ಬೆಳಗಾವಿ : ಕಾಂಗ್ರೆಸ್ನಲ್ಲಿ ಕೆಲವರು ಸಿಎಂ ಆಗುವುದಕ್ಕೆ ರೆಡಿ ಆಗಿದ್ದಾರೆ. ಆದರೆ, ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಎಂದು ಮತ್ತೊಮ್ಮೆ ಡಿ. ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ಕೆ. ಎನ್. ರಾಜಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಅವರು ಇಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ, ಅಧಿವೇಶನದ ನಂತರ ಯಾವುದೇ ಬದಲಾವಣೆ ಆಗುವುದಿಲ್ಲ. ರಾಜಕಾರಣ ಎಂಬುದು ನಿಂತ ನೀರಲ್ಲ, ಯಾವತ್ತೂ ಚಲನಶೀಲತೆ ಇರಬೇಕು, ನಮ್ಮ ಪಕ್ಷದ ರೀತಿಯಲ್ಲೂ ಬೇರೆ ಪಕ್ಷದಲ್ಲಿ ಬದಲಾವಣೆ ಇರುತ್ತದೆ. ಬಿಜೆಪಿಯಲ್ಲಿ ಬದಲಾವಣೆಯ ಕೂಗು ಸದ್ಯಕ್ಕೆ ಎದ್ದಿದೆ. ಸ್ಥಾನಪಲ್ಲಟಕ್ಕೆ ದೊಡ್ಡ ದಂಡೇ ರೆಡಿಯಾಗಿದೆ ಎಂದರು.
ಸಚಿವ ಸಂಪುಟ ಪುನಾರಚನೆ ಬಗ್ಗೆ ಈಗಾಗಲೇ ಕೆಲವರು ಮಾತನಾಡುತ್ತಿದ್ದಾರೆ, ಕಾಂಗ್ರೆಸ್ನಲ್ಲಿ ಸಿಎಂ ಆಗುವುದಕ್ಕೆ ಕೆಲವರು ತಯಾರಾಗಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯನವರೇ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ನಲ್ಲಿ ಇನ್ನೂ ಹಲವರು ಇದ್ದಾರೆ. ಜಿ. ಪರಮೇಶ್ವರ್ ದಲಿತರು ಎಂಬುದು ಒಂದೇ ಕಾರಣವಲ್ಲ. 2013 ರಿಂದ ಜಿ. ಪರಮೇಶ್ವರ್ ಶ್ರಮ ಇದೆ. ಆವತ್ತು ಅವರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂತು. ಆದರೆ ಅವತ್ತು ಅವರೇ ಸೋತರು. ಹೀಗಾಗಿ, ಕಾಂಗ್ರೆಸ್ ಪಕ್ಷ ಒಬ್ಬರಿಂದ ಅಧಿಕಾರಕ್ಕೆ ಬಂದಿದೆ ಎಂಬುದು ತಪ್ಪು, ಹಲವಾರು ಜನ ಇದ್ದಾರೆ ಎಂದು ತಿಳಿಸಿದರು.
Laxmi News 24×7