ಬೆಂಗಳೂರು : ದೇಶಾದ್ಯಂತ ಕೊವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್.12ರಂದೇ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಿಂದ ದೇಶದ 13 ರಾಜ್ಯಗಳಿಗೆ ಕೊವಿಶೀಲ್ಡ್ ಲಸಿಕೆಯನ್ನು ರವಾನಿಸಲಾಗಿದೆ.
ಭಾರತದಲ್ಲಿ ಜನವರಿ.16ರಿಂದ ಕೊರೊನಾವೈರಸ್ ಲಸಿಕೆ ವಿತರಣೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ, 50 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ದೇಶದ 13 ಕಡೆಗಳಿಗೆ 54.72 ಲಕ್ಷ ಕೊವಿಶೀಲ್ಡ್ ಲಸಿಕೆಯನ್ನು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕಳುಹಿಸಿ ಕೊಟ್ಟಿದೆ.
ಮಹಾರಾಷ್ಟ್ರದ ಪುಣೆಯಿಂದ ಕರ್ನಾಟಕದಲ್ಲಿರುವ ನಿಮ್ಮ ಜಿಲ್ಲೆಯ ನಿಮ್ಮದೇ ತಾಲೂಕಿನ ನಿಮ್ಮ ಪಕ್ಕದ ಹಳ್ಳಿಯಲ್ಲಿರುವ ಆರೋಗ್ಯ ಕೇಂದ್ರದವರೆಗೆ ಕೊವಿಶೀಲ್ಡ್ ಲಸಿಕೆ ತಲುಪಿದ್ದು ಹೇಗೆ ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.ದೇಶದ ಹಲವು ನಗರಗಳಿಗೆ ಕೊವಿಶೀಲ್ಡ್ ಲಸಿಕೆ
ದೇಶದ ಹಲವು ನಗರಗಳಿಗೆ ಕೊವಿಶೀಲ್ಡ್ ಲಸಿಕೆ
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನಿಕಾ ಜಂಟಿಯಾಗಿ ಸಂಶೋಧಿಸಿರುವ ಪುಣೆಯಲ್ಲಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕೊವಿಶೀಲ್ಡ್ ಲಸಿಕೆ ಉತ್ಪಾದಿಸಲಾಗುತ್ತಿದೆ. ಮೊದಲ ಹಂತದಲ್ಲಿ 13 ಕಡೆಗಳಿಗೆ ಡಿಸೆಂಬರ್.12ರಂದೇ ಕಳುಹಿಸಲಾಗಿದೆ. ಲಸಿಕೆ ಉತ್ಪಾದನೆ ಕೇಂದ್ರದಿಂದ ಹವಾನಿಯಂತ್ರಿತ ವಾಹನಗಳಲ್ಲಿ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿಂದ ಹವಾನಿಯಂತ್ರಿತ ವಿಮಾನಗಳ ಮೂಲಕ ದೇಶದ ವಿವಿಧ ನಗರಗಳಿಗೆ ಲಸಿಕೆಯನ್ನು ಕಳುಹಿಸಿ ಕೊಡಲಾಗಿದೆ.
ಮೊದಲ ಹಂತದಲ್ಲಿ ಏರ್ ಇಂಡಿಯಾ, ಸ್ಪೈಸ್ ಜೆಟ್, ಗೋ ಏರ್ ಮತ್ತು ಇಂಡಿಗೋ ಸಂಸ್ಥೆಯ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. 2 ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಲಸಿಕೆಯನ್ನು ಇರಿಸುವ ಅಗತ್ಯವಿದೆ. ಈ ಹಿನ್ನೆಲೆ ಮಂಜುಗಡ್ಡೆ ತುಂಬಿನ ಬಾಕ್ಸ್ ಗಳ ಮಧ್ಯದಲ್ಲಿ ಲಸಿಕೆಯನ್ನು ಇರಿಸಿ ಕಳುಹಿಸಿಕೊಡಲಾಗುತ್ತದೆ.
