ಬಾಗಲಕೋಟೆ: ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷೆ ಆಕಾಂಕ್ಷಿಯಾಗಿ ಮಹಿಳೆಯನ್ನು ಶಾಸಕ ಸಿದ್ದು ಸವದಿ ಎಳೆದಾಡಿರುವ ಘಟನೆ ನಡೆದಿದೆ. ಶಾಸಕರ ಅಸಭ್ಯ ವರ್ತನೆ ವಿಡಿಯೋ ವೈರಲ್ ಆಗಿದೆ. ಮಹಲಿಂಗಪುರ ಪುರಸಭೆ ಅಧ್ಯಕ್ಷೆ ಗಾದಿ ವಿಚಾರವಾಗಿ ಗಲಾಟೆ ನಡೆದಿದ್ದು, ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾಗಿರುವ ಸವಿತಾ ಹುರಕಡ್ಲಿ ಎಂಬ ಮಹಿಳೆಯೊಂದಿಗೆ ಶಾಸಕ ಸವದಿ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ನೆಲಕ್ಕೆ ನೂಕಿರುವ ವಿಡಿಯೋ ವೈರಲ್ ಆಗಿದೆ. ಮಹಾಲಿಂಗಪುರ ಪುರಸಭೆಯ ಒಟ್ಟು 23 ಸದಸ್ಯರಲ್ಲಿ …
Read More »ಬಿಹಾರದಲ್ಲಿ ಎನ್ಡಿಎ ಗೆಲುವಿಗೆ ಕಾರಣವೇನು..?- ಮಹಾಘಟ್ಬಂಧನ್ ಎಡವಿದ್ದೆಲ್ಲಿ..?
ಪಾಟ್ನಾ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೊರಬಿದ್ದಿದೆ. ಕೊನೆಗೂ ಎನ್ಡಿಎ ಮೈತ್ರಿಕೂಟ ಭರ್ಜರಿಯಾಗಿ ಗೆಲುವು ಕಂಡಿತು. ಎನ್ಡಿಎ ಗೆಲುವಿಗೆ ಕಾರಣ…? ಪ್ರಧಾನಿ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಜೋಡಿಗೆ ಜನ ಮನ್ನಣೆ ನೀಡಿದ್ದಾರೆ. ಮೋದಿ ರ್ಯಾಲಿಗಳು ದೊಡ್ಡ ಪ್ರಮಾಣದಲ್ಲಿ ಸಕ್ಸಸ್ ಕಂಡಿವೆ. ಕೊರೊನಾ ವ್ಯಾಕ್ಸಿನ್ ಫ್ರೀ ಹಂಚುವ ಭರವಸೆಗೆ ಜನ ಬೆಂಬಲ ಸೂಚಿಸಿದ್ದಾರೆ. ಆರ್ಜೆಡಿಗೆ ಅಧಿಕಾರ ಕೊಟ್ಟರೆ ಜಂಗಲ್ …
Read More »ಬೆಂಕಿ ದುರಂತಕ್ಕೆ ಸಂಬಂಧಪಟ್ಟಂತೆ 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ ಸಂಭವಿಸಿದೆ
ಬೆಂಗಳೂರು: ಸಿಲಿಕಾನ್ ಸಿಟಿಯ ಹೊಸಗುಡ್ಡದಹಳ್ಳಿಯಲ್ಲಿ ಬೆಂಕಿ ದುರಂತಕ್ಕೆ ಸಂಬಂಧಪಟ್ಟಂತೆ 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದು 20 ಗಂಟೆ ಕಳೆದರೂ ಇನ್ನೂ ಬೆಂಕಿ ಜ್ವಾಲೆ ಆರಿಲ್ಲ. ಕೆಮಿಕಲ್ ಫ್ಯಾಕ್ಟರಿಯಿಂದ ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಿಮ್ಮುತ್ತಿದೆ. ಅಕ್ಕ-ಪಕ್ಕದ ಕಟ್ಟಡಗಳಿಗೆ ಬೆಂಕಿ ಆವರಿಸುವ ಆತಂಕ ಸ್ಥಳೀಯರಿಗೆ ಉಂಟಾಗಿದೆ. ಗೋಡೌನ್ ಅಕ್ಕಪಕ್ಕದ ಹತ್ತಾರು ಮನೆಗಳ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಶಿಫ್ಟ್ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ಅವಘಡ …
Read More »ಬಿಜೆಪಿ ಗೆಲುವನ್ನ ವ್ಯಾಖ್ಯಾನಿಸಿದ H.D.K.
ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಳೆದ 15 ತಿಂಗಳಲ್ಲಿ ಜನತೆಗೆ ಸ್ಪಂದಿಸಿದ ಕಾಳಜಿಗೆ ಉಪಚುನಾವಣೆ ಫಲಿತಾಂಶ ಗೆಲುವು ತಂದು ಕೊಟ್ಟಿರಬಹುದು ಎಂದಷ್ಟೇ ವ್ಯಾಖ್ಯಾನ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ 2 ಉಪ ಚುನಾವಣೆಗಳ ಫಲಿತಾಂಶವನ್ನು ನಮ್ಮ ಪಕ್ಷ ಸಮಚಿತ್ತ ಭಾವದಿಂದ ಸ್ವೀಕರಿಸುತ್ತದೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೆ ನಾನು ಸದಾ ಋಣಿ. ಈ ಫಲಿತಾಂಶದ ಹಿನ್ನಡೆಯಿಂದ …
Read More »ಶಕ್ತಿನಗರದಲ್ಲಿರುವ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ ನ 4ನೇ ಘಟಕದಲ್ಲಿ ಏಕಾಏಕಿ ಬೆಂಕಿ
ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ ನ 4ನೇ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಮಂಗಳವಾರ ರಾತ್ರಿ ವೇಳೆ ಆರ್ಟಿಪಿಎಸ್ ನಲ್ಲಿ ವಿದ್ಯುತ್ ಘಟಕ ಆರಂಭಿಸುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕು ತಿಂಗಳಿಂದ ವಿದ್ಯುತ್ ಕೇಂದ್ರ ಕಾರ್ಯಸ್ಥಗಿತಗೊಂಡಿದ್ದರಿಂದ ಘಟಕ ಆರಂಭಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕೆನ್ನಾಲಿಗೆ ವಿದ್ಯುತ್ ಪರಿವರ್ತಕ ಸೇರಿದಂತೆ ಸುಮಾರು 60 ಲಕ್ಷ ರೂ.ಮೌಲ್ಯದ …
Read More »ಡೆಲ್ಲಿ ಚೊಚ್ಚಲ ಐಪಿಎಲ್ ಆಸೆ ಭಗ್ನ, ದಾಖಲೆ ಬರೆದ ರೋಹಿತ್
ದುಬೈ: ಇಂದು ನಡೆದ ಐಪಿಎಲ್-2020ಯ ಫೈನಲ್ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದ ಮುಂಬೈ ತಂಡ ಗೆದ್ದು ಬೀಗಿದೆ. ಈ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಇಂದಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದ ನಿಗದಿತ 20 ಓವರಿನಲ್ಲಿ …
Read More »ಬೈ ಎಲೆಕ್ಷನ್ ಜೊತೆಗೆ ಎಂಎಲ್ಸಿ ಚುನಾವಣೆಯಲ್ಲಿಯೂ ಬಿಜೆಪಿ ಮೇಲುಗೈ
ಬೆಂಗಳೂರು: ಬೈ ಎಲೆಕ್ಷನ್ ಜೊತೆಗೆ ಎಂಎಲ್ಸಿ ಚುನಾವಣೆಯಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಿದೆ.ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಪುಟ್ಟಣ್ಣ 7,335 ಮತ ಪಡೆದ್ರೆ ಜೆಡಿಎಸ್ನ ಎಪಿ ರಂಗನಾಥ್ 5,107 ಮತ ಗಳಿಸಿದರು. ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಕೇವಲ 782 ಮತ ಗಳಿಸಲಷ್ಟೇ ಶಕ್ತರಾದರು. ಗೆಲುವಿನ ಹಿನ್ನೆಲೆಯಲ್ಲಿ ಪುಟ್ಟಣ್ಣರನ್ನು ಹೊತ್ತು ಅಭಿಮಾನಿಗಳು ಸಂಭ್ರಮಿಸಿದರು. ಪಶ್ಚಿಮ ಪದವೀಧರ ಕ್ಷೇತ್ರದ …
