Breaking News

ಉತ್ತರಕರ್ನಾಟಕಕ್ಕೆ ಅನ್ಯಾಯ ಆದ್ರೆ ಮಂತ್ರಿಗಿರಿ ಇರಲಿ..ಬಿಡಲಿ..ಹೋರಾಟ ಮಾಡುತ್ತೇನೆ..ಉಮೇಶ ಕತ್ತಿ

  ಅಭಿವೃದ್ಧಿಯಲ್ಲಿ ಉತ್ತರಕರ್ನಾಟಕಕ್ಕೆ ಅನ್ಯಾಯವಾದ್ರೆ ಪ್ರತಿಭಟನೆ ಮಾಡಿಯೇ ಮಾಡುತ್ತೇನೆ. ನಾನು ಮಂತ್ರಿ ಆಗಿರಲಿ ಅಥವಾ ಆಗದೇ ಇರಲಿ ಎಂದು ಆಹಾರ ಸಚಿವ ಉಮೇಶ ಕತ್ತಿ ಮತ್ತೆ ಉತ್ತರಕರ್ನಾಟಕದ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಮೇಶ ಕತ್ತಿ ಉತ್ತರಕರ್ನಾಟಕದಲ್ಲಿ ಏನು ಆಗಬೇಕೋ ಅದು ಆಗಲೇಬೇಕು. ಉತ್ತರಕರ್ನಾಟಕದಲ್ಲಿ ಆಗಬೇಕಿದ್ದ ಕೆಲಸ ಆಗದಿದ್ದಾಗ ನಾನು ಮಂತ್ರಿ ಇರಲಿ, ಬಿಡಲಿ ಪ್ರತಿಭಟನೆ ಮಾಡಿಯೇ ಮಾಡುತ್ತೇನೆ ಎಂದರು. ಇನ್ನು ಬಜೆಟ್ …

Read More »

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಸಿಎಂ ಬಿಎಸ್‍ವೈ ಪಾಸಿಟಿವ್ ಆಗಿದ್ದಾರೆ:

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಸಿಎಂ ಬಿಎಸ್‍ವೈ ಪಾಸಿಟಿವ್ ಆಗಿದ್ದಾರೆ..ರಮೇಶ ಜಾರಕಿಹೊಳಿ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸುವ ವಿಚಾರದಲ್ಲಿ ಮಂತ್ರಿಯಾಗಿ ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಅದೇ ರೀತಿ ಸಮಾಜದ ಪ್ರತಿನಿಧಿಯಾಗಿ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ವಾಲ್ಮೀಕಿ …

Read More »

 ಸತತ ಐದನೇ ದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆ

ನವದೆಹಲಿ: ಸತತ ಐದನೇ ದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆಯಾಗಿದ್ದು, ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ₹95 ರ ಸನಿಹಕ್ಕೆ ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಅಧಿಸೂಚನೆ ಪ್ರಕಾರ ಶನಿವಾರ ಪೆಟ್ರೋಲ್‌ ಲೀಟರ್‌ಗೆ 30 ಪೈಸೆ ಮತ್ತು ಡೀಸೆಲ್‌ ಲೀಟರ್‌ಗೆ 36 ಪೈಸೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ₹88.41 ಕ್ಕೆ ತಲುಪಿದ್ದರೆ, ಡೀಸೆಲ್‌ ದರ ₹78.74 ಕ್ಕೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್‌ ₹94.93 ಹಾಗೂ ಡೀಸೆಲ್‌ …

Read More »

