Breaking News

ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಬೆಳಗಾವಿ ಜಿಲ್ಲೆ ಒಂದು ಇಲ್ಲ

ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 520ಕ್ಕೇರಿದೆ. ಕಲಬುರ್ಗಿಯಲ್ಲಿ ಇಂದು 6 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ಹಾಗೂ ಗದಗದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಬೇರೆ ಯಾವುದೇ ಭಾಗಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಕಲಬುರ್ಗಿಯಲ್ಲಿ ಪತ್ತೆಯಾಗಿರುವ 6 ಪ್ರಕರಣಗಳಲ್ಲಿ ನಾಲ್ವರು ಮಹಿಳೆಯರು. 22 ಹಾಗೂ 28 ವರ್ಷದ ಯುವತಿಯರಿಗೂ ಸೋಂಕು ತಗುಲಿದೆ.

Read More »

ಕೊರೊನಾ ಲಾಕ್ ಡೌನ್ ನಡುವೆಯೂ ಅಕ್ರವಾಗಿ ವಿದೇಶಿ ಮದ್ಯ ಮಾರಾಟ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಡುವೆಯೂ ಅಕ್ರವಾಗಿ ವಿದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೋಹನ್ ಬತೇಜ್ (31) ಬಂಧಿತ ಆರೋಪಿ. ಬಂಧಿತನಿಂದ ವಿವಿಧ ಬ್ರಾಂಡ್‍ನ 22 ಲೀಟರ್ ವಿದೇಶಿ ಮದ್ಯ, ಐ10 ಕಾರು, ಒಂದು ಐ ಪೋನ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ರೋಹನ್ ಐ10 ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ವಿದೇಶಿ ಮದ್ಯ ಮಾರುತ್ತಿದ್ದ. ಈ ಕುರಿತು ಸಿಸಿಬಿ …

Read More »

ಪಾದರಾಯನಪುರ ಗಲಾಟೆ ಪ್ರಕರಣ: ಪ್ರಮುಖ ಆರೋಪಿ ಇರ್ಫಾನ್ ಬಂಧನ………

ಬೆಂಗಳೂರು(ಏ. 27): ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಪಾದರಾಯನಪುರ ಗಲಾಟೆ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಕೊನೆಗೂ ಖಾಕಿ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾಡುಗೊಂಡನ ಹಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ ಇರ್ಫಾನ್​ನನ್ನು ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಮತ್ತು ಜೆಜೆ ನಗರ ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇರ್ಫಾನ್​ನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಪಾದರಾಯನಪುರದಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್​ಗೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮತ್ತು ಗಲಾಟೆ …

Read More »

ಬೆಳಗಾವಿಯಲ್ಲಿ ಕೋಬ್ರಾ ಕಮಾಂಡೋ ಮೇಲೆ ಪೊಲೀಸರ ಹಲ್ಲೆ ಪ್ರಕರಣ: ತನಿಖೆಗೆ ಸಿಅರ್​ಪಿಎಫ್ ಒತ್ತಾಯ

ಬೆಂಗಳೂರು(ಏ. 27): ನಾಲ್ಕು ದಿನಗಳ ಹಿಂದೆ ಬೆಳಗಾವಿಯ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಆರ್​ಪಿಎಫ್​ನ CoBRA ವಿಭಾಗದ ಕಮ್ಯಾಂಡೋ ಕ್ಯಾಪ್ಟನ್ ಸಚಿನ್ ಸಾವಂತ್ ಮೇಲೆ ಸ್ಥಳೀಯ ಪೊಲೀಸರು ಹಲ್ಲೆ ಎಸಗಿದ ಘಟನೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯನ್ನು ತನಿಖೆಗೊಳಪಡಿಸಬೇಕೆಂದು ಸಿಆರ್​ಪಿಎಫ್​ನ ಎಡಿಜಿಪಿ ಸಂಜಯ್ ಅರೋರಾ ಅವರು ಒತ್ತಾಯ ಮಾಡಿದ್ಧಾರೆ. ಈ ಸಂಬಂಧ, ಕರ್ನಾಟಕ ರಾಜ್ಯ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಅರೋರಾ ಪತ್ರ ಬರೆದು …

Read More »

ಹಾವೇರಿ :ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್…….

