Breaking News

ರಾಜ್ಯದ ಎಲ್ಲ ಅಂಗಡಿಗಳ ನಾಮಫ‌ಲಕ ಕನ್ನಡದಲ್ಲೇ ಇರಬೇಕು : ನಾಗಾಭರಣ

ಬೆಂಗಳೂರು: ರಾಜ್ಯದ ಎಲ್ಲ ಕಡೆಗಳಲ್ಲಿ ಅಂಗಡಿ-ಮುಂಗಟ್ಟುಗಳ ನಾಮಫ‌ಲಕಗಳು ಕಡ್ಡಾಯವಾಗಿ ಕನ್ನದಲ್ಲಿ ಇರಲೇಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮೂರು ದಿನಗಳ ಶುದ್ಧ ಕನ್ನಡ ನಾಮಫ‌ಲಕ ಅಭಿಯಾನಕ್ಕೆ ಮಂಗಳವಾರ ಕಮರ್ಷಿಯಲ್‌ ಸ್ಟ್ರೀಟ್‌ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಂಗಡಿ, ಮಾಲ್‌ಗ‌ಳಲ್ಲಿ ಕನ್ನಡ ಮಾಯಾವಾಗುತ್ತಿದೆ. ಕನ್ನಡ ಅಕ್ಷರದ ಬದಲಾಗಿ ಬೇರೆ-ಬೇರೆ ಭಾಷೆಯ ಅಕ್ಷರಗಳು ದೊಡ್ಡದಾಗಿ ಕಾಣಿಸುತ್ತಿವೆ.ಇದನ್ನು ಯಾವುದೇ ಕಾರಣಕ್ಕೂ …

Read More »

ಗಣರಾಜ್ಯೋತ್ಸವಕ್ಕೆ ಹೊಸ ಪೋಸ್ಟರ್‌ ಮೂಲಕ ರಾಬರ್ಟ್‌ ವಿಶ್‌

ರಾಬರ್ಟ್‌’ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದ್ದು, ಮಾ.11ರಂದು ಚಿತ್ರ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಇದರ ನಡುವೆಯೇ ಚಿತ್ರತಂಡ ಭರದಿಂದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ “ರಾಬರ್ಟ್‌’ ಚಿತ್ರದ ಹೊಸ ಪೋಸ್ಟರ್‌ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ವಿಶ್ವಾದ್ಯಂತ ನೆಲೆಸಿರುವ ಎಲ್ಲ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಮಾರ್ಚ್‌ 11ರಂದು ಚಿತ್ರಮಂದಿರಕ್ಕೆ ಬರಲು “ರಾಬರ್ಟ್‌’ ಸಿನಿಮಾ ಸಿದ್ಧವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಎಂದಿನಂತೆ …

Read More »

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ಮರು ತನಿಖೆಗೆ ಹೈಕೋರ್ಟ್‌ ನಕಾರ

ಬೆಂಗಳೂರು: ಧರ್ಮಸ್ಥಳದ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ವಹಿಸಲು ಹೈಕೋರ್ಟ್‌ ನಿರಾಕರಿಸಿದೆ. ಪ್ರಕರಣವನ್ನು ಸಿಬಿಐಗೆ ಮರು ತನಿಖೆಗೆ ವಹಿಸಬೇಕು ಎಂದು ಕೋರಿ ಸೌಜನ್ಯ ತಂದೆ ಚಂದಪ್ಪಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಆದೇಶ ಹೊರಡಿಸಿದೆ. ಈಗಾಗಲೇ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಬಳಿಕ ಸಿಬಿಐ ತನಿಖೆ ನಡೆಸಿದೆ. ಸಂತೋಷ್‌ ರಾವ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ …

Read More »

