Breaking News

ಪರಪ್ಪನ ಅಗ್ರಹಾರ ಜೈಲಿನಲ್ಲಿ ಡ್ರಗ್ಸ್ ಪತ್ತೆಗೆ ವಿಶೇಷ ಶ್ವಾನದಳ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ‌ ಅವ್ಯಾಹತವಾಗಿ ಸರಬರಾಜು ಆಗುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲು ಮೊದಲ ಬಾರಿಗೆ ವಿಶೇಷ ಶ್ವಾನದಳ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಜೈಲಿನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುವುದು ಹೊಸದೇನಲ್ಲ.‌ ಒಂದಲ್ಲ ಒಂದು ರೀತಿ ನಿರಂತರ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಜೈಲು ವಾರ್ಡನ್​ಗಳು ನಿರಂತರ ತಪಾಸಣೆ ನಡೆಸಿದರೂ ಅನಿರೀಕ್ಷಿತವಾಗಿ ಡ್ರಗ್ಸ್ ಸರಬರಾಜು ಆಗುತ್ತಿದೆ. ಸಿಬ್ಬಂದಿಗಳ ವಿರುದ್ಧ ಕರ್ತವ್ಯಲೋಪದ ಬಗ್ಗೆ ದೂರುಗಳು ಬಂದಿದ್ದರಿಂದ ಬಿಗಿ ತಪಾಸಣೆ …

Read More »

ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಇದರ ಜೊತೆಗೆ, ಬಾಲ್ಯ ವಿವಾಹ ಪ್ರಕರಣಗಳು ಏರಿಕೆ ಕಾಣುತ್ತಿರುವ ಆತಂಕಕಾರಿ ವಿಚಾರವನ್ನು ರಾಜ್ಯ ಸರ್ಕಾರ ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಾದ ಮಕ್ಕಳ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದ ಬಿಜೆಪಿ ಶಾಸಕ ಚನ್ನಬಸಪ್ಪ ಅವರ ಪ್ರಶ್ನೆಗೆ ರಾಜ್ಯ ಸರ್ಕಾರ ಈ ಆತಂಕಕಾರಿ ಉತ್ತರ ನೀಡಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ ಕಂಡಿರುವುದಾಗಿ …

Read More »

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಯಲ್ಲಿ ಹಲವು ಬಾರಿ ಭಾಷಾಂತರ ವಿವಾದ, ಕೆಪಿಎಸ್‌ಸಿ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷಗಳ ನಾಯಕರ ಚರ್ಚೆಗೆ ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರಿಸಿದರು.

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆಯಲ್ಲಿ ಹಲವು ಬಾರಿ ಭಾಷಾಂತರ ವಿವಾದ, ಕೆಪಿಎಸ್‌ಸಿ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಪಕ್ಷಗಳ ನಾಯಕರ ಚರ್ಚೆಗೆ ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರಿಸಿದರು. ಭಾಷಾಂತರ ಅವಾಂತರಕ್ಕೆ ಕಾರಣರಾದ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುವುದು. ಕೆಪಿಎಸ್‌ಸಿ ಭಾಷಾಂತರಕಾರರನ್ನು ಕಪ್ಪುಪಟ್ಟಿಗೆ ಸೇರಿಸುವುದು ನಿಶ್ಚಿತ ಎಂದ ಸಿಎಂ, ಭಾಷಾಂತರ ತಪ್ಪು ಮಾಡಿದವರ ವಿರುದ್ಧ ಶಿಸ್ತುಕ್ರಮ, ಕ್ರಿಮಿನಲ್ ಆ್ಯಕ್ಷನ್ ಕೈಗೊಳ್ಳುವುದಾಗಿ ಮಹತ್ವದ ಘೋಷಣೆ ಮಾಡಿದರು. ಕೆಪಿಎಸ್‌ಸಿ ಹಗರಣದ ಬಗ್ಗೆ ವಿಧಾನಸಭೆಯಲ್ಲಿ ನಡೆದ …

Read More »

ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಬಳಿಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಬಳಿಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜನರ ತೆರಿಗೆ ಹಣ ನೀಡುತ್ತಿದೆ ಎಂದು ಆರೋಪಿಸಿ, ಬಿಜೆಪಿ-ಜೆಡಿಎಸ್ ಸದಸ್ಯರು ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಸದನದಲ್ಲಿ ಪ್ರತಿಭಟನೆ ಮುಂದುವರೆಸಿದ ದೋಸ್ತಿಗಳು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆಯೂ ಕಾಂಗ್ರೆಸ್ ಸರ್ಕಾರದ …

Read More »

