ಬೆಂಗಳೂರು: ಲಡಾಖ್ ಗಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ವಾಸ್ತವ ಸಂಗತಿಯನ್ನು ಅರಿತುಕೊಳ್ಳಲು ಸಮ ಗ್ರ ತನಿಖೆಯಾಗಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವಗೌಡ ಅವರು ಆಗ್ರಹಿಸಿದ್ದಾರೆ.
ದೇವೇಗೌಡರು ತಮ್ಮ ಅಭಿಪ್ರಾಯವನ್ನು ಪ್ರಕಟಣೆ ಮೂಲಕ ಹೊರಹಾಕಿದ್ದಾರೆ. ಲಡಾಖ್ ನಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯಿಂದ ದೇಶದ ಜನರು ದಿಗ್ಬ್ರಮೆ ಗೊಂಡಿದ್ದಾರೆ. ಅಲ್ಲಿನ ವಾಸ್ತವ ಸಂಗತಿ ಏನು ಎಂಬುವುದರ ಬಗ್ಗೆ ತಿಳಿಯಲು ಸಮಗ್ರ ತನಿಖೆ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಇಲ್ಲಿಯವರೆಗೂ ಮಾಧ್ಯಮದವರಿಂದ ಮಾಹಿತಿ ಲಭ್ಯವಾಗಿದೆ ಹೊರತು, ಕೇಂದ್ರ ಸರ್ಕಾರದಿಂದ ನಿಖರ ವಿವರಗಳನ್ನು ನೀಡಿಲ್ಲಿ. ಹೀಗಾಗಿ ಅಲ್ಲಿ ಸೇನಾಧಿಕಾರಿಗಳು, ಯೋಧರ ಸ್ಥಿತಿಗೆ ಬಗ್ಗೆ ವಿರೋಧ ಪಕ್ಷದವರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದು ಪ್ರಚೋದನೆ ಮತ್ತು ಪ್ರತೀಕಾರದ ಸಮಯವಲ್ಲ. ಇತ್ತೀಚಿನ ದಿನಗಳಲ್ಲಿ, ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.