Breaking News

ಅಧಿಕಾರಿಗಳು ಕುಳಿತುಕೊಳ್ಳುವ ಕುರ್ಚಿ ಕಾಲಿಗೆ ಪಾದ ಪೂಜೆ ಮಾಡಿ ವಿನೂತನವಾಗಿ ಪ್ರತಿಭಟನೆ

ಜಮಖಂಡಿ:   ಭ್ರಷ್ಟಚಾರ ವಿರೋಧಿಸಿ ನಗರದ ಸಹಾಯಕ  ಪ್ರದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ವ್ಯಕ್ತಿಯೊಬ್ಬ ಅಧಿಕಾರಿಗಳು ಕುಳಿತುಕೊಳ್ಳುವ ಕುರ್ಚಿ ಕಾಲಿಗೆ ಪಾದ ಪೂಜೆ ಮಾಡಿ ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ  ಬುಧವಾರ ನಡೆದಿದೆ. ನಗರದ ಆರ್​ಟಿಒ ಕಚೇರಿಯಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ  ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಸಂತೋಷ ಚನಾಳ ಎಂಬಾತ ಹಲವು ಬಾರಿ ಪ್ರತಿಭಟನೆ ನಡೆಸಿದ್ದ,  ಆತನ ಹೋರಾಟಕ್ಕೆ ಫಲ ಸಿಗದರಿಂದ ವಿನೂತನವಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಗಮನ …

Read More »

ಲಾಕ್‍ಡೌನ್ ಟೈಮಲ್ಲಿ ಎಣ್ಣೆ ವಿಚಾರಕ್ಕೆ ಬಿತ್ತು ಸ್ನೇಹಿತನ ಹೆಣ..!

ಬೆಂಗಳೂರು,ಜು.15-ಲಾಕ್‍ಡೌನ್ ಸಂದರ್ಭದಲ್ಲಿ ಮದ್ಯ ತರುವ ವಿಚಾರದಲ್ಲಿ ಸ್ನೇಹಿತರ ನಡುವೆ ಜಗಳ ನಡೆದು ಒಬ್ಬನ ಕೊಲೆಯಾಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತರಿಂದಲೇ ಕೊಲೆಯಾದವನನ್ನು ಪಂತರಪಾಳ್ಯ ಅಂಬೇಡ್ಕರ್ ಸ್ಲಂ ನಿವಾಸಿ ಶಶಿ(22) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಲಾಕ್‍ಡೌನ್ ಜಾರಿಯಾದ ಸಂದರ್ಭದಲ್ಲಿ ಶಶಿ ಮತ್ತು ಸ್ನೇಹಿತರಾದ ವಿನೋದ್ ಹಾಗೂ ವೇಲು ಅವರುಗಳು ಮದ್ಯ ತರುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು.ಗಲಾಟೆ ಸಂದರ್ಭದಲ್ಲಿ ಶಶಿ, ವಿನೋದ್ ಮೇಲೆ ಹಲ್ಲೆ …

Read More »

ಮಗನೊಬ್ಬ ತನ್ನ ತಾಯಿಯ ನೆನಪಿಗಾಗಿ ಸ್ವಂತ ಖರ್ಚಿನಲ್ಲಿ ಇಡೀ ಪಟ್ಟಣಕ್ಕೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿದ್ದಾನೆ.