ಪದೇಪದೇ ಪುಂಡಾಟಿಕೆ ನಡೆಸುತ್ತಿರುವ ಮರಾಠಿ ಗೂಂಡಾಗಳನ್ನು ಬಂಧಿಸಿ:ಮಹದೇವ ತಳವಾರ

ಸರ್ಕಾರಿ ಅಧಿಕಾರಿಗಳ ಮೇಲೆ ಪದೇಪದೇ ಪುಂಡಾಟಿಕೆ ನಡೆಸುತ್ತಿರುವ ಮರಾಠಿ ಗೂಂಡಾಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಮಹದೇವ ತಳವಾರ ಆಗ್ರಹಿಸಿದ್ದಾರೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಿನೇ ದಿನೇ ಬೆಳಗಾವಿಯಲ್ಲಿ ಎಂಇಎಸ್ ಹಾವಳಿ ಹೆಚ್ಚಾಗುತ್ತಿದೆ ಇಂದು ಕಿನಯೆ ಗ್ರಾಮ ಪಂಚಾಯಿತಿಗೆ ಹೋಗಿ ಎಂಇಎಸ್ ಪುಂಡನೊಬ್ಬನು ಅಲ್ಲಿಯ ಪಿಡಿಓ ಪತ್ತಾರ ಎಂಬ ಅಧಿಕಾರಿಗೆ ನೀನು ಮರಾಠಿಯಲ್ಲಿ ಮಾತನಾಡಬೇಕೆಂದು ಧಮಕಿಹಾಕಿದ್ದಾನೆ. ಸಹಾಯಕ್ಕೆ ಬಂದ ಸಿಬ್ಬಂದಿಗೂ ಜೀವ …

Read More »

ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ನಾವು ಯಾವುದೇ ಶಾಸಕರ ಹಕ್ಕನ್ನು ಮೊಟಕು ಮಾಡುವುದಿಲ್ಲ ಎಂದ ಸಿಎಂ

ಬೆಂಗಳೂರು: ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಆದರೆ, ಶಾಸಕರ ಹಕ್ಕುಚ್ಯುತಿ ಆಗದಂತೆ ಸೂಚನೆ ನೀಡಲಾವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಂಬಂಧ ಧರಣಿ ನಡೆಸುತ್ತಿದ್ದ ಪ್ರತಿಪಕ್ಷಗಳಿಗೆ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ, ನಾವು ಯಾವುದೇ ಶಾಸಕರ ಹಕ್ಕನ್ನು ಮೊಟಕು ಮಾಡುವುದಿಲ್ಲ. ಶಾಸಕರಿಗೆ ಎಷ್ಟು ಗೌರವ ಇದೆ ನನಗೂ ಅಷ್ಟೇ ಗೌರವ ಇದೆ. ನಿಮಗೆ ಅಗೌರವ ಆಗುವ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರಿಗೆ ಅವಕಾಶ …

Read More »

ನಾನೇ ಸಿಎಂ ಆಗಿರುತ್ತೇನೆ ಅಂತ ಸಿದ್ದರಾಮಯ್ಯ ಅವರು ಖಡಕ್ಕಾದ ಮಾತು

ಬೆಂಗಳೂರು: ನಾನೇ ಸಿಎಂ ಆಗಿರುತ್ತೇನೆ ಅಂತ ಸಿದ್ದರಾಮಯ್ಯ ಅವರು ಖಡಕ್ಕಾದ ಮಾತುಗಳಲ್ಲಿ ಪುನರುಚ್ಚರಿಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ವಿಧಾನಸಭೆಯಲ್ಲಿಂದು ಗ್ಯಾರಂಟಿ ಜಾರಿ ಸಮಿತಿಗಳ ಸಂಬಂಧ ಸ್ಪಷ್ಟನೆ ಕೊಡುವಾಗ ಸಿಎಂ ಈ ಮಾತು ಹೇಳಿದರು. ನಾವು ಮುಂದಿನ ಬಾರಿಯೂ ಗೆದ್ದು ಬರುತ್ತೇವೆ. ಬಿಜೆಪಿಯವರು ಗೆಲ್ಲಲ್ಲ. ನಾವೇ ನೂರಕ್ಕೆ ನೂರು ಮತ್ತೆ ಗೆದ್ದು ಬರುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಆರ್.ಅಶೋಕ್, ನೀವು ಮೊದಲ ಸಲ ಸಿಎಂ ಆಗಿದ್ದಾಗ ಏ‌.. ಅಶೋಕ …

Read More »

ಶಕ್ತಿ ಯೋಜನೆಯ ಪೂರ್ಣ ಮೊತ್ತ ಬಾಕಿ: ಕೋಟ್ಯಂತರ ರೂ. ನಷ್ಟದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಇಲ್ಲಿದೆ ಅಂಕಿ -ಅಂಶ

