Breaking News

ಆರ್‌ಬಿಐ ಎಂಪಿಸಿಗೆ ಕನ್ನಡಿಗ ಶಶಾಂಕ್ ಭಿಡೆ ನೇಮಕ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿ ಸಮಿತಿಗೆ (ಎಂಪಿಸಿ) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಶಾಂಕ್ ಭಿಡೆ ಸದಸ್ಯರಾಗಿ ನೇಮಕವಾಗಿದ್ದಾರೆ. ಹಣಕಾಸು ನೀತಿ ಸಮಿತಿಯ ಸದಸ್ಯರ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ನೇಮಕಾತಿ ಸಮಿತಿಯು (ಸಿಸಿಎ) ಅನುಮೋದನೆ ನೀಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ. ಶಶಾಂಕ್ ಭಿಡೆ ಯಾರು? ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಜನಿಸಿದ್ದ ಶಶಾಂಕ್ ಭಿಡೆ …

Read More »

ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್(45) ನಿಧನರಾಗಿದ್ದಾರೆ.

ಮುಂಬೈ: ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್(45) ನಿಧನರಾಗಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅಜಯ್ ದೇವಗನ್ ಸಹೋದರ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ರಾತ್ರಿ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡಿದ್ದೇನೆ. ಅವರ ಅಕಾಲಿಕ ನಿಧನವು ನಮ್ಮ ಕುಟುಂಬವನ್ನು ಎದೆಗುಂದಿಸಿದೆ. ಫಿಲಂ ಕಂಪನಿ ಎಡಿಎಫ್‍ಎಫ್ ಮತ್ತು ನಾನು ಅವರ ಪ್ರೀತಿಯ ಉಪಸ್ಥಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದಿದ್ದಾರೆ. ಅಲ್ಲದೆ ಕೊರೊನಾ ಸಾಂಕ್ರಾಮಿಕ …

Read More »

ನಿದ್ರೆ ಇಂದ ಯೆದ್ದ ಸರ್ಕಾರ ಮುಂದಿನ ಮೂರು ತಿಂಗಳು ಮತ್ತಷ್ಟು ಟಫ್ ರೂಲ್ಸ್ ಪಾಲನೆ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮಗಳಿಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿದೆ. ಸರ್ಕಾರದ ಬತ್ತಳಿಕೆಯಲ್ಲಿದ್ದ ಮತ್ತೆ ಹಳೇ ನಿಯಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ. ಅಲ್ಲದೇ ಕರ್ನಾಟಕಕ್ಕೆ ಮೂರು ತಿಂಗಳು ಕೊರೊನಾ ಮಹಾ ಗಂಡಾಂತರ ಎದುರಾಗಲಿದೆ. ಮೂರು ತಿಂಗಳಿಗೆ ಕರ್ನಾಟಕ ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಮಾಡಿದೆ. ಯಾಕೆಂದರೆ ಮುಂದಿನ ಮೂರು ತಿಂಗಳಲ್ಲಿ ಹಬ್ಬ, ಮದುವೆ, …

Read More »

10,228 ಕೊರೊನಾ ಪ್ರಕರಣಗಳು ಪತ್ತೆ,ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಇಂದು 10,228 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ. ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 9,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 91 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 9,461 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು ರಾಜ್ಯದಲ್ಲಿ 10,228 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 6,57,705 ಸೋಂಕಿತರ ಪೈಕಿ 1,15,151 …

Read More »

7 ಲಕ್ಷ ಲಂಚ – ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಲೇಡಿ ತಹಶೀಲ್ದಾರ್