ಯಾದಗಿರಿ: ಜಿಲ್ಲೆಯಲ್ಲಿ ಮಗನೊಬ್ಬ ತನ್ನ ತಾಯಿಯ ನೆನಪಿಗಾಗಿ ಸ್ವಂತ ಖರ್ಚಿನಲ್ಲಿ ಇಡೀ ಪಟ್ಟಣಕ್ಕೆ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿದ್ದಾನೆ. ಜಿಲ್ಲೆ ಈಗ ಕೊರೊನಾ ಹಾಟಸ್ಪಾಟ್ ಆಗಿದೆ. ಬರೋಬ್ಬರಿ ನಾಲ್ಕು ದಿನಗಳಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ. ಇದರಿಂದಾಗಿ ಜಿಲ್ಲೆಯ ಜನ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಈ ವೇಳೆ ಜಿಲ್ಲೆಯ ಶಹಪುರದ ವ್ಯಕ್ತಿಯೊಬ್ಬ ಕೊರೊನಾ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದ್ದಾರೆ.   ಪಟ್ಟಣದ ಗುರು ಮಣಿಕಂಠ ಸ್ವಯಂ ಪ್ರೇರಿತವಾಗಿ ತನ್ನ ಸ್ವಂತ ಖರ್ಚಿನಲ್ಲಿ …

Read More »

ಸುಮಾರು 10 ಸಾವಿರ ಕುಟುಂಬಗಳಿಗೆ 16 ದಿನಗಳವರೆಗೆ ದಿನಬಿಟ್ಟು ದಿನ ಹಾಲಿನ ಪೂರೈಕೆಯಾಗಲಿದೆ:ಗಣೇಶ ಹುಕ್ಕೇರಿ

ಚಿಕ್ಕೋಡಿ – ಚಿಕ್ಕೋಡಿ ಪಟ್ಟಣದಲ್ಲಿ ಕೊರೋನಾ ಈವರೆಗೂ ಕಾಣಿಸದಿದ್ದರೂ, ಮುಂದಿನ ದಿನಗಳಲ್ಲಿ ಅಪಾಯ ಬರಬಾರದೆನ್ನುವ ಕಾರಣಕ್ಕೆ ಸ್ವಯಂ ಲಾಕ್ ಡೌನ್ ಘೋಷಿಸಿಕೊಳ್ಳಲಾಗಿದೆ. ಪಟ್ಟಣದಲ್ಲಿ 8 ದಿನಗಳ ಕಾಲ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸ್ವಯಂ ಲಾಕ್ ಡೌನ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಪ್ರಕಾಶ  ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ತಾವೇ  ಸ್ವತಃ  8 ದಿನಗಳ ಕಾಲ ಪಟ್ಟಣದ ಎಲ್ಲ ಜನರಿಗೂ ಹಾಲನ್ನು ಉಚಿತವಾಗಿ …

Read More »

ಭಗವಂತ ಒಬ್ಬನೇ ನಮ್ಮನ್ನ ಕೊರೊನಾದಿಂದ ಕಾಪಾಡಬೇಕು’: ಸಚಿವ ಶ್ರೀರಾಮುಲು

ಚಿತ್ರದುರ್ಗ: ಇಂದು ಭಗವಂತ ಒಬ್ಬನೇ ಕೊರೊನಾ ಸೋಂಕಿನಿಂದ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಬರಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು, ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕೊರೊನಾ ಬಡವ, ಶ್ರೀಮಂತ, ಶಾಸಕರು, ಪೊಲೀಸರು, ವೈದ್ಯರು ಮತ್ತು ರಾಜಕಾರಣಿಗಳು ಎಂದು ಬರುತ್ತಿಲ್ಲ. ಇನ್ನೂ 2 ತಿಂಗಳಲ್ಲಿ ಇನ್ನಷ್ಟು ಸೋಂಕು ಹೆಚ್ಚುವ ಸಾಧ್ಯತೆ ಶೇ.100 ರಷ್ಟಿದೆ. …

Read More »