ಬೆಂಗಳೂರು, ಮಾರ್ಚ್​ 12: ಕೆಎಸ್​ಆರ್​ಟಿಸಿ (KSRTC), ಬಿಎಂಟಿಸಿ (BMTC), ಕೆಕೆಆರ್​ಟಿಸಿ (KKRTC) ಮತ್ತು ಎನ್​ಡಬ್ಲೂಕೆಆರ್​ಸಿ (NWKRTC) ನಾಲ್ಕೂ ನಿಗಮಗಳು ಕರ್ನಾಟಕದ ಜನರ ಜೀವನಾಡಿಯಾಗಿವೆ. ನಾಲ್ಕೂ ನಿಗಮಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ನಾಲ್ಕೂ ಸಾರಿಗೆ ನಿಗಮಗಳಿಗೆ ಹರಿದು ಬರುತ್ತಿರುವ ಆದಾಯವೆಷ್ಟು? ನಿಗಮಗಳು ಲಾಭದಲ್ಲಿಯವೆಯೇ ಅಥವಾ ನಷ್ಟದಲ್ಲಿವೆಯಾ? ಎಂಬ ಪ್ರಶ್ನೆಗಳು ಜನರಲ್ಲಿವೆ. ಇದೇ ಪ್ರಶ್ನೆಗಳನ್ನು ವಿಧಾನ ಪರಿಷತ್​​ನಲ್ಲಿ ಎಂಎಲ್​ಸಿ ಕೇಶವ ಪ್ರಸಾದ್ ಕೇಳಿದ್ದಾರೆ. ಎಂಎಲ್​ಸಿ ಕೇಶವ ಪ್ರಸಾದ್ ಪ್ರಶ್ನೆಗೆ, “ಕಳೆದ 5 …

Read More »

ಅರೆಸ್ಟ್​​ ವಾರೆಂಟ್​ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಓಡೋಡಿ ಬಂದ ಸಚಿವ ಮುನಿಯಪ್ಪ

ಬೆಂಗಳೂರು, ಮಾರ್ಚ್​ 12: 2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ರಾಬರ್ಟ್‌ಸನ್‌ ಪೇಟೆ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ‌ ಸಚಿವ ಕೆ.ಹೆಚ್.ಮುನಿಯಪ್ಪಗೆ (KH Muniyappa) ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಹಾಗಾಗಿ ಇಂದು ಕೋರ್ಟ್​ಗೆ ಹಾಜರಾಗಬೇಕಿತ್ತು. ಗೈರಾಗಿದ್ದಕ್ಕೆ ಇತ್ತ ಜಡ್ಜ್ ಸಂತೋಷ್ ಗಜಾನನ ಭಟ್ ಗರಂ ಆಗಿದ್ದರು. ಖುದ್ದು ಹಾಜರಾಗದಿದ್ದರೆ ಅರೆಸ್ಟ್​​ ವಾರೆಂಟ್ ಹೊರಡಿಸುವುದಾಗಿ ಎಚ್ಚರಿಗೆ ಬೆನ್ನಲ್ಲೇ ಕೋರ್ಟ್​​ಗೆ ಸಚಿವ ಮುನಿಯಪ್ಪ ಓಡೋಡಿ ಬಂದಿದ್ದು, ಇದೀಗ ಜಾಮೀನು (Bail) ಮಂಜೂರು ಮಾಡಲಾಗಿದೆ.2013ರ ಹಲ್ಲೆ ಅಟ್ರಾಸಿಟಿ ಕೇಸ್​​ಗೆ ಸಂಬಂಧಿಸಿದಂತೆ ಸದ್ಯ …

Read More »

ಪೊಲೀಸರು ಸ್ವಂತ ವಾಹನದ ಮೇಲೆ ಪೊಲೀಸ್​ ಎಂದು ಬರೆಸುವಂತಿಲ್ಲ: ಪರಮೇಶ್ವರ್​

ಪೊಲೀಸರು ಸ್ವಂತ ವಾಹನದ ಮೇಲೆ ಪೊಲೀಸ್​ ಎಂದು ಬರೆಸುವಂತಿಲ್ಲ: ಪರಮೇಶ್ವರ್​ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಖಾಸಗಿ ವಾಹನಗಳ ಮೇಲೆ “ಪೊಲೀಸ್” ಎಂದು ಬರೆಯುವುದು ಕಾನೂನುಬಾಹಿರ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.ಇಂತಹ ಕ್ರಮ ಕಾನೂನು ಉಲ್ಲಂಘನೆಯಾಗುತ್ತದೆ ಮತ್ತು 2022ರ ಸರ್ಕಾರದ ಸುತ್ತೋಲೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ವಿಷಯ ಶ್ರವಣಬೆಳಗೊಳ ಶಾಸಕರ ಪ್ರಶ್ನೆಗೆ ಲಿಖಿತ ಉತ್ತರವಾಗಿ ನೀಡಲಾಗಿದೆ. …

Read More »