ನನಗೆ ಯಾವುದೇ ನೋಟಿಸ್ ಬಂದಿಲ್ಲ. ನನ್ನ ಮಾತಿಗೆ ಅಷ್ಟೊಂದು ಡಿಮ್ಯಾಂಡ್ ಇದೆ ನೋಡಿ ಎಂದು ವ್ಯಂಗ್ಯವಾಡಿದ್ದಾರೆ:ಯತ್ನಾಳ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುರಿತಾಗಿ ಪದೇ ಪದೇ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಅವರು, ಪಕ್ಷದ ನಾಯಕ ಅರುಣ್ ಸಿಂಗ್ ಅವರು ನೀಡಿದ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರ ಹೇಳಿಕೆಗೆ ಬೇಕಾಗಿರುವ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ನನಗೆ ನೋಟಿಸ್ ನೀಡಲು ಭಾರಿ ಡಿಮ್ಯಾಂಡ್ …

Read More »

ರಾಜ್ಯದಲ್ಲಿ ಉಸಿರು ಕಟ್ಟಿಸೋ ವಾತಾವರಣ ಇದೆರಾಜೀನಾಮೆ ಕೊಟ್ಟ ರಾಜ್ಯಸಭಾ ಸದಸ್ಯ!

ನವದೆಹಲಿ: ನನ್ನ ರಾಜ್ಯದಲ್ಲಿ ಹಿಂಸೆ ನಡೆಯುತ್ತಿದೆ. ಆದರೆ ಆ ಬಗ್ಗೆ ನಾನೇನೂ ಮಾತನಾಡಲು ಆಗುತ್ತಿಲ್ಲ. ಒಂಥರಾ ಉಸಿರು ಕಟ್ಟಿಸೋ ವಾತಾವರಣ ಇದೆ ಎಂದಿರುವ ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ಅವರು ಸದ್ಯದಲ್ಲೇ ಪಕ್ಷ ತೊರೆದು ಮತ್ತೊಂದು ಪಕ್ಷ ಸೇರುವ ಮಾತುಗಳೂ ಕೇಳಿಬಂದಿದ್ದು, ಈ ಪ್ರಕರಣ ಇದೀಗ ಕುತೂಹಲ ಕೆರಳಿಸಿದೆ. ಶುಕ್ರವಾರ ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನ ಸಂದರ್ಭದಲ್ಲೇ ಅವರು ಇಂಥದ್ದೊಂದು ಘೋಷಣೆಯನ್ನು ಮಾಡಿದ್ದಾರೆ. ಅಂದಹಾಗೆ ಇಂಥದ್ದೊಂದು …

Read More »

ಗುಜರಾತ್: ಸ್ಥಳೀಯ ಸಂಸ್ಥೆ ಚುನಾವಣೆ; 31 ಮುಸ್ಲಿಂ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್

ಬರೂಚ್: ಗುಜರಾತ್‌ನ ಬರೂಚ್‌ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಒಟ್ಟು 31 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿಸಿನ್ಹಾ ಅಟೊದಾರಿಯಾ ಅವರ ಪ್ರಕಾರ, ಪಕ್ಷ ಇಷ್ಟು ಸಂಖ್ಯೆಯಲ್ಲಿ ಮುಸಲ್ಮಾನರನ್ನು ಚುನಾವಣೆಗೆ ಕಣಕ್ಕಿಳಿಸಿರುವುದು ಇದೇ ಮೊದಲು. ಆದರೆ, ಮುಸಲ್ಮಾನರನ್ನು ಕಣಕ್ಕಿಳಿಸಿರುವುದಕ್ಕೂ, ವಿರೋಧಿ ಪಾಳಯದಲ್ಲಿ ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಬಿ) ಮತ್ತು ಅಸಾಸುದ್ದೀನ್ ಒವೈಸಿ ಅವರ ಪಕ್ಷದ ಜೊತೆಗಿನ ಮೈತ್ರಿಗೂ ಸಂಬಂಧವಿಲ್ಲ ಎಂದರು. ಬರೂಚ್ ಜಿಲ್ಲೆಯಲ್ಲಿ ಮುಸಲ್ಮಾನರು …

Read More »

