Breaking News

ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ: ವಿಡಿಯೋ ಸಖತ್ ವೈರಲ್!

Spread the love

ಆಸ್ಟ್ರೇಲಿಯಾದ ಕಾಡೊಂದರಲ್ಲಿ ಸಿಕ್ಕಿರುವ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು, ಅದರ ಮೈಮೇಲೆ ಬೆಳೆದಿದ್ದ ಸುಮಾರು 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹದ ಭಾರವನ್ನು ಇಳಿಸಲಾಗಿದೆ. ಈ ಕುರಿಗೆ ‘ಬರಾಕ್’ ಎಂದು ಹೆಸರು ಇಡಲಾಗಿದೆ. ಹೌದು, ಕುರಿಗಳು ಉಣ್ಣೆಗೆ ಪ್ರಸಿದ್ಧಿ. ಆದರೆ ಈ ಕುರಿ ಮೈಮೇಲೆ ಬೆಳೆದಿದ್ದ ಉಣ್ಣೆಯನ್ನು ನೋಡಿ ಸ್ವತಃ ಅದನ್ನು ರಕ್ಷಿಸಿದ ಜನರೇ ಬೆಚ್ಚಿಬಿದ್ದಿದ್ದಾರೆ. ತನ್ನ ಮೈಮೇಲೆಲ್ಲಾ ಉಣ್ಣೆ ಬೆಳೆಸಿಕೊಂಡಿರುವ ಈ ಕುರಿ ನೋಡಲು ಬೇರೆ ಪ್ರಾಣಿ ರೀತಿ ಕಾಣುತ್ತದೆ.

ಇದರ ಮೈಮೇಲಿದ್ದ ಉಣ್ಣೆ ಒಂದು ವಯಸ್ಕ ಕಾಂಗರೂವಿನ ಅರ್ಧದಷ್ಟು ತೂಕವನ್ನು ಹೊಂದಿದೆ. ಅನೇಕ ವರ್ಷಗಳ ಬಳಿಕ ಆಸ್ಟ್ರೇಲಿಯಾ ಕಾಡಿನಲ್ಲಿ ಈ ಕುರಿ ಕಂಡುಬಂದದಿದೆ. ಹೀಗಾಗಿ ಬರೋಬ್ಬರಿ 35 ಕೆಜಿಯಷ್ಟು ಉಣ್ಣೆಯನ್ನು ಬೆಳೆಸಿಕೊಂಡಿದೆ. ಮಿಷನ್‌ನ ಕೈಲ್ ಬೆಹ್ರೆಂಡ್ ಪ್ರಕಾರ, ಮೆಲ್ಬೋರ್ನ್‌ನಿಂದ ಉತ್ತರಕ್ಕೆ 60 ಕಿಲೋಮೀಟರ್ ದೂರದಲ್ಲಿರುವ ವಿಕ್ಟೋರಿಯಾದ ಲ್ಯಾನ್ಸ್‌ ಫೀಲ್ಡ್ ಬಳಿಯ ಎಡ್ಗರ್ಸ್ ಮಿಷನ್ ಫಾರ್ಮ್ ತಾಣದ ಸಿಬ್ಬಂದಿ ಈ ಕುರಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಅಲ್ಲಿರುವ ಇತರ ಕುರಿಗಳೊಂದಿಗೆ ‘ಬರಾಕ್’ ಇದೀಗ ನಿವೃತ್ತ ಜೀವನ ನಡೆಸುತ್ತಿದೆ. ಈ ಕುರಿಯನ್ನು ಹಿಂದೆ ಯಾರೋ ಸಾಕುತ್ತಿದ್ದರೆಂದು ತೋರುತ್ತದೆ. ಏಕೆಂದರೆ ಅದರ ಕಿವಿಯ ಮೇಲೆ ಟ್ಯಾಗ್ ಇದೆ ಎಂದು ಬೆಹ್ರೆಂಡ್ ಹೇಳಿದ್ದಾರೆ. ಕಾಡಿನಲ್ಲಿ ಬಂಡೆಗಳ ಮೇಲೆ ಓಡಾಡುತ್ತಾ ಕೆಲಕಾಲ ಕಳೆದ ಕುರಿಯ ಕಾಲುಗಳು ಬಲಿಷ್ಠವಾಗಿವೆ. ಕಣ್ಣಿನ ಸುತ್ತ ಉಣ್ಣೆ ಬೆಳೆದ ಕಾರಣ ಕುರಿಗೆ ಸರಿಯಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ.

: ಉದ್ಯಮಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ, ಇನ್ನೂ 100 ಸರ್ಕಾರಿ ಉದ್ಯಮಗಳು ಖಾಸಗೀಕರಣವಾಗಲಿದೆ; ಮೋದಿ

ಕುರಿಗಳ ಉಣ್ಣೆಯನ್ನು ವರ್ಷಕೊಮ್ಮೆಯಾದರೂ ಕತ್ತರಿಸಬೇಕು. ಇಲ್ಲದಿದ್ದರೆ ಅದರ ಮೈಮೇಲೆ ಉಣ್ಣೆ ಬೆಳೆಯುತ್ತಾ ಹೋಗುತ್ತದೆ. ‘ಬರಾಕ್’ನ ಮೈಮೇಲೆ ಬೆಳೆದಿದ್ದ ಎಲ್ಲಾ ಉಣ್ಣೆಯನ್ನು ಕತ್ತರಿಸಿ ತೂಕಕ್ಕೆ ಹಾಕಿದ ಬಳಿಕ ಅದು 35.4 ಕೆಜಿಯಷ್ಟು ತೂಕವಿತ್ತು ಎಂದು ಬೆಹ್ರೆಂಡ್ ಹೇಳಿದ್ದಾರೆ. ಕುರಿಗಳು ನಿಜವಾಗಿಯೂ ಧೈರ್ಯಶಾಲಿ ಪ್ರಾಣಿಗಳಾಗಿವೆ. ನಾವು ಅವುಗಳನ್ನು ಪ್ರೀತಿಸಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲವೆಂದು ಅವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಕಾಡಿನಲ್ಲಿ ಕಳೆದುಹೋಗಿ ಬರೋಬ್ಬರಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ‘ಬರಾಕ್’ ಹೆಸರಿನ ಕುರಿಯ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಈ ಕುರಿಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಚನ್ನಮ್ಮನ ಹೋರಾಟ ನಮಗೆ ಆದರ್ಶವಾಗಲಿ: ಸಚಿವ ಸತೀಶ ಜಾರಕಿಹೊಳಿ

Spread the love ಕಿತ್ತೂರು ಉತ್ಸವ-2025: ಚನ್ನಮ್ಮನ ಸಾಹಸಗಾಥೆಯ ಅನಾವರಣ ಚನ್ನಮ್ಮನ ಹೋರಾಟ ನಮಗೆ ಆದರ್ಶವಾಗಲಿ: ಸಚಿವ ಸತೀಶ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