Breaking News

ರಾಜ್ಯದಲ್ಲಿ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ EX CM BOMMAI ಹಾವೇರಿ ಜಿಲ್ಲೆ ಪಡೆದಿದೆ.

ಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಬೆಳೆವಿಮೆ ಪಡೆಯುವ ಜಿಲ್ಲೆ ಹಾವೇರಿ. ಜಿಲ್ಲೆ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ. ಜಿಲ್ಲೆ ಕಳೆದ ವರ್ಷ ಸುಮಾರು 440 ಕೋಟಿ ರೂಪಾಯಿ ಬೆಳೆವಿಮೆ ಪಡೆದಿದೆ. ಪ್ರತಿವರ್ಷ ಇಲ್ಲಿಯ ರೈತರು ಬೆಳೆಗಳಿಗೆ ಬೆಳೆವಿಮೆ ಮಾಡಿಸುತ್ತಾರೆ. ಉತ್ತಮವಾಗಿ ಮಳೆ ಬಂದು ಬೆಳೆ ಬಂದರೆ ಬೆಳೆವಿಮೆ ಬರುವುದಿಲ್ಲ. ಆದರೆ, ಸರಿಯಾಗಿ ಮಳೆಬಾರದೆ ಬೆಳೆಬಾರದ ವರ್ಷಗಳಲ್ಲಿ ಬೆಳೆವಿಮೆ ಸ್ವಲ್ಪಮಟ್ಟಿನ ಸಹಾಯವಾಗುತ್ತೆ. ಮುಂಗಾರು ಆರಂಭವಾಗುತ್ತಿದ್ದಂತೆ ಬೆಳೆವಿಮಾ ಕಂಪನಿಗಳು ಟೆಂಡರ್ …

Read More »

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ಭೋಪಾಲ್ (ಮಧ್ಯಪ್ರದೇಶ): ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿದ್ದ ವಿಮಾನವು ಮಂಗಳವಾರ ಸಂಜೆ ಮಧ್ಯಪ್ರದೇಶದ ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಆದರೆ, ವಿಮಾನದ ತುರ್ತು ಭೂಸ್ಪರ್ಶಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.     ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವನ್ನು ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಭೋಪಾಲ್ ಪೊಲೀಸ್ ಕಮಿಷನರ್ ಹರಿನಾರಾಯಣ ಚಾರಿ ಮಿಶ್ರಾ …

Read More »

ಜಿಂಕೆ‌‌ಗಳ ಕಾಟದಿಂದ ಹಗಲು ರಾತ್ರಿ ಎನ್ನದೆ ರೈತರು ಜಮೀನು ಕಾಯುತ್ತಿದ್ದಾರೆ.

ಹುಬ್ಬಳ್ಳಿ : ಕಳೆದ ವರ್ಷ ಅತಿವೃಷ್ಟಿಯಾಗಿ ರೈತರಿಗೆ ಬರೆ ಎಳೆದರೆ. ಈ ವರ್ಷ ಮುಂಗಾರು ಸರಿಯಾಗಿ ಆಗದೆ ರೈತರು ಸಂಕಷ್ಟದಲ್ಲಿ ಇರುವ ಬೆನ್ನಲ್ಲೇ ಅಷ್ಟೋ ಇಷ್ಟೋ ಬೆಳೆದ ಬೆಳೆಗೆ ಕಾಡು ಪ್ರಾಣಿಗಳ ಕಂಟಕ ಎದುರಾಗಿದೆ. ಇದೀಗ ಮುಂಗಾರು ಬೆಳೆ ಉಳಿಸಿಕೊಳ್ಳಲು ಧಾರವಾಡ ಜಿಲ್ಲೆಯ ಅನ್ನದಾತರು ಬಿಯರ್​ ಬಾಟಲಿ ಮೊರೆ ಹೋಗಿದ್ದಾರೆ. ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ, ಮುಳ್ಳೊಳ್ಳಿ, ಯರಗುಪ್ಪಿ, ಚಿಕ್ಕನೇರ್ತಿ, ಯರಿನಾರಾಯಣಪುರ ಸೇರಿದಂತೆ ಬಹುತೇಕ ಹಳ್ಳಿಗಳ ರೈತರ ಜಮೀನುಗಳಲ್ಲಿ ಜಿಂಕೆಗಳ ಹಾವಳಿ …

Read More »

ಮೂರು ಪ್ರಮುಖ ವಿಧೇಯಕಗಳಿಗೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ.

ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ)ವಿಧೇಯಕ 2023, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ 2023 ಮತ್ತು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ)(ತಿದ್ದುಪಡಿ) ವಿಧೇಯಕ 2023 ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.   ವಿಧಾನ ಪರಿಷತ್ ವಿತ್ತೀಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ …

Read More »

ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸಭೆ ದೀರ್ಘಾವಧಿ ಮೈತ್ರಿ ಎಂದ ಪ್ರಧಾನಿ ಮೋದಿ

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಸರಿ ಸುಮಾರು 10 ತಿಂಗಳು ಬಾಕಿಯಾಗಿದೆ. ಆದರೆ, ಈಗಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರಿನಲ್ಲಿ ಕಾಂಗ್ರೆಸ್​ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟವು ಎರಡು ದಿನಗಳ ಮಹತ್ವದ ಸಭೆ ನಡೆಸಿದೆ. ಮತ್ತೊಂದೆಡೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸಭೆ ಆರಂಭವಾಗಿದೆ. ಕಾಂಗ್ರೆಸ್​ 26 ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ತನ್ನ ಬಲ ಪ್ರರ್ದಶನ ಮಾಡಿದೆ. ಬಿಜೆಪಿಯು …

Read More »

ಮಗನಿಂದಲೇ ಹತ್ಯೆಯಾದ ವೃದ್ಧ ದಂಪತಿ.

