Breaking News

ಬೆಳಗಾವಿಯ ರಾಯಭಾಗದ ಹಾರೋಗೇರಿ ಪಟ್ಟಣದಲ್ಲಿ ಖಿಲಾರಿ ತಳಿಯ ಜವಾರಿ ಹೋರಿ ಬರೋಬ್ಬರಿ ಐದೂವರೆ ಲಕ್ಷ ರೂಪಾಯಿಗೆ ಮಾರಾಟವಾಗಿದೆ.

Spread the love

ಚಿಕ್ಕೋಡಿ(ಜ. 03): ಸಾಮಾನ್ಯವಾಗಿ ಒಂದು ಕಟ್ಟುಮಸ್ತಾದ ಹೋರಿ 50 ಸಾವಿರದಿಂದ 1 ಲಕ್ಷದವರೆಗಿನ ಬೆಲೆಗೆ ಮಾರಾಟವಾಗುತ್ತೆ. ಅಬ್ಬಬ್ಬಾ ಅಂದ್ರೆ ಒಂದೂವರೆ ಲಕ್ಷ ರೂಪಾಯಿಗೆ ಸೇಲ್ ಆಗಬಹುದು. ಆದರೆ, ಇಲ್ಲೊಂದು  ಹೋರಿ ಬರೋಬ್ಬರಿ 5.51 ಲಕ್ಷ ರೂಪಾಯಿಗೆ ಮಾರಾಟವಾಗುವುದರ ಮೂಲಕ ಎಲ್ಲರ ಗಮನ ಸೆಳೆದಿದೆ. ಇಂತಹದೊಂದು ಅಪರೂಪದ ಹೋರಿ ಮಾರಾಟವಾಗಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೊಗೇರಿ ಪಟ್ಟಣದಲ್ಲಿ. ಇದು ಜವಾರಿ ಹೋರಿ.

ಇಂತಹ ಹೋರಿ ಬೆಳೆಸಿದ್ದು ಹಾರೊಗೇರಿ ಪಟ್ಟಣದ ಕುರಬಗೋಡಿ ತೋಟದ ವಸತಿ ಪ್ರದೇಶದ ಅಶೋಕ ಕುರಿ ಎಂಬುವವರು. ಅಶೋಕ ಕುರಿ ಮೂಲತಃ ಕೃಷಿಕ ಕುಟುಂಬದಿಂದಲೇ ಜೀವನ ಸಾಗಿಸುತ್ತಿರುವ ವ್ಯಕ್ತಿ ಇವರು. ಮೊದಲಿನಿಂದಲೂ ಚಿಕ್ಕ ಚಿಕ್ಕ ತಳಿಯ ಹೋರಿ ಮರಿಗಳನ್ನು ತಂದು ಅವುಗಳನ್ನು ಕಟುಮಸ್ತಾಗಿ ಬೆಳೆಸಿ ಮಾರಾಟ ಮಾಡುತ್ತಲೇ ಬಂದಿದ್ದಾರೆ. ಈ ಹಿಂದೆಯೂ ಸಹ ಜವಾರಿ ಥಳಿಯ ಹೋರಿಗಳನ್ನ 2 ರಿಂದ 4 ಲಕ್ಷದ ವರೆಗೂ ಮಾರಾಟ ಮಾಡುವ ಜಿಲ್ಲೆಯಲ್ಲಿ ಗಮನ ಸೆಳೆದಿದ್ದರು. ಆದ್ರೆ ಈ ಬಾರಿ ಮಾತ್ರ ಅಶೋಕ ಕುರಿ ತಮ್ಮ ದಡ್ಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಬೆಳೆಸಿದ ಜವಾರಿ ಹೋರಿಯನ್ನ ಬರೋಬ್ಬರಿ 5.51 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