5A ಕಾಲುವೆ ಅನುಷ್ಠಾನ ಜಾರಿಗಾಗಿ ಮಾಜಿ ಶಾಸಕರಿಂದ ಆಣೆ ಪ್ರಮಾಣ ಪ್ರಹಸನ

ಮಸ್ಕಿ (ರಾಯಚೂರು): ಎನ್‌ಆರ್‌ಬಿಸಿಯ 5A ಕಾಲುವೆ ಅನುಷ್ಠಾನ ಸಾಧ್ಯವಿದ್ದರೆ ಎಲ್ಲ ಪ್ರಯತ್ನಗಳಿಗೂ ನಾವು ಬದ್ಧವಿದ್ದು, ಯಾವ ದೇವರ ಮೇಲೆ ಬೇಕಾದರೂ ಪ್ರಮಾಣ ಮಾಡುವುದಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ತಿಳಿಸಿದರು. ಯೋಜನೆ ಜಾರಿ ಬೇಡಿಕೆಯೊಂದಿಗೆ ಕಳೆದ 69 ದಿನಗಳಿಂದ ರೈತರು ಧರಣಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಿದ ಅವರು, ಯೋಜನೆ ಜಾರಿಗೆ ನಾವು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬೇಕಾದರೆ ಇನ್ನೂ ಯಾರನ್ನಾದರೂ ಭೇಟಿ ಮಾಡಬೇಕಿದ್ದರೆ ಕರೆಯಿರಿ …

Read More »

ಬಿ.ಸಿ.ಪಾಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಉಗ್ರಪ್ಪ ಆರೋಪ

ಬೆಂಗಳೂರು: ರೈತರನ್ನು ಭಯೋತ್ಪಾದಕರು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಹಾಗೂ ವಿಧಾನಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಯಾವಾಗ ಭಯೋತ್ಪಾದಕರಾದರು. ಕೃಷಿ ಸಚಿವರಾಗಿ ಈ ರೀತಿಯ ಮಾತು ಆಡಬಹುದೇ ಎಂದು ಪ್ರಶ್ನಿಸಿದರು. ಬಿ.ಸಿ.ಪಾಟೀಲ್‌ ರೈತರ ಕ್ಷಮೆಯಾಚಿಸಬೇಕು. ಸಂಪುಟದಿಂದ ಅವರನ್ನು ಕೈ ಬಿಡಬೇಕು. ರೈತ ಸಮುದಾಯಕ್ಕೆ ಅವರು ಅವಮಾನ ಮಾಡಿದ್ದಾರೆ …

Read More »

ಕೇಂದ್ರದಿಂದ 18 ರಾಜ್ಯಗಳಿಗೆ 12,351 ಕೋಟಿ ಅನುದಾನ ಬಿಡುಗಡೆ : ಕರ್ನಾಟಕಕ್ಕೆ 2,412 ಕೋಟಿ

ಬೆಂಗಳೂರು : ಕೇಂದ್ರ ಸರಕಾರ 18 ರಾಜ್ಯಗಳಿಗೆ 2020-21ನೇ ಸಾಲಿನ 2 ನೇ ಕಂತಿನ 12,351 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಕರ್ನಾಟಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್ ಎಲ್ ಬಿ) 2ನೇ ಕಂತಿನ 2412.75 ಕೋಟಿ ರೂಪಾಯಿ ಅನುದಾನವನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹಳ್ಳಿ, ತಾಲೂಕುಗಳಾದ್ಯಂತ ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲು ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಿಗೆ ಅಂದರೆ ಗ್ರಾಮ, ತಾಲೂಕು ಹಾಗೂ ಜಿಲ್ಲೆಗಳಿಗೆ …

Read More »