ಹಾವೇರಿ(ಏ. 28): ಒಣ ಮೆಣಸಿನಕಾಯಿ ಕಣಜ ಎಂದೇ ವಿಶ್ವಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಆಗಿದೆ. ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ತನ್ನದೇ ಆದ ಇತಿಹಾಸ ಹೊಂದಿದ್ದು ಮುಂಬೈ ಸರ್ಕಾರದ ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ 1948ರಲ್ಲಿ ಈ ಮಾರುಕಟ್ಟೆ ಸ್ಥಾಪನೆಯಾಗಿದೆ. ಅಂದಿನಿಂದ ಇಂದಿನವರೆಗೂ ಇಷ್ಟು ದಿನಗಳ ಕಾಲ ಈ ಮಾರುಕಟ್ಟೆ ಬಂದ್ ಆಗಿರುವ ದಾಖಲೆ ಇರಲಿಲ್ಲ. ಆದರೆ ಕೊರೋನಾದಿಂದಾಗಿ ಮಾರ್ಚ್19 ರಿಂದ ಸಂಪೂರ್ಣ ಲಾಕ್ ಮಾಡಲಾಗಿದೆ. …

Read More »

ರಾಮನಗರಕ್ಕೆ ಹಸಿರು ವಲಯದ ಜಿಲ್ಲೆಗಳಿಗೆ ನೀಡಿರುವ ವಿನಾಯಿತಿ ಘೋಷಿಸಬೇಕೆಂದು ಸರ್ಕಾರಕ್ಕೆ ಎಚ್​ಡಿಕೆ ಆಗ್ರಹ

ಬೆಂಗಳೂರು: ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದ್ದವರ ಪೈಕಿ ಇಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ 68 ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಿ, ಅವರ ಗಂಟಲು ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಗೆ ಕಳುಹಿಸಿದ್ದ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ಸಮಾಧಾನ ವ್ಯಕ್ತಪಡಿಸಿ, ರಾಮನಗರಕ್ಕೆ ಹಸಿರು ಜಿಲ್ಲೆಗೆ ನೀಡಿರುವ ರಿಯಾಯಿತಿಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.  ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ರಾಜಧಾನಿಯ …

Read More »

ರಸ್ತೆ ಮಧ್ಯೆಯೇ ಯುವತಿಯನ್ನು ಎಳೆದಾಡಿದ್ದ ಬೆಂಗಳೂರಿನ ಕಾಮುಕ ಬಂಧನ………..

ಬೆಂಗಳೂರು (ಏ. 28): ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯ ಮೈ ಮುಟ್ಟಿ, ಕೈ ಕಚ್ಚಿ ಪರಾರಿಯಾಗಿದ್ದ ಬೆಂಗಳೂರಿನ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಆದಮೇಲೆ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಆದರೆ, ಮನೆಯಿಂದ ಹೊರಗೆ ಹೋಗಲೂ ಯೋಚಿಸಬೇಕಾದ ಪರಿಸ್ಥಿತಿ ಇದ್ದರೂ ಅಪರಾಧ ಪ್ರಕರಣಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇದಕ್ಕೆ ಉದಾಹರಣೆಯೆಂಬಂತೆ ಲಾಕ್​ಡೌನ್​​ ಬಳಿಕವೂ ಅಲ್ಲಲ್ಲಿ ಕೊಲೆ, ಅತ್ಯಾಚಾರ, ಸುಲಿಗೆ, ವಂಚನೆ, ಅಪಹರಣದ ಪ್ರಕರಣಗಳು …

Read More »

