Breaking News

ಅತ್ತೆಯ ಒಡವೆ ಅಳಿಯ ದಾನ ಮಾಡಿದಂತೆ ಪ್ರಧಾನಿ ನಡೆ: ದಿನೇಶ್ ಗುಂಡೂರಾವ್

Spread the love

ಬೆಂಗಳೂರು, : ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟ ಮಾದರಿಯಲ್ಲಿಯೇ ಪ್ರಚಾರಕ್ಕಾಗಿ ಕೋವಿಡ್ ಲಸಿಕೆಯನ್ನು ವಿದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟೀಕಿಸಿದರು.

ಸೋಮವಾರ ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಆಸೆಗೆ ನಮ್ಮ ಲಸಿಕೆಯನ್ನು ವಿದೇಶಕ್ಕೆ ದಾನ ಮಾಡಿದ್ದಾರೆ. ಇದು ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟಂತೆ ಆಗಿದೆ ಎಂದರು.

ವಿದೇಶಗಳಲ್ಲೂ ಕೋವಿಡ್ ಲಸಿಕೆ ಸಿದ್ಧವಾಯಿತು. ಆದರೆ, ಆ ದೇಶಗಳು ಲಸಿಕೆಯನ್ನು ತಮ್ಮಲ್ಲೇ ಉಳಿಸಿಕೊಂಡವು. ಆದರೆ, ಈ ದೇಶದ ಪ್ರಧಾನಿ ಮೋದಿ ಮಾಡಿದ್ದೇನು ಎಂದು ಪ್ರಶ್ನಿಸಿದ ಅವರು, ಲಸಿಕೆಯ ಪರಿಣಾಮದ ಬಗ್ಗೆ ಮಾರ್ಗಸೂಚಿ ಹೊರಡಿಸಿ ಎಂದರೆ, ಕಾಂಗ್ರೆಸ್ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಮೋದಿ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದರು.

ತಮ್ಮ ಅಸಮರ್ಥತತೆಗೆ ವಿಪಕ್ಷಗಳನ್ನು ದೂರುವುದು ಎಷ್ಟರಮಟ್ಟಿಗೆ ಸರಿ. ಇನ್ನು, ಪ್ರಧಾನಿ ಮೋದಿ ಸರಕಾರದ ಎಡವಟ್ಟುಗಳನ್ನು ನ್ಯಾಯಾಲಯಗಳೇ ಜನರ ಮುಂದೆ ತೆರೆದಿಟ್ಟಿದೆ. ಅಲ್ಲದೆ, ದೇಶದಲ್ಲಿ ಹಿಟ್ಲರ್‍ನ ನಾಝಿ ಆಡಳಿತವಿದೆ. ಇಲ್ಲಿ ತಪ್ಪು ಒಪ್ಪುಗಳನ್ನು ಪ್ರಶ್ನೆ ಮಾಡಿದರೆ ಕೇಂದ್ರದ ದುಷ್ಟ ಸರಕಾರ ಅದನ್ನು ವಿಚ್ಛಿದ್ರಕಾರಿಯಾಗಿ ದಮನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

 


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