Breaking News

ಬೆಂಗಳೂರಿಗರೇ ಎಚ್ಚರ..! ನಗರದಲ್ಲಿ ‘ತೀವ್ರ ಚಳಿ’ಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೇ, ಹೀಗೆ ಆಗ್ಬಹುದು.!

Spread the love

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ನಗರದಲ್ಲಿ ಡಿಸೆಂಬರ್ 24ರ ನಂತ್ರ ತೀವ್ರ ಉಸಿರಾಟದ ತೊಂದೆರೆಯಂತ ಕಾಯಿಲೆ ಕೂಡ ಹೆಚ್ಚಾಗಿದೆಯಂತೆ. ಇದರಿಂದಾಗಿ ತೀವ್ರ ಉಸಿರಾಟದ ತೊಂದೆರೆಗೆ ಒಳಾಗುತ್ತಿರುವ ರಾಜಧಾನಿಯ ಅನೇಕರು ಐಸಿಯುಗೆ ದಾಖಲಾಗುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಚಳಿಯ ಬಗ್ಗೆ ಅಸಡ್ಡೆ ಮಾಡಬೇಡಿ. ಎಚ್ಚರಿಗೆ ವಹಿಸೋದು ಮರೆಯಬೇಡಿ.

ಹೌದು. ಈ ಬಗ್ಗೆ ನಗರದ ಮಣಿಪಾಲ್ ಹಾಸ್ಪತ್ರೆಯ ತೀವ್ರ ನಿಗಾ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಸುನೀಲ್ ಕಾರಂತ್, ಕರ್ನಾಟಕ ಪಲ್ಮನೊಲಾಜಿಸ್ಟ್ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಸ್.ಸತೀಶ್, ಏಸ್ ಸುಹಾಸ್ ಆಸ್ಪತ್ರೆಯ ಡಾ.ಜಗದೀಶ್ ಹಿರೇಮಠ ಸೇರಿದಂತೆ ಅನೇಕ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

ಅಂದಹಾಗೇ ವೈದ್ಯರು ಹೇಳುವಂತೆ ಕಳೆದ ವರ್ಷಕ್ಕೆ ಹೊಲಿಸಿದರೇ, ಈ ವರ್ಷ ಚಳಿಗಾಲದಲ್ಲಿ ತೀವ್ರ ಉಸಿರಾಟದ ತೊಂದರೆ ಇರುವವರ ಸಂಖ್ಯೆ ಗಮನೀಯ ಪ್ರಮಾಣದಲ್ಲಿ ಏರಿಕೆಯಾಗಿದೆಯಂತೆ. ಇದರ ಮಧ್ಯೆಯೂ ಕಳೆದ ಚಳಿಗಾಲಕ್ಕೆ ಹೊಲಿಸಿದಾಗ ಕ್ರೋನಿಕ್ ಅಬ್ಸ್ ಟ್ರಕ್ಟರಿ ಪಲ್ಮನರಿ ಕಾಯಿಲೆ(ಸಿಒಪಿಡಿ) ಹೊಂದಿರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಹ ತಿಳಿಸಿದ್ದಾರೆ.

ಇನ್ನೂ ಎಸ್ ಎ ಆರ್ ಐ ತೊಂದರೆ ಅನುಭವಿಸುತ್ತಿರುವವರು ಆಸ್ಪತ್ರೆಗೆ ಸೇರಿಸಲು ವಿಳಂಬ ಮಾಡುತ್ತಿರುವುದರಿಂದಾಗಿಯೂ ತೀವ್ರ ಉಸಿರಾಟದ ತೊಂದರೆಯಿಂದ ತೊಂದರೆಗೆ ಒಳಗಾಗಿ ಐಸಿಯು ಸೇರುವವರ ಸಂಖ್ಯೆ ಹೆಚ್ಚಳಗೊಂಡಿದೆ ಎಂದಿದ್ದಾರೆ. ಹೀಗಾಗಿ ಆರೋಗ್ಯ ವಿಚಾರದಲ್ಲಿ ಯಾವುದೇ ಅಸಡ್ಡೆ ತೋರದಂತೆಯೂ ವೈದ್ಯರು ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಕರಾವಳಿಯಲ್ಲಿ ಜನಪದ ದೀಪಾವಳಿ: ನರಕಾಸುರ ವಧೆ ನೆನಪಿಸುವ ಮುಳ್ಳಮುಟ್ಟೆ ಆಚರಣೆ

Spread the loveಕಾಪು: ತುಳುನಾಡು ಹಲವಾರು ಆಚರಣೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ತವರೂರು. ಇಲ್ಲಿ ನಡೆಯುವ ಪ್ರತಿಯೊಂದು ಹಬ್ಬ, ಆಚರಣೆಗಳಿಗೂ ಅದರದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