Breaking News

ಪೊಲೀಸ್ ಠಾಣೆಯ ಎದುರು ಅಸ್ಥಿಪಂಜರ ಪತ್ತೆ; ತನಿಖೆ ನಡೆಸಲು ಮುಂದಾದ ಪೊಲೀಸ್ ಸಿಬ್ಬಂದಿ

Spread the love

ಬೆಂಗಳೂರು : ಚರಂಡಿ ದುರಸ್ತಿ ವೇಳೆ ಮನುಷ್ಯನ ಅಸ್ಥಿಪಂಜರವೊಂದು ಪತ್ತೆಯಾದ ಘಟನೆ ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಎದುರಿನಲ್ಲಿ ನಡೆದಿದೆ. ಸುಮಾರು ನಾಲ್ಕು ವರ್ಷ ಹಿಂದೆ ಸಂಭವಿಸಿದ ಘಟನೆ ಇದಾಗಿರಬಹುದು ಎಂದು ಶಂಕಿಸಲಾಗಿದೆ . ಈ ಅಸ್ತಿಪಂಜರದ ಕುರಿತಾದ ತನಿಖೆ ನಡೆಸಲಾಗುತ್ತಿದೆ ಎಂದು ವಿಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ .

ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಮುಂದಿರುವ ಮುಚ್ಚಿದ ಮೋರಿಯಲ್ಲಿ ಕಸಗಳು ತುಂಬಿ ಚರಂಡಿ ನೀರು ಮುಂದೆ ಸಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ, ಸೋಮವಾರ ಮಧ್ಯಾಹ್ನ ಬಿಬಿಎಂಪಿ ಸಿಬ್ಬಂದಿಗಳು ಮೂರಯ . ಹೀಗಾಗಿ ಸೋಮವಾರ ಮಧ್ಯಾಹ್ನ ಬಿಬಿಎಂಪಿ ಸಿಬ್ಬಂದಿ ಮೋರಿಯ ಕಲ್ಲನ್ನು ತೆಗೆದು ಚರಂಡಿ ಸ್ವಚ್ಛಗೊಳಿಸುತ್ತಿದ್ದರು . ಆ ವೇಳೆ ಶವದ ಅಸ್ಥಿಪಂಜರ ಪತ್ತೆಯಾಗಿದ್ದು, ಕೂಡಲೇ ಬಿಬಿಎಂಪಿ ಸಿಬ್ಬಂದಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು .

ಅಸ್ಥಿಪಂಜರವನ್ನು ವಶಕ್ಕೆ ಪಡೆಯಲಾಗಿದ್ದು , ಈ ಸ್ಥಳದಲ್ಲಿನ ಮಣ್ಣನ್ನು ಕೂಡ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಎರಡು ವರ್ಷಕ್ಕೂ ಹಿಂದೆಯೇ ಶವವನ್ನು ಚರಂಡಿಯಲ್ಲಿ ಹಾಕಿರಬಹುದು ಎಂದು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ . ಅಷ್ಟೇ ಅಲ್ಲದೆ, 4 ವರ್ಷದಿಂದ ಇತ್ತೀಚಿನವರೆಗೂ ಕಾಣೆಯಾಗಿ ಪತ್ತೆಯಾಗದೆ ಇರುವ ಪ್ರಕರಣಗಳ ಕುರಿತು ತನಿಖೆ ನಡೆಸುತ್ತೇವೆ ಎಂದು ಡಿಸಿಪಿ ತಿಳಿಸಿದ್ದಾರೆ .


Spread the love

About Laxminews 24x7

Check Also

ವಾರದಲ್ಲಿ 6 ದಿನ ಮೌನ ವ್ರತ: ಭಕ್ತರ ಅಚ್ಚರಿಗೆ ಕಾರಣವಾಯ್ತು ಗವಿಸಿದ್ದೇಶ್ವರ ಸ್ವಾಮೀಜಿ ನಡೆ

Spread the loveಕೊಪ್ಪಳ, ಅಕ್ಟೋಬರ್​ 14: ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Abhinava Gavisiddeshwara Swamiji) ನಡೆದಾಡುವ ದೇವರು ಎಂದೇ ಪ್ರಸಿದ್ದ. ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