Breaking News

ಬೆಳಗಾವಿ ಕೃಷ್ಣಾ ಪಾಟೀಲ್ ಎಂಬುವವರ ಹೋರಿಯನ್ನು 4ಲಕ್ಷ 55 ಸಾವಿರ ರೂಪಾಯಿ ಕೊಟ್ಟು ಖರೀದಿ

Spread the love

ಧಾರವಾಡ: ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಬಸಪ್ಪ ಅವರಿಗೆ ಸೇರಿದ ಹೋರಿಯೊಂದು 4.55 ಲಕ್ಷ ರೂ.ಗೆ ಬಿಕಾರಿಯಾಗಿ ಎಲ್ಲರ ಹುಬ್ಬೆರುವಂತೆ ಮಾಡಿದೆ.

ಬೆಳಗಾವಿ ಜಿಲ್ಲೆಯ ಬೆಳಗುಂದಿಯ ಕೃಷ್ಣಾ ಪಾಟೀಲ್ ಎಂಬುವವರು ಈ ಹೋರಿಯನ್ನು ಹುಡುಕಿಕೊಂಡು ಬಂದು, 4ಲಕ್ಷ 55 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ.

ಹೋರಿಯ ಮಾಲೀಕ ಬಸಪ್ಪ ಅವರ ತಂದೆ ಭೀಮಪ್ಪ ಕಳೆದ ನಾಲ್ಕು ವರ್ಷಗಳ ಹಿಂದೆ ರಾಣೆಬೆನ್ನೂರ ತಾಲೂಕು ದೇವರಗುಡ್ಡದಲ್ಲಿ 30 ಸಾವಿರ ರೂಪಾಯಿಗೆ ಜೋಡಿ ಹೋರಿ ಖರೀದಿಸಿದ್ದರು. ಅ ಪೈಕಿ ಇದೊಂದು ಹೋರಿ ಬಲಷ್ಠವಾಗಿ ಬೆಳೆದಿದೆ.

ಎಲ್ಲಿಯೇ ಚಕ್ಕಡಿ ಷರತ್ತು ಇದ್ದರೆ ಅಲ್ಲಿ ಜೊತೆಗಿರುವ ಹೋರಿಯನ್ನೂ ಸಹ ಹುರಿದುಂಬಿಸಿಕೊಂಡು ಓಡಿ ಪ್ರಥಮ ಬಹುಮಾನ ಪಡೆಯುವ ಸಾಮರ್ಥ್ಯ ಈ ಹೋರಿಯಲ್ಲಿತ್ತು.

ಹೀಗಾಗಿ ಇದಕ್ಕೆ ನಿತ್ಯ ಮೂರು ಹೊತ್ತು ಹುರುಳಿ ನುಚ್ಚು, 2 ಲೀಟರ್ ಹಾಲು, ಎರಡು ದಿನಕ್ಕೊಮ್ಮೆ ಮೊಟ್ಟೆ ಕೊಟ್ಟು ಈ ಹೋರಿಯನ್ನು ಷರತ್ತಿನ ಹೋರಿಯನ್ನಾಗಿ ಬೆಳೆಸಿದ್ದರು. ಹೀಗಾಗಿ ಈ ಹೋರಿಗೆ ಬಂಗಾರದ ಬೆಲೆ ಒದಗಿ ಬಂದಿದೆ.

ಎಲ್ಲೇ ಹೋದರೂ ಪ್ರಥಮ ಬಹುಮಾನ ಖಚಿತ ಎನ್ನುವಂತಿದ್ದ ಈ ಹೋರಿ ಕೇವಲ ಎರಡೇ ತಿಂಗಳಲ್ಲಿ ನಡೆದ 8 ಚಕ್ಕಡಿ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ, 4 ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದು ತನ್ನ ಸಾಮರ್ಥ್ಯ ಹೊರಹಾಕಿತ್ತು.

ಇಲ್ಲಿಯವರೆಗೆ ಒಟ್ಟು 2 ಎರಡು ಬೈಕ್, ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನದ ಹಣವನ್ನು ಈ ಹೋರಿ ಬಸಪ್ಪನವರಿಗೆ ತಂದು ಕೊಟ್ಟಿತ್ತು.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