Breaking News

ಚಾಂಪಿಯನ್‌ ಟಗರಿಗೆ ಬಂಗಾರದ ಬೆಲೆ; ಎಂಟು ಲಕ್ಷ ಕೊಡುತ್ತೇವೆ ಎಂದರೂ ಮಾರದ ಟಗರು ಮಾಲೀಕ

Spread the love

ಬಾಗಲಕೋಟೆ: ಒಂದು ಟಗರಿಗೆ ಅಬ್ಬಬ್ಬಾ ಎಂದರೆ ಎಷ್ಟು ಬೆಲೆ ಇರಬಹುದು. ಇಪ್ಪತ್ತು ಸಾವಿರ ಹೆಚ್ಚೆಂದರೆ ಐವತ್ತು ಇನ್ನು ಹೆಚ್ಚೆಂದರೆ ಒಂದು ಲಕ್ಷ. ಆದರೆ ಬಾಗಲಕೋಟೆಯ ಟಗರನ್ನು ಬರೊಬ್ಬರಿ ಎಂಟು ಲಕ್ಷಕ್ಕೆ ಖರೀದಿಗೆ ಕೇಳಿದ್ದಾರೆ. ಆದರೆ ಗಮನಿಸಬೇಕಾದ ಅಂಶ ಎಂದರೆ ಎಂಟು ಲಕ್ಷ ಕೊಡುವುದಕ್ಕೆ ಬಂದರೂ ಈ ಟಗರಿನ ಯಜಮಾನ ಮಾತ್ರ ಟಗರನ್ನು ಮಾರಾಟ ಮಾಡುವುದಕ್ಕೆ ತಯಾರಿಲ್ಲ. ಅಷ್ಟಕ್ಕೂ ಈ ಟಗರಿಗೆ ಇಷ್ಟೊಂದು ಬೆಲೆ ಬರುವುದಕ್ಕೆ ಕಾರಣ ಏನು? ಈ ಟಗರಲ್ಲಿ ಏನಿದೆ ಅಂತಹ ವಿಶೇಷತೆ? ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.

ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಗ್ರಾಮದ ಟಗರುಗಳಿಗೆ ಲಕ್ಷ ಲಕ್ಷ ಬೆಲೆ ಇದೆ. ಟಗರು ಮಾಲೀಕ ಹೆಚ್.ಎನ್.ಸೇಬಣ್ಣವರ ಟಗರುಗಳು ಈಗ ರಾಜ್ಯ ಹೊರರಾಜ್ಯದಲ್ಲಿ ಕಮಾಲ್ ಮಾಡಿವೆ. ಅದರಲ್ಲೂ ಇವರು ಸಾಕಿದ ಲವ್ಲಿ ಬಾಯ್ ಎಂಬ ಹೆಸರಿನ ಟಗರು ಹೆಚ್ಚು ಪರಾಕ್ರಮಶಾಲಿಯಾಗಿದೆ. ಇದು ಅಖಾಡಕ್ಕೆ ಇಳಿತು ಅಂದರೆ ಎದುರಾಳಿ ಟಗರು ಮಣ್ಣು ಮುಕ್ಕೋದು ಸಾಮಾನ್ಯ. ರಾಜ್ಯ, ಹೊರರಾಜ್ಯದ ಸ್ಪರ್ಧೆಯಲ್ಲೂ ಈ ಟಗರು ಭಾಗವಹಿಸಿದ್ದು, 300ಕ್ಕೂ ಹೆಚ್ಚು ಟಗರುಗಳಿಗೆ ಡಿಚ್ಚಿ ಹೊಡೆದು ಸೋಲುಣಿಸಿದೆ. ಇದರಿಂದ ಲವ್ಲಿ ಬಾಯ್ ಟಗರು ರಾಜ್ಯಾದ್ಯಂತ ಅಭಿಮಾನಿಗಳನ್ನು ಗಳಿಸಿಕೊಂಡಿದೆ.

