ ವಿರುದ್ಧ 100 ಕೋಟಿ ರೂ …
Read More »ಕರ್ನಾಟಕ ಚಲನಚಿತ್ರ ವಾಣಿಕ್ಯ ಮಂಡಳಿ ಮತ್ತು ಕಲಾವಿದರು ಸೇರಿ ಇಂದು ಸಿಎಂ ಭೇಟಿ
ಬೆಂಗಳೂರು: ಡ್ರಗ್ಸ್ ಪ್ರಕರಣದ ಬಗ್ಗೆ ಈಗ ನಾವು ಮಾತನಾಡುವುದು ಸರಿಯಲ್ಲ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಹೇಳಿದ್ದಾರೆ.ಕರ್ನಾಟಕ ಚಲನಚಿತ್ರ ವಾಣಿಕ್ಯ ಮಂಡಳಿ ಮತ್ತು ಕಲಾವಿದರು ಸೇರಿ ಇಂದು ಸಿಎಂ ಅವರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆ ಬಗ್ಗೆ ಮಾತನಾಡಿದರು. ಈ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಿವಣ್ಣ, ಡ್ರಗ್ ವಿಚಾರದಲ್ಲಿ ಈಗಲೇ ಮಾತನಾಡುವುದು ಬಹುಬೇಗ ಎನಿಸುತ್ತದೆ ಎಂದು ಹೇಳಿದರು ಈಗ ಆ ವಿಚಾರ ನಮ್ಮ ಬಳಿ ಇಲ್ಲ. ಸಂಬಂಧಪಟ್ಟ …
Read More »ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಸಾಂಬಾ ಎಲ್ಲ ಆರೋಪಿಗಳಿಗೆ ಚೈನ್ ಲಿಂಕ್,ಆರೋಪಿಗಳ ಜೊತೆಗೆ ಲೂಮ್ ಪೆಪ್ಪರ್ ನೇರ ಸಂಪರ್ಕ
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ 7ನೇ ಆರೋಪಿಯಾಗಿರುವ ಸೆನೆಗಲ್ ದೇಶದ ಪ್ರಜೆ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಸಾಂಬಾ ಎಲ್ಲ ಆರೋಪಿಗಳಿಗೆ ಚೈನ್ ಲಿಂಕ್ ಆಗಿರುವ ವಿಚಾರ ಸಿಸಿಪಿ ವಿಚಾರಣೆ ವೇಳೆ ಗೊತ್ತಾಗಿದೆ ಹೌದು. ಸೆರೆ ಸಿಕ್ಕ ಆರಂಭದಲ್ಲಿ “ಐ ದೋಂತ್ ನೋ ಇಂಗ್ಲಿಷ್” ನನಗೆ ಆಫ್ರಿಕನ್ ಭಾಷೆ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ ಎಂದು ಸಾಂಬಾ ಹೇಳಿದ್ದ. ಪ್ರಕರಣದಲ್ಲಿ ಈತನ ಪಾತ್ರ ದೊಡ್ಡದಿದೆ ಎಂದು ತಿಳಿದಿದ್ದ ಪೊಲೀಸರಿಗೆ …
Read More »ಸಾಹಸಮಯ ಫೋಟೋಶೂಟ್ ವರನ ಕೈಯಿಂದ ಜಾರಿದ ವಧು ಫೋಟೋಗೆ ಟ್ವಿಸ್ಟ್
ವಾಷಿಂಗ್ಟನ್: ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಆಗಿದೆ. ವಧು-ವರ ಇಬ್ಬರೂ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ವಧುಯೊಬ್ಬಳು ಸುಮಾರು 1,900 ಅಡಿ ಎತ್ತರದ ಬಂಡೆಯ ಅಂಚಿನಲ್ಲಿ ತೂಗಾಡುವ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಮೆರಿಕದ ಅರ್ಕಾನ್ಸಾಸ್ ಮೂಲದ ರಿಯಾನ್ ಮೈಯರ್ಸ್ (30) ಮತ್ತು ಪತ್ನಿ ಸ್ಕೈ (28) ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಲು ಪ್ಲಾನ್ ಮಾಡಿದ್ದರು. ಆದರೆ ಕೊರೊನಾ ಹಿನ್ನೆಲೆ ಲಾಕ್ಡೌನ್ ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗಿಲ್ಲ. ಕೊನೆಗೆ …
Read More »ಆಟಿಕೆಗಳಂತೆ ಕೊಚ್ಚಿ ಹೋಯ್ತು ಬೈಕುಗಳು –
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನವೂ ರಾತ್ರಿ ಮಳೆ ಮುಂದುವರೆದಿದೆ. ಬುಧವಾರ ರಾತ್ರಿ ಸತತವಾಗಿ ಸುರಿದ ಮಳೆಗೆ ಮನೆ, ಅಪಾರ್ಟ್ಮೆಂಟ್ಗಳು ಜಲಾವೃತವಾಗಿವೆ. ಜನರು ಹೊರ ಬರುವುದಕ್ಕೂ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಬುಧವಾರ ಮಳೆಗೆ ಪೂರ್ತಿ ಜಲಾವೃತವಾಗಿದ್ದ ಹೊರಮಾವು ನಗರಕ್ಕೆ ರಾತ್ರಿ ಸುರಿದ ಮಳೆ ಜಲದಿಗ್ಬಂಧನ ಹಾಕಿದೆ. ಆರ್ಆರ್ ನಗರದಲ್ಲಿ ರಾಜಕಾಲುವೆ ಒಡೆದುಕೊಂಡು ಮನೆಗಳಿಗೆ ನೀರು ನುಗ್ಗಿದೆ. ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಚೊಕ್ಕಸಂದ್ರ, ಶಿವಾನಂದ ಸರ್ಕಲ್, ಪೀಣ್ಯ, ದಾಸರಹಳ್ಳಿ ಮತ್ತು …
Read More »