ವಿಧವಾ ಮಾಸಾಶನಕ್ಕಾಗಿ ಕಚೇರಿಗೆ ಬಂದಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಗ್ರೇಡ್ 2 ತಹಸಿಲ್ದಾರ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ.
ಚಿಕ್ಕೋಡಿ ಗ್ರೇಡ್ 2 ತಹಸಿಲ್ದಾರ ಜಮಾದಾರ ಎನ್ನುವಾತ ಮಾನಗೇಡಿ ಕೃತ್ಯ ಮಾಡಿದಾತ.
ತಾಲೂಕಿನ ಮಹಿಳೆಯೊಬ್ಬಳ ಪತಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ತನಗೆ ವಿಧವಾ ಮಾಸಾಶನ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದಾಳೆ. ಆಕೆಯ ಪುತ್ರ ಈ ಸಂಬಂಧ ಹಲವು ಬಾರಿ ತಹಸಿಲ್ದಾರ ಕಚೇರಿಗೆ ಬಂದಿದ್ದಾನೆ. ಆದರೆ ಕೆಲಸ ಮಾಡಿಕಕೊಡದ ಜಮಾದಾರ, ತಾಯಿಯನ್ನು ಕಚೇರಿಗೆ ಕಳಿಸುವಂತೆ ಸೂಚಿಸಿದ್ದಾನೆ.
ಮಂಗಳವಾರ ತನ್ನ ತಾಯಿಯೊಂದಿಗೆ ಮಗ ಕಚೇರಿಗೆ ಬಂದಾಗ, ಆಕೆಯ ಮಗನ ಹತ್ತಿರ ನೀನು ಹೊರಗೆ ಇರು ಎಂದು ಕಳಿಸಿದ್ದಾನೆ. ಮಗ ಹೊರಗೆ ಹೋದ ನಂತರ ಆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಜಮಾದಾರ, ತನ್ನ ಮರ್ಮಾಂಗ ಪ್ರದರ್ಶಿಸಿದ್ದಾನೆ. ಚೀರುತ್ತ ಹೊರಗೆ ಓಡಿ ಬಂದ ಮಹಿಳೆ ಮಗನಿಗೆ ವಿಷಯ ತಿಳಿಸಿದ್ದಾಳೆ.
ನಂತರ ದೊಡ್ಡ ಗಲಾಟೆಯೇ ನಡೆದಿದೆ. ಸಾರ್ವಜನಿಕರೂ ಅಲ್ಲಿಗೆ ಆಗಮಿಸಿ ಆತನಿಗೆ ಒದೆ ನೀಡಿದ್ದಾರೆ. ಈ ಹಿಂದೆ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆಗೂ ಇದೇ ರೀತಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.ನಂತರ ತಹಸಿಲ್ದಾರ ಪ್ರೀತಂ ಜೈನ್ ಆಗಮಿಸಿ ಪ್ರಕರಣದ ತನಿಖೆ ನಡೆಸುವುದಾಗಿ ಭರವಸೆ ನೀಡಿ ತಿಳಿಗೊಳಿಸಿದರು.
Laxmi News 24×7