ನಿಮ್ಮೂರಿನ ಆರೋಗ್ಯ ಕೇಂದ್ರಕ್ಕೆ ಲಸಿಕೆ ರವಾನೆ
ನಿಮ್ಮೂರಿನ ಆರೋಗ್ಯ ಕೇಂದ್ರಕ್ಕೆ ಲಸಿಕೆ ರವಾನೆ
ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಇರುವ ಹವಾನಿಯಂತ್ರಿತ ಸೌಲಭ್ಯ ಹೊಂದಿರುವ ಸರ್ಕಾರಿ ಕೇಂದ್ರದಿಂದ ರಸ್ತೆ ಮಾರ್ಗವಾಗಿ ಜಿಲ್ಲಾ ಕೇಂದ್ರಗಳಿಗೆ ಕೊವಿಶೀಲ್ಡ್ ಲಸಿಕೆ ರವಾನಿಸಲಾಗುತ್ತದೆ. ಜಿಲ್ಲಾ ಕೇಂದ್ರಗಳಿಂದ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆಯನ್ನು ಕಳುಹಿಸಿ ಕೊಡಲಾಗುತ್ತದೆ. ಈ ವೇಳೆ ಅಗತ್ಯವಿರುವ ಕೋಲ್ಡ್ ಚೈನ್ ಪಾಯಿಂಟ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.ಕರ್ನಾಟಕದಲ್ಲಿ 6.35 ಲಕ್ಷ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ
ಕರ್ನಾಟಕದಲ್ಲಿ 6.35 ಲಕ್ಷ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ
ಮೊದಲ ಹಂತದಲ್ಲಿ ಕರ್ನಾಟಕದ 6,35,986 ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗುತ್ತದೆ. ಜನವರಿ.16ರ ಶನಿವಾರ ರಾಜ್ಯದಲ್ಲಿ ಲಸಿಕೆ ವಿತರಣೆ ಕಾರ್ಯವನ್ನು ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಎರಡು ಪ್ರಮುಖ ಲಸಿಕೆ ಸಂಗ್ರಹ ಕೇಂದ್ರಗಳನ್ನು ಹೊಂದಲಾಗಿದೆ. ಬೆಂಗಳೂರಿನಿಂದ ದಕ್ಷಣದ ಜಿಲ್ಲೆ ಮತ್ತು ಬೆಳಗಾವಿಯಿಂದ ಉತ್ತರದ ಜಿಲ್ಲೆಗಳಿಗೆ ಲಸಿಕೆ ರವಾನಿಸಲಾಗುತ್ತದೆ. ಇದರ ಜೊತೆಗೆ ಚಿತ್ರದುರ್ಗ, ಮಂಗಳೂರು, ಮೈಸೂರು, ಕಲಬುರಗಿ ಮತ್ತು ಬಾಗಲಕೋಟೆಗಳಲ್ಲಿ ಪ್ರಾದೇಶಿಕ ಲಸಿಕೆ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ.
ಲಸಿಕೆ ಸಾಗಾಟದ ಸಂದರ್ಭದಲ್ಲಿ ಹೆಚ್ಚಿನ ತಾಪಮಾನದಲ್ಲಿ ಲಸಿಕೆಯನ್ನು ಇರಿಸಿದ್ದಲ್ಲಿ, ಲಸಿಕೆ ಪರಿಣಾಮಕಾರಿಯಾಗಿ ಇರುವುದಿಲ್ಲ. ಹೀಗಾಗಿ ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಲಾಗಿರುತ್ತದೆ.ಕೊವಿಡ್-19 ಲಸಿಕೆ ಸಾಗಾಟಕ್ಕೆ ವಿಶೇಷ ವ್ಯವಸ್ಥೆ
ಕೊವಿಡ್-19 ಲಸಿಕೆ ಸಾಗಾಟಕ್ಕೆ ವಿಶೇಷ ವ್ಯವಸ್ಥೆ
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಐಸ್-ಲೈನ್-ರೆಫ್ರಿಜಿರೇಟರ್(ಐಎಲ್ಆರ್)ನಲ್ಲಿ 50 ರಿಂದ 200 ಲೀಟರ್ ಲಸಿಕೆಯನ್ನು ಸಂಗ್ರಹಿಸಿಡಲು ಸಾಧ್ಯವಾಗುತ್ತದೆ. ಒಂದು ಲೀಟರ್ ಎಂದರೆ 287 ಡೋಸ್ ಲಸಿಕೆ ಸಂಗ್ರಹಿಸಿಡಬಹುದು. ಇದರ ಜೊತೆ ಕೇಂದ್ರ ಸರ್ಕಾರದಿಂದ ಎರಡು ವಾಕ್ ಇನ್ ಕೂಲರ್ ಮತ್ತು ಒಂದು ವಾಕ್ ಇನ್ ಫ್ರಿಜರ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ರಾಜ್ಯ ಸರ್ಕಾರವು ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ ಅಡಿಯಲ್ಲಿ 30 ಜಿಲ್ಲೆಗಳಲ್ಲಿ 2870 ಕೋಲ್ಡ್ ಚೈನ್ ಪಾಯಿಂಟ್ ಗಳನ್ನು ಹೊಂದಿದೆ.
ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಕೋಲ್ಡ್ ಚೈನ್ ಪಾಯಿಂಟ್ ಗಳನ್ನು ಹೊಂದಲಾಗಿದೆ. ಇದರಿಂದ ರಾಜ್ಯದ ಪ್ರತಿಯೊಂದು ಪ್ರದೇಶಗಳಿಗೆ ಲಸಿಕೆಯನ್ನು ತಲುಪಿಸುವುದಕ್ಕೆ ಸಾಧ್ಯವಾಗುತ್ತದೆ. ಪ್ರತಿಯೊಂದು ಜಿಲ್ಲೆಗಳು ಇನ್ಸುಲೇಟೆಡ್ ವಾಹನಗಳನ್ನು ಹೊಂದಿದ್ದು, ಅದೇ ವಾಹನಗಳಲ್ಲಿ ಲಸಿಕೆಯನ್ನು ಸಾಗಾಟ ಮಾಡಲಾಗುತ್ತದೆ.