ಅಧಿವೇಶನ ಹಿನ್ನೆಲೆ ವಿಧಾನಸಭೆ ಸುತ್ತಮುತ್ತಲ 2 ಕೀ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಬೆಂಗಳೂರು:ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧದ ಎರಡು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಜ.28ರಿಂದ ಫೆ. 5ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶ ಹೊರಡಿಸಿದ್ದಾರೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ, ವಿಧಾನಸೌಧ ಮುತ್ತಿಗೆ ಹಾಕುವ ಸಾಧ್ಯತೆಗಳಿವೆ. ಇದರಿಂದ ಅಧಿವೇಶದ ಕಾರ್ಯಕಲಾಪಗಳಿಗೆ ತೊಂದರೆ ಆಗಬಹುದು. ಸುಗಮ ಸಂಚಾರ ವ್ಯವಸ್ಥೆಗೂ ಅಡ್ಡಿಉಂಟಾಗಲಿದೆ. ಈ ನಿಟ್ಟಿನಲ್ಲಿ ಜ.28ರಿಂದ ಫೆ.5ರವರೆಗೆ ಅಧಿವೇಶನಗಳು ನಡೆಯುವ ದಿನಗಳಂದು ಬೆಳಿಗ್ಗೆ ಆರರಿಂದ ರಾತ್ರಿ ಹನ್ನೆರಡು …

Read More »

ರಾಜ್ಯದ ಒಂದಿಂಚು ಜಾಗವನ್ನೂ ಬಿಡೆವು, ನಮ್ಮನ್ನು ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ :ನಾರಾಯಣಗೌಡ

ಗಜೇಂದ್ರಗಡ(ಗದಗ): ಭಾರತ -ಪಾಕ್ ಗಡಿಯಲ್ಲಿ ಪಾಕಿಸ್ತಾನ ಹೇಗೆ ನಡೆದುಕೊಳ್ಳುತ್ತಿಯೋ ಅದೇ ರೀತಿಯಲ್ಲಿ ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರ ನಡೆದುಕೊಳ್ಳುತ್ತಿದೆ. ವಿನಾಕಾರಣ ಕನ್ನಡಿಗರನ್ನು ಕೆಣಕಿದರೆ, ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಗುಡುಗಿದರು. ಪಟ್ಟಣದಲ್ಲಿ ಬೆಳಗಾವಿ ವಿಭಾಗ ಮಟ್ಟದ ಕರವೇ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಾಜ್ಯಗಳನ್ನು ರಚಿಸಿ, ಅಖಂಡ ಭಾರತವನ್ನು ಸ್ಥಾಪಿಸಲಾಗಿದೆ. ಆದರೆ, ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಗಡಿ …

Read More »

ಆಟೋ ಚಾಲಕನ ಎಡವಟ್ಟಿನಿಂದ ನಡೀತು ಭೀಕರ ಸರಣಿ ಅಪಘಾತ

ಬೆಂಗಳೂರು: ಬೆಂಗಳೂರು: ಆಟೋ ಚಾಲಕ ಮಾಡಿದ ಎಡವಟ್ಟಿನಿಂದಾಗಿ ಬೆಂಗಳೂರಿನಲ್ಲಿ ಸರಣಿ ಅಪಘಾತ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, , ಆಟೋ, ಫ್ಯಾಸಿನೋ ಮತ್ತು ಬೈಕ್​ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರವಾಗಿ ಗಾಯವಾಗಿದ್ದು, ಮೂರು ವಾಹನ ನುಜ್ಜುಗುಜ್ಜಾಗಿವೆ. ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಅಂತ ತಿಳಿದು ಬಂದಿದೆ. https://www.facebook.com/105350550949710/posts/255497042601726/

Read More »

ಸಿಎಂ ಬಿಎಸ್​ವೈ, ನಿರಾಣಿ ವಿರುದ್ಧದ ಡಿನೋಟಿಫೈ ಪ್ರಕರಣ ತನಿಖೆಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: 2010-11ರಲ್ಲಿ ನಡೆದಿದ್ದ ಡಿನೋಟಿಫೈ ಪ್ರಕರಣ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ವಿರುದ್ಧ ದೂರು ದಾಖಲಾಗಿತ್ತು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ತನಿಖೆಗೆ ವಹಿಸಿ ಹೈಕೋರ್ಟ್​ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ​ ಮುಖ್ಯ ನ್ಯಾಯಮೂರ್ತಿ ಎಸ್​ಎ ಬೋಬ್ಡೆ, …

Read More »