COVID-19: ಕೊರೋನಾ ಬಳಿಕ ಡಿಸ್ಚಾರ್ಜ್​ ಆದವರಿಗೆ ತಲಾ 2 ಸಾವಿರ ಘೋಷಿಸಿದ ಆಂಧ್ರ ಸರ್ಕಾರ

ಅಮರಾವತಿ(ಏ.28): ಕೊರೋನಾ ವೈರಸ್​ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರಿಗೆ ತಲಾ 2 ಸಾವಿರ ನೀಡುವುದಾಗಿ ಮುಖ್ಯಮಂತ್ರಿ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಘೋಷಿಸಿದೆ. ಸೋಂಕಿತರು ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಾದ ಆಹಾರ ಖರೀದಿಸಲು ಈ ಹಣ ನೀಡಲಾಗುವುದು ಎಂದು ಜಗನ್​​ ಹೊರಡಿಸಿದ ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ. ಆಂಧ್ರಪ್ರದೇಶದಲ್ಲಿ ನಿನ್ನೆಯವರೆಗೂ 1177 ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 235 ಜನರು ಗುಣಮುಖರಾಗಿದ್ದಾರೆ. ಈವರೆಗೂ 31 ಜನರು ರಾಜ್ಯದಲ್ಲಿ …

Read More »

ಹೋಮ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲೇಬೇಕಂತೆ ಇಲ್ಲವಾದಲ್ಲಿ ಅವರ ಪತ್ನಿ ಗುರ್ ಅಂತಾರಂತೆ.

ಬೆಂಗಳೂರು: ಉಗ್ರಂ ಖ್ಯಾತಿಯ ಶ್ರೀಮುರಳಿ ಮನೆಯಲ್ಲಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಹೋಮ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲೇಬೇಕಂತೆ ಇಲ್ಲವಾದಲ್ಲಿ ಅವರ ಪತ್ನಿ ಗುರ್ ಅಂತಾರಂತೆ. ಲಾಕ್‍ಡೌನ್ ದಿನಗಳು ಹಲವು ನಟ, ನಟಿಯರಿಗೆ ಸಂತಸ ನೀಡಿದ್ದು, ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಬಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ಬಹುತೇಕ ನಟರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಹತ್ತು ಹಲವು, ಚಟುವಟಿಕೆಗಳು ತಮ್ಮ ಹವ್ಯಾಸಗಳು ಸೇರಿದಂತೆ ಮನೆಗೆಲಸಗಳನ್ನೂ ಅಷ್ಟೇ …

Read More »

ಕೋವಿಡ್-19 ಪರೀಕ್ಷಿಸಲು ಚೀನಾದಿಂದ ಖರೀದಿಸಿದ್ದ ಕಿಟ್ ಗಳು ಕಳಪೆ: (ಐಸಿಎಂಆರ್) ಸೂಚಿಸಿದೆ.

ನವದೆಹಲಿ: ಕೋವಿಡ್-19 ಪರೀಕ್ಷಿಸಲು ಚೀನಾದಿಂದ ಖರೀದಿಸಿದ್ದ ಕಿಟ್ ಗಳು ಕಳಪೆಯಾಗಿದ್ದು ಅವುಗಳನ್ನು ಬಳಸಬೇಡಿ ಎಂದು ರಾಜ್ಯ ಸರ್ಕಾರಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಸೂಚಿಸಿದೆ. ಕಳಪೆ ಗುಣಮಟ್ಟದ ಕಿಟ್ ಗಳ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ಪೂರೈಸಿದ ಕಂಪನಿಗಳಿಗೆ ವಾಪಸ್ ಕಳುಹಿಸಿ ಎಂದು ಪತ್ರ ಬರೆದಿದೆ. ಚೀನಾದ ಗುವಾಂಗ್ಜೌ ವೊಂಡ್‍ಪೋ ಬಯೋಟೆಕ್ ಮತ್ತು ಲಿವ್ ಝೊನ್ ಡಯಾಗ್ನಿಸ್ಟಿಕ್ಸ್ ಕಂಪನಿಗಳಿಂದ ಭಾರತದ 5 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ …

Read More »