Breaking News

ಚಾಮರಾಜನಗರದ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ:ಪುನೀತ್ ರಾಜ್‍ಕುಮಾರ್

ಚಾಮರಾಜನಗರ: ನಮ್ಮ ಚಾಮರಾಜನಗರದ ರಾಯಭಾರಿಯಾಗಲು ನಾನು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹೇಳಿದ್ದಾರೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಸಿದ್ಧಪಡಿಸಿರುವ ನಾಲ್ಕು ನಿಮಿಷದ ವಿಡಿಯೋವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ಈ ವೇಳೆ ವಚ್ರ್ಯುವಲ್ ಮೂಲಕ ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್, ಚಾಮರಾಜನಗರದ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ. ನನ್ನ ತಂದೆಯ ಊರಾದ ಚಾಮರಾಜನಗರದ ಅಭಿವೃದ್ಧಿಗೆ ಸದಾ ಸಿದ್ಧ. ನಮ್ಮ …

Read More »

ಅದ್ಯಕ್ಷ ಉಪಾದ್ಯಕ್ಷರ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು ಅದ್ಯಕ್ಷ ಉಪಾದ್ಯಕ್ಷರ ಹೆಸರುಗಳನ್ನು ಇವತ್ತೇ ರಾತ್ರಿ ಹತ್ತು ಗಂಟೆಗೆ ಡಿಕ್ಲೇರ್ ಮಾಡುತ್ತೇವೆ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು ಅದ್ಯಕ್ಷ ಉಪಾದ್ಯಕ್ಷರ ಹೆಸರುಗಳನ್ನು ಇವತ್ತೇ ರಾತ್ರಿ ಹತ್ತು ಗಂಟೆಗೆ ಡಿಕ್ಲೇರ್ ಮಾಡುತ್ತೇವೆ ಎಂದು ಕೆಏಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಸಂಕಮ್ ಹೊಟೇಲ್ ನಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಅದ್ಯಕ್ಷ ಆಗಬೇಕೆನ್ನುವ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ ಲಕ್ಷ್ಮಣ ಸವದಿ,ರಮೇಶ್ ಜಾರಕಿಹೊಳಿ,ಮತ್ತು ಉಮೇಶ್ ಕತ್ತಿ ಮತ್ತು ಇನ್ನುಳಿದ …

Read More »

ರಮೇಶ್ ಕತ್ತಿ ನನ್ನ ಬಾಲ್ಯದ ಸ್ನೇಹಿತ ಅವರೇ ಅದ್ಯಕ್ಷ ರಾಗಬೇಕು:ರಮೇಶ್ ಜಾರಕಿಹೊಳಿ

ಬೆಳಗಾವಿ-ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಾಳೆ ನಡೆಯಲಿದ್ದು ಈಗ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕೆಲವು ನಿರ್ದೇಶಕರು ರಮೇಶ್ ಕತ್ತಿ ಅವರ ಪುನರಾಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಹಿರಿಯ ನಾಯಕರು, ಬೆಳಗಾವಿಯಲ್ಲಿ ಸಭೆ ಸೇರಿದ್ದಾರೆ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ‌, ಮಾಜಿ ಸಚಿವ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ‌, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಸಂಸದ …

Read More »

ಹೊಸಗುಡ್ಡದಹಳ್ಳಿ ದುರಂತದದಲ್ಲಿ ಬೆಂಕಿಗಾಹುತಿಯಾಯ್ತು ಬದುಕು..!