ಸಾರಿಗೆ ನೌಕರರ ಐದು ಬೇಡಿಕೆ ಈಡೇರಿಕೆ: ಸಾರಿಗೆ ಇಲಾಖೆ ಆದೇಶ

ಬೆಂಗಳೂರು: ಆರೋಗ್ಯ ಭಾಗ್ಯ ವಿಮೆ, ಕೋವಿಡ್‌ನಿಂದ ಮೃತಪಟ್ಟ ನೌಕರರಿಗೆ ₹ 30 ಲಕ್ಷ ಪರಿಹಾರ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಐದು ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಸಾರಿಗೆ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಭಾಗ್ಯ ವಿಮೆ ಸೌಲಭ್ಯವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) …

Read More »

ಲೋಕಾಯುಕ್ತ ವಿಚಾರಣೆಗೆ ಹೈಕೋರ್ಟ್ ಸಮ್ಮತಿ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಸುವ ದೋಷಾರೋಪ ಪಟ್ಟಿಗಳು ತಮಗೂ ಲಭ್ಯವಾಗುವಂತೆ ನಿರ್ದೇಶನ ನೀಡಲು ಕೋರಿ ಲೋಕಾಯುಕ್ತ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್‌ ಸಮ್ಮತಿ ಸೂಚಿಸಿದೆ. ಲೋಕಾಯುಕ್ತ ವಕೀಲರ ಮನವಿಗೆ ನ್ಯಾಯಮೂರ್ತಿ ಅರವಿಂದ್‌ಕುಮಾರ್ ನೇತೃತ್ವದ ವಿಭಾಗೀಯ ಪೀಠ ಭಾಗಶಃ ಅವಕಾಶ ನೀಡಿತು. ‘ಕಾನೂನಿನ ಪ್ರಕಾರ ಇರುವ ಅವಕಾಶದಂತೆ ದೋಷಾರೋಪ ಪಟ್ಟಿ ಆಧರಿಸಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಮುಂದುವರಿಯಬಹುದು. ದೋಷಾರೋಪ ಪಟ್ಟಿ ಪ್ರತಿಯನ್ನು ಲೋಕಾಯುಕ್ತಕ್ಕೆ ಎಸಿಬಿ ಒದಗಿಸಬೇಕು’ ಎಂದು ತಿಳಿಸಿತು. ‌ ‘ಲೋಕಾಯುಕ್ತ …

Read More »

ದ್ವಿತೀಯ PUC ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: : ದ್ವಿತಿಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಮೇ.24ರಿಂದ ಜೂನ್ 16ರವರೆಗೆ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ನಿಗದಿ ಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಹೀಗಿದೆ.. ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ ಮೇ 24- ಇತಿಹಾಸ ಮೇ 25- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮೇ 26- ಭೂಗೋಳ ಶಾಸ್ತ್ರ ಮೇ 27- …

Read More »

ಜೀವನವೆಂಬ ಪರೀಕ್ಷೆಗೆ ಪಠ್ಯವಿಲ್ಲ: ಸುಧಾಮೂರ್ತಿ

ಬೆಂಗಳೂರು: ‘ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮಾತ್ರಕ್ಕೆ ಎಲ್ಲವೂ ದೊರೆಯುವುದಿಲ್ಲ. ಪ್ರತಿಯೊಬ್ಬರೂ ಜೀವನವೆಂಬ ಪರೀಕ್ಷೆ ಎದುರಿಸಬೇಕಾಗುತ್ತದೆ. ಆದರೆ, ಇಲ್ಲಿ ನಿರ್ದಿಷ್ಟ ಪಠ್ಯ ಇರದ ಕಾರಣ ನಮಗೆ ಎದುರಾಗುವ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾ ಸಾಗಬೇಕಿದೆ’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದರು. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು 75ನೇ ಬ್ಯಾಚ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ವೇದಿಕೆಯಲ್ಲಿ ಶುಕ್ರವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅಡೆತಡೆಗಳು, ಸವಾಲುಗಳು ಎಲ್ಲರ ಜೀವನದಲ್ಲಿಯೂ ಇರುತ್ತವೆ. ಅದನ್ನು …

Read More »