ಬೆಂಗಳೂರು: 7 ಲಕ್ಷ ಲಂಚ ಪಡೆಯುವ ವೇಳೆ ಮಹಿಳಾ ತಹಶೀಲ್ದಾರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆಜಿ ರೋಡ್‍ನಲ್ಲಿರುವ ತಹಶೀಲ್ದಾರ್ ಕಚೇರಿ ವಿಶೇಷ ಮಹಿಳಾ ತಹಶೀಲ್ದಾರ್ ಲಕ್ಷ್ಮೀ ಮತ್ತು ಕ್ಲರ್ಕ್ ಪ್ರಸನ್ನಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ಅಜಂ ಪಾಷಾ ಎಂಬುವರ ಬಳಿ 7 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಶೇಷ ತಹಶೀಲ್ದಾರ್ ಲಕ್ಷ್ಮೀ, 5 ಲಕ್ಷ ಹಣ ಪಡೆಯುವಾಗ ರೇಡ್ ಹ್ಯಾಂಡ್ ಆಗಿ …

Read More »

ಬರ್ತಡೇ ಬಾಯ್ ಧ್ರುವಾಗೆ ಅತ್ತಿಗೆ ಮಾಡಿದ ಪ್ರಾಮಿಸ್ ಏನು ಗೊತ್ತಾ…?

ಬೆಂಗಳೂರು: ಕಷ್ಟದಲ್ಲಿ ನೀನು ನನ್ನ ಜೊತೆ ನಿಂತಂತೆ ನಾನು ಎಂದಿಗೂ ನಿನ್ನ ಜೊತೆಯಲ್ಲೇ ನಿಲ್ಲುವೆ ಎಂದು ಹೇಳುವ ಮೂಲಕ ನಟಿ ಮೇಘನಾ ರಾಜ್ ಅವರು ಮೈದುನ ಧ್ರುವ ಸರ್ಜಾ ಅವರಿಗೆ ಹುಟ್ಟುಹಬ್ಬದ ವಿಶ್ ತಿಳಿಸಿದ್ದಾರೆ. ಇಂದು ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಇಂದು ಧ್ರುವ ಅಣ್ಣ ಇಲ್ಲದ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಧ್ರುವ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಅತ್ತಿಗೆ ಮೇಘನಾ ಅವರು, ನಿನ್ನ ಅಣ್ಣ …

Read More »

ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೆ ಕೊರೋನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮ ,ಯಾರಿಗೆ ಕೊರೊನಾ ಟೆಸ್ಟ್ ಕಡ್ಡಾಯ.. ?

ಬೆಂಗಳೂರು: ರಾಜ್ಯ ಸರ್ಕಾರ ಇಷ್ಟು ದಿನ ಮೈಮರೆತು ಕುಳಿತಿದ್ದ ಕಾರಣ ರಾಜ್ಯದಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದರೆ ರಾಜ್ಯದಲ್ಲಿ ಮಾತ್ರ ಕಳೆದ ಮೂರು ವಾರಗಳಿಂದ ತೀವ್ರತೆ ಶೇ.39ರಷ್ಟು ಹೆಚ್ಚಾಗಿದೆ. ಹೀಗಾಗಿ, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಹಾಗೆ ಕೊರೋನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮಗಳಿಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿದೆ. ಸರ್ಕಾರದ ಬತ್ತಳಿಕೆಯಲ್ಲಿದ್ದ ಮತ್ತೆ ಹಳೇ ನಿಯಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ.ಮೊನ್ನೆಯಷ್ಟೇ …

Read More »