# ಶಿವಣ್ಣ ಬೆಂಗಳೂರು, ನ.13- ಸುಟ್ಟು ಹೋದ ಕಟ್ಟಡ, ಬೆಂದು ಹೋದ ಮರ, ಸುಟ್ಟು ಕರಕಲಾಗಿರುವ ವಸ್ತುಗಳು, ಬೆಂಕಿಗೆ ಆಹುತಿಯಾಗಿರುವ ಬ್ಯಾರೆಲ್‍ಗಳು… ಇವು ಕಂಡುಬಂದಿದ್ದು ನಗರದ ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ. ನವೆಂಬರ್ 10ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ರಾಸಾಯನಿಕ ವಸ್ತುಗಳನ್ನು ಸಂಗ್ರಹಿಸಿದ್ದ ಗೋದಾಮಿ ನಲ್ಲಿ ಬೆಂಕಿ ಕಾಣಿಸಿಕೊಂಡು ಗೋದಾಮಿನಲ್ಲಿದ್ದ ರಾಸಾಯನಿಕ ವಸ್ತುಗಳೆಲ್ಲ ಆಹುತಿಯಾಗಿರುವುದಲ್ಲದೆ ಇಡೀ ಕಟ್ಟಡವನ್ನೇ ಆಪೋಷನ ತೆಗೆದು ಕೊಂಡಿದೆ. ಕಟ್ಟಡದ ಮುಂದಿದ್ದ ಎರಡು ವಿದ್ಯುತ್ ಕಂಬದ ಕೇಬಲ್‍ಗಳು, ಕಾರು, …

Read More »

ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆಗೂ ಅಭಿಮಾನಿ ಸಂಸ್ಥೆಗೂ ಅವಿನಾಭಾವ ಸಂಬಂಧ.

ಬೆಂಗಳೂರು, ನ.13- ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆಗೂ ಅಭಿಮಾನಿ ಸಂಸ್ಥೆಗೂ ಅವಿನಾಭಾವ ಸಂಬಂಧ. ಉಪನ್ಯಾಸಕ ವೃತ್ತಿ ತೊರೆದು 1987ರಲ್ಲಿ ಬೆಂಗಳೂರಿಗೆ ಬಂದಾಗ ಅವರು ಡಾ.ರಾಜ್‍ಕುಮಾರ್ ರಸ್ತೆಯ ಅಭಿಮಾನಿ ಪ್ರಕಾಶನದ ಬಳಿ ನಿಂತಿದ್ದರು. ಇಲ್ಲಿ ತಮ್ಮ ಪತ್ರಕರ್ತ ಜೀವನ ವೃತ್ತಿ ಕಟ್ಟಿಕೊಳ್ಳಲು ಭಾರೀ ಕನಸು ಕಂಡಿದ್ದರು. ಆಗ ಅಭಿಮಾನಿ ಪ್ರಕಾಶನ ವತಿಯಿಂದ ಹೊರತರಲಾಗುತ್ತಿದ್ದ ಪೊಲೀಸ್ ಫೈಲ್ ಹಾಗೂ ಹಲವು ನಿಯತಾಲಿಕೆಗಳು ಪ್ರಕಟಗೊಳ್ಳುತ್ತಿದ್ದವು. ಇಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರೊಬ್ಬರು ರವಿಬೆಳಗೆರೆ …

Read More »

KAS ಅಧಿಕಾರಿ ಸುಧಾಗೆ ಮುಂದಿದೆ ಮಾರಿಹಬ್ಬ..!

ಬೆಂಗಳೂರು,ನ.13- ಅಕ್ರಮ ಆಸ್ತಿ ಸಂಪಾದನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಿಂದ ದಾಳಿಗೊಳಗಾಗಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿ ಬಿ.ಸುಧಾಗೆ ಇನ್ನಷ್ಟು ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಎಸಿಬಿ ದಾಳಿ ಸಂದರ್ಭದಲ್ಲಿ ಸುಮಾರು ನೂರು ಕೋಟಿಗೂ ಅಧಿಕ ಆಕ್ರಮ ಆಸ್ತಿ ಸಂಪಾದನೆ ಮಾಡಿರುವುದು ಕಂಡು ಬಂದಿರುವ ಕಾರಣ ಜಾರಿ ನಿದೇರ್ಶನಾಲಯ(ಇಡಿ) ಹಾಗೂ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಐದು ಕೋಟಿಗೂ ಹೆಚ್ಚಿನ ಭ್ರಷ್ಟಾಚಾರದ …

Read More »

ಇಂಜಿನ್‍ನಲ್ಲಿ ತಾಂತ್ರಿಕ ದೋಷಎಪಿಎಂಸಿ ಮೈದಾನದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ. ಎನ್-741 ಹೆಲಿಕಾಪ್ಟರ್,

