ಕೃಷ್ಣಾ ನದಿಯಲ್ಲಿ ಗುರುವಾರ ಮೀನುಗಾರಿಕೆ ಮಾಡಲು ಹೋಗಿ ನಾಪತ್ತೆ ಯಾಗಿದ್ದ ಇಬ್ಬರ ಸಾವು ಸಂಭವಿಸಿದೆ. ಬಇಂದು ಕೃಷ್ಣಾ ನದಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಪರಶುರಾಮ ಲಮಾಣಿ ಹಾಗೂ ರಮೇಶ ಲಮಾಣಿ ಶವ ಪತ್ತೆಯಾಗಿವೆ. ತೆಪ್ಪದಲ್ಲಿ ಮೀನು ಹಿಡಿಯಲು ಮೂವರು ಜನ ಮೀನುಗಾರರು ತೆರಳಿದ್ದರು. ಗುರುವಾರ ಸಂಜೆ ಬೀಸಿದ ಭಾರಿ ಮಳೆಗಾಳಿಗೆ ತೆಪ್ಪ ನದಿಯಲ್ಲಿ ಮುಗುಚಿತ್ತು ಅದೃಷ್ಟವಶಾತ್ ಮೂವರ ಪೈಕಿ ಓರ್ವ ಅಕ್ಷಯ ಲಮಾಣಿ ಈಜಿ ದಡ ಸೇರಿದ್ದ. ಆ ಸಂದರ್ಬದಲ್ಲಿ ಪರಶುರಾಮ್ ಹಾಗೂ ರಮೇಶ ನಾಪತ್ತೆಯಾಗಿದ್ದರು.
ವಿಜಯ ಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ನದಿಯಲ್ಲಿ ಅವಘಢ ನಡೆದಿತ್ತು. ಸತತ ಎರಡು ದಿನಗಳ ಕಾಲ ಶೋಧಿಸಿದ ಬಳಿಕ ಇಂದು ಇಬ್ಬರ ಶವ ಪತ್ತೆಯಾಗಿವೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…