ಲವ್ಲಿ ಬಾಯ್ ಟಗರು ಅಖಾಡದಲ್ಲಿದ್ದರೆ ನೋಡೋದಕ್ಕೆ ಸಾವಿರಾರು ಜನರು ಹರಿದು ಬರುತ್ತಾರೆ. ಈ ಟಗರು ಈಗಾಗಲೇ ಸ್ಪರ್ಧೆಯಲ್ಲಿ ಬಹುಮಾನವಾಗಿ 5ಲಕ್ಷಕ್ಕೂ ಅಧಿಕ ಹಣ, ಬೈಕ್, ಹೋರಿ ಗೆದ್ದು ಸ್ಪರ್ದಾ ಭೂಮಿಕೆಯಲ್ಲಿ ತನ್ನ ಚಾಪು ಮೂಡಿಸಿದೆ. ಹೀಗಾಗಿ ಟಗರು ಪ್ರಿಯರೊಬ್ಬರು ಇದನ್ನು 8 ಲಕ್ಷ ಕೊಟ್ಟು ಖರೀದಿಸಲು ಮುಂದೆ ಬಂದಿದ್ದಾರೆ. ಆದರೆ ಟಗರು ಮಾಲೀಕ ಹೆಚ್.ಎನ್. ಸೇಬಣ್ಣವರ ಹಾಗೂ ಪೋಷಕ ಶ್ರೀಶೈಲ್ ಅವರು ಈ ಟಗರನ್ನು ಮಾರಾಟ ಮಾಡಿಲ್ಲ. ನಮಗೆ ಹಣ ಮುಖ್ಯವಲ್ಲ ನಮಗೆ ಇಂತಹ ಟಗರು ಸಾಕಿರುವುದರ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಇದು ಎಂದು ತಿಳಿಸಿದ್ದಾರೆ.

ಹೆಚ್.ಎನ್. ಸೇಬಣ್ಣವರ ಓರ್ವ ನಾಟಕಕಾರ, ಸಾಹಿತಿ ಹಾಗೂ ಕಲಾವಿದರಾಗಿದ್ದು, ಕೃಷಿ ಕೆಲಸ ಮಾಡುತ್ತಾರೆ. ಅದರ ಜತೆಗೆ ಟಗರುಗಳನ್ನು ಸಾಕುತ್ತಿದ್ದಾರೆ. ಇವರ ಮನೆಯಲ್ಲಿ ಒಟ್ಟು 12 ಟಗರುಗಳಿದ್ದು, ಒಂದಕ್ಕಿಂತ ಒಂದು ಬಲಿಷ್ಠವಾಗಿ ಬೆಳೆದಿವೆ. ಅಖಾಡಕ್ಕೆ ಇವರ ಟಗರುಗಳು ಇಳಿದರೆ ಪ್ರಥಮ, ದ್ವಿತೀಯ ಬಹುಮಾನ ಪಕ್ಕಾ. ಈಗಾಗಲೇ ಧಾರವಾಡ, ಬೆಳಗಾವಿ, ದಾವಣಗೆರೆ, ವಿಜಯಪುರ, ಚಿತ್ರದುರ್ಗದಲ್ಲಿನ ಟಗರಿನ ಕಾಳಗದಲ್ಲಿ ಈ ಟಗರುಗಳು ಭಾಗಿಯಾಗಿವೆ.

ಲವ್ಲಿ ಬಾಯ್ ಟಗರಿಗೆ ಈಗ ಮೂರು ವರ್ಷವಿದ್ದು, ಎಂಟು ಹಲ್ಲು ಹೊಂದಿದೆ. ಒಂದು ವರ್ಷದಿಂದಲೆ ಕಾದಾಟಕ್ಕೆ ಇಳಿದಿರುವ ಲವ್ಲಿ ಬಾಯ್ ಟಗರು ಎಲ್ಲರ ಮೆಚ್ಚುಗೆ ಗಳಿಸಿದೆ. ಇನ್ನು ಇದರ ಜತೆಗೆ ಉಳಿದ ಟಗರುಗಳು ಕೂಡ ಜಟ್ಟಿಗಳಂತೆ ತಯಾರಿದ್ದು, ಅವುಗಳ ಡಿಚ್ಚಿಯಾಟ ನೋಡೋದೆ ಕಣ್ಣಿಗೆ ಹಬ್ಬ. ಇನ್ನು ಲವ್ಲಿ ಬಾಯ್ ಟಗರಿಗೆ ಎಂಟು ಲಕ್ಷ ಬೆಲೆ ಬಂದರೆ ಉಳಿದ ಟಗರುಗಳು ಏನು ಕಡಿಮೆ ಇಲ್ಲ. ಅವುಗಳಿಗೂ ಒಂದು ಲಕ್ಷದಿಂದ ಮೂರು ಲಕ್ಷದವರೆಗೂ ಜನರು ಖರೀದಿಗೆ ಕೇಳುತ್ತಿದ್ದಾರೆ. ಇನ್ನು ಟಗರುಗಳ ಆರೈಕೆ ಮಾಡುತ್ತಿರುವ ಶ್ರೀಶೈಲ್ ಅವರು ದಿನಾಲು ಬೆಳಿಗ್ಗೆ ಸಂಜೆ ಒಂದೊಂದು ಲೀಟರ್ ಹಾಲು, ಎರಡು ಹೊತ್ತು ತತ್ತಿ ಕುಡಿಸುತ್ತಾರೆ. ಜತೆಗೆ ಮೇವು ,ಕಾಳು ಅಂತ ಪ್ರತಿ ತಿಂಗಳು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.


Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