ಬೆಂಗಳೂರು: ಅವರಿಬ್ಬರು ವೃದ್ಧ ದಂಪತಿ. ಪತ್ನಿ ಕೇಂದ್ರ ಸರ್ಕಾರದ ನೌಕರಿ ಮಾಡಿ ನಿವೃತ್ತರಾಗಿದ್ದರು. ಸಂಸಾದರ ಬಂಡಿ ಸಾಗಿಸಲು ವಯಸ್ಸು 61 ಆದರೂ ಪತಿ ಇನ್ನೂ ಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳು. ಅದರಲ್ಲಿ ಓರ್ವ ಉದ್ಯೋಗಸ್ಥನಾಗಿದ್ದರೆ ಇನ್ನೋರ್ವ ಮಗ ಮನೆಯಲ್ಲೇ ಇರುತ್ತಿದ್ದ. ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು ಈ ದಂಪತಿ. ಆದ್ರೆ ಪ್ರೀತಿಯಿಂದ ಬೆಳೆಸಿದ್ದ ಕಿರಿಯ ಮಗ ಅಪ್ಪ- ಅಮ್ಮನ ಪ್ರಾಣವನ್ನೇ ತೆಗೆದಿದ್ದಾನೆ. ಹೌದು, ಸಿಲಿಕಾನ್​ ಸಿಟಿಯಲ್ಲಿ …

Read More »

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್​ಗೆ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ವಿನೋದ್ ತೋಮರ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.   ಇಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಮಂಜೂರಿಗೆ ಮನವಿ ಮಾಡಿದರು. ಈ ಸಾಮಾನ್ಯ ಜಾಮೀನು ವಿಚಾರಣೆಯನ್ನು ಜುಲೈ 20ರಂದು ನಡೆಯಲಿದೆ. ಮುಂದಿನ …

Read More »

ಬೆಂಗಳೂರಿನ ಸಭೆ ಇದು ಭ್ರಷ್ಟರ ಸಭೆ: ಮೋದಿ

ನವದೆಹಲಿ : ಬೆಂಗಳೂರಿನಲ್ಲಿ ಸಭೆ ನಡೆಸುತ್ತಿರುವ ವಿರೋಧ ಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಭ್ರಷ್ಟರ ಸಭೆ ಎಂಬುದು ಜನರಿಗೆ ಗೊತ್ತಾಗುತ್ತಿದೆ ಮತ್ತು ತಮ್ಮ ಭ್ರಷ್ಟಾಚಾರ ಬಯಲಿಗೆ ಬಂದಾಗ ಈ ಪಕ್ಷಗಳು ಪರಸ್ಪರ ರಕ್ಷಣೆಗೆ ಮುಂದಾಗುತ್ತವೆ ಎಂದಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್ ಬ್ಲೇರ್‌ನಲ್ಲಿರುವ ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ ನಂತರ ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು. …

Read More »

ವಿಪಕ್ಷಗಳ ಸಭೆಯಲ್ಲಿ ಮಹಾಮೈತ್ರಿ ನಾಮಕರಣಕ್ಕೆ ನಾಲ್ಕು ಹೆಸರುಗಳ ಪ್ರಸ್ತಾವನೆ

ಬೆಂಗಳೂರು : ಕಾಂಗ್ರೆಸ್ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಷ್ಟ್ರೀಯ ವಿಪಕ್ಷಗಳ ಎರಡನೇ ‌ಮಹಾಘಟಬಂಧನ ಸಭೆ ನಡೆಯುತ್ತಿದೆ. 25 ಪಕ್ಷಗಳ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಮಹಾಮೈತ್ರಿ ಸಭೆ ಆರಂಭವಾಗಿದೆ. ಆರು ಪ್ರಮುಖ ಅಂಶಗಳ ಮೇಲೆ ಸಭೆಯಲ್ಲಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ಸಭೆ ಮಹತ್ವದ್ದಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, …

Read More »

ಮಹಾಘಟಬಂಧನ್ ಸಭೆ: ಹೋಟೆಲ್ ಸುತ್ತ ರಾರಾಜಿಸುತ್ತಿವೆ ರಾಷ್ಟ್ರೀಯ ನಾಯಕರ ಪೋಸ್ಟರ್ಸ್​

ಬೆಂಗಳೂರು : ಮಹಾಘಟಬಂಧನ್ ನಾಯಕರ ಸಭೆ ನಡೆಯುತ್ತಿರುವ ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ಸುತ್ತಮುತ್ತ ರಾಷ್ಟ್ರೀಯ ನಾಯಕರ ಪೋಸ್ಟರ್​ಗಳು ರಾರಾಜಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮೇರೆಗೆ ಎರಡನೇ ಸಭೆ ನಗರದ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ನಡೆಯುತ್ತಿದೆ. ಸಭೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಮಾಜಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ, ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, …

Read More »