Breaking News

ಕಪಿಲ ಶರ್ಮಾಗೆ ರಷ್ಮೀಕ್ ನೋಡುವ ಆಸೆಯಂತೆ

Spread the love

ಮುಂಬೈ: ನ್ಯಾಷನಲ್ ಕ್ರಶ್ ಆಗಿರೋ ಕೂರ್ಗದ ಚೆಲುವೆ ರಶ್ಮಿಕಾ ಮಂದಣ್ಣರನ್ನ ನೋಡುವ ಆಸೆಯನ್ನ ಬಾಲಿವುಡ್ ನಟ, ಕಾಮಿಡಿಯನ್ ಕಪಿಲ್ ಶರ್ಮಾ ಹೊರ ಹಾಕಿದ್ದಾರೆ.

ದಕ್ಷಿಣ ಭಾರತದ ಬೇಡಿಕೆಯ ನಟಿಯಲ್ಲಿ ಒಬ್ಬರಾಗಿರೋ ರಶ್ಮಿಕಾ ಮಂದಣ್ಣ ಸಾಲು ಸಾಲು ಸೂಪರ್ ಹಿಟ್ ಸಿನಿಮಾ ನೀಡಿ ತಮ್ಮ ಪ್ರತಿಭೆಯನ್ನ ಸಾಬೀತು ಮಾಡಿದ್ದಾರೆ. ಟಾಲಿವುಡ್ ಬಳಿಕ ಬಿಟೌನ್ ನಲ್ಲಿಯೂ ರಶ್ಮಿಕಾ ಸದ್ದು ಮಾಡುತ್ತಿದ್ದಾರೆ. ಮಿಶನ್ ಮಜ್ನು ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿರೋ ರಶ್ಮಿಕಾ ಮಂದಣ್ಣ ಸಿನಿಲೋಕದ ಭರವಸೆಯ ನಟಿಯಾಗಿದ್ದಾರೆ. ಸಿನಿಮಾಗೂ ಮುನ್ನ ಗಾಯಕ ಬಾದ್‍ಶಾ ಅಲ್ಬಂನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.
: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋಗೆ ಗಾಯಕ ಬಾದ್ ಶಾ ಮತ್ತು ಸುಖ್‍ಬೀರ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಟಾಪ್ ಟಕ್ಕರ್ ಹೆಸರಿನ ಅಲ್ಬಂನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿರೋವ ವಿಷಯವನ್ನ ಹಂಚಿಕೊಂಡರು. ರಶ್ಮಿಕಾ ಸಹ ದಕ್ಷಿಣ ಭಾರತದ ಬಹುಬೇಡಿಕೆ ಮತ್ತು ಗೂಗಲ್ ಸಹ ಅವರನ್ನ ನ್ಯಾಶನಲ್ ಕ್ರಶ್ ಅಂತ ಗುರುತಿಸಿದೆ ಎಂದು ತಿಳಿಸಿದರು. ಈ ವಿಷಯ ಕೇಳುತ್ತಲೇ ಅರೇ, ನಮಗೆ ಇದುವರೆಗೂ ಸಿಕ್ಕೇ ಇಲ್ಲವಲ್ಲ ಅಂತಾ ಭೇಟಿಯಾಗುವ ಆಸೆಯನ್ನ ಹೊರ ಹಾಕಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