Read More »ಬಿಜೆಪಿ ಉಪಾಧ್ಯಕ್ಷ, ಸಿಎಂ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಬಸವ ಕಲ್ಯಾಣದತ್ತ ಪ್ರಯಾಣ
ಬೆಂಗಳೂರು: ಶಿರಾ ಉಪ ಚುನಾವಣೆಯ ಗೆಲುವಿನ ಬಳಿಕ ಬಿಜೆಪಿ ಉಪಾಧ್ಯಕ್ಷ, ಸಿಎಂ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಬಸವ ಕಲ್ಯಾಣದತ್ತ ಪ್ರಯಾಣ ಬೆಳೆಸಲಿದ್ದಾರೆ. ವಿಜಯೇಂದ್ರ, ಪಕ್ಷದ ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ಆದೇಶದ ಮೇರೆಗೆ ನವೆಂಬರ್ 13ರಂದು ಬಸವ ಕಲ್ಯಾಣಕ್ಕೆ ತೆರಳುತ್ತಿದ್ದೇನೆ. ಅಲ್ಲಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಗುರಿ ಬಸವ ಕಲ್ಯಾಣ ಅನ್ನೋದನ್ನ ರಿವೀಲ್ ಮಾಡಿದರು. ಶಿರಾದಲ್ಲಿ ಎಲ್ಲರನ್ನ ಒಗ್ಗೂಡಿಸಿಕೊಂಡು ಚುನಾವಣೆಯನ್ನ …
Read More »ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅವಘಡದಲ್ಲಿ ಇನ್ನೂ ಬೆಂಕಿ ಸಂಪೂರ್ಣವಾಗಿ ನಂದಿಲ್ಲ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಹೊಸಗುಡ್ಡದಹಳ್ಳಿಯಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅವಘಡದಲ್ಲಿ ಇನ್ನೂ ಬೆಂಕಿ ಸಂಪೂರ್ಣವಾಗಿ ನಂದಿಲ್ಲ. ಕಳೆದ 20 ಗಂಟೆಯಿಂದ ಬೆಂಕಿ ಧಗ ಧಗನೇ ಉರಿಯುತ್ತಿದೆ. ಸ್ಥಳಕ್ಕೆ ನೂರಾರು ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿಯಿಡೀ ಬೆಂಕಿ ನಂದಿಸೋ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದರು. ಬೆಂಕಿ ಅವಘಡದಲ್ಲಿ 2 ರಿಂದ 3 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 7 ವಾಹನಗಳು, 2 ವಿದ್ಯುತ್ ಕಂಬ ನಾಶವಾಗಿವೆ. ಘಟನೆ …
Read More »ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಕಾಲುವೆಗೆ
ಯಾದಗಿರಿ: ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಕಾಲುವೆಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಜಿಲ್ಲೆಯ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿ ನಡೆದಿದೆ. ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ಜಲ ಸಮಾಧಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಟ್ಟಿ ಗ್ರಾಮದ ಪವನ್ ಬಿರಾದಾರ್ (34), ಪವನ್ ತಂದೆ ಶರಣಗೌಡ ಬಿರಾದಾರ್ (61), ತಾಯಿ ಜಾನಕಿ ಬಿರಾದಾರ್ (55) ಮೃತರು. ಮೃತ ಪವನ್ ಕುಟುಂಬದ ಎರಡು …
Read More »