ಕಾರವಾರ: ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಭಾರತೀಯ ನೌಕಾದಳಕ್ಕೆ ಸೇರಿದ ಎನ್-741 ಹೆಲಿಕಾಪ್ಟರ್, ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದ ಎಪಿಎಂಸಿ ಮೈದಾನದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ. ಬೆಂಗಳೂರಿನಿಂದ ಗೋವಾದತ್ತ ಹೆಲಿಕಾಪ್ಟರ್ ತೆರಳುತಿದ್ದು, ಈ ವೇಳೆ ಇಂಜಿನ್‍ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ನಂತರ ಪೈಲೆಟ್ ದಾಸನಕೊಪ್ಪದ ಮೈದಾನದಲ್ಲಿ ಜೀವರಕ್ಷಣೆಗಾಗಿ ಹೆಲಿಕಾಪ್ಟರ್ ಅನ್ನು ಕೆಳಗಿಳಿಸಿದ್ದಾರೆ. ಇಬ್ಬರು ಪೈಲಟ್, ಓರ್ವ ಕಮಾಂಡಿಂಗ್ ಆಫೀಸರ್ ಈ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಪೈಲೆಟ್ ಸಮಯ …

Read More »

ದೆಹಲಿಯಲ್ಲಾಗಿರುವ ಬೆಳವಣಿಗೆಗಳB.S.Y.ಗೆ ಮಾಹಿತಿ ನೀಡಿದಶಂಕರಗೌಡ ಪಾಟೀಲ್

ಬೆಳಗಾವಿ – ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳ ಕುರಿತು ದೆಹಲಿಯಲ್ಲಾಗಿರುವ ಬೆಳವಣಿಗೆಗಳ ಮಾಹಿತಿ ನೀಡಿದರು.             ಕಳೆದ ನಾಲ್ಕು ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದ ಅವರು, ಹಲವು ಕೇಂದ್ರದ ಮಂತ್ರಿಗಳ ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಹಾಗೂ ಯೋಜನೆಗಳ ಬಗ್ಗೆ ಚರ್ಚಿಸಿದ ನಂತರ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ರಾಜ್ಯದ …

Read More »

ಶಾಸಕರ ಸಭೆಗಳು ನಡೆಯುತ್ತೇಲೆ ಇರುತ್ತೇವೆ. ಅದಕ್ಕೂ ಸಚಿವ ಸಂಪುಟಕ್ಕೆ ಯಾವುದೇ ಸಂಬಂಧ ಇಲ್ಲ:ಪ್ರಹ್ಲಾದ್ ಜೋಶಿ

ಧಾರವಾಡ: ಶಾಸಕರ ಸಭೆಗಳು ನಡೆಯುತ್ತೇಲೆ ಇರುತ್ತೇವೆ. ಅದಕ್ಕೂ ಸಚಿವ ಸಂಪುಟಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು, ಸಚಿವ ಸಂಪುಟ ವಿಸ್ತರಣೆ ಸಿಎಂ ಮತ್ತು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಹಿಂದೆಯೂ ಹುಬ್ಬಳ್ಳಿಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಸಭೆ ಆಗಿತ್ತು. ಅದನ್ನೂ ಸಹ ರಹಸ್ಯ ಸಹ ಎಂದಿದ್ದರು. ಅದೆಲ್ಲ ಏನೂ ಇರುವುದೇ ಇಲ್ಲ …

Read More »

ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ-

ಬೆಂಗಳೂರು: ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನಡೆಯಿತು. ಮಗ ಕರ್ಣ ಮತ್ತು ಹಿಮವಂತ್, ರವಿ ಬೆಳಗೆರೆ ಅವರ ಅಂತಿಮ ಕಾರ್ಯವನ್ನು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿಸಿದರು. ತೇಗ, ಮಾವು, ಸಾರ್ವೆ ಸೇರಿದಂತೆ ವಿವಿಧ 1 ಟನ್‍ಗೂ ಹೆಚ್ಚು ಮರದ ಸೌದೆಗಳನ್ನು ಅಂತ್ಯ ಸಂಸ್ಕಾರದ ವೇಳೆ ಬಳಕೆ ಮಾಡಲಾಗಿತ್ತು. ಶಿವರಾಂ ಅವರು ಅಂತ್ಯ ಸಂಸ್ಕಾರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ನಿನ್ನೆ ಮಧ್ಯರಾತ್ರಿ ಸುಮಾರು 12.15ರ …

Read More »