Breaking News

ಕಲ್ಯಾಣ ಮಂಟಪಗಳಿಗೆ ನಿರ್ಬಂಧ ಹೇರದಿರಲು ಮನವಿ

Spread the love

ಬೆಂಗಳೂರು, ಮಾ.17- ಕಾರ್ಯಕ್ರಮಗಳನ್ನು ಎಂದಿನಂತೆ ನಡೆಸಲು ಅನುಮತಿ ನೀಡುವ ಮೂಲಕ ಕಲ್ಯಾಣ ಮಂಟಪಗಳು ಮತ್ತು ಸಮುದಾಯ ಭವನಗಳನ್ನು ಪುನರಾರಂಭಿಸಲು ಅವಕಾಶ ಕಲ್ಪಿಸುವಂತೆ ಕರ್ನಾಟಕ ಮ್ಯಾರೇಜ್ ಹಾಲ್ಸ್ ವೆಲ್‍ಫೇರ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದೆ. ಈಗಾಗಲೇ ಮದುವೆ ಕಾರ್ಯಕ್ರಮಗಳಿಗೆ 50 ಜನ ಸೇರಲು ಅನುಮತಿ ನೀಡಿರುತ್ತೀರಿ. ಆದರೆ, ಕಾರ್ಯಕ್ರಮ ಆಯೋಜಕರು ಇದಕ್ಕೆ ಸ್ಪಂದಿಸುತ್ತಿಲ್ಲ. ಹಾಗಾಗಿ ಕಲ್ಯಾಣ ಮಂಟಪದ ವಿಸ್ತಾರಕ್ಕೆ ಅನುಗುಣವಾಗಿ ಜನ ಸೇರಲು ಹಾಗೂ ಸುರಕ್ಷತಾ ಕ್ರಮದ ಅಂಗವಾಗಿ ಪೀಠೋಪಕರಣಗಳನ್ನು ಒಂದು ಮೀಟರ್‍ಗೆ ಒಂದರಂತೆ ಹಾಕುವ ಮೂಲಕ ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಸಿ ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದೆ.

ಈ ವಿಷಯ ಪರಿಗಣಿಸಿ ಮದುವೆ ಸಮಾರಂಭ ನಡೆಸಲು ಅನುವು ಮಾಡಿಕೊಟ್ಟಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಕಲ್ಯಾಣಮಂಟಪಗಳ ಮಾಲೀಕರು ಕೋರಿದ್ದಾರೆ. ಕಲ್ಯಾಣ ಮಂಟಪಗಳಿಂದ ಸರ್ಕಾರಕ್ಕೆ ಆಸ್ತಿ ತೆರಿಗೆ, ಟ್ರೇಡ್ ಲೈಸೆನ್ ಶುಲ್ಕ, ಆದಾಯ ತೆರಿಗೆ, ವಿದ್ಯುತ್ ಹಾಗೂ ಜಲ ಮಂಡಳಿ ವಾಣಿಜ್ಯ ಶುಲ್ಕಗಳು ಸಂದಾಯವಾಗುತ್ತದೆ. ಇದರಿಂದ ಬೊಕ್ಕಸಕ್ಕೆ ಹಣ ಬರುತ್ತದೆ. ಇದರೊಂದಿಗೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಲ್ಯಾಣಮಂಟಪದ ಕಾರ್ಯಕ್ರಮಗಳು ಸಂಪೂರ್ಣವಾಗಿ ರದ್ದಾಗಿ ಈಗಲೂ ಚೇತರಿಸಿಕೊಳ್ಳದ ಕಾರಣ ಭರಿಸಬೇಕಾದ ತೆರಿಗೆಗಳಲ್ಲಿ ಕೆಲವು ರಿಯಾಯಿತಿ ನೀಡಿ ಕಷ್ಟ ಪರಿಹರಿಸಬೇಕೆಂದು ಮನವಿ ಮಾಡಿದ್ದಾರೆ.

ಈಗಾಗಲೇ ನಿಗದಿಯಾಗಿರುವ ಕಾರ್ಯಕ್ರಮ ಗಳಿಗೆ ಮುಂಗಡ ಹಣವನ್ನು ಪಡೆದಿದ್ದು, ಆ ಕಾರ್ಯಕ್ರಮಗಳು ರದ್ದಾದ ಕಾರಣ ಹಣ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಮೇಲೆ ಹಲವು ಒತ್ತಡ ಬರುತ್ತಿವೆ. ಜತೆಗೆ ಮಾಸಿಕ ಖರ್ಚುಗಳಾದ ಮ್ಯಾನೇಜರ್, ಸೆಕ್ಯೂರಿಟಿ ಸಂಬಳ, ಹೌಸ್ ಕೀಪಿಂಗ್ ಇನ್ನಿತರೆ ವೆಚ್ಚ ಭರಿಸಲೇಬೇಕಾಗಿದ್ದು, ಸಾಕಷ್ಟು ತೊಂದರೆ ಎದುರಾಗಿದೆ.

ಕಲ್ಯಾಣ ಮಂಟಪಗಳಿಗೆ ಅನುಮತಿ ನೀಡಿದರೆ ಅಡುಗೆಯವರು, ಲೈಟಿಂಗ್, ಶಾಮಿಯಾನ, ಫೆÇೀಟೋ, ವಿಡಿಯೋಗ್ರಾಫರ್, ಪುರೋಹಿತರು, ಪತ್ರಿಕೆ ಪ್ರಿಂಟ್, ಮಾರಾಟಗಾರರು, ಹೂಮಾರು ವವರೂ ಸೇರಿದಂತೆ ಉದ್ಯೋಗ ಸೃಷ್ಟಿಯಾಗಿ ಕಡು ಕಷ್ಟ ಅನುಭವಿಸಿದವರಿಗೆ ನೆರವಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ.

 

https://youtu.be/kyxoU5IIGfs

 


Spread the love

About Laxminews 24x7

Check Also

ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

Spread the love ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