ಮಕಾಡೆ ಮಲಗಿಸಿ ದೊಡ್ಡ ಕಲ್ಲಿನಿಂದ ತಲೆಯನ್ನು ಸಂಪೂರ್ಣವಾಗಿ ಜಜ್ಜಿ ಕೊಲೆ

ಬೆಂಗಳೂರು: ರಾಗಿ ಹೊಲದಲ್ಲಿ ಮಕಾಡೆ ಮಲಗಿಸಿ ತಲೆ ಜಜ್ಜಿ ರೌಡಿ ಶೀಟರ್ ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಅರೆಹಳ್ಳಿಯಲ್ಲಿ ನಡೆದಿದೆ. ಮೃತ ಯುವಕನನ್ನು ಅತ್ತಿಬೆಲೆ ಪೊಲೀಸ್ ಠಾಣೆಯ ರೌಡಿ ಶೀಟರ್ ಬಳ್ಳೂರು ಗ್ರಾಮದ ಶ್ರೀಕಾಂತ್ (30) ಎಂದು ಗುರುತಿಸಲಾಗಿದೆ. ಯಾರೋ ಈತನ ಮೇಲಿನ ಹಳೆ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಾರ್ಟಿ ಮಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ದೊಡ್ಡ …

Read More »

7 ತಿಂಗಳ ಬಳಿಕ ಥಿಯೇಟರ್, ಮಲ್ಟಿಪ್ಲೆಕ್ಸ್‌ ಓಪನ್ ಆಗುತ್ತಿದೆ.ಅಕ್ಕಾ ಪಕ್ಕಾ ಕೂತು ಸಿನೆಮಾ ನೋಡೋ ಹಾಗಿಲ್ಲ ಟಫ ರೂಲ್ಸ್

ನವದೆಹಲಿ: ಬರೋಬ್ಬರಿ 7 ತಿಂಗಳ ಬಳಿಕ ಥಿಯೇಟರ್, ಮಲ್ಟಿಪ್ಲೆಕ್ಸ್‌ ಓಪನ್ ಆಗುತ್ತಿದೆ. ಅಕ್ಟೋಬರ್ 15ರಿಂದ ಚಿತ್ರಪ್ರೇಮಿಗಳು ಚಿತ್ರಮಂದಿರಕ್ಕೆ ಹೋಗಿ ಫಿಲಂ ವೀಕ್ಷಣೆ ಮಾಡಬಹುದು. ಆದರೆ, ಈ ಮೊದಲಿನಂತೆ ಥಿಯೇಟರ್‌ನಲ್ಲಿ ಜೊತೆಯಾಗಿ ಹಿತವಾಗಿ ಪತಿ, ಪತ್ನಿಯರು, ಪ್ರೇಮಿಗಳು ಅಕ್ಕ ಪಕ್ಕ ಕುಳಿತು ಒಟ್ಟಿಗೆ ಕುಳಿತು ಸಿನಿಮಾ ನೋಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಥಿಯೇಟರ್ ಓಪನ್ ಸಂಬಂಧ ಇಂದು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಸಾಕಷ್ಟು ಟಫ್ ರೂಲ್ಸ್ ಇವೆ. ಇದನ್ನು ನೋಡಿ, ಚಿತ್ರರಂಗದ ಮಂದಿ …

Read More »

ಸೊಸೆಶೃದ್ಧಾ ಶೆಟ್ಟರ್ ಅವರನ್ನು ಚುನಾವಣೆಗೆ ರೆಡಿ ಮಾಡಲು ಶೆಟ್ಟರ್ ಮುಂದಾಗಿದ್ದಾರೆ.

ಬೆಳಗಾವಿ – ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಟಿಕೆಟ್ ಪಡೆಯಲು ಡಜನ್ ಗಿಂತ ಹೆಚ್ಚು ಬಿಜೆಪಿ ಕಾರ್ಯಕರ್ತರು ಓಡಾಡುತ್ತಿದ್ದಾರೆ. ಬಿಜೆಪಿಯಲ್ಲಿ ಈಚೆಗೆ ಹೊಸ ಮುಖಗಳನ್ನು ಪರಿಚಯಿಸುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಕಾರ್ಯಕರ್ತರೂ ಲೋಕಸಭೆ ಟಿಕೆಟ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶೃದ್ಧಾ ಅಂಗಡಿ ವಿವಾಹ ಸಂದರ್ಭ. ಜಗದೀಶ ಶೆಟ್ಟರ್, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ ಮೊದಲಾದವರಿದ್ದಾರೆ. ಈ …

Read More »