ಬೆಳಗಾವಿ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 17ಕ್ಕೇ……………

ಬೆಳಗಾವಿ – ಕೊರೋನಾದಿಂದ ಬೆಳಗಾವಿ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 17ಕ್ಕೇರಿದೆ. ಇಂದು ಮೂವರು ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ. ಇಂದು ಬೆಳಗಾವಿ ನಗರದಲ್ಲಿ ಇಬ್ಬರು ಹಾಗೂ ಅಥಣಿಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ನಗರದ ಕುಮಾರಸ್ವಾಮಿ ಬಡಾವಣೆ  ಮತ್ತು ಆನಗೋಳದಲ್ಲಿ ಒಬ್ಬೊಬ್ಬರು ಸಾವಿಗೀಡಾಗಿದ್ದಾರೆ. ನಿನ್ನೆ 64 ಜನರಿಗೆ ಸೋಂಕು ಪತ್ತಯಾಗಿರುವುದು ಸೇರಿ ಜಿಲ್ಲೆಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 561ಕ್ಕೇರಿದೆ. 366 ಜನರು ಗುಣಮುಖರಾಗಿದ್ದು, ಇನ್ನೂ 185 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ:ರಮೇಶ ಜಾರಕಿಹೊಳಿ

ಗೋಕಾಕ: ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದು, ರಾಜ್ಯದ ನೀರಾವರಿ ಯೋಜನೆಗಳ ಕುರಿತು ಕೇಂದ್ರದ ಜಲಶಕ್ತಿ ಸಚಿವರು, ಕಾನೂನು ತಜ್ಞರು ಹಾಗೂ ತಾಂತ್ರಿಕ ಸಲಹೆಗಾರರನ್ನು ಭೇಟಿಯಾಗಿ ಸಭೆ ನಡೆಸಲಿದ್ದಾರೆ. ದಿ. ೧೪ ರಂದು ಸಂಜೆ೪.೪೫ ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ದು, ದಿ.೧೫ರಂದು ಕೃಷ್ಣ ಜಲ ನ್ಯಾಯಾಧಿಕರಣ ಹಾಗೂ ಮೇಕೆದಾಟು ಸಮತೋಲನ ಜಲಾಶಯದ ಬಗ್ಗೆ ಕೇಂದ್ರದ ಜಲಶಕ್ತಿ ಸಚಿವರು, …

Read More »

ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕಸಾವು

ಶಿವಮೊಗ್ಗ : ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಕರ್ತವ್ಯಕ್ಕೆ ಹಾಜರಾಗಿದ್ದ ಶಿಕ್ಷಕರೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟ ಶಿಕ್ಷಕ ಭದ್ರಾವತಿಯ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಕುಮಾರ್ (48) ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕ ಕುಮಾರ್ ಶಿವಮೊಗ್ಗದ ಎನ್.ಇ.ಎಸ್ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಸಮಾಜ ವಿಜ್ಞಾನ ವಿಷಯದ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು. ಇಂದು ಮಧ್ಯಾಹ್ನದವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದ ಮೃತ ಶಿಕ್ಷಕ ಕುಮಾರ್ ಮಧ್ಯಾಹ್ನ ಊಟಕ್ಕೆ ತೆರಳಲು ಹೊರಡುತ್ತಿದ್ದರು. ಈ ವೇಳೆ …

Read More »

ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು

ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಸದ್ಯ ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದಿದ್ದಾರೆ. ಅಲ್ಲದೆ ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ …

Read More »

ಹುಬ್ಬಳ್ಳಿಯಲ್ಲಿ ಕೊರೊನಾಗೆ ಎಎಸ್‍ಐ ಬಲಿ………..

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೊನಾಗೆ ಹುಬ್ಬಳ್ಳಿಯಲ್ಲಿ ಕೊರೊನಾ ವಾರಿಯರ್ ಬಲಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಎಎಸ್‍ಐಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದ ಎಎಸ್‌ಐ ಕಳೆದ ಒಂದು ವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜುಲೈ 1ರಿಂದ 7ರವರೆಗೆ ಹೋಂ ಕ್ವಾರಂಟೈನ್‍ನಲ್ಲಿ ಇದ್ದ ಎಎಸ್‍ಐಗೆ 7ರಂದು ಕೊರೊನಾ …

Read More »