Breaking News

ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ; ಬಂಧಿತ ಯುವರಾಜ್ ಜೊತೆ ಮತ್ತಷ್ಟು ಸ್ಯಾಂಡಲ್​ವುಡ್​ ನಟಿಯರ ನಂಟು ಪತ್ತೆ

Spread the love

ಬೆಂಗಳೂರು (ಜ. 7): ಬಿಜೆಪಿ ಮತ್ತು ಆರ್​ಎಸ್​ಎಸ್​ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಯುವರಾಜ್ ಅಲಿಯಾಸ್ ಸ್ವಾಮಿ ಜೊತೆ ಮತ್ತಷ್ಟು ಸ್ಯಾಂಡಲ್​ವುಡ್​ ನಟಿಯರು ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ಯುವರಾಜ್ ಹಣಕಾಸಿನ ವಹಿವಾಟು ನಡೆಸಿದ್ದ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದರು. ಇದೀಗ ಸ್ಯಾಂಡಲ್​ವುಡ್​ನ ಹಲವು ನಟಿಯರ ಜೊತೆ ಯುವರಾಜ್ ಅಲಿಯಾಸ್ ಸ್ವಾಮಿ ಸಂಪರ್ಕ ಹೊಂದಿದ್ದ ಎಂಬುದು ಪತ್ತೆಯಾಗಿದೆ.

ಬಂಧಿತ ಆರೋಪಿ ಯುವರಾಜ್​ನ ಮೊಬೈಲ್ ಪೋನ್​ನಲ್ಲಿ ನಟಿಯರ ನಂಟು ಪತ್ತೆಯಾಗಿದೆ. ಪೋನ್ ಕರೆಗಳು, ಚಾಟಿಂಗ್ ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು ಹಲವು ನಟಿಯರ ಜೊತೆ ಮಾತನಾಡಿರುವ ಕಾಲ್ ವಿವರ ಪತ್ತೆ ಹಚ್ಚಿದ್ದಾರೆ. ಯುವರಾಜ್ ನಟಿಯರ ಜೊತೆ ಹಣಕಾಸಿನ ವ್ಯವಹಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಯುವರಾಜ್ ನಟಿ ರಾಧಿಕಾ ಕುಮಾರಸ್ವಾಮಿ ಜೊತೆ ಮಾತನಾಡಿರುವುದು ಕೂಡ ಬೆಳಕಿಗೆ ಬಂದಿದೆ. ಮೊಬೈಲ್ ಕರೆಗಳು ಮತ್ತು ಟವರ್ ಲೋಕೇಷನ್ ಹಾಗೂ ಚಾಟಿಂಗ್ ಪತ್ತೆ ಮಾಡುತ್ತಿರುವ ಸಿಸಿಬಿ ಪೊಲೀಸರು ಇನ್ನಷ್ಟು ಮಾಹಿತಿ ಪಡೆಯಲು ಮುಂದಾಗಿದ್ದಾರೆ

.ಯುವರಾಜ್​ನ ಸಾಮ್ರಾಜ್ಯ ನೋಡಿ ಸಿಸಿಬಿ ಅಧಿಕಾರಿಗಳೇ ಅಚ್ಚರಿ ಪಟ್ಟಿದ್ದಾರೆ. ಯುವರಾಜನ ಇಂಚಿಂಚು ಮಾಹಿತಿ ಕಲೆ ಹಾಕುವಲ್ಲಿ ತಲ್ಲೀನರಾದ ಸಿಸಿಬಿ ಅಧಿಕಾರಿಗಳು ಯುವರಾಜ್ ಅಕೌಂಟ್ ಪರಿಶೀಲನೆ ಜೊತೆ ಕಾರು ಸೀಜ್ ಮಾಡಿದ್ದಾರೆ. ಯುವರಾಜ್​ನ ಬೆಂಜ್ ಕಾರನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ 47 ಅಕೌಂಟ್ ಗಳ ಬಗ್ಗೆ ಪೂರ್ತಿ ಮಾಹಿತಿ ಕಲೆ ಹಾಕಿರುವ ಸಿಸಿಬಿ ಅಧಿಕಾರಿಗಳು ಪತ್ನಿ ಹಾಗೂ ಮಗಳ ಅಕೌಂಟ್​ಗಳನ್ನು ಸಹ ಪರಿಶೀಲನೆ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the loveಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