Breaking News

ಇನ್ಮುಂದೆ ಪ್ರತಿವರ್ಷ ಜ.23 ‘ಪರಾಕ್ರಮ ದಿನ’ ಎಂದು ಆಚರಿಸಲಾಗುತ್ತದೆ- ಸಿಎಂ

Spread the love

ಬೆಂಗಳೂರು: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ​ ಜನ್ಮದಿನದ ಹಿನ್ನೆಲೆಯಲ್ಲಿ ಇನ್ಮುಂದೆ ಪ್ರತಿ ವರ್ಷ ಜನವರಿ 23ರಂದು ಪರಾಕ್ರಮ ದಿನ ಎಂದು ಆಚರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ನೇತಾಜಿ ಸುಭಾಷ್​ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ, ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ನೇತಾಜಿ ಕರೆ ಕೊಟ್ಟಿದ್ದರು. ಆ ಮೂಲಕ ಯುವಕರನ್ನ ಸಂಘಟಿಸಿದ್ದರು. ಯುವಕರಲ್ಲಿ ಅವರ ಬದುಕಿನ ಬಗ್ಗೆ ಅರಿವು ಮೂಡಿಸುವ ಹೊಣೆ ನಮ್ಮೆಲ್ಲರ ಮೇಲೆ ಇದೆ ಎಂದರು.

ಇದೇ ವೇಳೆ ಶಿವಮೊಗ್ಗ ದುರಂತದ ಬಗ್ಗೆ ಮಾತನಾಡಿದ ಸಿಎಂ, ಇಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದೇನೆ. ಇನ್ಮುಂದೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ. ಸ್ಥಳ ಪರಿಶೀಲನೆಗಾಗಿ ನಾನೇ ಹೋಗುತ್ತಿದ್ದೇನೆ. ನಮ್ಮ ಸಚಿವರು, ಸಂಸದರು ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಮಗ್ರ ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಇನ್ಮೇಲೆ ಅಕ್ರಮ ಗಣಿಗಾರಿಕೆಗೆ ಯಾವ ಕಾರಣಕ್ಕೂ ನಾನು ಅವಕಾಶ ಕೊಡುವುದಿಲ್ಲ. ಗಣಿಗಾರಿಕೆ ಮಾಡಬೇಕಿದ್ರೆ ಸೂಕ್ತವಾದ ಕಡೆ ಲೈಸೆನ್ಸ್​ ಪಡೆದು ಮಾಡಬೇಕು ಎಂದು ಹೇಳಿದ್ರು.


Spread the love

About Laxminews 24x7

Check Also

ಅಕ್ರಮ ಗೋವು ಸಾಗಾಟ: 10 ಕಿಮೀ ಬೆನ್ನಟ್ಟಿ ಪರಾರಿಯಾಗುತ್ತಿದ್ದ ಆರೋಪಿ ಕಾಲಿಗೆ ​ಗುಂಡೇಟು ಕೊಟ್ಟ ಪೊಲೀಸರು

Spread the loveಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಬೆಳ್ಳಿಚಡವಿನಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಸರ್​ ಲಾರಿಯನ್ನು ಬೆನ್ನಟ್ಟಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