ಮಗನಿಗೆ ಈಜು ಕಲಿಸಲು ಭಾಂವಿಗೆ ಹೋದ ವ್ಯಕ್ತಿಯೊಬ್ಬ ಮಗನ ಜೊತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯವಿದ್ರಾಯಕ ಘಟನೆ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಮಂಗಳವಾರದಂದು ಮುಂಜಾನೆ ಜರುಗಿದೆ.
ಸತ್ತೆಪ್ಪ ರಾಮಪ್ಪ ಕಮತೆ (75) ಎಂಬವನು ತನ್ನ ಮಗ ಪರುಶರಾಮನಿಗೆ ಈಜು ಕಲಿಸಲು ಕಮತೆ ತೋಟದ ಭಾಂವಿಗೆ ಹೋಗಿದ್ದನು. ಮಗನ ಬೆನ್ನಿಗೆ ದಂಟಿನ ಸೂಡು ಕಟ್ಟಿ ಭಾಂವಿಯೊಳಗೆ ಇಳಿಸಿದಾಗ ದಂಟಿನ ಸೂಡು ಬಿಚ್ಚಿ ಪರುಶರಾಮ ಮುಳುಗ ತೊಡಗಿದಾಗ ತಂದೆ ಸತ್ತೆಪ್ಪ ತಾನೂ ಭಾಂವಿಗೆ ಹಾರಿದಾಗ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಘಟಪ್ರಭಾ ಪಿಎಸ್‍ಐ ಹಾಲಪ್ಪ ಬಾಲದಂಡಿ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡರು.
ಈ ಬಗ್ಗೆ ಘಟಪ್ರಭಾ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Laxmi News 24×7